ಇ-ಕಾಮರ್ಸ್ ಜಗತ್ತಿನ ದೈತ್ಯ ಸಂಸ್ಥೆ ಅಮೆಜಾನ್ ಇಂಡಿಯಾ ದೀಪಾವಳಿ ಹಬ್ಬದ ಪ್ರಯುಕ್ತ 'ಗ್ರೇಟ್ ಇಂಡಿಯನ್ ಸೇಲ್' ಅಡಿಯಲ್ಲಿ ಭಾರೀ ರಿಯಾಯಿತಿ ಕೊಡುಗೆಗಳನ್ನು ಘೋಷಿಸಿದೆ.
ದೀಪಾವಳಿ ಹಬ್ಬ ಗ್ರಾಹಕರಿಗಾಗಿ ಹಲವಾರು ಕೊಡುಗೆಗಳನ್ನು ಹೊತ್ತು ತರುತ್ತದೆ. ಅನೇಕ ಕಂಪನಿಗಳು ತಮ್ಮ ಉತ್ಪನ್ನಗಳ ಮೇಲೆ ಭಾರೀ ಡಿಸ್ಕೌಂಟ್ ಗಳನ್ನು ಘೋಷಿಸಿ ಗ್ರಾಹಕರನ್ನು ಆಕರ್ಷಿಸಲು ಪೈಪೋಟಿ ನಡೆಸುತ್ತವೆ.
ಅದರಲ್ಲಿ ಇ-ಕಾಮರ್ಸ್ ಜಗತ್ತಿನ ದೈತ್ಯ ಸಂಸ್ಥೆ ಅಮೆಜಾನ್ ಇಂಡಿಯಾ ದೀಪಾವಳಿ ಹಬ್ಬದ ಪ್ರಯುಕ್ತ 'ಗ್ರೇಟ್ ಇಂಡಿಯನ್ ಸೇಲ್' ಅಡಿಯಲ್ಲಿ ಭಾರೀ ರಿಯಾಯಿತಿ ಕೊಡುಗೆಗಳನ್ನು ಘೋಷಿಸಿದೆ. ವೋಡಾಫೋನ್ ನಿಂದ 90GB ಡೇಟಾ, ಅನ್‍ಲಿಮಿಟೆಡ್ ಕರೆ ಆಫರ್!!
ಗ್ರಾಹಕರು ಸಾವಿರಾರು ಉತ್ಪನ್ನಗಳ ಮೇಲೆ ಶೇ. 40ರವರೆಗೆ ರಿಯಾಯಿತಿ ಪಡೆಯಲಿದ್ದಾರೆ.
ದೀಪಾವಳಿ ಸೇಲ್ ಅವಧಿ
ಅಕ್ಟೋಬರ್ 14ರಿಂದ ಗ್ರೇಟ್ ಇಂಡಿಯನ್ ಸೇಲ್ ಆರಂಭವಾಗಿದ್ದು, ಅಕ್ಟೋಬರ್ 17ರವರೆಗೆ ನಡೆಯಲಿದೆ. ಈ ಸೇಲ್ ನಲ್ಲಿ ಉತ್ಪನ್ನಗಳ ಮೇಲೆ ದೊಡ್ಡ ಪ್ರಮಾನದ ರಿಯಾಯಿತಿ ಸಿಗುತ್ತಿದೆ. 30 ಸಾವಿರ ಉತ್ಪನ್ನಗಳಿಗೆ ಇಎಂಐ ಸೌಲಭ್ಯ ನೀಡಲಾಗಿದೆ.
ಮೊಬೈಲ್ ಗಳ ಮೇಲೆ ಆಫರ್
ಆಪಲ್, ಸ್ಯಾಮ್ಸಂಗ್, ಒನ್ ಪ್ಲಸ್, ಹಾನರ್, ಲೆನೊವೊ, ಕ್ಸಿಯಾಮಿ, ಮೋಟೋ, ಎಲ್ಜಿ, ಸೋನಿ, ನೋಕಿಯಾ ಮತ್ತು ಪ್ಯಾನಾಸೊನಿಕ್ ಮುಂತಾದ ಉನ್ನತ ಬ್ರಾಂಡ್ ನ ಸ್ಮಾರ್ಟ್ಫೋನ್ ಗಳ ಮೇಲೆ ಶೇ. 40ರವರೆಗೆ ರಿಯಾಯಿತಿ ಸಿಗಲಿದೆ.
ಟಿವಿ, ಲ್ಯಾಪ್ ಟಾಪ್, ಗೃಹೋಪಯೋಗಿಗಳ ಮೇಲೆ ಆಫರ್
ಸ್ಯಾಮ್ಸಂಗ್, ಎಲ್ಜಿ, ಸೋನಿ, ಪ್ಯಾನಾಸೊನಿಕ್ ಬ್ರಾಂಡ್ ಟಿವಿಗಳ ಮೇಲೆ ಶೇ. 20-40ರವರೆಗೆ ರಿಯಾಯಿತಿ ಇರಲಿದೆ. ಕಿಚನ್, ಕುಕ್ಕರ್, ಡೈನಿಂಗ್ ಉತ್ಪನ್ನಗಳ ಮೇಲೆ ಶೇ. 70ರವರೆಗೆ, ಪವರ್ ಬ್ಯಾಂಕ್ ಗೆ ಶೇ. 60ರಷ್ಟು ಹಾಗೂ ಮೊಬೈಲ್ ಕವರ್ ಮೇಲೆ ಶೇ. 80ರಷ್ಟು ಡಿಸ್ಕೌಂಟ್ ನೀಡಲಾಗಿದೆ. ಲ್ಯಾಪ್ಟಾಪ್ ಮೇಲೆ ಶೇ. 20ರಷ್ಟು ರಿಯಾಯಿತಿ ಸಿಗಲಿದೆ.
ಕ್ಯಾಶ್ ಬ್ಯಾಕ್ ಸೌಲಭ್ಯ
ಅಮೆಜಾನ್ ಪೇ ಆಪ್ ಮೂಲಕ ಉತ್ಪನ್ನಗಳನ್ನು ಖರೀದಿ ಮಾಡಡುವವರಿಗೆ ರೂ. 500 ಕ್ಯಾಶ್ಬ್ಯಾಕ್ ಸಿಗಲಿದೆ.
ಕ್ರೆಡಿಟ್ ಕಾರ್ಡ್ ಪ್ರತ್ಯೇಕ ರಿಯಾಯಿತಿ
ದೀಪಾವಳಿಯ ಗ್ರೇಟ್ ಇಂಡಿಯನ್ ಸೇಲ್ ಕೊಡುಗೆಯಲ್ಲಿ ಎಸ್ಬಿಐ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಗ್ರಾಹಕರಿಗೆ ಶೇ. 10ರಷ್ಟು ಪ್ರತ್ಯೇಕ ರಿಯಾಯಿತಿ ಸಿಗಲಿದೆ.


Click it and Unblock the Notifications