ಬಿಟ್ ಕಾಯಿನ್ (Bitcoin) ಬಗ್ಗೆ ಎಲ್ಲರೂ ಕೇಳುವ 10 ಪ್ರಶ್ನೆಗಳೇನು ಗೊತ್ತೆ?

ಸಂದೀಪ್ ಗೋಯೆಂಕಾರವರು ಜನಸಾಮಾನ್ಯರು ಬಿಟ್ ಕಾಯಿನ್ ಬಗ್ಗೆ ಕೇಳುವ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡಿದ್ದಾರೆ.

ಯಾವಾಗ ಅಂತರ್ಜಾಲದ ಮೂಲಕ ವಿಶ್ವವೇ ಅಂಗೈಯಲ್ಲಿ ತಲುಪುವಂತಾಯಿಯೋ, ಆಗ ವಹಿವಾಟಿನ ಮಾಧ್ಯಮವಾಗಿ ಹೊಸ ಹೊಸ ವಿಧಾನಗಳೂ ಹುಟ್ಟಿಕೊಂಡವು. ವಿಶ್ವದ ಎಲ್ಲೆಡೆ ಬಳಸಲಾಗುವಂತೆ ಪರೋಕ್ಷವಾದ ಒಂದು ನಾಣ್ಯ ವ್ಯವಸ್ಥೆಯನ್ನೂ ಪ್ರಾರಂಭಿಸಲಾಯಿತು. ಇದೇ ಬಿಟ್ ಕಾಯಿನ್ (Bitcoin). ಪ್ರಸ್ತುತ ಯಾವುದೇ ಹಣಕಾಸಿಗಿಂತಲೂ ಹೆಚ್ಚು ಮೌಲ್ಯಯುತವಾದ ಹಣವಾಗಿದೆ. ಇಂದು ಇದು ಚಿನ್ನಕ್ಕಿಂತಲೂ ಹೆಚ್ಚು ಬೆಲೆ ಬಾಳುತ್ತಿದೆ. ಇದರ ಬೆಲೆ ದಿನೇ ದಿನೇ ವೇಗವಾಗಿ ಏರುತ್ತಿದೆ. ಇಂದು ವಿಶ್ವದಾದ್ಯಂತ ಹೆಚ್ಚಿನ ಜನರು ಈ ಹಣಕಾಸನ್ನು ಕೇವಲ ವಸ್ತುಗಳ ಅಥವಾ ಸೇವೆಗಳ ಕೊಂಡುಕೊಳ್ಳುವಿಕೆಗೆ ಮಾತ್ರವಲ್ಲ, ಒಂದು ಹೂಡಿಕೆಯನ್ನಾಗಿಯೂ ಪರಿಗಣಿಸುತ್ತಿದ್ದಾರೆ.

ಇಂದು ವಿಶ್ವದ ಕೆಲವೇ ದೇಶಗಳು ಬಿಟ್ ಕಾಯಿನ್ ವ್ಯಾಪಾರವನ್ನು ಅನುಮೋದಿಸಿವೆ. ಆದರೆ ಈ ಹಣಕಾಸಿಗೆ ಬೇಡಿಕೆ ಮಾತ್ರ ವಿಶ್ವದ ಎಲ್ಲಾ ರಾಷ್ಟ್ರಗಳಿಂದಲೂ ಬರುತ್ತಿದೆ. ಈ ಬಗ್ಗೆ ಎಲ್ಲರ ಗಮನ ಸೆಳೆದಿದ್ದು, ಈ ಹಣಕಾಸಿನ ಬಗ್ಗೆ ಏನೂ ಗೊತ್ತಿಲ್ಲದವರು ಸಹಾ ಇದು ಏನು ಎತ್ತ? ಇದರ ಭವಿಷ್ಯವೇನು? ಎಂದೆಲ್ಲಾ ವಿಚಾರಿಸುತ್ತಿದ್ದಾರೆ... ಬಿಟ್ ಕಾಯಿನ್ ಏನಿದು? ಇದರ ಬಗ್ಗೆ ಎಚ್ಚರವಿರಲಿ..

Zebpay ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಶ್ರೀ ಸಂದೀಪ್ ಗೋಯೆಂಕಾರವರು ಜನಸಾಮಾನ್ಯರು ಕೇಳುವ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡಿದ್ದಾರೆ. ಈ ಸಂಸ್ಥೆ 2012ರ ಕೊನೆಯಲ್ಲಿ ಪ್ರಾರಂಭವಾಗಿದ್ದು, ಪ್ರಸ್ತುತ ಭಾರತದ ಅತಿ ದೊಡ್ಡ ಬಿಟ್ ಕಾಯಿನ್ ಬದಲಾವಣೆಯ ಸಂಸ್ಥೆಯಾಗಿದೆ. ಅಷ್ಟೇ ಅಲ್ಲ, ಮೊಬೈಲ್ ಆಪ್ ಮೂಲಕ ಕೇವಲ ಮೊಬೈಲ್ ಸಂಖ್ಯೆಯನ್ನೇ ಬಳಸಿ ಬಿಟ್ ಕಾಯಿನ್ ಹಣಕಾಸಿನ ವಹಿವಾಟು ಸುಲಭವಾಗುವಂತೆ ಮಾಡಿರುವ ಭಾರತದ ಪ್ರಥಮ ಸಂಸ್ಥೆಯೂ ಆಗಿದೆ.

ಪ್ರಶ್ನೆ 1. ಬಿಟ್ ಕಾಯಿನ್ ನ ಬೇಡಿಕೆ ಹಾಗೂ ಇದರ ಮೌಲ್ಯ ಏಕೆ ಏರುತ್ತಿದೆ?

ಪ್ರಶ್ನೆ 1. ಬಿಟ್ ಕಾಯಿನ್ ನ ಬೇಡಿಕೆ ಹಾಗೂ ಇದರ ಮೌಲ್ಯ ಏಕೆ ಏರುತ್ತಿದೆ?

ಇದುವರೆಗೆ ಪ್ರಬಲ ಎಂದೇ ನೆಚ್ಚಿಕೊಂಡಿದ್ದ ಯು.ಎಸ್. ಡಾಲರ್ ಸಹಾ ಅಪಮೌಲ್ಯಗೊಳ್ಳುತ್ತಿರುವುದು ವಿಶ್ವದ ಆರ್ಥಿಕತೆಯ ಪ್ರಗತಿ ಕ್ಷೀಣವಾಗಿರುವುದು ಈಗ ಬಿಟ್ ಕಾಯಿನ್ ಗೆ ಹೆಚ್ಚಿನ ಬೇಡಿಕೆ ಬರಲು ಕೆಲವು ಕಾರಣಗಳು. ಇದಕ್ಕಿಂತ ಹೆಚ್ಚಾಗಿ ಈ ಹಣಕಾಸು ಹೆಚ್ಚಿನ ಮೌಲ್ಯದ ಲೋಹಗಳಿಗೆ ಸಮಾನಾಂತರವಾಗಿರುವಂತೆ ನೋಡಿಕೊಳ್ಳುವುದು ಹಾಗೂ ಇನ್ನೊಂದು ಪ್ರಮುಖ ಕಾರಣವೆಂದರೆ ಈ ಕಾಸಿನ ಮಿತಿ. ಅಂದರೆ ವಿಶ್ವದಲ್ಲಿ ಕೇವಲ ಇಪ್ಪತ್ತೊಂದು ಮಿಲಿಯನ್ ಬಿಟ್ ಕಾಯಿನ್ ಮಾತ್ರವೇ ಲಭ್ಯವಿವೆ.

ಇದಕ್ಕೆ ಬೇಡಿಕೆ ಏರಲು ಎರಡು ಕಾರಣಗಳಿವೆ. ಈ ಹಣಕಾಸನ್ನು ಮೊದಲ ಬಾರಿಗೆ ಬಳಸುತ್ತಿರುವವರು ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಕುತೂಹಲವನ್ನು ತಣಿಸಲು ಬಳಸುವುದು. ಉದಾಹರಣೆಗೆ ಭಾರತದಲ್ಲಿ ಸ್ವತಂತ್ರವಾಗಿ ಕೆಲಸ ಮಾಡುವ ವ್ಯಕ್ತಿಗಳು ತಮ್ಮ ವೇತನವನ್ನು ಬಿಟ್ ಕಾಯಿನ್ ಗಳಲ್ಲಿಯೇ ಪಾವತಿಸುವಂತೆ ಕೇಳಿಕೊಳ್ಳುತ್ತಾರೆ. ಎರಡನೆಯದಾಗಿ ಇದುವರೆಗೆ ಬಂದಿರುವ ಹಣಕಾಸು ಅಥವಾ ಇದಕ್ಕೆ ಪರ್ಯಾಯವಾದ ಯಾವುದೇ ವ್ಯವಸ್ಥೆಗಿಂತಲೂ ಈ ಹಣಕಾಸು ನೂರು ಪಟ್ಟು ಪ್ರಬಲವಾಗಿದೆ ಎಂದು ಜನರಿಗೆ ಈಗ ಮನದಟ್ಟಾಗಿರುವುದು. ನಮ್ಮ ಅನುಮಾನದ ಪ್ರಕಾರ ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚಿನ ಜನರು ಈ ಹಣಕಾಸನ್ನು ಉಪಯೋಗಿಸಲು ಮನಸ್ಸು ಮಾಡುವ ಮೂಲಕ ಈ ಬೇಡಿಕೆ ಇನ್ನಷ್ಟು ಹೆಚ್ಚಲಿದೆ. ಈ ಬೇಡಿಕೆಯೇ ಈ ಹಣಕಾಸಿಗೆ ಮೌಲ್ಯವನ್ನೂ ಏರಿಸುತ್ತದೆ.

ಪ್ರಶ್ನೆ 2. ಬಿಟ್ ಕಾಯಿನ್ ಬೆಲೆ ಎಷ್ಟು? ನಾನೂ ಈ ನಾಣ್ಯವನ್ನು ಕೊಳ್ಳಬಹುದೇ?

ಪ್ರಶ್ನೆ 2. ಬಿಟ್ ಕಾಯಿನ್ ಬೆಲೆ ಎಷ್ಟು? ನಾನೂ ಈ ನಾಣ್ಯವನ್ನು ಕೊಳ್ಳಬಹುದೇ?

ಈ ನಾಣ್ಯಕ್ಕೆ (ಮಾರ್ಚ್ 2017ರಲ್ಲಿದ್ದಂತೆ) ಒಂದು ನಾಣ್ಯಕ್ಕೆ ಸುಮಾರು 87,000 ರೂ. ಬೆಲೆ ಇದೆ. ಇದರ ಮಾರಾಟದ ಬೆಲೆ ಒಂದು ನಾಣ್ಯಕ್ಕೆ ಸುಮಾರು 85,000 ರೂ ಬೆಲೆ ಇದೆ. ಇದರ ಬೆಲೆ ಪ್ರತಿ ಕ್ಷಣಕ್ಕೂ ಬದಲಾಗುತ್ತದೆ. ನಾಣ್ಯವೆಂದರೆ ಇಡಿಯ ನಾಣ್ಯವನ್ನೇ ಕೊಳ್ಳಬೇಕೆಂದಿಲ್ಲ, ಇದರ ಒಂದು ಭಾಗವನ್ನೂ ಕೊಳ್ಳಬಹುದು. ಅಂದರೆ ಸುಮಾರು ನೂರು ರೂಪಾಯಿಯ ಅಥವಾ ಸಾವಿರ ರೂಪಾಯಿಯ ಬಿಟಿ ಕಾಯಿನ್ ಸಹಾ ಲಭ್ಯವಿದೆ.

ಸಂಪಾದಕರು: ಬಿಟ್ ಕಾಯಿನ್ ನ ಇತ್ತೀಚಿನ ಬೆಲೆ (1 BTC) ಈ ಲೇಖನ ಪ್ರಕಟವಾಗುವಾಗ ರೂ 66,122 ಇದೆ. (www.zebpay.com ನೋಡಿ).

 

ಪ್ರಶ್ನೆ 3. R3 ಯಂತಹ ಪರ್ಯಾಯ ಖಾಸಗಿ ಸಂಸ್ಥೆಗಳು ಒದಗಿಸುವ ವಿಧಾನಗಳನ್ನು ಬಿಟ್ ಕಾಯಿನ್ ಗಳನ್ನು ಕೊಳ್ಳಲು ಬಳಸಬಹುದೇ?

ಪ್ರಶ್ನೆ 3. R3 ಯಂತಹ ಪರ್ಯಾಯ ಖಾಸಗಿ ಸಂಸ್ಥೆಗಳು ಒದಗಿಸುವ ವಿಧಾನಗಳನ್ನು ಬಿಟ್ ಕಾಯಿನ್ ಗಳನ್ನು ಕೊಳ್ಳಲು ಬಳಸಬಹುದೇ?

ವಿಶ್ವದಾದ್ಯಂತ ಬಿಟ್ ಕಾಯಿನ್ ವ್ಯವಹಾರಗಳನ್ನು ನಿಯಂತ್ರಿಸುವ blockchain ಎಂಬ ವ್ಯವಸ್ಥೆ ಈಗ ಇರುವ ಹಣಕಾಸಿನ ವ್ಯವಹಾರವನ್ನೇ ಬದಲಿಸಲಿದೆ. ಇದರಲ್ಲಿ ಬಳಸಲಾಗುವ ಮಿಥ್ಯಾ ಹಣ (cryptocurrency) ಅಥವಾ ‘private blockchain' ಅಥವಾ ‘permission blockchain' ಕ್ಕೆ ಭವಿಷ್ಯದಲ್ಲಿ ಯಾವುದೇ ಬೇಡಿಕೆ ಇರುವುದಿಲ್ಲ. ಇವುಗಳಿಗೆ ಬಿಟ್ ಕಾಯಿನ್ blockchain ನಲ್ಲಿರುವಂತಹ ಯಾವುದೇ ಅನುಕೂಲತೆಗಳಿಲ್ಲ. ಈ blockchain ಅನ್ನು ಸಾರ್ವಜನಿಕವಾದ ಅಂತರ್ಜಾಲದಲ್ಲಿ ಹಲವಾರು ಆಟಗಾರರು ಒಂದೇ ಸ್ತರದಲ್ಲಿ ಆಡುತ್ತಿರುವಂತೆ ಊಹಿಸಿಕೊಳ್ಳಬಹುದು. ಖಾಸಗಿ blockchain ಅಂದರೆ ಒಂದು ಸಂಸ್ಥೆಯ ಸ್ವಂತ ಬಳಕೆಗೆ ಬಳಸಲಾಗುವ ಇಂಟ್ರಾನೆಟ್ ಗೆ ಹೋಲಿಸಬಹುದು.

ಆದರೆ ಬಿಟ್ ಕಾಯಿನ್ ಇಲ್ಲದ blockchain ಅನ್ನು ಊಹಿಸುವಂತೆಯೇ ಇಲ್ಲ. ಒಂದರ್ಥದಲ್ಲಿ ಮೆದುಳಿಲ್ಲದ ಮನುಷ್ಯನಂತೆ. ಒಂದಿಲ್ಲದೆ ಇನ್ನೊಂದು ಇರಲು ಸಾಧ್ಯವಿಲ್ಲ.

R3 ಒಂದು ದೊಡ್ಡ ಒಕ್ಕೂಟವಾಗಿದ್ದು ಖಾಸಗಿ blockchain ಸಹಾ ಆಗಿದೆ. ಈ ಒಕ್ಕೂಟಕ್ಕೆ ಬ್ಯಾಂಕುಗಳು ಸಹಕಾರ ನೀಡುತ್ತವೆ. ಬ್ಯಾಂಕುಗಳು ಈ ಮೂಲಕ ನಡೆಸುವ ವ್ಯವಹಾರಕ್ಕೆ ‘distributed ledger' ಎಂದು ಹೆಸರಿಟ್ಟಿದ್ದಾರೆ. ಈ ವ್ಯವವಸ್ಥೆ blockchain ಅಂತೂ ಅಲ್ಲ, ಹಾಗೂ ಇದಕ್ಕೂ ಮಿಥ್ಯಾಹಣಕ್ಕೂ ಯಾವುದೇ ಸಂಬಂಧವಿಲ್ಲ.

 

ಪ್ರಶ್ನೆ 4. ಬ್ಲಾಕ್ ಚೈನ್ ಹಾಗೂ ಬಿಟಿ ಕಾಯಿನ್ ಬಗ್ಗೆ ಆರ್ ಬಿ ಐ ನ ನಿಲುವೇನು?

ಪ್ರಶ್ನೆ 4. ಬ್ಲಾಕ್ ಚೈನ್ ಹಾಗೂ ಬಿಟಿ ಕಾಯಿನ್ ಬಗ್ಗೆ ಆರ್ ಬಿ ಐ ನ ನಿಲುವೇನು?

ಬ್ಲಾಕ್ ಚೈನ್ ಬಗ್ಗೆ ಆರ್ ಬಿ ಐ ಸಹಾ ಸಕರಾತ್ಮಕವಾಗಿ ಸ್ಪಂದಿಸಿದ್ದು ಅಚ್ಚರಿಯ ತಂತ್ರಜ್ಞಾನ ಎಂದು ಬಣ್ಣಿಸಿದೆ. ಆದರೂ ಸಧ್ಯಕ್ಕೆ ಕಾದು ನೋಡುವ ತಂತ್ರವನ್ನು ಅನುಸರಿಸಿದ್ದು ಈ ತಂತ್ರಜ್ಞಾನ ಇನ್ನಷ್ಟು ವಿಸ್ತರಿಸುವ ಹಾಗೂ ತಂತ್ರಜ್ಞಾನ ಇನ್ನಷ್ಟು ಸುಧಾರಿಸುವವರೆಗೂ ಕಾಯುವ ನಿರ್ಧಾರ ತಳೆದಿದೆ.

ಆರ್ ಬಿ ಐ ನ ಸಂಶೋಧನಾ ವಿಭಾಗ ಈ ಬಗ್ಗೆ ಕೆಲವೊಂದು ಪ್ರಾರಂಭಿಕ ಹಂತಗಳನ್ನು ಕೈಗೊಂಡಿದ್ದು ಇದರಲ್ಲಿ ಬಿಟ್ ಕಾಯಿನ್ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ಬಗ್ಗೆ ಎರಡು ಪತ್ರಿಕಾ ಪ್ರಕಟಣೆಗಳನ್ನೂ ಹೊರಡಿಸಲಾಗಿದೆ. ಇದು ಕಾನೂನುಬದ್ದ ಹಾಗೂ ಇದರಲ್ಲಿ ತಾಂತ್ರಿಕ ಅಪಾಯಗಳ ಸಾಧ್ಯತೆಯನ್ನೂ ಉಲ್ಲೇಖಿಸಿದೆ. ಅಂದರೆ ಈ ಹಣಕಾಸಿನ ದುರುಪಯೋಗದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದೆ.

ಆದರೂ ಜನತೆ ಈ ಹಣಕಾಸನ್ನು ಜನಸಾಮಾನ್ಯರು ಬಳಸುವ ಬಗ್ಗೆ ಅನುಮಾನವನ್ನೂ ವ್ಯಕ್ತಪಡಿಸಿದೆ. ಈ ವ್ಯವಸ್ಥೆಯನ್ನು ಭಾರತದಲ್ಲಿ ದೊಡ್ಡಮಟ್ಟದಲ್ಲಿ ಅಳವಡಿಸಬೇಕಾದರೆ ಇದಕ್ಕಿರುವ ಪ್ರಾರಂಭಿಕ ಹಂತಹ ಅಡಚಣೆಗಳನ್ನು ತೊಡೆಯುವುದು ಅಗತ್ಯವಾಗಿದ್ದು ದೊಡ್ಡ ಪ್ರಮಾಣದಲ್ಲಿ ಭಾರತದಲ್ಲಿ ಈ ಹಣಕಾಸು ವ್ಯವಹಾರದ ಮಾಧ್ಯಮವಾಗಿ ಪರಿಗಣಿಸಲು ಎರಡು ವರ್ಷಗಳೇ ಬೇಕಾಗಬಹುದು. ಇಲ್ಲಿ ತಂತ್ರಜ್ಞಾನ ಇನ್ನೂ ಅದಕ್ಕಾಗಿ ಸಿದ್ಧವಾಗಿಲ್ಲ.

ಪ್ರಶ್ನೆ 5. ಬಿಟ್ ಕಾಯಿನ್ ಗಳನ್ನು ಭಾರತದಲ್ಲಿ ಕೊಳ್ಳುವುದು ಕಾನೂನಿನಂತೆ ಸಿಂಧುವೇ?

ಪ್ರಶ್ನೆ 5. ಬಿಟ್ ಕಾಯಿನ್ ಗಳನ್ನು ಭಾರತದಲ್ಲಿ ಕೊಳ್ಳುವುದು ಕಾನೂನಿನಂತೆ ಸಿಂಧುವೇ?

ಭಾರತದಲ್ಲಿ ಬಿಟ್ ಕಾಯಿನ್ ಕೊಳ್ಳುವುದು ಮತ್ತು ಮಾರಾಟ ಮಾಡುವುದು ಕಾನೂನಿನ ಉಲ್ಲಂಘನೆಯಾಗುವುದಿಲ್ಲ. ಅಷ್ಟಕ್ಕೂ ಈ ಬಗ್ಗೆ ಭಾರತದಲ್ಲಿ ಇನ್ನೂ ಯಾವುದೇ ಕಾನೂನನ್ನು ರಚಿಸಲಾಗಿಲ್ಲ.

ಆದರೆ ಆರ್ ಬಿ ಐ ಗೆ ಈ ಹಣಕಾಸಿನ ಇರುವಿಕೆಯ ಬಗ್ಗೆ ತಿಳಿದಿದೆ ಹಾಗೂ ನಾವು ಇವರೊಂದಿಗೆ ಸಂವಾದದಲ್ಲಿದ್ದೇವೆ. ನಾವು ಒಂದು ತಿಂಗಳಿಗೆ ಇನ್ನೂರು ಕೋಟಿಗೆ ಹೆಚ್ಚು ಹಣಕಾಸಿನ ವ್ಯವಹಾರ ಮಾಡುತ್ತೇವೆ. ನಮ್ಮದು ಒಂದು ನೋಂದಾಯಿಯ ಸಂಸ್ಥೆಯಾಗಿದ್ದು ನಾವು ಬ್ಯಾಂಕ್ ಖಾತೆಗಳೊಂದಿಗೆ ವ್ಯವಹರಿಸುತ್ತೇವೆ.

ಪ್ರಶ್ನೆ 6. ಇಂದು ಬಿಟ್ ಕಾಯಿನ್ ಬಳಸಿ ಭಾರತೀಯರು ಏನನ್ನು ಕೊಳ್ಳಬಹುದು?  ಸೇವೆಯನ್ನು ಒದಗಿಸುವವರು, ಇ-ಕಾಮರ್ಸ್ ಸಂಸ್ಥೆಗಳು ಹಾಗೂ ಇತರ ವಸ್ತುಗಳನ್ನು ಮಾರಾಟ ಮಾಡುವವರು ಈ ಹಣಕಾಸನ್ನು ಸ್ವೀಕರಿಸುತ್ತಾರೆಯೇ?

ಪ್ರಶ್ನೆ 6. ಇಂದು ಬಿಟ್ ಕಾಯಿನ್ ಬಳಸಿ ಭಾರತೀಯರು ಏನನ್ನು ಕೊಳ್ಳಬಹುದು? ಸೇವೆಯನ್ನು ಒದಗಿಸುವವರು, ಇ-ಕಾಮರ್ಸ್ ಸಂಸ್ಥೆಗಳು ಹಾಗೂ ಇತರ ವಸ್ತುಗಳನ್ನು ಮಾರಾಟ ಮಾಡುವವರು ಈ ಹಣಕಾಸನ್ನು ಸ್ವೀಕರಿಸುತ್ತಾರೆಯೇ?

ಯಾವುದೇ ವಸ್ತುವನ್ನು ಮಾರುವ ಅಥವಾ ವಿದೇಶೀ ಹಣವನ್ನು ವಿನಿಮಯ ಪಡೆಯುವ ಮೂಲಕ ವ್ಯವಹರಿಸುವ ಶೇ 98 ಕ್ಕೂ ಹೆಚ್ಚು ಸಂಸ್ಥೆಗಳು ಈ ಹಣಕಾಸಿನ ಬಳಕೆಯ ಬಗ್ಗೆ ಅನುಮಾನದ ಧೋರಣೆ ತಳೆದಿದ್ದರೆ ಉಳಿದ ಎರಡು ಶೇಖಡಾ ಸರಕು ಮತ್ತು ಸೇವೆ ವಿಭಾಗವಾಗಿದೆ. ಅಲ್ಲದೇ ಶೇರು ಮಾರುಕಟ್ಟೆ ಮತ್ತು ಇತರ ವಸ್ತುಗಳ ಮಾರುಕಟ್ಟೆಯೂ ಇದೆ ಧೋರಣೆ ತಳೆದಿದೆ. ಜನತೆ ಈಗ ಕೇವಲ ಸುದ್ದಿಗಳು ಮತ್ತು ಊಹೆಯ ಮೇಲೇ ತಮ್ಮ ಬಿಟ್ ಕಾಯಿನ್ ವ್ಯವಹಾರವನ್ನು ನಡೆಸುತ್ತಿದ್ದಾರೆ. ಭವಿಷ್ಯದಲ್ಲಿ ತಮಗೆ ಲಾಭ ಬರುತ್ತದೆಯೋ ಇಲ್ಲವೋ ಎಂಬ ಅನುಮಾನ ಇವರಿಗೂ ಇದೆ. ಸಧ್ಯಕ್ಕೆ ಇದು ಹೂಡಿಕೆಗೆ ದ್ರವ್ಯತೆ ನೀಡುವ ಕಾರಣ ಚಿಂತೆ ಬೇಡ. ಅಂತೆಯೇ ಜನತೆ ಈ ನಾಣ್ಯದ ಭವಿಷ್ಯದ ಬಗ್ಗೆ ಅನುಮಾನವನ್ನೂ ವ್ಯಕ್ತಪಡಿಸುತ್ತಿದ್ದಾರೆ.

ಭಾರತದಲ್ಲಿ, ಪ್ರಸ್ತುತ ಕೆಲವೇ ವ್ಯಾಪಾರಿಗಳು ಈ ನಾಣ್ಯವನ್ನು ಸ್ವೀಕರಿಸುತ್ತಿದ್ದಾರೆ. ಪಾಶ್ಚಾತ್ಯ ದೇಶಗಳ ದೊಡ್ಡ ವಹಿವಾಟುದಾರರಾದ ಡೆಲ್, ಎಕ್ಸ್ ಪೀಡಿಯಾ, ವರ್ಡ್ ಪ್ರೆಸ್ ಮೊದಲಾದವು ಬಿಟ್ ಕಾಯಿನ್ ಗಳನ್ನು ಸ್ವೀಕರಿಸುತ್ತವೆ. ಒಂದು ವೇಳೆ ನೀವು ಡೆಲ್ ಲ್ಯಾಪ್ ಟಾಪ್ ಖರೀದಿಸಬಯಸಿದರೆ, ಅಥವಾ ಹೋಟೆಲ್ ಬುಕಿಂಗ್ ಅಥವಾ ವಿಮಾನಯಾನ ಕಾದಿರಿಸಿರುವಿಕೆ ಮೊದಲಾದವುಗಳನ್ನು ಬಿಟ್ ಕಾಯಿನ್ ಮೂಲಕ ಪಾವತಿಸಬಹುದು. ಜಪಾನ್ ನ ಅತಿ ದೊಡ್ಡ ಇ ಕಾಮರ್ಸ್ ಸಂಸ್ಥೆಯಾದ ರಾಕುಟೆನ್ ಸಹಾ ಈಗ ಈ ನಾಣ್ಯವನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಇದೇ ವೇಳೆ ದ.ಆಫ್ರಿಕಾದ ಅತಿದೊಡ್ಡ ಸಂಸ್ಥೆಯೂ ಬಿಟ್ ಕಾಯಿನ್ ಸ್ವೀಕರಿಸಲು ಪ್ರಾರಂಭಿಸಿದೆ.

ಭಾರತದ ಇ ಕಾಮರ್ಸ್ ಸಂಸ್ಥೆಗಳು ಈಗ ಭಾರತದ ಕೆಲವೇ ಬಿಟ್ ಕಾಯಿನ್ ಗ್ರಾಹಕರಿಗಾಗಿ ಈ ನಾಣ್ಯಗಳನ್ನು ಸ್ವೀಕರಿಸುವ ವ್ಯವಸ್ಥೆಯನ್ನು ಅಳವಡಿಸಲು ಸ್ವಭಾವಿಕವಾಗಿಯೇ ಉತ್ಸಾಹ ತೋರಲಾರವು. ಅಷ್ಟು ದೊಡ್ಡ ಮಟ್ಟಿನ ಗ್ರಾಹಕರು ಇನ್ನೂ ಭಾರತದಲ್ಲಿ ಪ್ರಾರಂಭವಾಗಿಲ್ಲ.

2018 - 2019 ರಲ್ಲಿ ಭಾರತದ ಎಷ್ಟು ಜನರು ಈ ಬಗ್ಗೆ ಉತ್ಸುಕರಾಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಒಂದು ವೇಳೆ ನಿಮ್ಮ ಬಳಿ ಬಿಟ್ ಕಾಯಿನ್ ಇದ್ದರೆ Zebpay ಇದಕ್ಕೆ ಪರ್ಯಾಯವಾದ ಪ್ರೀ ಪೇಯ್ಡ್ ವೋಚರ್ ಗಳನ್ನು ನೀಡುತ್ತದೆ. ಇವುಗಳನ್ನು ಉಪಯೋಗಿಸಿ ಹಲವು ವ್ಯಾಪಾರಿಗಳಿಂದ ಸೇವೆ ಅಥವಾ ವಸ್ತುಗಳನ್ನು ನಾವು ಪ್ರತಿ ತಿಂಗಳೂ ಐವತ್ತು ಲಕ್ಷ ರೂಪಾಯಿಯಷ್ಟು ವಹಿವಾಟನ್ನು ನಡೆಸುತ್ತಿದ್ದೇವೆ ಹಾಗೂ ಈ ವ್ಯವಹಾರ ಹೆಚ್ಚಲು ನಾವು ಸಹಕರಿಸುತ್ತಿದ್ದೇವೆ. ಈ ಸಂಖ್ಯೆ ಪ್ರತಿ ಮೂರು ಅಥವಾ ನಾಲ್ಕು ತಿಂಗಳಿಗೆ ದುಪ್ಪಟ್ಟಾಗುತ್ತಾ ಮುಂದುವರೆಯುತ್ತಿದೆ.

ಪ್ರಶ್ನೆ 7. ಬಿಟ್ ಕಾಯಿನ್ ಈಗ ಜನಪ್ರಿಯವಾಗುತ್ತಿರುವ ಇ-ವ್ಯಾಲೆಟ್ ಅನ್ನು ಆವರಿಸಿ ಜನಪ್ರಿಯವಾಗಲು ಎಷ್ಟು ಕಾಲ ಬೇಕಾಗಬಹುದು?

ಪ್ರಶ್ನೆ 7. ಬಿಟ್ ಕಾಯಿನ್ ಈಗ ಜನಪ್ರಿಯವಾಗುತ್ತಿರುವ ಇ-ವ್ಯಾಲೆಟ್ ಅನ್ನು ಆವರಿಸಿ ಜನಪ್ರಿಯವಾಗಲು ಎಷ್ಟು ಕಾಲ ಬೇಕಾಗಬಹುದು?

ಪ್ರಸ್ತುತ ಬಿಟ್ ಕಾಯಿನ್ ವಿಶ್ವದ ಅತಿ ಮೌಲ್ಯಯುತ ಹಣಕಾಸಾಗಿ ಈಗಾಗಲೇ ಜನಪ್ರಿಯವಾಗಿದೆ. ಇಂದು(ಮಾರ್ಚ್ ೨೦೧೭ ರಂತೆ) ಇದರ ಮೌಲ್ಯ $1,250 ಆಗಿದ್ದು ಒಂದು ತಿಂಗಳ ಹಿಂದೆ $1,000 ರಲ್ಲಿ ಸತತವಾಗಿತ್ತು. ಈಗ ಈ ಬೆಲೆ ಗರಿಷ್ಟವಾಗಿದೆ. ಈ ನಾಣ್ಯವನ್ನು ಪ್ರಸ್ತುತಗೊಳಿಸಿದ ಬಳಿಕ ಇದರ ಮೌಲ್ಯ ಸತತವಾಗಿ ಏರುತ್ತಿದೆ. ಚೀನಾ ಮತ್ತು ಅಮೇರಿಕಾಗಳಲ್ಲಿ ಇದರ ವಹಿವಾಟು ಬಿಲಿಯನ್ನುಗಟ್ಟಲೆಯಲ್ಲಿದೆ. ಭಾರತದಲ್ಲಿ ನಾವು ಒಂದು ತಿಂಗಳಿಗೆ ಇನ್ನೂರು ಕೋಟಿ ರೂ. ವಹಿವಾಟು ನಡೆಸುತ್ತಿದ್ದೇವೆ. ಪ್ರತಿತಿಂಗಳೂ ನಾವು ಒಂದು ಲಕ್ಷ ಬಳಕೆದಾರರನ್ನು ಈ ವಹಿವಾಟಿಗೆ ಸೇರಿಸುತ್ತಿದ್ದೇವೆ. ಇದು ಘಾತೀಯವಾಗಿ ಏರಿಕೆ ಪಡೆಯುತ್ತಿದ್ದು ಪ್ರತಿವರ್ಷ ಹತ್ತು ಪಟ್ಟು ಜನರು ಸೇರಿಕೊಳ್ಳುತ್ತಿದ್ದಾರೆ.

ಪ್ರಶ್ನೆ 8. ಬಿಟ್ ಕಾಯಿನ್ ಗಳ ವಹಿವಾಟಿನಲ್ಲಿ ತೆರಿಗೆಯ ಪಾತ್ರವೇನು ಹಾಗೂ ಇದರ ವಹಿವಾಟಿನಲ್ಲಿ ತೆರಿಗೆ ಪಾವತಿಸಬೇಕಾಗಬೇಕಾಗುವ ಕಾರಣ ಇದರಿಂದ ಜನ ಹಿಂಜರಿಯುತ್ತಿದ್ದಾರೆಯೇ?

ಪ್ರಶ್ನೆ 8. ಬಿಟ್ ಕಾಯಿನ್ ಗಳ ವಹಿವಾಟಿನಲ್ಲಿ ತೆರಿಗೆಯ ಪಾತ್ರವೇನು ಹಾಗೂ ಇದರ ವಹಿವಾಟಿನಲ್ಲಿ ತೆರಿಗೆ ಪಾವತಿಸಬೇಕಾಗಬೇಕಾಗುವ ಕಾರಣ ಇದರಿಂದ ಜನ ಹಿಂಜರಿಯುತ್ತಿದ್ದಾರೆಯೇ?

ಇದಕ್ಕೆ ಗ್ರಾಹಕರ ಸ್ವಂತ ನಿಯಂತ್ರಣ ಅಗತ್ಯ. ನಾವು ನಮ್ಮ ವ್ಯವಹಾರದಲ್ಲಿ ನಡೆಸುವ ಎಲ್ಲಾ ವಹಿವಾಟುಗಳ ಬಗ್ಗೆ ನಿಗಾ ವಹಿಸಿದ್ದು ತೆರಿಗೆಯ ಪಾವತಿ ಸರಿಯಾಗಿ ಆಗುತ್ತಿದೆ ಎಂದು ದೃಢೀಕರಿಸಿಕೊಳ್ಳುತ್ತೇವೆ. ಮಾರ್ಚ್ ಕಡೆಯ ವಾರದಲ್ಲಿ ಜೆಬ್ ಪೇ ಖಾತೆಗಳಲ್ಲಿದ್ದ ಮೊತ್ತ ನಿಮ್ಮ ನಿಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿದೆ. ಈ ಮೂಲಕ ನಿಮ್ಮ ಖಾತೆಗಳಲ್ಲಿ ಆಗಿರುವ ಲಾಭ ಮತ್ತು ನಷ್ಟಗಳನ್ನು ಸ್ಪಷ್ಟಪಡಿಸುವಂತೆ ಕೋರುತ್ತೇವೆ. ನಮ್ಮ ಸಂಸ್ಥೆಯ KYC ಅಥವಾ 'ನಿಮ್ಮ ಗ್ರಾಹಕನನ್ನು ಅರಿಯಿರಿ' ಮಾಹಿತಿಯನ್ನು ಅರಿಯದ ಹೊರತು ಬಿಟ್ ಕಾಯಿನ್ ಗಳನ್ನು ಕೊಳ್ಳಲು ಅಥವಾ ಮಾರಲು ಅವಕಾಶ ನೀಡಲಾಗುವುದಿಲ್ಲ. ನಮ್ಮ ಬಳಿ ಗ್ರಾಹಕರ ಪ್ಯಾನ್ ಕಾರ್ಡ್ ವಿವರಗಳಿವೆ. ಎಲ್ಲಾ ಕೊಳ್ಳುವಿಕೆ ಮತ್ತು ಮಾರಾಟಾ ಬ್ಯಾಂಕ್ ಖಾತೆಗಳ ಮೂಲಕವೇ ನಡೆಯುತ್ತದೆ.

ಪ್ರಶ್ನೆ 9. ಮುಂದಿನ ದಿನಗಳಲ್ಲಿ ಮಧ್ಯವರ್ತಿಗಳ ಅಗತ್ಯವೇ ಇಲ್ಲದೇ ನೇರವಾಗಿ ಮಾರಾಟ-ಕೊಳ್ಳುವಿಕೆ ಸಾಧ್ಯವಾಗಲಿದೆಯೇ?

ಪ್ರಶ್ನೆ 9. ಮುಂದಿನ ದಿನಗಳಲ್ಲಿ ಮಧ್ಯವರ್ತಿಗಳ ಅಗತ್ಯವೇ ಇಲ್ಲದೇ ನೇರವಾಗಿ ಮಾರಾಟ-ಕೊಳ್ಳುವಿಕೆ ಸಾಧ್ಯವಾಗಲಿದೆಯೇ?

ಇದು ಈಗಲೇ ಸಾಧ್ಯವಾಗಿದೆ. ನಿಮ್ಮ ಕುಟುಂಬ ಅಥವಾ ಸ್ನೇಹಿತರಿಗೆ ಬಿಟ್ ಕಾಯಿನ್ ಗಳನ್ನು, ಅವರು ಇದನ್ನು ಸ್ವೀಕರಿಸುವ ವ್ಯವಸ್ಥೆ ಹೊಂದಿದ್ದರೆ, ಸುಲಭವಾಗಿ ವರ್ಗಾಯಿಸಬಹುದು. ಅಮೇರಿಕಾದ ವಿಶ್ವವಿದ್ಯಾಲಯದ ಶುಲ್ಕವನ್ನೂ ಪಾವತಿಸಬಹುದು. ಇದಕ್ಕಾಗಿ ಕ್ರೆಡಿಟ್ ಕಾರ್ಡ್ ಅಥವಾ ಪೇಪಾಲ್ ಮೊದಲಾದ ಸಂಸ್ಥೆಗಳ ಅಗತ್ಯವಿಲ್ಲ.

ಆದರೆ ಬಿಟ್ ಕಾಯಿನ್ ಗಳನ್ನು ಮಾರಲು ಅಥವಾ ಕೊಳ್ಳಲು ಮಧ್ಯವರ್ತಿ ಸಂಸ್ಥೆಯ ಸಹಾಯ ಪಡೆಯುವುದು ಉತ್ತಮ. ಇದರಿಂದ ಎರಡೂ ಕಡೆಯಿಂದ ವಿಶ್ವಾಸ ಬೆಳೆಯುತ್ತದೆ. ತಾಂತ್ರಿಕವಾಗಿ, ಜೆಬ್ ಪೇ ನಂತಹ ಮಧ್ಯವರ್ತಿ ಸಂಸ್ಥೆ ಮುಂದೆ ಒಂದು ಸ್ವಯಂಚಾಲಿತ ಖಾತೆಗೂ ಬದಲಾಗಬಹುದು. ಆದರೂ, ವಿಶ್ವಾಸಾರ್ಹ ಮಧ್ಯವರ್ತಿ ಸಂಸ್ಥೆಯ ಮೂಲಕವೇ ವಹಿವಾಟು ನಡೆಸುವ ಮೂಲಕ ಯಾವುದೇ ವ್ಯಾಜ್ಯ ಎದುರಾದರೆ ಇದನ್ನು ನಿರ್ವಹಿಸುವುದು ಸುಲಭವಾಗುತ್ತದೆ.

ಪ್ರಶ್ನೆ 10. ಬಿಟ್ ಕಾಯಿನ್ ವ್ಯವಹಾರದಲ್ಲಿ ಮೋಸಹೋಗುವುದನ್ನು ತಡೆಯಲು ಯಾವ ಮುನ್ನೆಚ್ಚರಿಕೆಗಳನ್ನು ವಹಿಸಬೇಕು?

ಪ್ರಶ್ನೆ 10. ಬಿಟ್ ಕಾಯಿನ್ ವ್ಯವಹಾರದಲ್ಲಿ ಮೋಸಹೋಗುವುದನ್ನು ತಡೆಯಲು ಯಾವ ಮುನ್ನೆಚ್ಚರಿಕೆಗಳನ್ನು ವಹಿಸಬೇಕು?

ಯಾವುದೇ ವ್ಯವಹಾರದ ಪ್ರಾಥಮಿಕ ಜ್ಞಾನವಿಲ್ಲದೇ ಯಾವುದೇ ಹೂಡಿಕೆಯನ್ನು ಮಾಡದಿರುವಂತೆ ಮೊದಲಾಗಿ ಸಲಹೆ ಮಾಡುತ್ತೇವೆ. ಇಂದು ಬಿಟ್ ಕಾಯಿನ್ ಹೆಸರಿನಿಂದ ಮೋಸ ಮಾಡುವವರೂ ಸಕ್ರಿಯರಾಗಿದ್ದು ಮಾಹಿತಿ ಇಲ್ಲದೇ ಹೂಡಿಕೆ ಹೂಡಿದರೆ ಮೋಸ ಹೋಗುವ ಸಾಧ್ಯತೆ ಇದೆ. ಒಂದು ಸರಳ ಸೂತ್ರವೆಂದರೆ ಯಾವುದೇ ಸಂಸ್ಥೆ ಸುಲಭವಾಗಿ ಹೆಚ್ಚಿನ ಲಾಭ ನೀಡುವ ವಾಗ್ದಾನ ನೀಡಿದರೆ ಈ ಬಗ್ಗೆ ಅನುಮಾನದ ದೃಷ್ಟಿ ಇರಬೇಕು.

ಇದೊಂದು ಪ್ರಬಲ ತಂತ್ರಜ್ಞಾನವಾಗಿದ್ದು ಯಾವುದೇ ಇತರ ತಂತ್ರಜ್ಞಾನದಂತೆ ಇಲ್ಲಿಯೂ ಅಪಾಯವಿದೆ. ನಾವು ಈ ಬಗ್ಗೆ ಯಾವುದೇ ಖಾತರಿಯನ್ನು ನೀಡುವುದಿಲ್ಲ.

ಬಿಟ್ ಕಾಯಿನ್ ವಿಶ್ವದಲ್ಲಿ ಖಾತರಿಯಾಗಿ ಲಾಭ ಬಂದೇ ಬರುತ್ತದೆ ಎಂಬ ಯಾವುದೇ ವಾಗ್ದಾನವಿಲ್ಲ. Zebpay ತಾಣದ ಮುಖಪುಟದಲ್ಲಿ ಕೆಲವಾರು ಮೋಸ ಹಾಗೂ ಚೋರತನದ ಬಗ್ಗೆ ಮಾಹಿತಿಗಳನ್ನು ನೀಡಲಾಗಿದ್ದು ಈ ಮಾಹಿತಿಗಳನ್ನು ಅರಿತು ಆ ಪ್ರಕಾರ ನಡೆದುಕೊಳ್ಳುವ ಮೂಲಕ ಮೋಸಕ್ಕೊಳಗಾಗುವುದರಿಂದ ತಪ್ಪಿಸಿಕೊಳ್ಳಬಹುದು. ನಾವು ಸಾಮಾಜಿಕ ತಾಣದಲ್ಲಿಯೂ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+