For Quick Alerts
ALLOW NOTIFICATIONS  
For Daily Alerts

ಜಿಯೋ: ಹೊಸ ಪರಿಷ್ಕೃತ ರೀಚಾರ್ಜ್ ಪ್ಲಾನ್ ಗಳ ವಿವರ ಇಲ್ಲಿದೆ ನೋಡಿ..

ಜಿಯೋ ಸಂಸ್ಥೆ ತನ್ನ ಪ್ರಿಪೇಡ್ ಗ್ರಾಹಕರಿಗಾಗಿ 4 ರೀಚಾರ್ಜ್ ಯೋಜನೆಗಳನ್ನು ಪ್ರಸ್ತುತ ಪಡಿಸಿದೆ. ಎಲ್ಲಾ ಅಪರೇಟರ್ ಗಳ ನಡುವೆ ಕರೆ ಮತ್ತು ಎಸ್ಎಂಎಸ್ ಸೌಲಭ್ಯ, ಸ್ಥಳೀಯ-ಎಸ್ಟಿಡಿ ಕರೆ ಅನಿಯಮಿತವಾಗಿರುತ್ತದೆ. ಇದರ ವಿವರ ಇಲ್ಲಿ ನೀಡಲಾಗಿದೆ.

By Siddu
|

ಮುಖೇಶ್ ಅಂಬಾನಿ ನೇತೃತ್ವದ 'ಜಿಯೋ' ಟೆಲಿಕಾಂ ಕ್ಷೇತ್ರ ಪ್ರವೇಶಿಸಿದ ನಂತರ ಹೊಸ ಬಿರುಗಾಳಿಯನ್ನೇ ಎಬ್ಬಿಸಿದೆ. ಇದು ಉಚಿತವಾಗಿ ಹಾಗು ಕಡಿಮೆ ಬೆಲೆಯಲ್ಲಿ ಹೆಚ್ಚು ಡೇಟಾ ಮತ್ತು ಅನ್ ಲಿಮಿಟೆಡ್ ಕರೆ ಆಫರ್ ಗಳನ್ನು ನೀಡುವುದರ ಮೂಲಕ ಗ್ರಾಹಕರನ್ನು ಸೆಳೆಯಿತು.

ಇದಾದ ನಂತರದಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ದರ ಸಮರದಲ್ಲಿ ತೊಡಗಿ, ಹೊಸ ಹೊಸ ಆಫರ್ ಗಳನ್ನು ಘೋಷಿಸುತ್ತಾ ಸಾಗಿವೆ. ಜತೆಗೆ ಟೆಲಿಕಾಂ ಕಂಪನಿಗಳ ಹೊಸ ಆಫರ್ ಗಳ ವ್ಯಾಲಿಡಿಟಿ ಅವಧಿ ಕೂಡ ಕಡಿಮೆಯಾಗುತ್ತಿದೆ.
ಇದೀಗ ಜಿಯೋ ಮತ್ತೆ ತನ್ನ ಗ್ರಾಹಕರಿಗೆ ಹೊಸ ಪ್ಲಾನ್ ಗಳನ್ನು ಪರಿಚಯಿಸಿದ್ದು, ಅದರ ವಿವರ ಇಲ್ಲಿದೆ ನೋಡಿ.. ಜಿಯೋಗೆ ಟಕ್ಕರ್! ಏರ್ಟೆಲ್ ನಿಂದ ಪ್ರತಿದಿನ 3GB, 3.5GB ಡೇಟಾ/ಅನಿಯಮಿತ ಕರೆ ಆಫರ್

ರೂ. 309 ಪ್ಲಾನ್

ರೂ. 309 ಪ್ಲಾನ್

ಜಿಯೋ ಸಂಸ್ಥೆ ತನ್ನ ಪ್ರಿಪೇಡ್ ಗ್ರಾಹಕರಿಗಾಗಿ ಹಲವು ರೀಚಾರ್ಜ್ ಯೋಜನೆಗಳನ್ನು ಪ್ರಸ್ತುತ ಪಡಿಸಿದೆ. ಇದರ ವಿವರ ಇಲ್ಲಿ ನೀಡಲಾಗಿದೆ. ಎಲ್ಲಾ ಅಪರೇಟರ್ ಗಳ ನಡುವೆ ಕರೆ ಮತ್ತು ಎಸ್ಎಂಎಸ್ ಸೌಲಭ್ಯ ಅನಿಯಮಿತವಾಗಿರುತ್ತದೆ.
ವ್ಯಾಲಿಡಿಟಿ: 49 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
ಸ್ಥಳೀಯ, ರಾಷ್ಟ್ರೀಯ, ರೋಮಿಂಗ್ ಎಸ್ಎಂಎಸ್: ಅನಿಯಮಿತ
4G ಡೇಟಾ: 1GB ಪ್ರತಿದಿನ (ಒಟ್ಟು 49GB)

ಡಿಸೆಂಬರ್ 31 ಡೆಡ್ ಲೈನ್, ಈ 7 ಸೇವೆಗಳಿಗಾಗಿ ತಪ್ಪದೇ ಆಧಾರ್ ಲಿಂಕ್ ಮಾಡಿಡಿಸೆಂಬರ್ 31 ಡೆಡ್ ಲೈನ್, ಈ 7 ಸೇವೆಗಳಿಗಾಗಿ ತಪ್ಪದೇ ಆಧಾರ್ ಲಿಂಕ್ ಮಾಡಿ

ರೂ. 399 ಪ್ಲಾನ್

ರೂ. 399 ಪ್ಲಾನ್

ಜಿಯೋ ಸಂಸ್ಥೆಯ ಅತಿಹೆಚ್ಚಿನ ಪ್ರಿಪೇಡ್ ಗ್ರಾಹಕರು ಈ ಯೋಜನೆಯನ್ನು ಬಳಸುತ್ತಿದ್ದಾರೆ. ಇದು ಜಿಯೋ ಧನ್ ಧನಾ ಧನ್ ಯೋಜನೆಯಾಗಿದೆ. ಎಲ್ಲಾ ಅಪರೇಟರ್ ಗಳ ನಡುವೆ ಕರೆ ಮತ್ತು ಎಸ್ಎಂಎಸ್ ಸೌಲಭ್ಯ ಅನಿಯಮಿತವಾಗಿರುತ್ತದೆ.
ವ್ಯಾಲಿಡಿಟಿ: 70 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
ಸ್ಥಳೀಯ, ರಾಷ್ಟ್ರೀಯ, ರೋಮಿಂಗ್ ಎಸ್ಎಂಎಸ್: ಅನಿಯಮಿತ
4G ಡೇಟಾ: 1GB ಪ್ರತಿದಿನ (ಒಟ್ಟು 70GB)

ರೂ. 459 ಪ್ಲಾನ್

ರೂ. 459 ಪ್ಲಾನ್

ಎಲ್ಲಾ ಅಪರೇಟರ್ ಗಳ ನಡುವೆ ಕರೆ ಮತ್ತು ಎಸ್ಎಂಎಸ್ ಸೌಲಭ್ಯ ಅನಿಯಮಿತವಾಗಿರುತ್ತದೆ.
ವ್ಯಾಲಿಡಿಟಿ: 84 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
4G ಡೇಟಾ: 1GB ಪ್ರತಿದಿನ (ಒಟ್ಟು 84GB)
ಸ್ಥಳೀಯ, ರಾಷ್ಟ್ರೀಯ, ರೋಮಿಂಗ್ ಎಸ್ಎಂಎಸ್: ಅನಿಯಮಿತ

ರೂ. 499 ಪ್ಲಾನ್

ರೂ. 499 ಪ್ಲಾನ್

ಹೆಚ್ಚು ದಿನಗಳ ವ್ಯಾಲಿಡಿಟಿ ಬಯಸುವ ಗ್ರಾಹಕರು ಈ ಯೋಜನೆಯನ್ನು ಇಷ್ಟಪಡುತ್ತಾರೆ. ಎಲ್ಲಾ ಅಪರೇಟರ್ ಗಳ ನಡುವೆ ಕರೆ ಮತ್ತು ಎಸ್ಎಂಎಸ್ ಸೌಲಭ್ಯ ಅನಿಯಮಿತವಾಗಿರುತ್ತದೆ.
ವ್ಯಾಲಿಡಿಟಿ: 91 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
4G ಡೇಟಾ: 1GB ಪ್ರತಿದಿನ (ಒಟ್ಟು 91GB)
ಸ್ಥಳೀಯ, ರಾಷ್ಟ್ರೀಯ, ರೋಮಿಂಗ್ ಎಸ್ಎಂಎಸ್: ಅನಿಯಮಿತ

ಪ್ಲಾನ್ ಅವಧಿ ಕಡಿಮೆ ಆಗುತ್ತಿದೆ

ಪ್ಲಾನ್ ಅವಧಿ ಕಡಿಮೆ ಆಗುತ್ತಿದೆ

ಗ್ರಾಹಕರು ಗಮನಿಸಬೇಕಾದ ಒಂದು ವಿಚಾರವೆಂದರೆ ಟೆಲಿಕಾಂ ಕಂಪನಿಗಳು ಹೊಸ ಆಫರ್ ಗಳನ್ನು ಘೋಷಿಸುವುದರ ಜತೆಗೆ ಆ ಯೋಜನೆಗಳ ವ್ಯಾಲಿಡಿಟಿಯನ್ನು ಕಡಿಮೆ ಮಾಡುತ್ತಿವೆ. ಈ ಹಿಂದೆ 70 ದಿನ ಅಥವಾ 90 ದಿನಗಳವರೆಗೆ ಇದ್ದ ವ್ಯಾಲಿಡಿಟಿ ಅವಧಿಯನ್ನು ಕಡಿತಗೊಳಿಸುತ್ತಿವೆ. ಅಂದರೆ ಹೆಚ್ಚು ಡೇಟಾ ಅಥವಾ ಅನಿಯಮಿತ ಕರೆ ಸೌಲಭ್ಯ ನೀಡಿದರೂ ಅವಧಿ ಮಾತ್ರ ಕಡಿಮೆಯಾಗುತ್ತಿದೆ. ಇಲ್ಲವೆ ಬೆಲೆ ಹೆಚ್ಚಿರುತ್ತದೆ.

ಹೊಸ ಪ್ಲಾನ್ ಗಳು ದುಬಾರಿ?

ಹೊಸ ಪ್ಲಾನ್ ಗಳು ದುಬಾರಿ?

ಹೊಸ ಟ್ಯಾರಿಪ್ ಅಡಿ ಪೊಸ್ಟ್ ಪೇಡ್ ಗ್ರಾಹಕರು ಮೊದಲಿಗಿಂತಲೂ ಕಡಿಮೆ ವ್ಯಾಲಿಡಿಟಿ ಪಡೆಯಲಿದ್ದಾರೆ. ಪ್ರಿಪೇಡ್ ಮತ್ತು ಪೊಸ್ಟ್ ಪೇಡ್ ಚಂದಾದಾರರು ಹಿಂದಿನ 128kbps ವೇಗದಿಂದ 64kbps ವೇಗ (FUP) ಪಡೆದುಕೊಳ್ಳಲಿದ್ದಾರೆ. ಮುಖ್ಯವಾಗಿ ರೂ. 399ರ ಧನ್ ಧನಾ ಧನ್ ಆಫರ್ ಬೆಲೆ ಶೇ. 15ರಷ್ಟು ಏರಿಕೆಯಾಗಲಿದೆ.
ಧನ್ ಧನಾ ಧನ್ ಯೋಜನೆ ರೂ. 399 ಪ್ಲಾನ್ ನ ಬೆಲೆ ಪರಿಷ್ಕರಣೆ ಮಾಡಿದ ನಂತರ, ಇದರ ವ್ಯಾಲಿಡಿಟಿಯನ್ನು ಕಡಿತಗೊಳಿಸಿದ್ದು, 70 ದಿನಗಳಿಗೆ ಇಳಿಸಿದೆ. ಉಳಿದಂತೆ ಇತರ ಪ್ರಯೋಜನಗಳು ಮೊದಲಿನಂತೆಯೇ ಇರಲಿವೆ.

ಜಿಯೋ ರೂ. 24 ಮತ್ತು 54 ರಿಚಾರ್ಜ್ ಪ್ಲಾನ್

ಜಿಯೋ ರೂ. 24 ಮತ್ತು 54 ರಿಚಾರ್ಜ್ ಪ್ಲಾನ್

ರಿಲಯನ್ಸ್ ಜಿಯೋ ಇದೀಗ ಎರಡು ಅತಿ ಕಡಿಮೆ ಬೆಲೆಯ ಪ್ಲಾನ್ ಗಳನ್ನು ಜಿಯೋಫೋನ್ ಬಳಕೆದಾರರಿಗಾಗಿ ಪರಿಚಯಿಸಿದೆ.
* ರೂ. 24 ರಿಚಾರ್ಜ್ ಯೋಜನೆಯಡಿ ಗ್ರಾಹಕರು 24 ರೂಪಾಯಿ ರಿಚಾರ್ಜ್ ಮಾಡಿದಲ್ಲಿ ಹೈ ಸ್ಪೀಡ್ ನಲ್ಲಿ 500MB ಡೇಟಾ ಲಭ್ಯವಾಗಲಿದೆ.
* ಹೈ ಸ್ಪೀಡ್ ಡೇಟಾ ಮಿತಿ ಮುಗಿಯುತ್ತಿದ್ದಂತೆ ಇಂಟರ್ನೆಟ್ ಚಾಲ್ತಿಯಲ್ಲಿ ಇರಲಿದೆ. ಆದರೆ ವೇಗ 64 kbps ಆಗಲಿದೆ.
* ಗ್ರಾಹಕರಿಗೆ ಅನಿಯಮಿತ ಕರೆ ಸಿಗಲಿದೆ.
* ಉಚಿತವಾಗಿ 20 ಎಸ್ಎಂಎಸ್ ಸಿಗಲಿದೆ.
* ಎರಡು ದಿನಗಳವರೆಗೆ ವ್ಯಾಲಿಡಿಟಿ ಇರಲಿದೆ.

ರೂ. 54 ರಿಚಾರ್ಜ್ ಪ್ಲಾನ್
* ರೂ. 54 ರಿಚಾರ್ಜ್ ಯೋಜನೆಯಡಿ ಗ್ರಾಹಕರಿಗೆ ಪ್ರತಿದಿನ ಹೈಸ್ಪೀಡ್ 500MB ಡೇಟಾ ಸಿಗಲಿದೆ.
* ಅನಿಯಮಿತ ಕರೆ ಹಾಗೂ 70 ಉಚಿತ ಎಸ್ಎಂಎಸ್ ಸಿಗಲಿದೆ.
* ಏಳು ದಿನಗಳವರೆಗೆ ಈ ಯೋಜನೆ ವ್ಯಾಲಿಡಿಟಿ ಇರಲಿದೆ.

English summary

Jio Prepaid Recharge Plans: Rs. 309 Vs Rs. 399 Vs Rs. 459 Vs Rs. 499

Reliance Jio is offering 1 GB of high speed data per day in four of its prepaid recharge plans.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X