ದೀಪಾವಳಿ ಆಫರ್, ವಿಸ್ತಾರಾ ಆರಂಭ ದರ ರೂ. 1,149

ದೀಪಾವಳಿ ಹಬ್ಬದ ಪ್ರಯುಕ್ತವಾಗಿ ಪ್ರಮುಖ ವಿಮಾನಯಾನ ಸಂಸ್ಥೆ ವಿಸ್ತಾರಾ ಗ್ರಾಹಕರಿಗೆ ಅಗ್ಗದ ವಿಮಾನ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.

ದೀಪಾವಳಿ ಹಬ್ಬದ ಪ್ರಯುಕ್ತವಾಗಿ ಪ್ರಮುಖ ವಿಮಾನಯಾನ ಸಂಸ್ಥೆ ವಿಸ್ತಾರಾ ಗ್ರಾಹಕರಿಗೆ ಅಗ್ಗದ ವಿಮಾನ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.

ಫೆಸ್ಟಿವಲ್ ಸೇಲ್ ಆಫರ್ ಅಡಿಯಲ್ಲಿ 48 ಗಂಟೆಗಳ ಕಾಲ ನಡೆಯುವ ರಿಯಾಯಿತಿ ಮಾರಾಟ ಆರಂಭವಾಗಿದೆ.
ಇದರಲ್ಲಿ ಇಕಾನಮಿ ಕ್ಲಾಸ್ ಟಿಕೆಟ್ ಬೆಲೆ ರೂ. 1149 ಹಾಗೂ ಪ್ರೀಮಿಯಂ ಇಕಾನಮಿ ಕ್ಲಾಸ್ ಟಿಕೆಟ್ ದರ ರೂ. 2099 ರಿಂದ ಶುರುವಾಗಲಿದೆ.
ವಿಸ್ತಾರಾ ಅಗ್ಗದ ಟಿಕೆಟ್ ಮಾರಾಟ ಮಂಗಳವಾರ ಮಧ್ಯರಾತ್ರಿ 12 ಗಂಟೆಯಿಂದ ಶುರುವಾಗಿದೆ. ಪ್ರಯಾಣಿಕರು ಈ ಮಾರಾಟದಲ್ಲಿ ದೆಹಲಿ-ಚಂಡೀಗಢ, ದೆಹಲಿ-ಅಮೃತಸರ, ದೆಹಲಿ-ಶ್ರೀನಗರ ಟಿಕೆಟನ್ನು ಕ್ರಮವಾಗಿ ರೂ. 1199, ರೂ. 1299 ಹಾಗೂ ರೂ. 1699 ಬುಕ್ ಮಾಡಬಹುದು.
ದೆಹಲಿ-ಲೆಹ್, ದೆಹಲಿ-ರಾಂಚಿ, ದೆಹಲಿ-ಮುಂಬೈಗೆ ನಡುವಿನ ಪ್ರಯಾಣಕ್ಕೆ ರೂ. 2099, ದೆಹಲಿ-ಬೆಂಗಳೂರಿಗೆ ರೂ. 2899 ಹಾಗೂ ದೆಹಲಿ-ಗೋವಾಕ್ಕೆ ರೂ. 2999 ಬೆಲೆಗೆ ಟಿಕೆಟ್ ಬುಕ್ ಮಾಡಬಹುದಾಗಿದೆ. ಅಕ್ಟೋಬರ್ 13, ಶುಕ್ರವಾರ ರಾತ್ರಿ 11.59ಕ್ಕೆ ಫೆಸ್ಟಿವಲ್ ಸೇಲ್ ಮುಗಿಯಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+