ಜಿಯೋ ಪೇಮೆಂಟ್ಸ್ ಬ್ಯಾಂಕ್ ಸೇವೆ ಶೀಘ್ರದಲ್ಲೇ ಆರಂಭ
ಜಿಯೋ ಟೆಲಿಕಾಂ ಕ್ಷೇತ್ರದಲ್ಲಿ ಈಗಾಗಲೇ ಭಾರೀ ಸಂಚಲನ ಮೂಡಿಸಿದ್ದು, ಇದೀಗ ಬ್ಯಾಂಕಿಂಗ್ ವಲಯದಲ್ಲೂ ಹೊಸ ಸಂಚಲನಕ್ಕೆ ಮುಂದಾಗಿದೆ.
ಜಿಯೋ ಟೆಲಿಕಾಂ ಕ್ಷೇತ್ರದಲ್ಲಿ ಈಗಾಗಲೇ ಭಾರೀ ಸಂಚಲನ ಮೂಡಿಸಿದ್ದು, ಇದೀಗ ಬ್ಯಾಂಕಿಂಗ್ ವಲಯದಲ್ಲೂ ಹೊಸ ಸಂಚಲನಕ್ಕೆ ಮುಂದಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಕಾರಣದಿಂದ ವಿಳಂಬವಾಗಿದ್ದ ಜಿಯೋ ಪೇಮೆಂಟ್ಸ್ ಬ್ಯಾಂಕ್ ಪ್ರಕ್ರಿಯೆ ಡಿಸೆಂಬರ್ ನಲ್ಲಿ ಕಾರ್ಯಾಚರಣೆ ಆರಂಭಿಸಲಿದೆ. 'ಮುಖ್ಯಮಂತ್ರಿ ಅನಿಲ ಭಾಗ್ಯ' ಯೋಜನೆ ಅಡಿ ಉಚಿತ ಗ್ಯಾಸ್(LPG) ಪಡೆಯುವುದು ಹೇಗೆ?
ಎಸ್ಬಿಐ ಸಹಯೋಗ
ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್ಬಿಐ ನ ಜಂಟಿ ವೆಂಚರ್ ನಲ್ಲಿ ರಿಲಯನ್ಸ್ ಜಿಯೋ ಪೇಮೆಂಟ್ಸ್ ಬ್ಯಾಂಕ್ ಕಾರ್ಯನಿರ್ವಹಿಸಲಿದೆ.
ಆರ್ಬಿಐನಿಂದ ಅನುಮತಿ
ಜಿಯೋ ಮಾರ್ಚ್ ನಲ್ಲಿ 100 ಮಿಲಿಯನ್ ಗ್ರಾಹಕರನ್ನು ತಲುಪಿದ್ದು, ಪೇಮೆಂಟ್ಸ್ ಬ್ಯಾಂಕ್ ಆರಂಭಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಅನುಮತಿ ಪಡೆದುಕೊಂಡಿದೆ.
ಏಪ್ರಿಲ್ ವೇಳಗೆ ಎಸ್ಬಿಐ 420 ಮಿಲಿಯನ್ ಗ್ರಾಹಕರನ್ನು ಹೊಂದಿದ್ದು, ಹೊಸ ಗ್ರಾಹಕರನ್ನು ತಲುಪಲು ಜಿಯೊ ನೆರವಾಗಲಿದೆ.
ಗ್ರಾಹಕರ ಹೆಚ್ಚಳ
ಎಸ್ಬಿಐ ಮೂಲಕ ಜಿಯೋ ತನ್ನ ಗ್ರಾಹಕರನ್ನು ಹೆಚ್ಚಿಸಿಕೊಳ್ಳಲಿದ್ದು, ಪೇಮೆಂಟ್ಸ್ ಬ್ಯಾಂಕ್ ನಿಂದ ಹೆಚ್ಚು ಗ್ರಾಹಕರನ್ನು ತಲುಪಲು ಮತ್ತು ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ರಿಲಯನ್ಸ್ ಜಿಯೋಗೆ ಸಾಧ್ಯವಾಗಲಿದೆ.