For Quick Alerts
ALLOW NOTIFICATIONS  
For Daily Alerts

ಜಿಯೋ ಫೋನ್ ಆನ್ಲೈನ್ ಮೂಲಕ ಬುಕಿಂಗ್ ಮಾಡಿ ಪಡೆಯೋದು ಹೇಗೆ?

ಗ್ರಾಹಕರು ಜಿಯೋ ಫೋನ್ ಖರೀದಿಗಾಗಿ ತುದಿಗಾಲಲ್ಲಿ ನಿಂತಿದ್ದಾರೆ! ಮಾರುಕಟ್ಟೆಗೆ ಯಾವಾಗ ಬರತ್ತೆ, ಕೈಗೆ ಯಾವಾಗ ಸೇರತ್ತೆ ಅಂತಾ ಎದುರು ನೋಡ್ತಾ ಇದಾರೆ!!

By Siddu
|

ಗ್ರಾಹಕರು ಜಿಯೋ ಫೋನ್ ಖರೀದಿಗಾಗಿ ತುದಿಗಾಲಲ್ಲಿ ನಿಂತಿದ್ದಾರೆ! ಮಾರುಕಟ್ಟೆಗೆ ಯಾವಾಗ ಬರತ್ತೆ, ಕೈಗೆ ಯಾವಾಗ ಸೇರತ್ತೆ ಅಂತಾ ಎದುರು ನೋಡ್ತಾ ಇದಾರೆ!!

ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಸಂಸ್ಥೆಯ 40ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋ ಫೋನ್ ಬಿಡುಗಡೆ ಬಗ್ಗೆ ಸವಿವರವಾಗಿ ಮಾತನಾಡಿದ್ದಾರೆ. ಜಿಯೋಫೋನ್ ಖರೀದಿಸುವವರು ಆನ್ಲೈನ್ ಪ್ರಕ್ರಿಯೆ ಮೂಲಕ ಬುಕಿಂಗ್ ಮಾಡಿ ಪಡೆಯಬೇಕಾಗುತ್ತದೆ. ಅದು ಹೇಗೆ ಎಂಬುದನ್ನು ಮುಂದೆ ನೋಡಿ..

ಜಿಯೋಫೋನ್ ಗೆ ಸವಾಲು! ಐಡಿಯಾ 4G ಸ್ಮಾರ್ಟ್ ಫೋನ್ ಲಾಂಚ್!!ಜಿಯೋಫೋನ್ ಗೆ ಸವಾಲು! ಐಡಿಯಾ 4G ಸ್ಮಾರ್ಟ್ ಫೋನ್ ಲಾಂಚ್!!

ಜಿಯೋಫೋನ್ ಟೆಸ್ಟಿಂಗ್ ಪ್ರಕ್ರಿಯೆ

ಜಿಯೋಫೋನ್ ಟೆಸ್ಟಿಂಗ್ ಪ್ರಕ್ರಿಯೆ

ಜಿಯೋ ಅಲೆಲೆಲೆ...! ಕೇವಲ 500 ರೂ.ಗೆ 4G ವೋಲ್ಟ್ ಸ್ಮಾರ್ಟ್ ಫೋನ್ !!ಜಿಯೋ ಅಲೆಲೆಲೆ...! ಕೇವಲ 500 ರೂ.ಗೆ 4G ವೋಲ್ಟ್ ಸ್ಮಾರ್ಟ್ ಫೋನ್ !!

ಮುಂಗಡ ಬುಕಿಂಗ್ ಯಾವಾಗ?

ಮುಂಗಡ ಬುಕಿಂಗ್ ಯಾವಾಗ?

ಜಿಯೋ ಫೋನ್ ಮುಂಗಡ ಬುಕಿಂಗ್ ಪ್ರಕ್ರಿಯೆ ಆಗಸ್ಟ್ 24ರಿಂದ ಆರಂಭವಾಗಲಿದ್ದು, ಸೆಪ್ಟಂಬರ್ ತಿಂಗಳಲ್ಲಿ ಜಿಯೋಫೋನ್ ಗ್ರಾಹಕರ ಕೈಸೇರಲಿದೆ. ಜಿಯೋ ಫೋನ್‌ ಬುಕ್ಕಿಂಗ್ ಗಾಗಿ ಅನುಸರಿಬೇಕಾದ ವಿಧಾನಗಳನ್ನು ಜಿಯೋ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದ್ದು, ಸಾಮಾನ್ಯ ಗ್ರಾಹಕರು ಹಾಗೂ ಉದ್ಯಮಿಗಳಿಗೆ ಬೇರೆ-ಬೇರೆ ರಿಜಿಸ್ಟ್ರೇಶನ್‌ ಪ್ರಕ್ರಿಯೆ ಇರುತ್ತದೆ.

ಗ್ರಾಹಕರ ರಿಜಿಸ್ಟ್ರೇಶನ್ ಪ್ರಕ್ರಿಯೆ

ಗ್ರಾಹಕರ ರಿಜಿಸ್ಟ್ರೇಶನ್ ಪ್ರಕ್ರಿಯೆ

ಜಿಯೋಫೋನ್ ಬುಕಿಂಗ್ ಗಾಗಿ ಮೊದಲಿಗೆ ಜಿಯೋ ವೆಬ್ಸೈಟ್ ಗೆ ಭೇಟಿ ನೀಡಿ. ವೆಬ್ಸೈಟ್ ನಲ್ಲಿರುವ 'ಇಂಡಿಯಾ ಕಾ ಸ್ಮಾರ್ಟ್ ಫೋನ್ ಜಿಯೋಫೋನ್' ಪರದೆಯ KEEP MY POSTED ಮೇಲೆ ಕ್ಲಿಕ್ ಮಾಡಿ. ಅಲ್ಲಿ ಕಾಣುವ ಗ್ರಾಹಕರ ನೋಂದಣಿ ಆಪ್ಷನ್ ಆಯ್ಕೆ ಮಾಡಿ ಅಗತ್ಯ ಮಾಹಿತಿಗಳನ್ನು ತುಂಬಬೇಕಾಗುತ್ತದೆ.

ಉದ್ಯಮಿಗಳ ರಿಜಿಸ್ಟ್ರೇಶನ್‌ ಪ್ರಕ್ರಿಯೆ

ಉದ್ಯಮಿಗಳ ರಿಜಿಸ್ಟ್ರೇಶನ್‌ ಪ್ರಕ್ರಿಯೆ

ಗ್ರಾಹಕರ ರಿಜಿಸ್ಟ್ರೇಶನ್ ವಿಧಾನ ಆಯ್ಕೆ ಮಾಡುವಂತೆ ಉದ್ಯಮಿಗಳ ರಿಜಿಸ್ಟ್ರೇಶನ್ ಆಪ್ಷನ್ ಆಯ್ಕೆ ಮಾಡಬೇಕು. ಉದ್ಯಮಿಗಳು ಜಿಯೋ ಫೋನ್‌ ಬುಕ್ಕಿಂಗ್ ಮಾಡುವಾಗ ತಮ್ಮ ಕಂಪನಿಯ ಹೆಸರು, ಪಿನ್ ಕೋಡ್‌, ಪ್ಯಾನ್‌ ಅಥವಾ ಜಿಎಸ್‌ಟಿಎನ್ ಹಾಗೂ ಇ-ಮೇಲ್‌ ಇಡಿ, ಫೋನ್‌ ನಂಬರ್‌ ಇತ್ಯಾದಿ ವಿವರ ಒದಗಿಸಬೇಕಾಗುತ್ತಿದೆ.

ಜಿಯೋ 1500 ಫೋನ್ ವೈಶಿಷ್ಟ್ಯಗಳು

ಜಿಯೋ 1500 ಫೋನ್ ವೈಶಿಷ್ಟ್ಯಗಳು

ಸ್ಕ್ರೀನ್ ಡಿಸ್ಪ್ಲೇ: 2.40 ಇಂಚುಗಳು
ರೆಸಲ್ಯೂಷನ್: 240 × 320 ಪಿಕ್ಸೆಲ್
ವಿಸ್ತರಿಸಬಹುದಾದ ಸ್ಟೋರೆಜ್: ಲಭ್ಯವಿದೆ
ಬ್ಲೂಟೂತ್: V4.10
FM: ಲಭ್ಯ
ಹೆಡ್ಫೋನ್: ಲಭ್ಯವಿದೆ
ಸ್ಪೀಕರ್ ಗಳು: ಲಭ್ಯವಿದೆ
4 ಜಿ / ಎಲ್ ಟಿಇ: ಲಭ್ಯವಿದೆ
ಸಿಮ್ ಸ್ಲಾಟ್: ಸಿಂಗಲ್

ಜಿಯೋ ಕಸ್ಟಮರ್ ಕೇರ್ ಸಂಖ್ಯೆಗಳು

ಜಿಯೋ ಕಸ್ಟಮರ್ ಕೇರ್ ಸಂಖ್ಯೆಗಳು

ಗ್ರಾಹಕರಿಗೆ ಯಾವುದೇ ತೊಂದರೆಗಳನ್ನು ಎದುರಾದರೆ ಈ ಕೆಳಗೆ ನೀಡಿರುವ ನಂಬರ್ ಗಳಿಗೆ ಸಂಪರ್ಕಿಸಬಹುದು.
JIO ಕಸ್ಟಮರ್ ಕೇರ್ ಟೋಲ್ ಫ್ರೀ ಸಂಖ್ಯೆ: 1800-88-99999
JIO ದೂರು ಸಂಖ್ಯೆ: 198
JIO ಸಾಮಾನ್ಯ ಸಹಾಯವಾಣಿ ಸಂಖ್ಯೆ: 199
ಡೇಟಾ ಮತ್ತು ಕರೆ ಸೇವೆಗಳಿಗಾಗಿ ಟೆಲಿ-ಪರಿಶೀಲನೆ ಸಂಖ್ಯೆ: 1977
ಕೇವಲ ಡೇಟಾ ಸೇವೆಗೆ ಟೆಲಿ-ಪರಿಶೀಲನಾ ಸಂಖ್ಯೆ: 1800-890-1977
LYF ಕಸ್ಟಮರ್ ಕೇರ್ ಟೋಲ್ ಫ್ರೀ ಸಂಖ್ಯೆ: 1800-890-9999

ಜಿಯೋಫೋನ್ ಬೆಲೆ

ಜಿಯೋಫೋನ್ ಬೆಲೆ

ಜಿಯೋ 4G ಸ್ಮಾರ್ಟ್ಫೋನ್ ಖರೀದಿಸುವಾಗ ರೂ. 1500 ಪಾವತಿಸಬೇಕು. ಫೋನ್ ಹಿಂದಿರುಗಿಸಿದ 3 ವರ್ಷಗಳ ನಂತರ ಪಾವತಿಸಲ್ಟಟ್ಟ ರೂ. 1500 ಮೊತ್ತ ಮರುಪಾವತಿಸಲಾಗುವುದು ಎಂದು ಅಂಬಾನಿ ಹೇಳಿದ್ದಾರೆ. ಅಂದರೆ ಅಂಬಾನಿ ಪ್ರಕಾರ ಫೋನ್ ಉಚಿತವಾಗಿ ಸಿಗಲಿದೆ! ಜಿಯೋ 4G ವೋಲ್ಟ್ ಸ್ಮಾರ್ಟ್ ಫೋನ್ ಫೀಚರ್ ಫೋನಿನ ಅಂದಾಜು ಪ್ರಾರಂಭ ಬೆಲೆ ರೂ. 500 ಇರಲಿದೆ.

50 ಕೋಟಿ ಮಾರಾಟ ಗುರಿ

50 ಕೋಟಿ ಮಾರಾಟ ಗುರಿ

ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಸುಮಾರು 50 ಕೋಟಿ ಜಿಯೋ ಫೋನ್ ಮಾರಾಟ ಮಾಡುವ ಗುರಿಯನ್ನು ಹೊಂದಿದ್ದಾರೆ. ಇಲ್ಲಿಯವರೆಗೆ 2G, 3G ಸೇವೆ ಬಳಸುತ್ತಿದ್ದ ಗ್ರಾಹಕರು 4G ರುಚಿಯನ್ನು ನೋಡಬಹುದಾಗಿದೆ. ಜಿಯೋ 4G ಸ್ಮಾರ್ಟ್ಫೋನ್ ಲಾಂಚ್..! ಮುಖೇಶ್ ಅಂಬಾನಿ ಘೋಷಿಸಿರುವ ಉಚಿತ ಆಫರ್ ಗಳೇನು..?

English summary

JIO Phone Booking Started – how to buy jio phone?

Jio 1500 Phone bookings will start from 24th August 2017 after the device undergo for testing on 15th August.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X