ಮೊಟ್ಟೆ ಬೆಲೆ ತಿರುಗುತ್ತೆ ತಲೆ! ಚಿಕನ್ ನಂತೆ ಮೊಟ್ಟೆ ಕೂಡ ದುಬಾರಿ
ದೇಶದ ಬಹುತೇಕ ಭಾಗಗಳ ಚಿಲ್ಲರೆ ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆ ಶೇ. 40ರಷ್ಟು ಏರಿಕೆಯಾಗಿದ್ದು, ರೂ. 6-7.50ಕ್ಕೆ ಏರಿದೆ ಎಂದು ಪೌಲ್ಟ್ರಿ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ರಮೇಶ್ ಕಟ್ರಿ ಹೇಳಿದ್ದಾರೆ.
ದೇಶದ ಬಹುತೇಕ ಭಾಗಗಳ ಚಿಲ್ಲರೆ ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆ ಶೇ. 40ರಷ್ಟು ಏರಿಕೆಯಾಗಿದ್ದು, ರೂ. 6-7.50ಕ್ಕೆ ಏರಿದೆ ಎಂದು ಪೌಲ್ಟ್ರಿ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ರಮೇಶ್ ಕಟ್ರಿ ಹೇಳಿದ್ದಾರೆ.
ಈ ವರ್ಷದಲ್ಲಿ ಮೊಟ್ಟೆ ಉತ್ಪಾದನೆಯು 25-30 ಶೇಕಡಾ ಕಡಿಮೆಯಿದ್ದು, ಮುಂಬರುವ ತಿಂಗಳುಗಳಲ್ಲಿ ಏರುಮುಖವಾಗಿ ಮುಂದುವರಿಯಲಿದೆ ಎಂದಿದ್ದಾರೆ. ಮನೆಯಿಂದ ಕೆಲಸ ಮಾಡಿ ಹಣ ಗಳಿಸಬೇಕೆ? ಇಲ್ಲಿವೆ 12 ಮಾರ್ಗ
ಮೊಟ್ಟೆ ಆಗಿದೆ ದುಬಾರಿ
ಚಿಕನ್ ರೀತಿಯಲ್ಲೇ ಮೊಟ್ಟೆಯ ಬೆಲೆ ದುಬಾರಿಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 1 ಮೊಟ್ಟೆಯ ಬೆಲೆ ರೂ. 6 -7.5 ವರೆಗೆ ಮಾರಾಟವಾಗುತ್ತಿದೆ. ಕೆಲವು ಕಡೆಗಳಲ್ಲಿ ಇದಕ್ಕಿಂತ ದುಬಾರಿಯಾಗಿದೆ. ಕೋಟ್ಯಾಧಿಪತಿ ಆಗುವುದು ಹೇಗೆ ಗೊತ್ತೆ?
ಪುಣೆ ವಲಯದ ಬೆಲೆ
ಪುಣೆ ವಲಯದ ಪೌಲ್ಟ್ರಿ ಫಾರಂಗಳಲ್ಲಿ 100 ಮೊಟ್ಟೆಗೆ ರೂ. 585 ದರ ಇದೆ. ಸಾಗಾಣಿಕೆ ವೆಚ್ಚ ಸೇರಿದಂತೆ 1 ಮೊಟ್ಟೆಗೆ ರೂ. 6.5 -7.5ಕ್ಕೆ ಮಾರಾಟವಾಗುತ್ತಿದೆ. ಕಳೆದ 6 ತಿಂಗಳಲ್ಲಿ ಪ್ರತಿ 100 ಮೊಟ್ಟೆಯ ಬೆಲೆ ರೂ. 375 ರಿಂದ ರೂ. 585ಕ್ಕೆ ಏರಿದೆ. ಅಲ್ಲದೆ ಚಿಕನ್ ಬೆಲೆಯಲ್ಲೂ ಕೂಡ ಏರಿಳಿತವಾಗುತ್ತಿದೆ.
ಬೆಲೆ ಏರಿಕೆಗೆ ಕಾರಣ
ಕಳೆದ ವರ್ಷದಂತೆ ಈ ವರ್ಷ ಉತ್ತಮ ದರ ಪಡೆಯದಿರುವುದರಿಂದ ಅನೇಕ ಪೌಲ್ಟ್ರಿ ಪಾರಂಗಳು ಕೋಳಿ ಸಾಕಾಣೆ, ಉತ್ಪಾದನೆಯನ್ನು ಕಡಿಮೆ ಮಾಡಿವೆ. ಹೀಗಾಗಿ ಮೊಟ್ಟೆ ಬೆಲೆ ಗಮನಾರ್ಹವಾಗಿ ಏರಿಕೆ ಕಂಡಿದೆ ಎಂದು ರಮೇಶ್ ಕಟ್ರಿ ತಿಳಿಸಿದ್ದಾರೆ.
ತಮಿಳುನಾಡಿನಲ್ಲೂ ಏರಿಕೆ
ಚಳಿಗಾಲದ ಕಾರಣದಿಂದ ಮೊಟ್ಟೆಗಳಿಗೆ ಬೇಡಿಕೆಯಿರುವುದರಿಂದ ಬೆಲೆ ಏರುವುದು ಸಹಜ. ಅತಿಹೆಚ್ಚು ಮೊಟ್ಟೆ ಉತ್ಪಾದನೆಯಾಗುವ ತಮಿಳುನಾಡಿನ ಈರೋಡ್ ನಲ್ಲಿಯೂ ಮೊಟ್ಟೆ, ಚಿಕನ್ ಬೆಲೆ ಏರಿಕೆಯಾಗಿದೆ.
ಗ್ರಾಹಕರಿಗೆ ಹೊರೆ
ಚಿಲ್ಲರೆ ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆ ಏರಿಕೆಯಾಗಿರುವುದರಿಂದ ಗ್ರಾಹಕರಿಗೆ ಹೊರೆಯಾಗಿದೆ. ಬೆಲೆ ಇಳಿಕೆಯಾಗಲು ಕೆಲ ವಾರದವರೆಗೆ ಕಾಯಬೇಕಾಗಬಹುದು. ಮಾರುಕಟ್ಟೆ ಮಾಹಿತಿ ಪ್ರಕಾರ, ಮೊಟ್ಟೆಯ ಬೆಲೆಯಲ್ಲಿ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ.