For Quick Alerts
ALLOW NOTIFICATIONS  
For Daily Alerts

'ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆ ಅಡಿ ಉಚಿತ ಗ್ಯಾಸ್(LPG) ಪಡೆಯುವುದು ಹೇಗೆ?

ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬಗಳಿಗೆ ಉಚಿತ ಅಡುಗೆ ಅನಿಲ (ಎಲ್ಪಿಜಿ), ಒಲೆ ವಿತರಿಸುವ ‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆ ಡಿಸೆಂಬರ್‌ ತಿಂಗಳಿನಿಂದ ಜಾರಿ ಬರಲಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

By Siddu
|

ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬಗಳಿಗೆ ಉಚಿತ ಅಡುಗೆ ಅನಿಲ (ಎಲ್ಪಿಜಿ), ಒಲೆ ವಿತರಿಸುವ 'ಮುಖ್ಯಮಂತ್ರಿ ಅನಿಲ ಭಾಗ್ಯ' ಯೋಜನೆ ಡಿಸೆಂಬರ್‌ ತಿಂಗಳಿನಿಂದ ಜಾರಿ ಬರಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಉಚಿತ ಎಲ್ಪಿಜಿ, ಒಲೆ ವಿತರಣೆ ವಿತರಣೆ ಕುರಿತು ನಿನ್ನೆ ಸೋಮವಾರ ಸಭೆ ನಡೆಸಲಾಯಿತು. ಉಜ್ವಲ ಯೋಜನೆ ಅಡಿ ಉಚಿತ ಎಲ್ಪಿಜಿ(LPG) ಕನೆಕ್ಷನ್ ಪಡೆಯುವುದು ಹೇಗೆ?

ಎಲ್ಲಿ ಅರ್ಜಿ ಸಲ್ಲಿಸುವುದು?

ಎಲ್ಲಿ ಅರ್ಜಿ ಸಲ್ಲಿಸುವುದು?

ಅಡುಗೆ ಅನಿಲ (ಎಲ್ಪಿಜಿ) ಸಂಪರ್ಕ ಹೊಂದದಿರುವ ಬಿಪಿಎಲ್ ಕುಟುಂಬದವರು ಇದೇ ತಿಂಗಳಿನಿಂದ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿ ಸಲ್ಲಿಸಬಹುದು. ಆಹಾರ ಇಲಾಖೆ ಹಾಗೂ ಇದಕ್ಕೆ ಸಂಬಂಧಿತ ಅನಿಲ ವಿತರಕರು ಅರ್ಜಿಗಳನ್ನು ಹಾಗೂ ದಾಖಲೆಗಳನ್ನು ಪರಿಶೀಲನೆ ಮಾಡಲಿದ್ದಾರೆ.

ಸೌಲಭ್ಯಗಳೇನು?

ಸೌಲಭ್ಯಗಳೇನು?

ಅರ್ಹ ಫಲಾನುಭವಿಗಳ ಪಟ್ಟಿ ಅಂತಿಮಗೊಂಡ ನಂತರ ಅರ್ಜಿದಾರರಿಗೆ 14.2 ಕೆ.ಜಿ ಸಿಲಿಂಡರ್‌, ಒಲೆ, ರೆಗ್ಯುಲೇಟರ್ ವಿತರಣೆ ಮಾಡಲಾಗುವುದು. ಈ ಯೋಜನೆ ಅಡಿ ಫಲಾನುಭವಿಗಳು ಎರಡು ಬಾರಿ ಉಚಿತವಾಗಿ ಸಿಲಿಂಡರ್ ಭರ್ತಿ ಮಾಡಿಕೊಡಲಾಗುವುದು ಎಂದು ತಿಳಿಸಲಾಗಿದೆ.

ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಯಾಕೆ?
 

ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಯಾಕೆ?

ಕೇಂದ್ರ ಸರ್ಕಾರ ಜಾರಿ ಮಾಡಿರುವ ‘ಉಜ್ವಲ ಯೋಜನೆ' ಅಡಿಯಲ್ಲಿ ಸಿಲಿಂಡರ್ ಮತ್ತು ಅನಿಲ ಸಂಪರ್ಕ ಪಡೆದವರಿಗೆ ಉಚಿತವಾಗಿ ಒಲೆ ವಿತರಿಸಲು ನಿರ್ಧರಿಸಲಾಗಿತ್ತು. ಆದರೆ ರಾಜ್ಯದ ಎಲ್ಲ ಬಿಪಿಎಲ್ ಕುಟುಂಬಗಳಿಗೆ ಉಜ್ವಲ ಯೋಜನೆಯ ಸೌಲಭ್ಯ ಸಿಗುವುದಿಲ್ಲ. ಹೀಗಾಗಿ ‍ಪ್ರತ್ಯೇಕವಾಗಿಯೇ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಜಾರಿಗೊಳಿಸಲಾಗುವುದು ಎಂದು ಸಚಿವ ಖಾದರ್ ಹೇಳಿದ್ದಾರೆ.

15 ಲಕ್ಷ ಕುಟುಂಬಗಳಿಗೆ ಸೌಲಭ್ಯ

15 ಲಕ್ಷ ಕುಟುಂಬಗಳಿಗೆ ಸೌಲಭ್ಯ

ಕೇಂದ್ರದ ಉಜ್ವಲ ಯೋಜನೆಯಡಿ ಅಂದಾಜು 20 ಲಕ್ಷ ಕುಟುಂಬಗಳಿಗೆ ಸೌಲಭ್ಯ ಸಿಗಬಹುದು ಎಂದು ಕೇಂದ್ರ ನಡೆಸಿದ ಸಮೀಕ್ಷೆ ನಿರ್ಧರಿಸಿತ್ತು. ಆದರೆ 6-7 ಲಕ್ಷ ಕುಟುಂಬಗಳಿಗೆ ಮಾತ್ರ ಉಜ್ವಲ ಯೋಜನೆ ಸಿಗಬಹುದಾಗಿದೆ. ಮುಖ್ಯಮಂತ್ರಿ ಅನಿಲ ಬಾಗ್ಯ ಯೋಜನೆ ಅಡಿಯಲ್ಲಿ 15 ಲಕ್ಷ ಕುಟುಂಬಗಳಿಗೆ ಈ ಯೋಜನೆ ಸೌಲಭ್ಯ ಸಿಗಬಹುದು ಎಂದು ಅಂದಾಜಿಸಲಾಗಿದೆ.

ಯೋಜನೆ ಮುಖ್ಯ ಅಂಶಗಳು

ಯೋಜನೆ ಮುಖ್ಯ ಅಂಶಗಳು

* ಮುಖ್ಯಮಂತ್ರಿ ಅನಿಲ ಬಾಗ್ಯ ಯೋಜನೆ ಅಡಿ ಪ್ರತಿ ಫಲಾನುಭವಿಗೆ ರೂ. 4,040 ವೆಚ್ಚ ಆಗಲಿದೆ.
* ಯೋಜನೆಯ ಅಂದಾಜು ವೆಚ್ಚ ರೂ. 1,200 ಕೋಟಿ
* ಅಂದಾಜು 15 ಲಕ್ಷ ಕುಟುಂಬಗಳು ಸೌಲಭ್ಯ ಪಡೆಯಲಿವೆ
* 14.2 ಕೆ.ಜಿ ಸಿಲಿಂಡರ್‌, ಒಲೆ, ರೆಗ್ಯುಲೇಟರ್ ವಿತರಣೆ ಹಾಗು ಎರಡು ಬಾರಿ ಉಚಿತವಾಗಿ ಸಿಲಿಂಡರ್ ಭರ್ತಿ
* ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿ ಸಲ್ಲಿಕೆ

ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅರ್ಹತಾ ಮಾನದಂಡ ಏನು?

ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅರ್ಹತಾ ಮಾನದಂಡ ಏನು?

1. 18 ವರ್ಷ ಮೇಲ್ಪಟ್ಟ ಮಹಿಳೆಯಾಗಿರಬೇಕು.
2. ಆಯಾ ರಾಜ್ಯ ಸರ್ಕಾರದೊಂದಿಗೆ ನೋಂದಾಯಿಸಲ್ಪಟ್ಟಿರುವ ಬಿಪಿಎಲ್ ಕುಟುಂಬ/ಕುಟುಂಬ/ಘಟಕ
3. ನಕಲು ಮತ್ತು ತಪ್ಪು ನಿರ್ವಹಣೆ ತಪ್ಪಿಸಲು ಪ್ರಸ್ತುತ ನೋಂದಾಯಿತ SECC-2011 ಡೇಟಾ (ಗ್ರಾಮೀಣ)
4. ಎಲ್ಪಿಜಿ ಸಂಪರ್ಕಗಳನ್ನು ಮಹಿಳಾ ಫಲಾನುಭವಿಗಳಿಗೆ ನೀಡಲಾಗುವುದು ಮತ್ತು ಅವರ ಹೆಸರಿನಲ್ಲಿ ನೋಂದಾಯಿಸಲಾಗುವುದು.
5. ಬಿಪಿಎಲ್ ಕುಟುಂಬಗಳಿಗೆ ರೂ. 1,600 ವರೆಗೆ ಹಣಕಾಸಿನ ನೆರವು ನೀಡಲು ಯೋಜನೆ ಭರವಸೆ ನೀಡಿದೆ.

ಉಜ್ವಲ ಯೋಜನೆ ಅರ್ಜಿ ಎಲ್ಲಿ ಲಭ್ಯ

ಉಜ್ವಲ ಯೋಜನೆ ಅರ್ಜಿ ಎಲ್ಲಿ ಲಭ್ಯ

ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಸಂಬಂಧಿತ ಅರ್ಜಿಯನ್ನು ಎಲ್ಪಿಜಿ ಹಂಚಿಕೆದಾರರು ಅಥವಾ ಅಂತರ್ಜಾಲದಿಂದ ಡೌನ್ಲೋಡ್ ಮಾಡಬಹುದು. ಈ ಯೋಜನೆಯ ಸೌಲಭ್ಯಗಳನ್ನು ಪಡೆಯಲು ಫಲಾನುಭವಿಗಳು ಸಂಬಂಧಿತ ದಾಖಲಾತಿ ಮತ್ತು ಬಿಪಿಎಲ್ ಕಾರ್ಡ್ ಗಳನ್ನು ಸಲ್ಲಿಸಬೇಕಾಗುತ್ತದೆ.

English summary

How to apply for Mukhyamantri Anila Bhagya scheme? What are the Benefits?

The state government has announced another sop for the poor under the Mukhyamantri Anila Bhagya scheme.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X