For Quick Alerts
ALLOW NOTIFICATIONS  
For Daily Alerts

ಮನೆಯಿಂದ ಕೆಲಸ ಮಾಡಿ ಹಣ ಗಳಿಸಬೇಕೆ? ಇಲ್ಲಿವೆ 12 ಮಾರ್ಗ

ಇಂದಿನ ವೈಜ್ಞಾನಿಕ ಯುಗದಲ್ಲಿ ಮನೆಯಲ್ಲೇ ಕುಳಿತು ಕೆಲಸ ಮಾಡಿ ಹಣ ಗಳಿಸಬೇಕು ಎನ್ನುವುದು ಹಲವರ ಬಯಕೆ. ಆದರೆ ಇದರ ಮಾರ್ಗಗಳೇನು..? ಮನೆಯಲ್ಲಿ ಕುಳಿತು ಹಣ ಗಳಿಸುವುದಾದರೂ ಹೇಗೆ? ಇತ್ಯಾದಿ ಪ್ರಶ್ನೆಗಳು ಹುಟ್ಟುವುದು ಸಹಜ.

By Siddu
|

ಇಂದಿನ ವೈಜ್ಞಾನಿಕ ಯುಗದಲ್ಲಿ ಮನೆಯಲ್ಲೇ ಕುಳಿತು ಕೆಲಸ ಮಾಡಿ ಹಣ ಗಳಿಸಬೇಕು ಎನ್ನುವುದು ಹಲವರ ಬಯಕೆ. ಆದರೆ ಇದರ ಮಾರ್ಗಗಳೇನು? ಮನೆಯಲ್ಲಿ ಕುಳಿತು ಹಣ ಗಳಿಸುವುದಾದರೂ ಹೇಗೆ? ಇತ್ಯಾದಿ ಪ್ರಶ್ನೆಗಳು ಹುಟ್ಟುವುದು ಸಹಜ.

 

ನಿಮ್ಮಲ್ಲಿ ಇಂಗ್ಲೀಷ ಜ್ಞಾನದ ಜತೆಗೆ ಒಂದು ಲ್ಯಾಪ್ ಟಾಪ್ ಇದ್ದರೆ ಸಾಕು. ಮನೆಯಿಂದಲೇ ಹಲವಾರು ಉದ್ಯೋಗಗಳನ್ನು ಮಾಡಬಹುದು.
ಹೆಚ್ಚಿನ ಹಣಕಾಸು ಅಗತ್ಯಗಳನ್ನು ಪೂರೈಸಲು ಇಂದಿನ ಅಂತರ್ಜಾಲ ವ್ಯವಸ್ಥೆ ಸಾವಿರಾರು ಅವಕಾಶಗಳನ್ನು ಒದಗಿಸುತ್ತಿದೆ. ಮನೆಯಿಂದ ಹಣ ಗಳಿಸುವ ಅನೇಕ ಮಾರ್ಗಗಳಿದ್ದು, ಅವುಗಳ ವಿವರ ಇಲ್ಲಿ ನೀಡಲಾಗಿದೆ... ಆನ್ಲೈನ್ ಮೂಲಕ ಹಣ ಗಳಿಸುವುದು ಹೇಗೆ?

ಆನ್ಲೈನ್ ಮಾರ್ಕೆಟಿಂಗ್

ಆನ್ಲೈನ್ ಮಾರ್ಕೆಟಿಂಗ್

ಯಾವುದೇ ತಾಣವನ್ನು ಪ್ರಾರಂಭಿಸುವಾಗ ಇದಕ್ಕೆ ಮೊದಲ ಆದ್ಯತೆಯನ್ನು ಇದನ್ನು ಇತರರು ಹುಡುಕುವಂತಿರಬೇಕು ಎಂದೇ ನಿರ್ಮಿಸಲಾಗುತ್ತದೆ. ಅಂದರೆ ಗೂಗಲ್ ಮೊದಲಾದ ಸರ್ಜ್ ಇಂಜಿನ್ ನಲ್ಲಿ ಈ ತಾಣಕ್ಕೆ ಸಂಬಂಧಿಸಿದ ಕೆಲವು ಪದಗಳನ್ನು ಬಳಸಿದರೂ ಈ ತಾಣ ಸುಲಭವಾಗಿ ಗ್ರಾಹಕ ಪಡೆಯುವಂತಿರಬೇಕು. SEO/SEM ಎಕ್ಸ್ ಪರ್ಟ್ ಎಂಬ ಪರಿಣಿತರು ಈ ಮಾರ್ಕೆಟಿಂಗ್ ತಾಣಗಳನ್ನು ನಿರ್ಮಿಸುವ ಹೊಣೆ ಹೊತ್ತಿದ್ದು ಈ ತಾಣಗಳ ಮೂಲಕ ಲೇಖನಗಳು, ಮಾಹಿತಿ ಸಂಗ್ರಹ, ಫೋರಂ ಪೋಸ್ಟಿಂಗ್, ಬ್ಲಾಗ್ ಪೋಸ್ಟಿಂಗ್, ನಿಮ್ಮ ತಾಣದ ಬಗ್ಗೆ ಡೈರೆಕ್ಟರಿ, ಸರ್ಜ್ ಇಂಜಿನ್, ಸಾಮಾಜಿಕ ಜಾಲತಾಣ ಮೊದಲಾದವುಗಳಲ್ಲಿ ದಾಖಲಿಸಲು ನೆರವಾಗುತ್ತಾರೆ. ಹೆಚ್ಚಿನ ಸಂಸ್ಥೆಗಳು ತಮ್ಮ ಉತ್ಪನ್ನವನ್ನು ಆನ್ಲೈನ್ ಮೂಲಕ ಮಾರಾಟ ಮಾಡಲು ತಾವೇ ಸ್ವತಃ ತೊಡಗ್ದೇ ಇದನ್ನು ಬೇರೆಯವರಿಗೆ ವಹಿಸುತ್ತಾರೆ. ಹಾಗೂ ಈ ಕೆಲಸವನ್ನು ನೀವು ನಿರ್ವಹಿಸಿದರೆ ನಿಮಗೆ ಸೂಕ್ತ ಸಂಭಾವನೆಯನ್ನೂ ನೀಡುತ್ತಾರೆ. ಕೋಟ್ಯಾಧಿಪತಿ ಆಗುವುದು ಹೇಗೆ ಗೊತ್ತೆ?

ಫೋಟೋಗಳನ್ನು ಮಾರುವುದು
 

ಫೋಟೋಗಳನ್ನು ಮಾರುವುದು

ಒಂದು ವೇಳೆ ಛಾಯಾಗ್ರಹಣ ನಿಮ್ಮ ಹವ್ಯಾಸವಾಗಿದ್ದು ಎಲ್ಲರೂ ಮೆಚ್ಚುವಂತಹ ಚಿತ್ರಗಳನ್ನು ತೆಗೆಯಬಲ್ಲ ಪರಿಣಿತಿ ನೀವು ಹೊಂದಿದ್ದರೆ ನಿಮಗೆ ನಿಮ್ಮ ಪ್ರತಿಭೆ ಉತ್ತಮ ಆದಾಯ ತಂದು ಕೊಡಬಲ್ಲುದು. ಇದಕ್ಕಾಗಿ ನೀವು ವಿವಿಧ ವಿಷಯಗಳಲ್ಲಿ ಸಾವಿರಾರು ಚಿತ್ರಗಳನ್ನು ತೆಗೆದಿರಬೇಕಾಗಿರುತ್ತದೆ. ಈ ಚಿತ್ರಗಳನ್ನು ಗುಂಪುಗಳಾಗಿ ವಿಂಗಡಿಸಿ ನೀಡಿದರೆ ಇದರ ಬಗ್ಗೆ ಉತ್ಸುಕರಾಗಿರುವ ಜನರಿದ್ದಾರೆ. ಇವರು ಕೆಲವು ತಾಣಗಳಲ್ಲಿ ಈ ವಿಶಿಷ್ಟ ಚಿತ್ರಗಳನ್ನು ಪಡೆಯಲು ಹಣ ನೀಡಲು ತಯಾರಾಗಿರುತ್ತಾರೆ. Fotolia, Dreamstime ಹಾಗೂ Shutterstock ಮೊದಲಾದ ತಾಣಗಳಲ್ಲಿ ನಿಮ್ಮ ಚಿತ್ರಗಳನ್ನು ಒದಗಿಸಿದರೆ ಪ್ರತಿ ಚಿತ್ರ ಮಾರಾಟವಾದಾಗಲೂ ನಿಮಗೆ ಸಂಭಾವನೆ ಹರಿದು ಬರುತ್ತದೆ.  ಜೀವನದಲ್ಲಿ ಸಿಕ್ಕಾಪಟ್ಟೆ ದುಡ್ಡು ಮಾಡಬೇಕು ಅಂತಿರಾ?

ಬೆಂಬಲ ಹಾಗೂ ಸೇವೆ

ಬೆಂಬಲ ಹಾಗೂ ಸೇವೆ

ಇತರ ವೆಬ್ ಮಾಸ್ಟರುಗಳು ಎದುರಿಸುವ ತೊಂದರೆಗಳನ್ನು ಸರಿಪಡಿಸುವ ಹಾಗೂ ಕೋಡಿಂಗ್ ಮೂಲಕ ಇತರರ ಕೆಲಸವನ್ನು ಹಗುರಾಗಿಸುವ ಕೆಲಸ ನಿಮಗೆ ಸಿದ್ದಿಸಿದ್ದರೆ ಈ ಪರಿಣಿತಿಯೂ ನಿಮಗೆ ಹೆಚ್ಚಿನ ಆದಾಯ ತಂದು ನೀಡಬಲ್ಲುದು. ಆದರೆ ಇದಕ್ಕೆ ವೆಬ್ ಕೋಡಿಂಗ್ ಕೆಲಸದ ಉತ್ತಮ ಜ್ಞಾನವಿರುವುದು ಅಗತ್ಯ. ನಿಮ್ಮಿಂದ Web CMS (content management systems) ಎಂಬ ವ್ಯವಸ್ಥೆಯ ಸೇವೆಯನ್ನು ಪಡೆಯಲು Drupal ಅಥವಾ Joomla ಎಂಬ ತಾಣಗಳಿವೆ. ಒಂದು ಬಾರಿ ನಿಮ್ಮ ಕೋಡಿಂಗ್ ಅನ್ನು ಗ್ರಾಹಕರ ವ್ಯವಸ್ಥೆಗೆ ಅಳವಡಿಸುವಂತೆ ನಿರ್ಮಿಸಿ ಇದರಲ್ಲಿ ಎದುರಾಗುವ ತೊಂದರೆಗಳನ್ನೆಲ್ಲಾ ಕಲಿತು ಯಶಸ್ವಿಯಾಗಿಬಿಟ್ಟರೆ ನಿಮ್ಮಂತೆಯೇ ಇತರರಿಗೂ ಕೋಡಿಂಗ್ ನೆರವನ್ನು ನೀಡುವ ಮೂಲಕ ಹೆಚ್ಚಿನ ಆದಾಯ ಗಳಿಸಬಹುದು.

ಫ್ರೀಲ್ಯಾಂನ್ಸಿಂಗ್

ಫ್ರೀಲ್ಯಾಂನ್ಸಿಂಗ್

ಫ್ರೀಲ್ಯಾಂನ್ಸಿಂಗ್ ಅಥವಾ ಸಂಪಾದಕರ ಹಂಗಿಲ್ಲದೇ ತಮ್ಮ ಪ್ರತಿಭೆಯನ್ನು ಬಳಸಬಹುದಾದ ಆಯ್ಕೆ ಹಲವಾರು ಪರಿಣಿತರಿಗೆ ಲಭ್ಯವಿದೆ. ತಮ್ಮ ಗ್ರಾಹಕರ ಅಗತ್ಯವನ್ನು ಪೂರೈಸುವುದು ಹೇಗೆ ಎಂದು ಇವರಿಗೆ ಗೊತ್ತಿದ್ದು ಕೆಲವಾರು ಪ್ರಾಜೆಕ್ಟ್ ಆಧಾರಿತ ತಾಣಗಳು ಅವಕಾಶವನ್ನು ಒದಗಿಸುತ್ತವೆ. ತಮ್ಮ ಪ್ರಾಜೆಕ್ಟುಗಳನ್ನು ವಿವರಿಸಲು ಈ ಸೇವೆಯನ್ನು ಪಡೆಯಲು ಉತ್ತಮ ಸಂಭಾವನೆಯನ್ನೂ ನೀಡಲಾಗುತ್ತದೆ. ಫ್ರೀಲ್ಯಾನ್ಸರ್ ಗಳು ಹಾಗೂ ಚಿಕ್ಕ ಉದ್ದಿಮೆದಾರರು ಗ್ರಾಹಕರಿಗೆ ಹರಾಜು, ಉಪಾಯಗಳು ಅಥವಾ ಪ್ರಸ್ತಾಪಗಳನ್ನು ನೀಡುವ ಮೂಲಕ ಗ್ರಾಹಕರು ತಮಗೆ ಸೂಕ್ತವಾದುದನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಯಾನ್ಸ್ ಮೊದಲಾದ ತಾಣಗಳು ಬರವಣಿಗೆ, ಡೇಟಾ ಎಂಟ್ರಿ, ವಿನ್ಯಾಸ ಮೊದಲಾದವುಗಳಲ್ಲಿ ಅವಕಾಶ ನೀಡಿದರೆ RentACoder ಎಂಬ ತಾಣ ಸಾಫ್ಟ್ ವೇರ್ ಪ್ರೋಗ್ರಾಮಿಂಗ್ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ ಒದಗಿಸುತ್ತದೆ.

ಷೇರು ಮಾರುಕಟ್ಟೆ/ಷೇರುಮಾರಾಟ

ಷೇರು ಮಾರುಕಟ್ಟೆ/ಷೇರುಮಾರಾಟ

ಶೇರು ಮಾರುಕಟ್ಟೆ ಯಾವಾಗಲೂ ಡೋಲಾಯಮಾನ ಸ್ಥಿತಿಯಲ್ಲಿಯೇ ಇರುವ ಕಾರಣ ಈ ವಿಭಾಗವನ್ನು ಪ್ರವೇಶಿಸುವುದು ರಿಸ್ಕ್ ನಿಂದ ಹೊರತಾಗಿಲ್ಲ. ಆದರೂ ಚಿಕ್ಕ ಬಂಡವಾಳದೊಂದಿಗೆ ಈ ಮಾರುಕಟ್ಟೆಯನ್ನು ಪ್ರವೇಶಿಸಿ ಈ ವಿಭಾಗದಲ್ಲಿ ನೀವು ಪರಿಣಿತಿಯನ್ನು ಸಾಧಿಸುವವರೆಗೆ ನಿಮ್ಮ ಪ್ರಯತ್ನವನ್ನು ಮುಂದುವರೆಸಬಹುದು. ಈ ಪರಿಣಿತಿ ಪಡೆದ ಬಳಿಕ ವಿದೇಶೀ ವಿನಿಮಯ ಹಾಗೂ ಶೇರುಗಳ ವಿಲೇವಾರಿಯನ್ನು ಹೆಚ್ಚಿಸಿಕೊಳ್ಳಬಹುದು. ಈ ವಿನಿಮಯದ ದರಗಳು ಬೇಡಿಕೆ ಹಾಗೂ ಮಾರಾಟವನ್ನು ಅವಲಂಬಿಸಿ ಸದಾ ಹೆಚ್ಚು ಕಡಿಮೆಯಾಗುತ್ತಲೇ ಇರುತ್ತವೆ. ಅಷ್ಟೇ ಅಲ್ಲ, ವಿಶ್ವದ ಆರ್ಥಿಕ ಸ್ಥಿತಿ ಹಾಗೂ ರಾಜಕೀಯ ಕಾರಣಗಳಿಂದಲೂ ದರ ಏರುಪೇರಾಗಬಹುದು. ಉತ್ತಮ ಶೇರು ವ್ಯವಹಾರದಾರ ಈ ಏರುಪೇರುಗಳನ್ನು ಸದಾ ಅಭ್ಯಸಿಸುತ್ತಾ ವಿಶ್ವದ ಆಗುಹೋಗುಗಳ ಮೇಲೆ ಸದಾ ಒಂದು ಕಣ್ಣಿಟ್ಟಿದ್ದು ಮುಂದಾಗುವ ಏರುಪೇರುಗಳನ್ನು ಊಹಿಸಿ ಅದರಂತೆ ತಮ್ಮ ನಡೆಗಳನ್ನು ನಡೆಸುವ ಮೂಲಕ ಲಾಭ ಪಡೆಯಬಹುದು. ಇದಕ್ಕೆ ಎಷ್ಟು ಹೆಚ್ಚು ಸಮಯ ನೀಡುತ್ತೀರೋ ಅಷ್ಟೇ ಹೆಚ್ಚು ಅನುಭವ ಹಾಗೂ ಲಾಭ ಪಡೆಯಬಹುದು.

ಮನೆಯಲ್ಲಿದ್ದು ನಡೆಸುವ ಕಾಲ್ ಸೆಂಟರ್

ಮನೆಯಲ್ಲಿದ್ದು ನಡೆಸುವ ಕಾಲ್ ಸೆಂಟರ್

ಹಲವು ಸಂಸ್ಥೆಗಳಿಗೆ ನಗರದ ಪ್ರಮುಖ ಸ್ಥಳದಲ್ಲಿ ಕಛೇರಿ ಸಿಗುವುದು ದುಸ್ತರವಾಗಿದ್ದು ಹೆಚ್ಚಿನ ಉದ್ಯೋಗಿಗಳಿಗೆ ಸ್ಥಳಾವಕಾಶ ಒದಗಿಸಲು ವಿಫಲವಾಗುತ್ತವೆ. ಇವರು ತಮ್ಮ ಸೇವೆಗಳನ್ನು ಒದಗಿಸಲು ತಮ್ಮ ಸಂಸ್ಥೆಯಿಂದ ಹೊರಗಿರುವ ವ್ಯಕ್ತಿಗಳ ಸಹಾಯವನ್ನು ಪಡೆಯುತ್ತಾರೆ. ಈ ಅವಕಾಶವನ್ನು ನೀವು ನಿಮ್ಮ ಮನೆಯ ಲ್ಯಾಂಡ್ ಲೈನ್ ಫೋನ್ ಮೂಲಕ ಒದಗಿಸಿದರೆ ಕೆಲವಾರು ಕೆಲಸಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ನಿಮ್ಮ ಸುತ್ತಮುತ್ತಲಿರುವ ಪ್ರದೇಶದಲ್ಲಿನ ವಿವಿಧ ಸಂಸ್ಥೆಗಳು ಈ ಬಗೆಯ ಸೇವೆಯನ್ನು ಒದಗಿಸುತ್ತಿವೆಯೇ ಎಂದು ಗಮನಿಸಿ ಇದು ದಿನದ ಕೆಲವು ಘಂಟೆಗಳಿಗೆ ಅಥವಾ ಪೂರ್ಣಾವಧಿಯ ಕೆಲಸಕ್ಕಾಗಿಯೇ ಎಂದು ಪರಿಶೀಲಿಸಿ ನಿಮ್ಮ ಲಭ್ಯತೆಯ ಪ್ರಕಾರ ಕೆಲಸ ಮಾಡಿ ಹಣ ಗಳಿಸಿ.

ಯೂ ಟ್ಯೂಬ್

ಯೂ ಟ್ಯೂಬ್

ಒಂದು ವೇಳೆ ನಿಮ್ಮಲ್ಲಿ ಅಪಾರ ಪ್ರತಿಭೆಯಿದ್ದು ಇದನ್ನು ನಿಮಗಿಂತ ಇನ್ನಾರೂ ನೀಡಲಾರರು ಎಂಬಷ್ಟಿದ್ದರೆ ಇದನ್ನು ನಾಲ್ಕು ಜನರ ಮುಂದೆ ಪ್ರದರ್ಶಿಸುವ ಮೂಲಕ ಹಣವನ್ನು ಗಳಿಸಬಹುದು. ಮೊದಲಿಗೆ ನಿಮ್ಮ ಅಪ್ಪಟ ಪ್ರತಿಭೆಯನ್ನು ಅನಾವರಣಗೊಳಿಸುವ ವೀಡಿಯೋವನ್ನು ಉತ್ತಮ ಗುಣಮಟ್ಟದಲ್ಲಿ ರೆಕಾರ್ಡ್ ಮಾಡಿಕೊಂಡು ಯೂ ಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಬೇಕು. ಇದು ನಿಮ್ಮಿಂದ ತಯಾರಾದ ಕಿರುಚಲನಚಿತ್ರವಿರಬಹುದು, ನೀವು ಹಾಡುವ ಹಾಡಾಗಿರಬಹುದು, ಎಲ್ಲರನ್ನು ನಗಿಸುವ ಹಾಸ್ಯಪ್ರಸಂಗವಾಗಿರಬಹುದು, ನೋಡುವವರು ಭಲೇ ಎನ್ನುವಂತಹ ಚಾಕಚಕ್ಯತೆ ಇರಬಹುದು ಅಥವಾ ಯಾರೂ ಮಾಡದ ಸಾಧನೆಯನ್ನು ಸಾಧಿಸುವಂತಹ ಕಾರ್ಯವಿರಬಹುದು, ಒಟ್ಟಾರೆ ಈ ವೀಡಿಯೋವನ್ನು ಒಬ್ಬರು ನೋಡಿದರೆ ಇನ್ನೊಬ್ಬರಿಗೆ ನೋಡಲು ಮುಂದೆ ಕಳಿಸುವಂತಿರಬೇಕು. ಆಗ ಈ ವೀಡಿಯೋವನ್ನು ಮೊದಲು ನೋಡಿ ಮೆಚ್ಚಿದವರು ಇನ್ನಷ್ಟು ಜನರು ಮೆಚ್ಚಲೆಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುತ್ತಾ ಹೋಗುತ್ತಾರೆ. ಪ್ರತಿ ಬಾರಿ ಈ ವೀಡಿಯೋ ನೋಡಲ್ಪಟ್ಟಾಗ ನಿಮ್ಮ ವೀಡಿಯೋ ಇರುವ ಪುಟದಲ್ಲಿರುವ ಜಾಹೀರಾತುಗಳ ಮೂಲಕ ನಿಮಗೆ ಸಂಭಾವನೆ ಹರಿದು ಬರುತ್ತದೆ. ನಿಮ್ಮ ಪ್ರತಿಭೆ ಲಕ್ಷಾಂತರ ಜನರೆದುರು ಪ್ರದರ್ಶಿಸಲ್ಪಟ್ಟಂತೆಯೂ ಆಯಿತು, ನಿಮಗೆ ಹಣವೂ ಸಂದಾಯವಾದಂತಾಯ್ತು. ಇದೇ ರೀತಿ ಪ್ರತಿ ಬಾರಿ ಕ್ಲಿಕ್ಕಿಸಿದಾಗ ಹಣ ಹರಿದು ಬರುವ ಇತರ ತಾಣಗಳೆಂದರೆ Flixya ಹಾಗೂ Mediaflix.

ಇತರರಿಗಾಗಿ ನಡೆಸುವ ಸಂಶೋಧನೆ

ಇತರರಿಗಾಗಿ ನಡೆಸುವ ಸಂಶೋಧನೆ

ನಿಮಗೆ ಕೋಡಿಂಗ್ ಬರುವುದಿಲ್ಲ, ವೆಬ್ ವಿನ್ಯಾಸ ಬರುವುದಿಲ್ಲ ಎಂದು ವ್ಯಾಕುಲರಾಗಬೇಡಿ. ಇದರಿಂದ ನಿಮಗೆ ಹಣ ಸಂಪಾದಿಸುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಒಂದು ವೇಳೆ ನಿಮಗೆ ಕಷ್ಟಪಟ್ಟು ದುಡಿಯುವ ಹುಮ್ಮಸ್ಸಿದ್ದು ವಾರಕ್ಕೆ ಕೆಲವು ಘಂಟೆಗಳನ್ನಾದರೂ ಮೀಸಲಿಡಲು ಸಾಧ್ಯವಿದ್ದರೆ ಇತರರಿಗಾಗಿ ಕೆಲವು ಸಂಶೋಧನಾ ಕಾರ್ಯಗಳನ್ನು ಕೈಗೊಳ್ಳಬಹುದು. ಅಂದರೆ ಕೆಲವು ಸಂಶೋಧನೆಗಳಿಗೆ ಅಗತ್ಯವಾದ ಕೆಲವು ಭಾಗಗಳನ್ನು ಅವರಿಗೆ ಪೂರೈಸಲು ಸಮಯವಿಲ್ಲದಾಗ ಇದನ್ನು ಬೇರೆಯವರಿಂದ ಮಾಡಿಸಿಕೊಳ್ಳಲು ಅವರಿಗೆ ಜನರು ಬೇಕಾಗಿರುತ್ತಾರೆ. ಇಂತಹ ಅವಕಾಶಗಳಿಗಾಗಿ ನೀವು ಸಂಶೋಧನಾ ಸಂಸ್ಥೆಗಳು ಮನವಿಮಾಡಿಕೊಳ್ಳುವ ಇಂತಹ ಸೇವೆಯನ್ನು ಹುಡುಕಿ ಆನ್ಲೈನ್ ಮೂಲಕ ತನಿಖೆ ಅಥವಾ ಹುಡುಕಾಟ ನಡೆಸುವ ಕೆಲಸವನ್ನು ಮಾಡಿಕೊಟ್ಟು ಹಣ ಗಳಿಸಬಹುದು.

ಮೊಬೈಲ್ ಆಪ್ ಗಳನ್ನು ರಚಿಸುವುದು

ಮೊಬೈಲ್ ಆಪ್ ಗಳನ್ನು ರಚಿಸುವುದು

ಯಾವಾಗ ಸ್ಮಾರ್ಟ್ ಫೋನುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟವೋ ಆಗ ಇದರಲ್ಲಿ ಪ್ರತಿಷ್ಠಾಪಿಸಬಹುದಾದ ಆಪ್ (appications or apps) ಗಳಿಗೂ ಭಾರೀ ಬೇಡಿಕೆ ಬಂದಿದೆ. ಇದುವರೆಗೆ ಕಂಪ್ಯೂಟರಿನಲ್ಲಿ ಸ್ಥಾಪಿಸಲಾಗುತ್ತಿದ್ದ ಪ್ರೋಗ್ರಾಮುಗಳಿಗೆ ಸರಿಸಮನಾದ ಆಪ್ ತಯಾರಿಸುವುದು ಒಂದು ಕಲೆ. ಪ್ರಸ್ತುತ ಐಫೋನ್ ನಲ್ಲಿ ಮೂವತ್ತು ಲಕ್ಷ ಆಪ್ ಗಳು ಲಭ್ಯವಿವೆ. ಗೂಗಲ್ ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿ ಹತ್ತು ಲಕ್ಷದಷ್ಟು ಆಪ್ ಗಳಿವೆ. ಇವೆಲ್ಲವೂ ಬಿಸಿ ಬಿಸಿ ದೋಸೆಯಂತೆ ಮಾರಾಟವಾಗುತ್ತಿವೆ. ನಿಮ್ಮದೇ ಆದ ಸ್ಮಾರ್ಟ್ ಫೋನ್ ಆಪ್ ಗಳನ್ನು ನಿರ್ಮಿಸಿ ಮಾರಾಟ ಮಾಡುವ ಮೂಲಕ ಕನಿಷ್ಟ ಸಮಯದಲ್ಲಿ ಹೆಚ್ಚು ಗಳಿಸಬಹುದು. ಆಪ್ ನಿರ್ಮಿಸಲು ಹಣವೇ ಬೇಕಾಗಿಲ್ಲ. ಬೇಕಾಗಿರುವುದೇನೆಂದರೆ ಒಂದು ಲ್ಯಾಪ್ ಟಾಪ್ ಹಾಗೂ ಆಪ್ ನಿರ್ಮಿಸುವ ಚಾಕಚಕ್ಯತೆ. ಉತ್ಪನ್ನವನ್ನು ಸಂಗ್ರಹಿಸಿಡಲು ಉಗ್ರಾಣವೂ ಬೇಕಾಗಿಲ್ಲ, ಸಾಗಾಟವೆಚ್ಚವೂ ಇಲ್ಲ. ಪರಿಣಾಮವಾಗಿ ಯಾವುದೇ ಕಿರಿಕಿರಿ ಇಲ್ಲದೇ ಹಣ ಗಳಿಸುವ ಅವಕಾಶ.

ನಿಮ್ಮದೇ ಸ್ವಂತ ಬ್ರಾಂಡ್ ಮಾರುವುದು

ನಿಮ್ಮದೇ ಸ್ವಂತ ಬ್ರಾಂಡ್ ಮಾರುವುದು

ಒಂದು ವೇಳೆ ನಿಮಗೆ ಲಾಂಛನಗಳನ್ನು ವಿನ್ಯಾಸಗೊಳಿಸುವ ಕಲೆ ಸಿದ್ಧಿಸಿದ್ದರೆ ನಿಮ್ಮ ಪ್ರತಿಭೆಯನ್ನು ಸುಮ್ಮನೇ ಸ್ನೇಹಿತರ ವ್ಯಂಗ್ಯಚಿತ್ರಕ್ಕೆ ಮೀಸಲಾಗಿರಿಸದಿರಿ. ಬದಲಿಗೆ ಉತ್ತಮ ವಿನ್ಯಾಸದ ಲಾಂಛನಗಳನ್ನು ನಿರ್ಮಿಸಲು ಯತ್ನಿಸಿ. ಈ ಲಾಂಛನಗಳನ್ನು ಯಾವುದಾದರೂ ಉತ್ಪನ್ನದ ಮೇಲೆ ಮುದ್ರಿಸಿದಾಗ ಇದು ಗ್ರಾಹಕನನ್ನು ಕ್ಷಣಮಾತ್ರದಲ್ಲಿ ಸೆರೆಹಿಡಿಯುವಂತಿರಬೇಕು. ಹಾಗಿದ್ದರೆ CafePress ಮೊದಲಾದ ತಾಣಗಳಲ್ಲಿ ಈ ವಿನ್ಯಾಸಗಳನ್ನು ಅಪ್ ಲೋಡ್ ಮಾಡಿ ಮಾರಾಟಕ್ಕಿರಿಸಬಹುದು. ಒಂದು ವೇಳೆ ಯಾರಾದರೂ ಈ ವಿನ್ಯಾಸಗಳಲ್ಲಿ ಉತ್ಸುಕರಾಗಿದ್ದರೆ ಸಂಸ್ಥೆ ಈ ಲಾಂಛನವನ್ನು ಮುದ್ರಿಸಿ ಅವರಿಗೆ ಮಾರಾಟ ಮಾಡುತ್ತದೆ ಹಾಗೂ ನಿಮಗೆ ಸಂಭಾವನೆ ದೊರಕುತ್ತದೆ. ಉದಾಹರಣೆಗೆ ಟೀ-ಶರ್ಟ್ ಮೇಲಿನ ಬರಹಗಳ ವಿನ್ಯಾಸ, ಟೊಪ್ಪಿ, ಪುಸ್ತಕ, ಪೋಸ್ಟರ್, ಕ್ಯಾಲೆಂಡರು ಗ್ರೀಟಿಂಗ್ ಕಾರ್ಡ್ ಮೊದಲಾದ ಉತ್ಪನ್ನಗಳ ಮೇಲೆ ಮುದ್ರಿಸುವ ಚಿತ್ರಗಳೂ ಸರಿ. ಪ್ರತಿ ವಿನ್ಯಾಸದ ಮಾರಾಟದಿಂದ ನಿಮಗೆ ಸಂಭಾವನೆ ದೊರಕುತ್ತದೆ. ಈ ಸೇವೆ ಒದಗಿಸುವ ಇತರ ತಾಣಗಳೆಂದರೆ Lulu ಹಾಗೂ Zazzle.

ವರ್ಚುವಲ್ ಸಹಾಯಕ (Virtual assistant)

ವರ್ಚುವಲ್ ಸಹಾಯಕ (Virtual assistant)

ಇಂದು ಅಂತರ್ಜಾಲದ ಮೂಲಕವೇ ಕಾರ್ಯನಿರ್ವಹಿಸುತ್ತಿರುವ ನೂರಾರು ಸಂಸ್ಥೆಗಳಿಗೆ ತಮ್ಮದೇ ಆದ ಕಛೇರಿಯೇ ಇಲ್ಲ. ಈ ಸಂಸ್ಥೆಗಳು ನೀಡುವ ವಿವಿಧ ಸೇವೆಗಳನ್ನು ಜಗತ್ತಿನ ಇತರ ಭಾಗಗಳಿಗೆ ವಿಸ್ತರಿಸಲು ಇವರಿಗೆ ಸಹಾಯಕರ ನೆರವು ಬೇಕಾಗಿರುತ್ತದೆ. ಈ ಕೆಲಸಗಳನ್ನು ಮನೆಯಲ್ಲಿದ್ದುಕೊಂಡೇ ಅಂತರ್ಜಾಲದ ಮೂಲಕವೇ ನಿರ್ವಹಿಸಬಹುದು. ಉದಾಹರಣೆಗೆ ಗ್ರಾಹಕ ಸೇವಾ ಕರ್ತವ್ಯಗಳು, ದೂರವಾಣಿ ಕರೆಗಳನ್ನು ಸ್ವೀಕರಿಸಿ ಸೂಕ್ತ ಮಾಹಿತಿ ಒದಗಿಸುವುದು, ವ್ಯಕ್ತಿಗಳ ನಡುವಣ ಭೇಟಿಯ ಸಮಯಗಳನ್ನು ನಿಗದಿಪಡಿಸುವುದು, ಈಮೇಲ್ ಗಳನ್ನು ವಿಶ್ಲೇಷಿಸಿ ಅಗತ್ಯ, ಅನಗತ್ಯಗಳನ್ನು ವಿಂಗಡಿಸಿ ವಿಲೇವಾರಿ ಮಾಡುವುದು ಇತ್ಯಾದಿ ಕೆಲಸಗಳನ್ನು ನಿವರ್ಹಿಸಲು ಈ ವೃತ್ತಿ ನೆರವಾಗುತ್ತದೆ.
ಈ ವೃತ್ತಿಗಳನ್ನು ಮೊದಲಿಗೆ ಓರ್ವರೇ ಗ್ರಾಹಕರಿಗೆ ಮೀಸಲಾಗಿಟ್ಟು ಈ ಕೆಲಸದ ಒಳಮರ್ಮಗಳನ್ನು ಅರಿಯಬೇಕು. ನಿಮ್ಮ ಸಾಮರ್ಥ ಹಾಗೂ ಕೆಲಸದ ಬಗ್ಗೆ ಅರಿವಾಗುತ್ತಾ ಹೋದಂತೆ ನಿಮ್ಮ ಸಾಮರ್ಥ್ಯವನ್ನು ಇತರ ಕ್ಷೇತ್ರಗಳಿಗೆ ವಿಸ್ತರಿಸುತ್ತಾ ಹೋಗಬಹುದು. ಕೆಲವೇ ದಿನಗಳಲ್ಲಿ ನೀವು ಯಾವ ಕ್ಷೇತ್ರದಲ್ಲಿ ಅತಿ ಹೆಚ್ಚಿನ ನೈಪುಣ್ಯವನ್ನು ಹೊಂದಿದ್ದೀರಿ ಎಂದು ಅರಿವಾಗುತ್ತದೆ, ಉದಾಹರಣೆಗೆ ಸಮಾಜಿಕ ಕ್ಷೇತ್ರದ ಗ್ರಾಹಕ ಸೇವೆ. ಈ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ನಿಮ್ಮ ದಿನಗಳು ಕ್ಷಣಗಳಂತೆ ಕಳೆಯಲು ಪ್ರಾರಂಭಿಸುತ್ತವೆ. ಈ ಮೂಲಕ ನೀವು ಸಂಪಾದಿಸಬಹುದಾದ ಮೊತ್ತವೂ ಹೆಚ್ಚುತ್ತಾ ಹೋಗುತ್ತದೆ.

ಟ್ರಾನ್ಸ್ಕ್ರಿಪ್ಷನ್ (Transcription)

ಟ್ರಾನ್ಸ್ಕ್ರಿಪ್ಷನ್ (Transcription)

ಟ್ರಾನ್ಸ್ಕ್ರಿಪ್ಷನ್ ಅಂದರೆ ಮೆಡಿಕಲ್ ಅಥವಾ ವೈದ್ಯಕೀಯ ಭಾಷೆಯನ್ನು ಸರಳಗೊಳಿಸುವ ಕೆಲಸವಾಗಿದೆ. ಸಾಮಾನ್ಯವಾಗಿ ವೈದ್ಯರಿಗೆ ವಿವರವಾಗಿ ಎಲ್ಲವನ್ನೂ ಬರೆಯುವಷ್ಟು ತಾಳ್ಮೆ ಇರುವುದಿಲ್ಲ. ಹಾಗಾಗಿ ಇವರು ತಮ್ಮ ಬರವಣಿಗೆಯನ್ನು ಸಂಕೇತಾಕ್ಷರಗಳಲ್ಲಿ ಅಥವಾ ಆ ಕ್ಷಣದಲ್ಲಿ ಆಡಿಯೋ ರೆಕಾರ್ಡ್ ಮಾಡಿ ಮಾಹಿತಿಯನ್ನು ಒದಗಿಸುತ್ತಾರೆ. ಇದರಲ್ಲಿ ಕೈಬರಹದ ವಿವರ, ರೋಗಿಯ ಆರೋಗ್ಯದ ವಿವರಗಳಿರುವ ಮಾಹಿತಿ, ಯಾವ ವೈದ್ಯರು ಈಗಾಗಲೇ ನೋಡಿ ಏನು ಸಲಹೆ ಮಾಡಿದ್ದಾರೆ ಎಂಬ ವರದಿ, ಇತರ ವೈದ್ಯರ ಬಳಿ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲು ಅಗತ್ಯವಿರುವ ಪತ್ರ, ಮನೋವೈಜ್ಞಾನಿಕ ಸಮೀಕ್ಷೆಯ ವಿವರ ಮೊದಲಾದ ವಿವರಗಳಿರುತ್ತವೆ. ಈ ಮಾಹಿತಿಗಳನ್ನು ಇತರರಿಗೆ ಸುಲಭವಾಗಿ ಹಾಗೂ ತಪ್ಪಿಲ್ಲದಂತೆ ಓದಲು ಸಾಧ್ಯವಾಗುವಂತೆ ಒಪ್ಪ ಓರಣವಾಗಿಸಿ ನೀಡುವುದೇ ಈ ಕೆಲಸದ ಮಹತ್ವವಾಗಿದೆ. ಈ ಕೆಲಸದಲ್ಲಿ ತಪ್ಪಿಗೆ ಅವಕಾಶವಿಲ್ಲ, ಹಾಗಾಗಿ ಅತ್ಯಂತ ಸರಿಯಾದ ಮಾಹಿತಿ ಒದಗಿಸುವುದು ಮೊದಲ ಆದ್ಯತೆಯಾಗಿರುತ್ತದೆ. ಈ ಕೆಲಸ ಕೈಗೊಳ್ಳುವ ಮೊದಲು ನಿಮಗೆ ವೈದ್ಯಕೀಯ ಕ್ಷೇತ್ರದ ಬಗ್ಗೆ ಪರಿಣಿತಿ ಇರುವುದು ಅಗತ್ಯ ಹಾಗೂ ವೈದ್ಯರು ಹೇಳುವುದನ್ನು ವೇಗವಾಗಿ ಬೆರಳಚ್ಚು ಮಾಡಲು ಹಾಗೂ ತಪ್ಪಿಲ್ಲದಂತೆ ಮಾಹಿತಿ ನೀಡಲು ಶಕ್ಯರಿರಬೇಕು.

English summary

How to earn money Online from home? 12 ways..

A cash cow for the enterprising, the Internet is littered with opportunities to make a fast buck. While it rarely qualifies as a solitary source of income, the Net can easily help you supplement it.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X