ಗುಜರಾತ್ ನಲ್ಲಿ ಬಿಜೆಪಿ ಮುನ್ನಡೆ, ಚೇತರಿಕೆ ಕಂಡ ಸೆನ್ಸೆಕ್ಸ್
ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೆ ಮತ್ತೆ ಮಾರುಕಟ್ಪೆ ಚೇತರಿಕೆಯೆತ್ತ ಮುಖಮಾಡಿದೆ. ಪ್ರದಾನಿ ಮೋದಿ ಅವರ ನೂತನ ಘೋಷಣೆ, ಜಿಎಸ್ಟಿ, ನೋಟು ರದ್ದತಿ ಮುಂತಾದ ನಿರ್ಧಾರಗಳು ಬಿಜೆಪಿಗೆ ಮುಳುವಾಗಬಹುದು ಎಂದು ನಿರೀಕ್ಷಣೆಯಿತ್ತು.
News
oi-Siddu
By Siddu
ಗುಜರಾತ್ ಅಸೆಂಬ್ಲಿ ಚುನಾವಣೆಯ ಫಲಿತಾಂಶಕ್ಕೆ ಮಾರುಕಟ್ಟೆಗಳು ತೀವ್ರವಾಗಿ ಪ್ರತಿಕ್ರಿಯಿಸಿವೆ. ಆರಂಭದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದರೂ, ನಂತರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವುದರಿಂದ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದಿದೆ.
ಬಿಜೆಪಿ ಮುನ್ನಡೆಯ ಪರಿಣಾಮ ಮಾರುಕಟ್ಟೆಯ ಮೇಲೆ ಉಂಟಾಗಿದ್ದು, ಬಹು ನಿರೀಕ್ಷಿತವಾಗಿ ಬಿಜೆಪಿ ಗೆಲ್ಲಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರದಾನಿ ಮೋದಿ ಅವರ ನೂತನ ಘೋಷಣೆ, ಜಿಎಸ್ಟಿ, ನೋಟು ರದ್ದತಿ ಮುಂತಾದ ನಿರ್ಧಾರಗಳು ಬಿಜೆಪಿಗೆ ಮುಳುವಾಗಬಹುದು ಎಂದು ನಿರೀಕ್ಷಣೆಯಿತ್ತು.
ಮಾರುಕಟ್ಟೆಯ ಆರಂಭದಲ್ಲಿ ಸೆನ್ಸೆಕ್ಸ್ 650 ಪಾಯಿಂಟ್ ಇಳಿಕೆ ಕಂಡಿತ್ತು. ನಂತರದಲ್ಲಿ ಸುಮಾರು 9.21 ಗಂಟೆಗೆ 850 ಅಂಕಗಳಿಗೆ ಸೆನ್ಸೆಕ್ಸ್ ಇಳಿಕೆ ಕಂಡಿತು.