For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ ರಿಟರ್ನ್ ಸಲ್ಲಿಕೆಗೆ ಗಡುವು ವಿಸ್ತರಣೆ

ಜಿಎಸ್ಟಿ ಸಂಬಂಧಿಸಿದಂತೆ ಜುಲೈ ತಿಂಗಳ ಜಿಎಸ್ಟಿಆರ್–2 ಮತ್ತು ಜಿಎಸ್ಟಿಆರ್–3 ಸಲ್ಲಿಕೆಯ ಅವಧಿಯನ್ನು ಒಂದು ತಿಂಗಳು ಮುಂದೂಡಲಾಗಿದೆ.

By Siddu
|

ಕೇಂದ್ರ ಸರ್ಕಾರ ಜಿಎಸ್ಟಿ ತೆರಿಗೆದಾರರಿಗೆ ರಿಟರ್ನ್ಸ್ ಸಲ್ಲಿಕೆಗೆ ಒಂದು ತಿಂಗಳ ಗಡುವು ನೀಡಿದೆ.

ಜುಲೈ ತಿಂಗಳ ಜಿಎಸ್ಟಿಆರ್-2 ಮತ್ತು ಜಿಎಸ್ಟಿಆರ್-3 ಸಲ್ಲಿಕೆಯ ಅವಧಿಯನ್ನು ಒಂದು ತಿಂಗಳು ಮುಂದೂಡಲಾಗಿದ್ದು, ಜುಲೈ ತಿಂಗಳ ಜಿಎಸ್ಟಿಆರ್-2 ರಿಟರ್ನ್ಸ್ ಸಲ್ಲಿಕೆಗೆ ನವೆಂಬರ್ 30 ಹಾಗೂ ಆಗಸ್ಟ್ ತಿಂಗಳ ಜಿಎಸ್ಟಿಆರ್-3 ರಿಟರ್ನ್ಸ್ ಸಲ್ಲಿಕೆಗೆ ಡಿಸೆಂಬರ್ 11 ರ ವರೆಗೆ ಗಡುವು ನೀಡಲಾಗಿದೆ.

ಜಿಎಸ್ಟಿ ರಿಟರ್ನ್ ಸಲ್ಲಿಕೆಗೆ ಗಡುವು ವಿಸ್ತರಣೆ

ಜಿಎಸ್ಟಿಆರ್-2 ಸಲ್ಲಿಕೆಗೆ ಅಕ್ಟೋಬರ್‌ 31 ಮತ್ತು ಜಿಎಸ್ಟಿಆರ್-3 ಸಲ್ಲಿಕೆಗೆ ನವೆಂಬರ್‌ 11 ಕೊನೆಯ ದಿನವಾಗಿತ್ತು. ಈಗ ಈ ಎರಡೂ ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ಕ್ರಮವಾಗಿ ನವೆಂಬರ್‌ 30 ಮತ್ತು ಡಿಸೆಂಬರ್‌ 11ಕ್ಕೆ ವಿಸ್ತರಿಸಲಾಗಿದೆ. ನವೆಂಬರ್ ತಿಂಗಳು ದುಬಾರಿ ಆಗಲಿದೆ.. ಯಾಕೆ ಗೊತ್ತೆ?

ಗಡುವು ವಿಸ್ತರಣೆಯಿಂದ ಜುಲೈ ತಿಂಗಳ ಜಿಎಸ್ಟಿಆರ್-2 ಸಲ್ಲಿಸಲು 30.81 ಲಕ್ಷ ತೆರಿಗೆದಾರರಿಗೆ ಪ್ರಯೋಜನ ಆಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಇದೀಗ ಮತ್ತೆ ಅವಧಿ ವಿಸ್ತರಣೆ ಆಗಿರುವುದರಿಂದ ವಹಿವಾಟುದಾರರಿಗೆ ಅನುಕೂಲವಾಗಲಿದೆ. ಜಿಎಸ್‌ಟಿಎನ್‌ ಜಾಲ ತಾಣದಲ್ಲಿನ ಲೋಪದೋಷಗಳನ್ನು ಸರಿಪಡಿಸಲೂ ಈಗ ಸಾಕಷ್ಟು ಕಾಲಾವಕಾಶವೂ ಸಿಗಲಿದೆ.

English summary

GST extension: July deadline to file GSTR-2, GSTR-3 moved to Nov 30, Dec 11

In a move to give relief to GST taxpayers, the government today extended the deadline to file returns GSTR-2 and GSTR-3 for July to November 30 and December 11 respectively.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X