ಸರ್ಕಾರದ ಹಲವು ಯೋಜನೆಗಳ ಪ್ರಯೋಜನ ಪಡೆಯುವುದಕ್ಕಾಗಿ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ನಿಗದಿಪಡಿಸಿರುವ ಅವಧಿಯನ್ನು 2018 ಮಾರ್ಚ್ 31ರವರೆಗೆ ವಿಸ್ತರಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಹೇಳಿದೆ.
ಸರ್ಕಾರದ ಹಲವು ಯೋಜನೆಗಳ ಪ್ರಯೋಜನ ಪಡೆಯುವುದಕ್ಕಾಗಿ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ನಿಗದಿಪಡಿಸಿರುವ ಅವಧಿಯನ್ನು 2018 ಮಾರ್ಚ್ 31ರವರೆಗೆ ವಿಸ್ತರಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಹೇಳಿದೆ.
ಆಧಾರ್ ಕಾರ್ಡ್ ಹೊಂದಿಲ್ಲದವರು ಮತ್ತು ಆಧಾರ್ ಗಾಗಿ ಇನ್ನೂ ನೋಂದಣಿ ಮಾಡದೆ ಇರುವವರಿಗೆ ಇದು ಅನ್ವಯವಾಗಲಿದೆ. ಮಕ್ಕಳ ಆಧಾರ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವುದು ಹೇಗೆ?
ಅಡ್ವೋಕೇಟ್ ಜನರಲ್ ಹೇಳಿದ್ದೇನು?
ಈಗಾಗಲೇ ನೀಡಲಾಗಿರುವ ಗಡುವು ಇದೇ ವರ್ಷದ ಡಿಸೆಂಬರ್‌ಗೆ ಮುಗಿಯುತ್ತದೆ. ಹೀಗಾಗಿ ಈ ಗಡುವನ್ನು 2018 ಮಾರ್ಚ್ 31ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಅಡ್ವೋಕೇಟ್ ಜನರಲ್ ಕೆ.ಕೆ. ವೇಣುಗೋಪಾಲ್ ಹೇಳಿದ್ದಾರೆ. ಆಧಾರ್ ಸಂಖ್ಯೆ ಇಲ್ಲದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಮಾರ್ಚ್ 31ರವರೆಗೂ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ನಿರಾಕರಿಸುವುದಿಲ್ಲ ಎಂದು ವೇಣುಗೋಪಾಲ್ ನ್ಯಾಯಪೀಠಕ್ಕೆ ವಿವರಿಸಿದ್ದಾರೆ.
ಆಧಾರ್ ಹೊಂದಿದವರು ಏನು ಮಾಡಬೇಕು?
ಆಧಾರ್ ಸಂಖ್ಯೆ ಹೊಂದಿರುವವರು ಅದನ್ನು ತಮ್ಮ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ, ಪ್ಯಾನ್ ಕಾರ್ಡ್ ಮತ್ತು ಇತರ ಸರ್ಕಾರಿ ಯೋಜನೆಗಳೊಂದಿಗೆ ಲಿಂಕ್ ಮಾಡುವುದು ಅನಿವಾರ್ಯ ಎಂದು ಹೇಳಲಾಗಿದೆ. ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಲಿಂಕ್ ಮಾಡೋದು ಹೇಗೆ?
ಪ್ರಮುಖ ಯೋಜನೆಗಳು
135ಕ್ಕಿಂತ ಹೆಚ್ಚಿನ ಯೋಜನೆಗಳಿಗೆ (35 ಸಚಿವಾಲಯಗಳು) ಆಧಾರ್ ಜೋಡಣೆ ಕಡ್ಡಾಯವಾಗಿದ್ದು, ಇದರಲ್ಲಿ ಎಲ್ಪಿಜಿ (LPG), ಸೀಮೆ ಎಣ್ಣೆ, ರಸಗೊಬ್ಬರ ಸಬ್ಸಿಡಿ, ಪಡಿತರ ಸೌಲಭ್ಯ(PDS) ಮತ್ತು ನರೇಗಾ ಯೋಜನೆಗಳು ಸೇರಿವೆ. ಈ ಎಲ್ಲಾ ಯೋಜನೆಗಳಿಗೆ ಆಧಾರ್ ಲಿಂಕ್ ಮಾಡುವ ಗಡುವನ್ನು ಮಾರ್ಚ್ 31ರ ವರೆಗೆ ವಿಸ್ತರಿಸಲಾಗಿದೆ.
ಆಧಾರ್ ಇಲ್ಲದವರ ವಿರುದ್ಧ ಕ್ರಮ ಸಾಧ್ಯತೆ
ಆಧಾರ್ ಸಂಖ್ಯೆಯನ್ನು ಹೊಂದಿದ್ದರೂ ಅದನ್ನು ಜೋಡಣೆ ಮಾಡದೇ ಇರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸಲು ಅಕ್ಟೋಬರ್ 30ರವರೆಗೆ ಸಮಯ ನೀಡಬೇಕು ಎಂದು ಅಡ್ವೋಕೇಟ್ ಜನರಲ್ ವೇಣುಗೋಪಾಲ್ ನ್ಯಾಯಪೀಠಕ್ಕೆ ಮನವಿ ಮಾಡಿದ್ದಾರೆ. ಆಧಾರ್ ಲಿಂಕ್ ಮಾಡಿಲ್ಲವೆ? ಹಾಗಿದ್ದರೆ ಈ ಸೌಲಭ್ಯಗಳು ಸಿಗಲ್ಲ
ಮೊಬೈಲ್‌ಗೆ ಆಧಾರ್ ಜೋಡಣೆ ಸರಳ
ಮೊಬೈಲ್ ಗ್ರಾಹಕರು ಆನ್ಲೈನ್ ಮೂಲಕ ಮೊಬೈಲ್ ಗೆ ಆಧಾರ್ ನಂಬರ್ ಲಿಂಕ್ ಮಾಡಬಹುದು. ಇದಕ್ಕಾಗಿ ಒಂದು ಬಾರಿಯ ಪಾಸ್‌ವರ್ಡ್ (ಒಟಿಪಿ) ಆಧರಿತ ಆಯ್ಕೆಯನ್ನು ಬಳಸಿ ಆಧಾರ್ ಸಂಖ್ಯೆ ನೀಡಬಹುದು. ಇಲ್ಲವೆ ಮೊಬೈಲ್ ಸೇವಾ ಕಂಪೆನಿಗಳ ಆಪ್ ಮೂಲಕ ಲಾಗ್ ಇನ್ ಆಗಿ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡಬಹುದು. ಟೆಲಿಕಾಂ ಕಂಪೆನಿಗಳು ಈ ಸೇವೆಗಳನ್ನು ಶೀಘ್ರದಲ್ಲಿಯೇ ಒದಗಿಸಲಿವೆ.


Click it and Unblock the Notifications