For Quick Alerts
ALLOW NOTIFICATIONS  
For Daily Alerts

ಏರ್ಟೆಲ್ ತೆಕ್ಕೆಗೆ ಟಾಟಾ ಟೆಲಿ ಸರ್ವಿಸಸ್

ಜಿಯೋಗೆ ಸೆಡ್ಡು ಹೊಡೆದಿರುವ ಏರ್ಟೆಲ್, ಟಾಟಾ ಟೆಲಿ ಸರ್ವಿಸಸ್ (ಟಾಟಾ ಡೊಕೊಮೊ) ಮೊಬೈಲ್ ಸೇವೆಯನ್ನು ಭಾರ್ತಿ ಏರ್ಟೆಲ್ ನಲ್ಲಿ ವಿಲೀನಗೊಳಿಸಿದೆ.

By Siddu
|

ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಹಾಗು ಏರ್ಟೆಲ್ ನಡುವೆ ಭಾರೀ ಪೈಪೋಟಿ ಸೃಷ್ಟಿಯಾಗಿದ್ದು, ಎರಡು ಕಂಪನಿಗಳು ದರ ಸಮರಕ್ಕೆ ಸಜ್ಜಾಗಿ ನಿಂತಿವೆ!

ಜಿಯೋಗೆ ಸೆಡ್ಡು ಹೊಡೆದಿರುವ ಏರ್ಟೆಲ್, ಟಾಟಾ ಟೆಲಿ ಸರ್ವಿಸಸ್ (ಟಾಟಾ ಡೊಕೊಮೊ) ಮೊಬೈಲ್ ಸೇವೆಯನ್ನು ಭಾರ್ತಿ ಏರ್ಟೆಲ್ ನಲ್ಲಿ ವಿಲೀನಗೊಳಿಸಿದೆ. ಜಿಯೋ ದೀಪಾವಳಿ ಧಮಾಕಾ! ರೀಚಾರ್ಜ್ ಮೇಲೆ 100% ಕ್ಯಾಶ್ ಬ್ಯಾಕ್ ಆಫರ್!!

4 ಕೋಟಿ ಗ್ರಾಹಕರು ಏರ್ಟೆಲ್ ತೆಕ್ಕೆಗೆ

4 ಕೋಟಿ ಗ್ರಾಹಕರು ಏರ್ಟೆಲ್ ತೆಕ್ಕೆಗೆ

ಟಾಟಾ ಟೆಲಿ ಸರ್ವಿಸಸ್ ಮತ್ತು ಏರ್ಟೆಲ್ ವಿಲೀನದಿಂದ ಟಾಟಾಟೆಲಿಗೆ ಸೇರಿದ 4 ಕೋಟಿ ಮೊಬೈಲ್‌ ಗ್ರಾಹಕರು ಏರ್ಟೆಲ್ ಸಂಸ್ಥೆಯ ಬಳಕೆದಾರರಾಗಲಿದ್ದಾರೆ. ದೇಶದಾದ್ಯಂತ ಇರುವ 19 ದೂರ ಸಂಪರ್ಕ ಸರ್ಕಲ್‌ಗಳಲ್ಲಿನ ಟಾಟಾ ಟೆಲಿ ಸೇವೆ ಇದೀಗ ಏರ್ಟೆಲ್ ವ್ಯಾಪ್ತಿಗೆ ಒಳಪಡಲಿದೆ.

ಟಾಟಾ ಟೆಲಿಯ ಸಾಲದ ಹೊರೆ

ಟಾಟಾ ಟೆಲಿಯ ಸಾಲದ ಹೊರೆ

ಟಾಟಾ ಟೆಲಿ ಹೊಂದಿರುವ ರೂ. 40 ಸಾವಿರ ಕೋಟಿಗಳಷ್ಟು ಸಾಲದ ಹೊರೆ ಹೊರುವ ಮತ್ತು ಖರೀದಿಗೆ ನಗದು ಪಾವತಿಸುವ ಯಾವುದೇ ಪ್ರಸ್ತಾವ ಈ ವಿಲೀನ ಪ್ರಕ್ರಿಯೆಯಲ್ಲಿ ಇಲ್ಲ. ಹೀಗಾಗಿ ಏರ್ಟೆಲ್ ಪಾಲಿಗೆ ಈ ಸ್ವಾಧೀನ ಪ್ರಕ್ರಿಯೆ ಉಚಿತವಾಗಿರಲಿದೆ. ತರಂಗಾಂತರ ಖರೀದಿಗೆ ಪಾವತಿಸಬೇಕಾದ ರೂ. 9-10 ಸಾವಿರ ಕೋಟಿಗಳ ಬಾಕಿಯನ್ನು ಟಾಟಾ ಟೆಲಿ ಸರ್ವಿಸಸ್ ಭರಿಸಲಿದೆ.

ಮೊಬೈಲ್‌ ಸಂಸ್ಥೆಗಳ ವಿಲೀನಕ್ಕೆ ಪ್ರೇರಣೆ ಆಗುವುದೆ?

ಮೊಬೈಲ್‌ ಸಂಸ್ಥೆಗಳ ವಿಲೀನಕ್ಕೆ ಪ್ರೇರಣೆ ಆಗುವುದೆ?

ಅಂಬಾನಿ ಒಡೆತನದ ರಿಲಯನ್ಸ್ ಜಿಯೊ ಪ್ರವೇಶದ ನಂತರ ಭಾರತದ ಟೆಲಿಕಾಂ ರಂಗದ ದಿಕ್ಕೆ ಬದಲಾಗಿದ್ದು, ದರ ಸಮರದ ಮೂಲಕ ಟೆಲಿಕಾಂ ಕಂಪನಿಗಳ ನಡುವೆ ತೀವ್ರ ಸ್ಪರ್ಧೆ ಎದುರಾಗಿದೆ. ಭಾರತದ ದೂರ ಸಂಪರ್ಕ ಕ್ಷೇತ್ರದ ಈ ವಿದ್ಯಮಾನ ಇನ್ನಷ್ಟು ಮೊಬೈಲ್‌ ಸಂಸ್ಥೆಗಳ ವಿಲೀನಕ್ಕೆ ಪ್ರೇರಣೆ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ವೊಡಾಫೋನ್ ಮತ್ತು ಐಡಿಯಾ ವಿಲೀನಗೊಳ್ಳುವುದನ್ನು ಹಿಂದೆಯೇ ಪ್ರಕಟಿಸಿವೆ.

ಟಾಟಾ ಸನ್ಸ್‌ ಅಧ್ಯಕ್ಷ ಎನ್‌. ಚಂದ್ರಶೇಖರನ್

ಟಾಟಾ ಸನ್ಸ್‌ ಅಧ್ಯಕ್ಷ ಎನ್‌. ಚಂದ್ರಶೇಖರನ್

ಏರ್ಟೆಲ್ ಜತೆಗಿನ ವಿಲೀನ ಒಪ್ಪಂದವು ಟಾಟಾ ಸಮೂಹ ಮತ್ತು ಅದರ ಪಾಲುದಾರರ ಪಾಲಿಗೆ ತಕ್ಕಮಟ್ಟಿಗಿನ ಉತ್ತಮ ಪರಿಹಾರವಾಗಿದೆ ಎಂದು ಟಾಟಾ ಸನ್ಸ್‌ ಅಧ್ಯಕ್ಷ ಎನ್‌. ಚಂದ್ರಶೇಖರನ್ ಅಭಿಪ್ರಾಯಿಸಿದ್ದಾರೆ.

Read more about: airtel telecom money finance news jio
English summary

Bharti Airtel To Acquire Tata's Mobile Business

Tata group has entered into an agreement with Bharti Airtel to merge the consumer mobile businesses of Tata Teleservices Limited and Tata Teleservices Maharashtra Limited into Bharti Airtel.
Story first published: Friday, October 13, 2017, 13:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X