ದೀಪಾವಳಿ ಸಂದರ್ಭದಲ್ಲಿ ಟೆಲಿಕಾಂ ಕಂಪನಿಗಳು ಕೂಡ ಪೈಪೋಟಿ ಮೇಲೆ ಆಫರ್ ಗಳನ್ನು ನೀಡಲು ಮುಂದಾಗಿವೆ. ಜಿಯೋ, ಏರ್ಟೆಲ್ ಈಗಾಗಲೇ ಆಫರ್ ಗಳನ್ನು ಘೋಷಿಸಿದ್ದು, ಇದೀಗ ವೋಡಾಫೋನ್ ಸರದಿ..
ನಾಡಿನ ಸಮಸ್ತ ಜನರು ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದು, ದೀಪಾವಳಿಗೆ ದಿನಗಣನೆ ಶುರುವಾಗಿದೆ. ದೀಪಾವಳಿ ಸಂದರ್ಭದಲ್ಲಿ ಗ್ರಾಹಕರು ಹೆಚ್ಚು ಖರೀದಿಯಲ್ಲಿ ತೊಡಗುವುದರಿಂದ ಅನೇಕ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ತುದಿಗಾಲಲ್ಲಿ ನಿಂತಿರುತ್ತವೆ. 50%, 70%, 25% ಹೀಗೆ ಅನೇಕ ಆಫರ್ ಗಳನ್ನು ಘೋಷಿಸುತ್ತವೆ.
ದೀಪಾವಳಿ ಸಂದರ್ಭದಲ್ಲಿ ಟೆಲಿಕಾಂ ಕಂಪನಿಗಳು ಕೂಡ ಪೈಪೋಟಿ ಮೇಲೆ ಆಫರ್ ಗಳನ್ನು ನೀಡಲು ಮುಂದಾಗಿವೆ. ಜಿಯೋ, ಏರ್ಟೆಲ್ ಈಗಾಗಲೇ ಆಫರ್ ಗಳನ್ನು ಘೋಷಿಸಿದ್ದು, ಇದೀಗ ವೋಡಾಫೋನ್ ಸರದಿ.. ಜಿಯೋ ದೀಪಾವಳಿ ಧಮಾಕಾ! ರೀಚಾರ್ಜ್ ಮೇಲೆ 100% ಕ್ಯಾಶ್ ಬ್ಯಾಕ್ ಆಫರ್!!
ರೂ. 399 ಪ್ಲಾನ್
ದೀಪಾವಳಿ ಹಬ್ಬದ ಕೊಡುಗೆಯಾಗಿ ವೊಡಾಫೋನ್ ತನ್ನ ಗ್ರಾಹಕರಿಗೆ ರೂ. 399ರ ಹೊಸ ಯೋಜನೆ ಕೊಡುಗೆ ನೀಡಿದೆ. ರೂ. 399 ರೂಪಾಯಿಯ ಈ ಹೊಸ ಯೋಜನೆಯಲ್ಲಿ 6 ತಿಂಗಳ ಅವಧಿಗೆ 4G ವೇಗದ 90GB ಡೇಟಾ ಹಾಗು ಅನಿಯಮಿತ ಕರೆಗಳು ಸಿಗಲಿದೆ.
ಜಿಯೋಗಿಂತ ವೋಡಾಫೋನ್ ಬೆಸ್ಟ್!
ರಿಲಾಯನ್ಸ್ ಹಾಗೂ ಏರ್ಟೆಲ್ ಕಂಪನಿಗಳು ಈಗಾಗಲೇ ರೂ. 399 ಕೊಡುಗೆ ಘೋಷಿಸಿವೆ. ಜಿಯೋ ರೂ. 399 ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿದಿನ 1GB ಡೇಟಾ, ಅನಿಯಮಿತ ಕರೆ, ಎಸ್ಎಂಎಸ್ ಸೌಲಭ್ಯ ನೀಡಲಿದೆ. ಈ ಪ್ಲಾನ್ ಕೇವಲ 3 ತಿಂಗಳ ಅವಧಿ ಹೊಂದಿದೆ. ಆದರೆ ವೊಡಾಫೋನ್ ಇಷ್ಟೇ ಬೆಲೆಯಲ್ಲಿ 6 ತಿಂಗಳವರೆಗೆ ಸೌಲಭ್ಯ ಒದಗಿಸಲಿದೆ.
ಪ್ರೀಪೇಡ್ ಗ್ರಾಹಕರಿಗೆ ಸೌಲಭ್ಯ
ರೂ. 399 ಕೊಡುಗೆ ವೋಡಾಫೋನ್ ನ ಪ್ರೀಪೇಡ್ ಗ್ರಾಹಕರಿಗೆ ಈ 6 ತಿಂಗಳ ಸೌಲಭ್ಯ ಸಿಗಲಿದೆ. ಏರ್ಟೆಲ್ ರೀತಿಯಲ್ಲಿಯೇ ವೊಡಾಫೋನ್ ಕೂಡ 6 ತಿಂಗಳುಗಳ ಕಾಲ ಅನ್ ಲಿಮಿಟೆಡ್ ಕರೆ ಸೌಲಭ್ಯ ನೀಡುತ್ತಿದೆ. ದೀಪಾವಳಿ ಪ್ರಯುಕ್ತ ವೋಡಾಫೋನ್ ತನ್ನ ಗ್ರಾಹಕರಿಗೆ ಈ ಕೊಡುಗೆ ಘೋಷಿಸಿದೆ. ದೀಪಾವಳಿ ಕೊಡುಗೆ! ರೂ. 1,399 ಬೆಲೆಗೆ ಏರ್ಟೆಲ್ 4G ಸ್ಮಾರ್ಟ್ಫೋನ್
ಜಿಯೋ 100% ಕ್ಯಾಶ್ ಬ್ಯಾಕ್ ಆಫರ್?
ದೀಪಾವಳಿ ಹಬ್ಬದ ಕೊಡುಗೆಯಾಗಿ ಜಿಯೋ ಮೂರು ತಿಂಗಳ ಅವಧಿಗೆ ಅನ್ ಲಿಮಿಟೆಡ್ ಕರೆ ಹಾಗೂ ಪ್ರತಿ ದಿನ 1gbಯಂತೆ ಡೇಟಾ ಬಳಕೆಗಾಗಿ ರೂ. 399 ರೀಚಾರ್ಜ್ ಆಫರ್ ನೀಡಿದೆ. ಇದೀಗ ರೂ. 399 ರೀಚಾರ್ಜ್ ಹಣವನ್ನು ಗ್ರಾಹಕರಿಗೆ ವಾಪಾಸ್ ಮರಳಿಸಲು ನಿರ್ಧರಿಸಿದೆ. ಜಿಯೋ ಧನ್ ಧನಾ ಧನ್ ಫೋಸ್ಟರ್‌ಗಳ ಮೂಲಕ ಈ ಆಫರ್ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿದೆ. ಗ್ರಾಹಕರು ರೂ. 399 ಪ್ಲಾನ್ ರೀಚಾರ್ಜ್ ಮಾಡುವಾಗ ನೀಡುವ ಹಣ ಕ್ಯಾಶ್ಬ್ಯಾಕ್ ವೋಚರ್ ರೂಪದಲ್ಲಿ ನೀಡಲಾಗುತ್ತದೆ. ಅಂದರೆ ರೂ. 50ರ 8 ವೋಚರ್‌ಗಳ ಮೂಲಕ ಮರಳಿ ಪಡೆಯಬಹುದಾಗಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications