ಬೇನಾಮಿ ಆಸ್ತಿ ಮಾಹಿತಿ ನೀಡುವವರಿಗೆ 1 ಕೋಟಿ ನಗದು ಬಹುಮಾನ!

ಬೇನಾಮಿ ಆಸ್ತಿ ಹೊಂದಿರುವ ಜನರ ಬಗ್ಗೆ ಮಾಹಿತಿ ನೀಡುವ ವ್ಯಕ್ತಿಗಳಿಗೆ 1 ಕೋಟಿ ರೂಪಾಯಿ ನಗದು ಇನಾಮು ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಮುಂದಿನ ತಿಂಗಳು ಅಧಿಕೃತ ಘೋಷಣೆಯಾಗುವ ಸಾದ್ಯತೆ ಇದೆ.

ಬೇನಾಮಿ ಆಸ್ತಿ ಹೊಂದಿರುವ ಜನರ ಬಗ್ಗೆ ಮಾಹಿತಿ ನೀಡುವ ವ್ಯಕ್ತಿಗಳಿಗೆ 1 ಕೋಟಿ ರೂಪಾಯಿ ನಗದು ಇನಾಮು ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಮುಂದಿನ ತಿಂಗಳು ಅಧಿಕೃತ ಘೋಷಣೆಯಾಗುವ ಸಾದ್ಯತೆ ಇದೆ.

ಬೇನಾಮಿ ಆಸ್ತಿ ಹೊಂದಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವವರಿಗೆ ಕನಿಷ್ಟ ರೂ. 15 ಲಕ್ಷ ಹಾಗೂ ಗರಿಷ್ಠ 1 ಕೋಟಿಯವರೆಗೆ ನಗದು ಇನಾಮು ನೀಡಲು ಕೇಂದ್ರ ನಿರ್ಧರಿಸಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿಯ ಹಿರಿಯ ಅಧಿಕಾರಿ ಹೇಳಿದ್ದಾರೆ. ಜಿಯೋ ಗ್ರಾಹಕರಿಗೆ ನಿರಾಶೆ! ಜಿಯೋ ಫೋನ್ ಪಡೆಯಲು ಇನ್ನೂ ಕಾಯಬೇಕು..

ಮಾಹಿತಿದಾರನ ಕುರಿತು ಗೌಪ್ಯತೆ

ಮಾಹಿತಿದಾರನ ಕುರಿತು ಗೌಪ್ಯತೆ

ಬೇನಾಮಿ ಆಸ್ತಿ ಹೊಂದಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವ ಮಾಹಿತಿದಾರರ ಕುರಿತು ಗೌಪ್ಯತೆಯನ್ನು ಕಾಪಾಡಲಾಗುವುದು ಎಂದು ಇಲಾಖೆ ಹೇಳಿದೆ. ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಹಾಗೂ ಕಂದಾಯ ಗುಪ್ತಚರ ಇಲಾಖೆಯಿಂದ ಮಾಹಿತಿದಾರರಿಗೆ ಬಹುಮಾನ ಕೊಡುವ ಪದ್ಧತಿ ಮುಂಚಿನಿಂದಲೂ ಇದೆ.

ಬೇನಾಮಿ ಆಸ್ತಿ ಕಾನೂನು

ಬೇನಾಮಿ ಆಸ್ತಿ ಕಾನೂನು

ಕೇಂದ್ರ ಸರ್ಕಾರ ಕಳೆದ ವರ್ಷದಿಂದ ಬೇನಾಮಿ ಆಸ್ತಿ ಕಾನೂನು ಪರಿಚಯಿಸಿದೆ. ಬೇನಾಮಿ ಆಸ್ತಿ ಹೊಂದಿರುವ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಸುಲಭ ರೂಪದಲ್ಲಿ ಮಾಹಿತಿದಾರರ ಮೂಲಕ ಪಡೆಯಬಹುದು. ಹೀಗೆ ಮಾಡುವುದರಿಂದ ಕಾರ್ಯವನ್ನು ಶೀಘ್ರ ಹಾಗೂ ಪರಿಣಾಮಕಾರಿಯಾಗಿ ಪೂರೈಸಬಹುದು.

ಶೀಘ್ರ ಕಾರ್ಯಾಚರಣೆ

ಶೀಘ್ರ ಕಾರ್ಯಾಚರಣೆ

ಬೇನಾಮಿ ಆಸ್ತಿ (benami property) ಮಾಹಿತಿದಾರರಿಗೆ ಆಕರ್ಷಕ ಬಹುಮಾನ ನೀಡಿದರೆ ದೇಶದಾದ್ಯಂತ ಇರುವ ಬೇನಾಮಿದಾರರ ವಿರುದ್ಧ ಶೀಘ್ರ ಕಾರ್ಯಾಚರಣೆ ಮಾಡಿ ಮುಗಿಸಬಹುದು ಎಂದು ಇಲಾಖೆ ತಿಳಿಸಿದೆ.

ಯೋಜನೆ ಜಾರಿ ಯಾವಾಗ?

ಯೋಜನೆ ಜಾರಿ ಯಾವಾಗ?

ಇನಾಮು ಮೊತ್ತ ನಿಗದಿ ಬಗೆಗಿನ ವಿಚಾರ ಹಣಕಾಸು ಸಚಿವಾಲಯದಲ್ಲಿದ್ದು, ಅಲ್ಲಿ ಅಂಕಿತ ಬಿದ್ದರೆ ಕೂಡಲೇ ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ. ಇದು ಅಕ್ಟೋಬರ್ ಕೊನೆ ವಾರ ಇಲ್ಲವೆ ನವೆಂಬರ್ ಮೊದಲ ವಾರದಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+