ಮೋಸ ಹೋಗದಿರಿ! ಕ್ರೆಡಿಟ್ ಕಾರ್ಡ್‌ನ 10 ಶುಲ್ಕಗಳ ಬಗ್ಗೆ ಎಚ್ಚರವಿರಲಿ

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಅಯ್ಯೋ, ಕ್ರೆಡಿಟ್ ಕಾರ್ಡ್ ಸಹವಾಸಕ್ಕೆ ಹೋಗಬೇಡಿ. ಅದೂ ಇದೂ ಅಂತಾ ಏನೇನೋ ಶುಲ್ಕ ವಿಧಿಸುತ್ತಾರೆ. ಈ ಮಾತನ್ನು ಅನೇಕರು ಹೇಳಿರುವುದನ್ನು ನೀವು ಕೇಳಿರಬಹುದು. ಕ್ರೆಡಿಟ್ ಕಾರ್ಡ್ ಪಡೆಯುವಾಗ ನಮಗೆ ಉತ್ತಮ ಭಾವನೆ ಇರುತ್ತದೆ. ಆದರೆ ಅಂತಹ ಯಾವುದೇ ಅವಕಾಶಗಳನ್ನು ಒಪ್ಪಿಕೊಳ್ಳುವ ಮೊದಲು ಕ್ರೆಡಿಟ್ ಕಾರ್ಡ್ ಬಗ್ಗೆ ಸ್ವಲ್ಪ ಹೋಮ್ ವರ್ಕ್ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ.

  ಈ ಲೇಖನ ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಕಾಲಕಾಲಕ್ಕೆ ನಿರೀಕ್ಷಿತವಾಗಿ ಕಾಣಿಸಿಕೊಳ್ಳುವ ವಿವಿಧ ಶುಲ್ಕಗಳ ಬಗ್ಗೆ ಮಾಹಿತಿ ನೀಡುತ್ತದೆ.
  ನಿಮ್ಮ ಕ್ರೆಡಿಟ್ ಕಾರ್ಡ್ ನಿಮಗೆ ಒದಗಿಸುವ ಎಲ್ಲ ಪ್ರಯೋಜನಗಳನ್ನು ಆನಂದಿಸುವ ಮೊದಲು ಸ್ವಲ್ಪ ಎಚ್ಚರಿಕೆಯನ್ನು ಇರಿಸಿಕೊಳ್ಳುವುದು ಒಳ್ಳೆಯದು. ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇದ್ದರೆ ಪ್ರಯೋಜನಗಳೇನು?

  ಇಲ್ಲಿ ಕ್ರೆಡಿಟ್ ಕಾರ್ಡ್ ವಿವಿಧ ಶುಲ್ಕಗಳ ಬಗ್ಗೆ ಮಾಹಿತಿ ನೀಡಲಾಗಿದ್ದು, ಅದರ ಬಗ್ಗೆ ನೀವು ತಿಳಿದುಕೊಳ್ಳುವುದು ಒಳ್ಳೆಯದು.

  1. ವಾರ್ಷಿಕ ಶುಲ್ಕ

  ಇದನ್ನು ಭಾಗವಹಿಸುವಿಕೆ ಅಥವಾ ಸದಸ್ಯತ್ವ ಶುಲ್ಕ ಎಂದು ಸಹ ಕರೆಯಲಾಗುತ್ತದೆ. ಇದು ಕ್ರೆಡಿಟ್ ಕಾರ್ಡ್ ಬಳಕೆಗೆ ವಿಧಿಸುವ ಒಂದು ಶುಲ್ಕವಾಗಿದೆ. ಅನೇಕ ಸಂದರ್ಭಗಳಲ್ಲಿ ಅದನ್ನು ಮೊದಲ ವರ್ಷ ಮನ್ನಾ ಮಾಡಬಹುದು. ಇದು ವರ್ಷಕ್ಕೆ ರೂ. 500-3000 ವರೆಗೆ ಇರಬಹುದು. ಉದಾಹರಣೆಗೆ ಎಚ್.ಡಿ.ಎಫ್.ಸಿ. ರೆಜಿಲಿಯಾ ಕ್ರೆಡಿಟ್ ಕಾರ್ಡ್ ವಾರ್ಷಿಕ ಶುಲ್ಕ ರೂ. 2500 ಮತ್ತು ಐ.ಸಿ.ಐ.ಸಿ.ಐ. ಸಿಗ್ನೇಚರ್ ಕ್ರೆಡಿಟ್ ಕಾರ್ಡ್ ರೂ. 2000 ವಿಧಿಸುತ್ತವೆ. ಮೊದಲ ವರ್ಷದ ವಾರ್ಷಿಕ ಶುಲ್ಕವನ್ನು ಸೇರ್ಪಡೆ ಶುಲ್ಕ ಎಂದು ಸಹ ಕರೆಯಲಾಗುತ್ತದೆ. ಕ್ರೆಡಿಟ್ ಸ್ಕೋರ್ ಹೆಚ್ಚಿಸುವುದು ಹೇಗೆ? ಇಲ್ಲಿವೆ 6 ಮಾರ್ಗ

  2. ಬಡ್ಡಿ

  ಹಣ ನೀಡಿಕೆಗಾಗಿ ಬ್ಯಾಂಕ್ ವಿಧಿಸಿದ ಶುಲ್ಕವನ್ನು ಬಡ್ಡಿ ಎಂದು ಕರೆಯಲಾಗುತ್ತದೆ. ನಿಗದಿತ ಸಮಯದೊಳಗೆ ನೀವು ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಪಾವತಿಸಲು ವಿಫಲವಾದಲ್ಲಿ ಬ್ಯಾಂಕ್ ಅದನ್ನು ವಿಧಿಸುತ್ತದೆ. ಖರ್ಚು ವೆಚ್ಚಗಳಿಗೆ ಪ್ರತಿ ತಿಂಗಳು ಸುಮಾರು ಶೇ. 3ರಷ್ಟು ಮತ್ತು ವಾರ್ಷಿಕ ಶೇ. 36-38ನಷ್ಟು ಬಡ್ಡಿದರ ವಿಧಿಸಲಾಗುವುದು. ಡೆಬಿಟ್/ಕ್ರೆಡಿಟ್ ಕಾರ್ಡ್ ಕಳೆದುಕೊಂಡರೆ ಬ್ಲಾಕ್ ಮಾಡುವುದು ಹೇಗೆ?

  3. ನಗದು ಮುಂಗಡ (ಅಡ್ವಾನ್ಸ್) ಶುಲ್ಕ

  ಅಡ್ವಾನ್ಸ್ ಮೊತ್ತದ ಆಧಾರದ ಮೇಲೆ ವಹಿವಾಟು ಶುಲ್ಕ ಶೇಕಡಾವಾರು (ಸುಮಾರು 2.5%) ಇರುತ್ತದೆ. ಅಥವಾ ಪ್ರತಿ ವ್ಯವಹಾರದ ಆಧಾರದ ಮೇಲೆ ಶುಲ್ಕ ವಿಧಿಸಬಹುದು. ಇದಲ್ಲದೆ, ವಾರ್ಷಿಕ ಶೇ. 24-46ರಷ್ಟು ಬಡ್ಡಿಯನ್ನು ಕೂಡ ವಿಧಿಸಲಾಗುತ್ತದೆ.

  4. ಮಿತಿ ಮೀರಿದ ಶುಲ್ಕ (ಓವರ್ ಲಿಮಿಟ್ ಶುಲ್ಕ)

  ಕ್ರೆಡಿಟ್ ಕಾರ್ಡ್ ಮೊತ್ತದ ಮಿತಿಯನ್ನು ಮೀರಿದಾಗ ಈ ಶುಲ್ಕವನ್ನು ವಿಧಿಸಲಾಗುತ್ತದೆ. ಇಲ್ಲಿ ಪ್ರಮುಖವಾದ ಅಂಶವೆಂದರೆ ನೀವು ನಿಮಗೆ ನೀಡಿರುವ ಕ್ರೆಡಿಟ್ ಮಿತಿಗಿಂತ ಒಂದು ರೂ ಹೆಚ್ಚು ಬಳಸಿದರೂ ವಿತರಕ ನಿಯಮದ ಪ್ರಕಾರ ರೂ. 500 ಓವರ್ ಲಿಮಿಟ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

  5. ಪಾವತಿ ವಿಳಂಬ ಶುಲ್ಕ

  ನಿಗದಿತ ಸಮಯಕ್ಕೆ ಸರಿಯಾಗಿ ಬಾಕಿಯಿರುವ ಮೊತ್ತವನ್ನು ಪಾವತಿಸದೆ ಇದ್ದ ಸಂದರ್ಭದಲ್ಲಿ ತೆಗೆದುಕೊಳ್ಳುವ ಶುಲ್ಕವನ್ನು ವಿಳಂಬ ಶುಲ್ಕ ಎಂದು ಕರೆಯಲಾಗುತ್ತದೆ. ನೀವು 90 ದಿನಗಳಿಗಿಂತ ತಡವಾಗಿ ಬಾಕಿಯಿರುವ ಮೊತ್ತವನ್ನು ಪಾವತಿಸಿದರೆ ನೀವು ವಿಳಂಬ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಬಾಕಿಯಿರುವ ಮೊತ್ತಕ್ಕೆ ತಕ್ಕಂತೆ ವಿಳಂಬ ಶುಲ್ಕವು ಬದಲಾಗುತ್ತದೆ. ರೂ. 500-20,000 ರೂ ವರಗೆ ಇದ್ದರೆ ರೂ. 100 ರಿಂದ 600 ರೂಪಾಯಿಗಳವರಗೆ ಶುಲ್ಕ ವಿಧಿಸಬಹುದು. 20,000 ಕ್ಕಿಂತ ಹೆಚ್ಚಿನ ಮೊತ್ತಕ್ಕೆ ಈ ಶುಲ್ಕವೂ ರೂ. 700-800 ಗಳವರೆಗೆ ಇರುತ್ತದೆ.

  6. ಸಾಗರೋತ್ತರ ವಹಿವಾಟಿನ ವೆಚ್ಚ

  ನೀವು ಮಾಡುವ ಪ್ರತಿಯೊಂದು ಸಾಗರೋತ್ತರ ವಹಿವಾಟು ವ್ಯವಹಾರವು ಸಾಮಾನ್ಯವಾಗಿ ವಹಿವಾಟಿನ ಮೊತ್ತದ ಶೇ. 3.5 ದರದಲ್ಲಿ ವಿಧಿಸಲಾಗುತ್ತದೆ. ವಹಿವಾಟಿನ ದಿನಾಂಕದಂದು ವಿನಿಮಯ ದರಕ್ಕೆ ಅನುಗುಣವಾಗಿ ಮೊತ್ತವನ್ನು ಐಎನ್‍ಆರ್‍‌ಗೆ ಪರಿವರ್ತಿಸಲಾಗುತ್ತದೆ.

  7. ಡೂಪ್ಲಿಕೇಟ್ (ನಕಲು) ಸ್ಟೇಟ್‌ಮೆಂಟ್‌ನ ಶುಲ್ಕ

  ಮಾಸಿಕ ಸ್ಟೇಟ್‌ಮೆಂಟ್‍ಗಳನ್ನು ಹೊರತುಪಡಿಸಿ ನಿಮ್ಮ ಕಾರ್ಡ್‌ನ ಸ್ಟೇಟ್‍ಮೆಂಟ್‍ನ ನಕಲು ಪ್ರತಿಯನ್ನು ನಿಮ್ಮ ಅಂಚೆ ವಿಳಾಸಕ್ಕೆ ಕಳುಹಿಸಲಾಗುವುದು. ಇದಕ್ಕಾಗಿ ವಿತರಕರಿಂದ ರೂ. 50-100 ಶುಲ್ಕವನ್ನು ವಿಧಿಸಲಾಗುತ್ತದೆ.

  8. ಬದಲಿ ಕಾರ್ಡ್ ಶುಲ್ಕ

  ನಿಮ್ಮ ಕ್ರೆಡಿಟ್ ಕಾರ್ಡ್ ಕಳೆದು ಹೋದ ಸಂದರ್ಭದಲ್ಲಿ ಅಥವಾ ಕಾರ್ಡಿಗೆ ಯಾವುದೇ ಹಾನಿಯಾದಲ್ಲಿ ರೂ. 250-300 ವರೆಗೆ ಶುಲ್ಕವನ್ನು ಪಾವತಿಸುವ ಮೂಲಕ ನೀವು ಬದಲಿ ಕಾರ್ಡನ್ನು ಪಡೆದುಕೊಳ್ಳುವ ಆಯ್ಕೆಯನ್ನು ಹೊಂದಿರುತ್ತೀರಿ. ಎಚ್.ಡಿ.ಎಫ್.ಸಿ. ಮತ್ತು ಐ.ಸಿ.ಐ.ಸಿ.ಐ ಎರಡು ಬ್ಯಾಂಕುಗಳು ಬದಲಿ ಕಾರ್ಡುಗಳಿಗೆ ರೂ. 100 ಶುಲ್ಕ ವಿಧಿಸುತ್ತವೆ.

  9. ಇಸಿಎಸ್ ಪಾವತಿ ವಿಫಲತೆ

  ಖಾತೆಯಲ್ಲಿ ಸಾಕಷ್ಟು ಹಣವಿಲ್ಲದಿರುವುದು ಅಥವಾ ಸಹಿ ಹೊಂದಾಣಿಕೆಯಾಗದೆ ಇರುವ ಕಾರಣ ಚೆಕ್ ಅಥವಾ ಜಾರಿಯಲ್ಲಿರುವ ಸೂಚನೆಗಳ ಪ್ರಕಾರ ನಿಮ್ಮ ಕ್ರೆಡಿಟ್ ಕಾರ್ಡ್ ಪಾವತಿಯು ಕೈಗೂಡದೆ ವಿಫಲವಾದಲ್ಲಿ ರೂ. 300-350 ದಂಡ ವಿಧಿಸಲಾಗುತ್ತದೆ.

  10. ಸೇವಾ ತೆರಿಗೆ

  2015-2016ರ ಹಣಕಾಸು ವರ್ಷದಲ್ಲಿ ಜಾರಿಗೆ ಬಂದ ನಿಯಮಗಳ ಪ್ರಕಾರ ಶೇ. 14ರಷ್ಟು ಸೇವಾ ತೆರಿಗೆಯನ್ನು ನಿಮ್ಮ ಕ್ರೆಡಿಟ್ ಕಾರ್ಡ್ ಸೇವೆಗಳಿಗೆ ವಿಧಿಸಲಾಗುವುದು. ಇದಲ್ಲದೆ, ನವೆಂಬರ್ 15, 2015 ರಿಂದ, ಹೆಚ್ಚುವರಿ ಸ್ವಚ್ಛ್ ಭಾರತ್ ಸೆಸ್ ಸೇವಾ ತೆರಿಗೆಯನ್ನು ಶೇ. 0.5ರಷ್ಟು ಸೇರಿಸಿದೆ. 2016 ರ ಯೂನಿಯನ್ ಬಜೆಟ್ ನಲ್ಲಿ ಹೊಸ ಪ್ರಸ್ತಾವನೆಯ ನಂತರ, ಜೂನ್ 1, 2016 ರಿಂದ ಅನ್ವಯವಾಗುವ ಸೇವಾ ತೆರಿಗೆ ಶೇ. 15 ಆಗಿದ್ದು, ನಿಮ್ಮ ವ್ಯವಹಾರವನ್ನು ಸ್ವಲ್ಪ ಹೆಚ್ಚು ವೆಚ್ಚದಾಯಕವಾಗಿಸುತ್ತದೆ.

  ಕೊನೆ ಮಾತು

  ಹಲವು ಬಾರಿ ಈ ಶುಲ್ಕಗಳನ್ನು ಮುಂಚಿತವಾಗಿ ನಿಮಗೆ ತಿಳಿಸಲಾಗುವುದಿಲ್ಲ. ಹೀಗಾಗಿ ಕ್ರೆಡಿಟ್ ಕಾರ್ಡಿನ ಇಂತಹ ಶುಲ್ಕಗಳ ಬಗ್ಗೆ ಮೊದಲೇ ತಿಳಿದುಕೊಂಡಿರುವುದು ಉತ್ತಮ. ಕಾರ್ಡನ್ನು ಸ್ವೀಕರಿಸುವ ಮೊದಲು ಟೆಲಿಕಾಲರ್ ಅಥವಾ ಕಾರ್ಯನಿರ್ವಾಹಕನನ್ನು ಈ ಬಗ್ಗೆ ವಿಚಾರಿಸಬೇಕು. ಇದರಿಂದ ವಿವಿಧ ಕ್ರೆಡಿಟ್ ಕಾರ್ಡ್ ಶುಲ್ಕಗಳ ಬಗ್ಗೆ ನಿಮಗೆ ಜ್ಞಾನ ಸಿಗುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ಕಾರ್ಡಿನಿಂದ ಗರಿಷ್ಠ ಪ್ರಯೋಜನಗಳನ್ನು ಪಡೆದುಕೊಳ್ಳಲು ಮತ್ತು ವಿವೇಕದಿಂದ ಅದನ್ನು ಉಪಯೋಗಿಸಲು ಸಹಾಯಕವಾಗುತ್ತದೆ.

  English summary

  Credit Card charges that you should be aware

  Be mindful of these to make sure you enjoy all the benefits that your credit card offers you.
  Company Search
  Enter the first few characters of the company's name or the NSE symbol or BSE code and click 'Go'
  ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more