For Quick Alerts
ALLOW NOTIFICATIONS  
For Daily Alerts

ನವೆಂಬರ್ ತಿಂಗಳು ದುಬಾರಿ ಆಗಲಿದೆ.. ಯಾಕೆ ಗೊತ್ತೆ?

ದಿನನಿತ್ಯ ಬಳಕೆಯ ಸರಕುಗಳಾದ ಊಟ, ಎಸಿ, ಪ್ರಿಡ್ಜ್, ವಾಷಿಂಗ್ ಮಷಿನ್, ತೈಲ ಬೆಲೆ, ಪ್ರಯಾಣ ದರಗಳು ನವೆಂಬರ್ ನಲ್ಲಿ ಏರಿಕೆಯಾಗಲಿವೆ. ಕಾರಣಗಳನ್ನು ಇಲ್ಲಿ ನೀಡಲಾಗಿದೆ. ಮುಂದೆ ಓದಿ..

By Siddu
|

ನವೆಂಬರ್ ತಿಂಗಳು ಗ್ರಾಹಕರ ಪಾಲಿಗೆ ದುಬಾರಿಯಾಗಲಿದೆ! ಕಚ್ಚಾ ತೈಲಗಳ ನೀತಿ ಬದಲಾವಣೆ ಮತ್ತು ತೈಲ ಬೆಲೆ ಏರಿಕೆ ಮತ್ತು ಕೆಲ ಕಚ್ಚಾ ಸರಕುಗಳ ಬೆಲೆ ನವೆಂಬರ್ ತಿಂಗಳಲ್ಲಿ ಹೆಚ್ಚಾಗಲಿದೆ.

ದಿನನಿತ್ಯ ಬಳಕೆಯ ಸರಕುಗಳಾದ ಊಟ, ಎಸಿ, ಪ್ರಿಡ್ಜ್, ವಾಷಿಂಗ್ ಮಷಿನ್, ತೈಲ ಬೆಲೆ, ಪ್ರಯಾಣ ದರಗಳು ನವೆಂಬರ್ ನಲ್ಲಿ ಏರಿಕೆಯಾಗಲಿವೆ. ಕಾರಣಗಳನ್ನು ಇಲ್ಲಿ ನೀಡಲಾಗಿದೆ. ಮುಂದೆ ಓದಿ.. ಜಿಎಸ್ಟಿ ತೆರಿಗೆ ಹೆಸರಲ್ಲಿ ಗ್ರಾಹಕರನ್ನು ಮೋಸ ಮಾಡ್ತಾರೆ! ತಪ್ಪದೇ ಓದಿ..

ಗೃಹೋಪಯೋಗಿ ವಸ್ತುಗಳು

ಗೃಹೋಪಯೋಗಿ ವಸ್ತುಗಳು

ರೆಫ್ರಿಜರೇಟರ್, ಏರ್-ಕಂಡಿಷನರ್ ಮತ್ತು ವಾಷಿಂಗ್ ಮಷಿನ್ ಬೆಲೆಗಳು ನವೆಂಬರ್ ನಿಂದ ಶೇ. 3-5ರವರೆಗೆ ಹೆಚ್ಚಾಗಲಿವೆ. ಪ್ರಾರಂಭವಾಗುವಂತೆ 3-5% ನಷ್ಟು ಹೆಚ್ಚಾಗುತ್ತದೆ. ಗೃಹೋಪಯೋಗಿ ಸರಕುಗಳ ಮೇಲೆ ಬಿಳಿ ಸರಕು ತಯಾರಕರು (ರೆಫ್ರಿಜರೇಟರ್, ಏರ್-ಕಂಡಿಷನರ್ ಮತ್ತು ವಾಷಿಂಗ್ ಮಷಿನ್) ಹೆಚ್ಚಿನ ವೆಚ್ಚವನ್ನು ವಿಧಿಸುವ ಯೋಜನೆಯಲ್ಲಿದ್ದಾರೆ. ಉದ್ಯಮ (ಬಿಸಿನೆಸ್) ಅಭಿವೃದ್ಧಿಪಡಿಸುವುದು ಹೇಗೆ?

ವಿಮಾನ ದರಗಳು

ವಿಮಾನ ದರಗಳು

ಇತ್ತೀಚೆಗೆ ಕಚ್ಚಾ ತೈಲ ಬೆಲೆಗಳು ಕಡಿಮೆ ಇದ್ದುದ್ದರಿಂದಾಗಿ ಹಲವು ವಿಮಾನಯಾನ ಕಂಪನಿಗಳು ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಆಫರ್ ಗಳನ್ನು ಘೊಷಿಸಲು ಸಾಧ್ಯವಾಯಿತು. ಇದು ಶೇ. 20ರಷ್ಟು ವಿಮಾನ ಸಂಚಾರ ಹೆಚ್ಚಳಕ್ಕೆ ಕಾರಣವಾಗಿತ್ತು. ಈಗ ವಿಮಾನಯಾನಕ್ಕಾಗಿ ಶೇ. 15ರವರೆಗೆ ಹೆಚ್ಚು ದರ ಪಾವತಿಸಬೇಕಾಗುತ್ತದೆ. ಆಗಸ್ಟ್ ತಿಂಗಳಿನಿಂದ ಏರ್ಲೈನ್ಸ್ ಟರ್ಬೈನ್ ಇಂಧನ (ಎಟಿಎಫ್) ಬೆಲೆಯಲ್ಲಿ ತೀವ್ರ ಹೆಚ್ಚಳವಾದ ಕಾರಣ ವಿಮಾನಯಾನ ದರಗಳಲ್ಲಿ ಶೇ. 10-15 ಏರಿಕೆ ಕಾಣುತ್ತಿದೆ. ಹೀಗಾಗಿ ಏರ್ಲೈನ್ ಸಂಸ್ಥೆಗಳು ಶೇ. 10-15ರವರೆಗೆ ವಿಮಾನದರ ಹೆಚ್ಚಿಸುವ ಸಾಧ್ಯತೆ ಇದೆ. ಕಳೆದ ತಿಂಗಳಿನಿಂದ ತೈಲ ಮಾರ್ಕೆಟಿಂಗ್ ಕಂಪನಿಗಳು ಶೇ. 6% ರಷ್ಟು ಬೆಲೆಗಳನ್ನು ಏರಿಸಿವೆ. ಜಿಎಸ್ಟಿ ಎಫೆಕ್ಟ್: ಜುಲೈ 1ರಿಂದ ಯಾವುದು ದುಬಾರಿ, ಯಾವುದು ಅಗ್ಗ..?

ಆಹಾರ ದುಬಾರಿ

ಆಹಾರ ದುಬಾರಿ

ಜಿಎಸ್ಟಿ ದರದ ಪರಿಣಾಮವಾಗಿ ಹೊರಗಡೆ (ಹೋಟೆಲ್, ರೆಸ್ಟೊರೆಂಟ್) ಊಟ ಮಾಡಿದರೆ ತುಂಬಾ ದುಬಾರಿಯಾಗಿರಲಿದೆ ಎಂದು ಕೈಗಾರಿಕಾ ಸಂಸ್ಥೆ ನ್ಯಾಷನಲ್ ರೆಸ್ಟೊರೆಂಟ್ ಅಸೋಸಿಯೇಷನ್ ​​ಆಫ್ ಇಂಡಿಯಾ (ಎನ್ಆರ್ಎಐ) ಹೇಳಿದೆ. ಜುಲೈ 1, 2017 ರಂದು ಜಿಎಸ್ಟಿ ಜಾರಿಗೆ ಬಂದ ನಂತರ ಎಸಿ ರೆಸ್ಟೊರೆಂಟ್ ಗಳ ಆಹಾರದ ಮೇಲೆ ಶೇ. 18 ಜಿಎಸ್ಟಿ ವಿಧಿಸಲಾಗುತ್ತದೆ. ಜಿಎಸ್ಟಿ ದರವನ್ನು 18% ರಿಂದ 12% ಗೆ ತಗ್ಗಿಸುವಂತೆ ಸರ್ಕಾರವು ಪರಿಗಣಿಸಿದೆ. ಶೇ. 18ರಷ್ಟು ಜಿಎಸ್ಟಿ ವಿಧಿಸುವುದರಿಂದ ರೆಸ್ಟಾರೆಂಟ್ ಗಳು ಆಹಾರ ಸೇವೆ, ಬಾಡಿಗೆ, ವಿದ್ಯುತ್ ಮತ್ತು ಸಾರಿಗೆ ಮುಂತಾದವುಗಳ ಮೇಲೆ ತೆರಿಗೆಗಳನ್ನು ವಿಧಿಸುತ್ತಿವೆ.

ಇಂಧನ ಬೆಲೆ ಏರಿಕೆ

ಇಂಧನ ಬೆಲೆ ಏರಿಕೆ

ಜಾಗತಿಕ ತೈಲ ಬೆಲೆಗಳ ಏರಿಕೆಯಿಂದ ಇಂಧನ ಬೆಲೆಗಳು ಪ್ರತಿ ಬ್ಯಾರೆಲ್ ಗೆ 60 ಡಾಲರ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಭಾರತ ಅಮದು ಮಾಡಿಕೊಳ್ಳುವ ಮೂಲಕ ಶೇ. 82ರಷ್ಟು ತೈಲದ ಅಗತ್ಯವನ್ನು ಪೂರೈಸಿಕೊಳ್ಳುತ್ತದೆ. ಆಗಸ್ಟ್ ತಿಂಗಳಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಗಾಗಿ ಗ್ರಾಹಕರು ಹೆಚ್ಚಿನ ಹಣವನ್ನು ಪಾವತಿಸುತ್ತಿದ್ದಾರೆ. ದೆಹಲಿಯಲ್ಲಿ ಪ್ರತಿ ಲೀಟರ್ ಗೆ ಪೆಟ್ರೋಲ್ ಬೆಲೆ ರೂ. 7.8 ಮತ್ತು ಡೀಸೆಲ್ ಬೆಲೆ ರೂ. 5.7 ಏರಿಕೆಯಾಗಿದೆ.

ರೂಪಾಯಿ ಮೌಲ್ಯ

ರೂಪಾಯಿ ಮೌಲ್ಯ

ಬೆಲೆಗಳ ಏರಿಕೆಗೆ ಡಾಲರ್ ಎದುರು ರೂಪಾಯಿ ಮೌಲ್ಯ ದುರ್ಬಲಗೊಳ್ಳುತ್ತಿರುವುದು ಇನ್ನೊಂದು ಪ್ರಮುಖ ಕಾರಣವಾಗಿದೆ. ಇದರಿಂದಾಗಿ ತೈಲ ದರ ಹಾಗು ವಿಮಾನ ದರ ಗಳಲ್ಲಿ ಹೆಚ್ಚಳ ಕಂಡುಬರುತ್ತದೆ.

ಮಾರುಕಟ್ಟೆ ಪರಿಣಾಮ

ಮಾರುಕಟ್ಟೆ ಪರಿಣಾಮ

ಕಳೆದ ಜನೆವರಿ ನಂತರ ಬೆಲೆಗಳು ಹೆಚ್ಚಳದಿಂದಾಗಿ ಗೃಹೋಪಯೋಗಿ ಸರಕುಗಳ ಇನ್ಪುಟ್ ವೆಚ್ಚವು ಶೇ. 30-50 ಹೆಚ್ಚಾಗಿದೆ. ಉಕ್ಕಿನ ಬೆಲೆ ಶೇ. 40 ಮತ್ತು ತಾಮ್ರದ ಬೆಲೆ ಶೇ. 50ರಷ್ಟು ಹೆಚ್ಚಾಗಿದೆ. ರೆಫ್ರಿಜರೇಟರ್ ತಯಾರಿಸಲು ಬಳಸುವ ಎಂಡಿಐ ಎಂಬ ರಾಸಾಯನಿಕದ ಜಾಗತಿಕ ಕೊರತೆಯಿಂದ ಅವುಗಳ ಬೆಲೆ ಕೂಡ ಏರಲಿದೆ.

English summary

Reasons why November could turn out to be costlier for consumers

November can prove to be costlier for consumers. Policy changes and rising prices of crude oil and certain raw materials are likely to push up consumer prices next month. Prices of ACs, fridge, washing machine, air fare, food and fuel may go up in November.
Story first published: Tuesday, October 31, 2017, 12:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X