For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ ನೂತನ ಸಿಇಒ ಸಲಿಲ್ ಫರೇಖ್ ಯಾರು?

ದೇಶದ ಪ್ರಮುಖ ಐಟಿ ಸಂಸ್ಥೆ ಇನ್ಫೋಸಿಸ್ ನ ನೂತನ ಸಿಇಒ ಮತ್ತು ಎಂಡಿ ಹುದ್ದೆಗೆ ಸಲಿಲ್ ಎಸ್ ಫರೇಖ್ ಅವರನ್ನು ನೇಮಿಸಲಾಗಿದೆ.

|

ದೇಶದ ಪ್ರಮುಖ ಐಟಿ ಸಂಸ್ಥೆ ಇನ್ಫೋಸಿಸ್ ನ ನೂತನ ಸಿಇಒ ಮತ್ತು ಎಂಡಿ ಹುದ್ದೆಗೆ ಸಲಿಲ್ ಎಸ್ ಫರೇಖ್ ಅವರನ್ನು ನೇಮಿಸಲಾಗಿದೆ.

ಸಲಿಲ್ ಫರೇಖ್ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಸುಮಾರು 30 ವರ್ಷಗಳ ಅನುಭವ ಹೊಂದಿದ್ದಾರೆ. ಇವರು 2018 ಜನೆವರಿ 2ರಿಂದ ಅಧಿಕಾರ ವಹಿಸಲಿದ್ದಾರೆ. ವಿಶ್ವದ ಟಾಪ್ 10 ಐಟಿ ಕಂಪನಿಗಳಲ್ಲಿ ಭಾರತದ 2 ಕಂಪನಿಗಳು

ಸಲಿಲ್ ಫರೇಖ್ ಯಾರು?

ಸಲಿಲ್ ಫರೇಖ್ ಯಾರು?

ಸಲಿಲ್ ಫರೇಖ್ ಅವರು ಕಾರ್ನೆಲ್‌ ಯುನಿವರ್ಸಿಟಿಯಲ್ಲಿ ಕಂಪ್ಯೂಟರ್‌ ಸೈನ್ಸ್‌ ಮತ್ತು ಮೆಕಾನಿಕಲ್‌ ಇಂಜಿನಿಯರಿಂಗ್‌ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬಾಂಬೆ ಐಐಟಿಯಲ್ಲಿ ಏರೋನಾಟಿಕಲ್‌ ಇಂಜಿನಿಯರಿಂಗ್‌ ಬಿ.ಟೆಕ್‌ ಪದವಿ ಹೊಂದಿದ್ದಾರೆ. ಸಲಿಲ್ ಫ್ರಾನ್ಸ್ ಮೂಲದ ಐಟಿ ಸಂಸ್ಥೆ ಕ್ಯಾಪ್‌ಜೆಮಿನಿಯ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಭಾರತದಲ್ಲಿ ಕ್ಯಾಪ್‌ಜೆಮಿನಿ ದೊಡ್ಡ ಮಟ್ಟದಲ್ಲಿ ಬೆಳೆಯಲು ಇವರು ಕೊಡುಗೆ ಅಪಾರವಾಗಿದೆ.

ಸಲಿಲ್ ಮುಂದಿನ ಸವಾಲು

ಸಲಿಲ್ ಮುಂದಿನ ಸವಾಲು

ಕಂಪನಿಯ 36 ವರ್ಷಗಳ ಇತಿಹಾಸದಲ್ಲಿ ಸವಾಲಿನ ಸಮಯದಲ್ಲಿ ಸಲಿಲ್ ಇನ್ಫೋಸಿಸ್ ಸಿಇಒ ಆಗಿ ನೇಮಕಗೊಂಡಿದ್ದಾರೆ. ಇನ್ಫೋಸಿಸ್ ಸಂಸ್ಥೆಯ ಬೆಳವಣಿಗೆಯನ್ನು ಮರಳಿ ಪಡೆದುಕೊಳ್ಳುವ ಸಾಮರ್ಥ್ಯ, ಸ್ಥೈರ್ಯವನ್ನು ಹೆಚ್ಚಿಸುವುದು, ಪ್ರವರ್ತಕರು ಮತ್ತು ಹಿರಿಯ ಪ್ರತಿಭೆಗಳೊಂದಿಗೆ ಸಮಸ್ಯೆಗಳನ್ನು ಬಗೆಹರಿಸಿ ಮುನ್ನಡೆಯುವುದು ತುಂಬಾ ಪ್ರಮುಖವಾಗಿದೆ. ವೈಮನಸ್ಸು ಮತ್ತು ಅಹಿತಕರ ಬೆಳವಣಿಗೆಗಳಿಂದಾಗಿ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿದ ನಂತರದಲ್ಲಿನ ಸಂಸ್ಥೆಯ ಆಂತರಿಕ ಪರಿಸ್ಥಿತಿಯನ್ನು ಸುಧಾರಿಸುವುದು ಮುಖ್ಯವಾಗಿದೆ.

ಹಂಗಾಮಿ ಸಿಇಒ ಪ್ರವೀಣ್ ರಾವ್
 

ಹಂಗಾಮಿ ಸಿಇಒ ಪ್ರವೀಣ್ ರಾವ್

ವಿಶಾಲ್ ಸಿಕ್ಕಾ ನಂತರ ತೆರವಾದ ಹುದ್ದೆಗೆ ಹಂಗಾಮಿ ಸಿಇಒ ಮತ್ತು ಎಂಡಿ ಆಗಿ ಯು.ಬಿ ಪ್ರವೀಣ್ ರಾವ್ ಅವರನ್ನು ನೇಮಿಸಲಾಗಿತ್ತು. ಪ್ರವೀಣ್ ರಾವ್ ಇನ್ನುಮುಂದೆ ಸಂಸ್ಥೆಯ ಫೂರ್ಣಾವಧಿ ನಿರ್ದೇಶಕರಾಗಿ ಮುನ್ನಡೆಯಲಿದ್ದಾರೆ.

ನಂದನ್ ನಿಲೇಕಣಿ

ನಂದನ್ ನಿಲೇಕಣಿ

ಮಾಹಿತಿ ತಂತ್ರಜ್ಞಾನ ವಲಯದ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಇನ್ಫೋಸಿಸ್ ಮುನ್ನಡೆಸಲು ಸಲಿಲ್ ಫರೇಖ್ ಉತ್ತಮ ಆಯ್ಕೆ ಎಂದು ನಂದನ್ ನಿಲೇಕಣಿ ಹೇಳಿದ್ದಾರೆ.

English summary

Who is Salil Parekh, the new Infosys CEO?

India's second largest IT services company has made its choice. Salil Satish Parekh the man who helped build Capgemini's India operations is the new CEO and MD effective January 2018, according to a company press release.
Story first published: Monday, December 4, 2017, 14:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X