ಬಿಟ್ ಕಾಯಿನ್ ಏನಿದು? ಇದರ ಬಗ್ಗೆ ಎಚ್ಚರವಿರಲಿ..

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಪ್ರಸ್ತುತ ಬಿಟ್ ಕಾಯಿನ್ ಸುದ್ದಿಗಳು ಎಲ್ಲೆಡೆ ಸಿಕ್ಕಾಪಟ್ಟೆ ಹರಿದಾಡುತ್ತಿವೆ. ಸ್ನೇಹಿತರಾಗಲಿ, ಪರಿಚಿತರಾಗಲಿ ಪರಸ್ಪರ ಬಿಟ್ ಕಾಯಿನ್ ಕುರಿತಾಗಿ ಕುತೂಹಲದಿಂದ ವಿಚಾರ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಹಾಗಿದ್ದರೆ ಬಿಟ್ ಕಾಯಿನ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..

  ಬಿಟ್ ಕಾಯಿನ್ ಏನಿದು? ಇದರ ಬಗ್ಗೆ ಎಚ್ಚರವಿರಲಿ..

  ಬಿಟ್ ಕಾಯಿನ್ ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ. ಇದಕ್ಕೆ ಮುದ್ರಣ ರೂಪ ಇಲ್ಲ. ಬಿಟ್ ಕಾಯಿನ್ ಎಂಬ ಮಾಯಾಂಗನೆ ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿದ್ದು, ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಅಲ್ಲದೇ ಇದಕ್ಕೆ ಯಾವುದೇ ದೇಶ, ಭಾಷೆ, ಬ್ಯಾಂಕು ಇದ್ಯಾವುದು ಇರುವುದಿಲ್ಲ. 

  ಬಿಟ್ ಕಾಯಿನ್ ವಿಶ್ವದ ಯಾವುದೇ ಮೂಲದಿಂದ ಕೆಲವೇ ನಿಮಿಷಗಳಲ್ಲಿ ಕಳಿಸಲು ಅಥವಾ ಪಡೆಯಲು ಬಳಸಬಹುದು. ಉತ್ಪನ್ನ-ಸೇವೆಗಳನ್ನು ಪಡೆಯಲು ಇಲ್ಲವೇ ಷೇರು ಮತ್ತು ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಆದರೆ ಈ ಪ್ರಕ್ರಿಯೆಗಳೇಲ್ಲ ಅಂತರ್ಜಾಲದ ಮೂಲಕ ಮಾತ್ರ ನಡೆಯುತ್ತದೆ. ಎಚ್ಚರಗೊಳ್ಳಿ..! 3ನೇ ಮಹಾಯುದ್ದ ಪ್ರಾರಂಭವಾಗಿದೆ...!?

  ಬಿಟ್ ಕಾಯಿನ್ ಉಪಯೋಗ?

  ಇಲ್ಲಿ ಹಣದ ತ್ವರಿತವಾದ ವರ್ಗಾವಣೆ ಸಾಧ್ಯವಾಗಿದ್ದು, ಸಂಸ್ಕರಣೆ ಶುಲ್ಕ ಇರುವುದಿಲ್ಲ. ಯಾವುದೇ ಅಡೆತಡೆಯಿಲ್ಲದೇ ಜಗತ್ತಿನಾದ್ಯಂತ ಚಲಾವಣೆ ಮಾಡಬಹುದು. ಬ್ಯಾಂಕಿಂಗ್ ಬಳಕೆ ಅಗತ್ಯವಿಲ್ಲ. ವರ್ಡ್‌ಪ್ರೆಸ್, ರೆಡಿಟ್, ನೇಮ್‌ಚೀಪ್ ಮತ್ತು ಫ್ಲಾಟ್ಟರ್ ನಂತಹ ಅಂತರ್ಜಾಲ ತಾಣಗಳು ಬಿಟ್‌ಕಾಯಿನ್‌ಗಳನ್ನು ನೇರವಾಗಿ ಸ್ವೀಕರಿಸುತ್ತವೆ.

  ಬಿಟ್ ಕಾಯಿನ್ ಅಪಾಯಗಳೇನು?

  ಜನಸಾಮಾನ್ಯರು ಬಿಟ್ ಕಾಯಿನ್ ನಿಯಮಗಳನ್ನು ತಿಳಿದುಕೊಳ್ಳುವುದು ತುಂಬಾ ಕಷ್ಟ.
  ಒಮ್ಮೆ ಬಿಟ್ ಕಾಯಿನ್ ಸಂದಾಯವಾದರೆ ಮತ್ತೆ ಮರಳಿ ಪಡೆಯಲು ಸಾಧ್ಯವಿಲ್ಲ.
  ಅಪರಾಧಿಗಳು ಆರ್ಥಿಕ ಅಪರಾಧ, ಮೋಸಗಳನ್ನು ಎಸಗಲು ಸಾಧ್ಯವಿದೆ.
  ಡ್ರಗ್ಸ್/ಮಾದಕ ದ್ರವ್ಯಗಳ ಕಳ್ಳಸಾಗಣೆಗೆ ಬಿಟ್ ಕಾಯಿನ್ ಬಳಸಲ್ಪಡುತ್ತದೆ.
  ಬಿಟ್ ಕಾಯಿನ್ ವರ್ಗಾವಣೆ ಯಾರು ಯಾರಿಗೆ ಮಾಡಿದ್ದಾರೆ ಎಂಬುದು ಗೊತ್ತಾಗುವುದಿಲ್ಲ.
  ಬಿಟ್ ಕಾಯಿನ್ ಬೆಲೆ ಕ್ಷಣ ಕ್ಷಣಕ್ಕೆ ತೀವ್ರ ಏರಿಳಿತಗಳಿಗೆ ಒಳಗಾಗುವುದರಿಂದ ಹೂಡಿಕೆದಾರರಿಗೆ ಭಾರಿ ನಷ್ಟ ಆಗಬಹುದು.

  ಕಾನೂನು ಬದ್ದವೆ?

  ಬಿಟ್ ಕಾಯಿನ್ ಭಾರತದಲ್ಲಿ ಕಾನೂನು ಬದ್ದವಾಗಿ ಚಲಾವಣೆಗೆ ತಂದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಇದರ ಒಳಿತು ಕೆಡುಕುಗಳ ಬಗ್ಗೆ ಗಮನ ಹರಿಸಿದೆ. ಬಿಟ್ ಕಾಯಿನ್ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ನಿಯಂತ್ರಿಸಲ್ಪಡುವುದಿಲ್ಲ. ಹಾಗಿದ್ದಾಗ ನಿಷೇಧ ಮಾಡುವುದಾದರೂ ಹೇಗೆ?

  English summary

  What is Bitcoin? How does the Bitcoin work?

  Bitcoin is a new currency that was created in 2009 by an unknown person using the alias Satoshi Nakamoto. Transactions are made with no middle men – meaning, no banks! There are no transaction fees and no need to give your real name.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more