ಬಿಎಸ್ಎನ್ಎಲ್ ನಿಂದ ರೂ. 499ಕ್ಕೆ ಫಿಚರ್ ಫೋನ್ ಲಾಂಚ್

ಬಿಎಸ್ಎನ್ಎಲ್ ಮತ್ತು ಡಿಟೇಲ್ ಸಂಸ್ಥೆಗಳು ಸಹಭಾಗಿತ್ವದಲ್ಲಿ ಡಿಟೇಲ್ ಡಿ-1 ಎಂಬ ಫಿಚರ್ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.

ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಭಾರತ್ ಸಂಚಾರ್ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ರೂ. 499ಕ್ಕೆ ಹೊಸ ಫಿಚರ್ ಫೋನ್ ಪರಿಚಯಿಸಿದೆ.

ಬಿಎಸ್ಎನ್ಎಲ್ ಮತ್ತು ಡಿಟೇಲ್ ಸಂಸ್ಥೆಗಳು ಸಹಭಾಗಿತ್ವದಲ್ಲಿ ಡಿಟೇಲ್ ಡಿ-1 ಎಂಬ ಫಿಚರ್ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.

ಡಿಟೇಲ್ ಡಿ-1 ಆಫರ್

ಡಿಟೇಲ್ ಡಿ-1 ಆಫರ್

ಡಿಟೇಲ್ ಡಿ-1 ಫಿಚರ್ ಫೋನ್ ಮೊದಲ ರೀಚಾರ್ಜ್ ವ್ಯಾಲಿಡಿಟಿ ಅವಧಿ 365 ದಿನ ಇರಲಿದೆ. ಈ ಪಾಲುದಾರಿಕೆಯಡಿಯಲ್ಲಿ ಬಳಕೆದಾರರಿಗೆ ರೂ. 103 ವರೆಗೆ ಟಾಕ್ ಟೈಮ್ ಸಿಗಲಿದ್ದು, ಬಿಎಸ್ಎನ್ಎಲ್ to ಬಿಎಸ್ಎನ್ಎಲ್ ಕರೆ ದರಗಳು ಪ್ರತಿ ನಿಮಿಷಕ್ಕೆ 0.15 ಪೈಸೆ ಹಾಗು ಬಿಎಸ್ಎನ್ಎಲ್ ನಿಂದ ನೆಟ್ವರ್ಕ್ ಗಳ ನಡುವೆ ನಿಮಿಷಕ್ಕೆ 0.40 ಪೈಸೆ ಇರಲಿದೆ. ಜತೆಗೆ ಹೆಚ್ಚುವರಿಯಾಗಿ, ಬಿಎಸ್ಎನ್ಎಲ್ ವೈಯಕ್ತಿಕ ರಿಂಗ್ ಬ್ಯಾಕ್ ಟೋನ್ ಅನ್ನು 28 ದಿನಗಳಿಗೆ ನೀಡುತ್ತಿದೆ. ಜಿಯೋ ಭರ್ಜರಿ ಆಫರ್: ಹೊಸ ರೀಚಾರ್ಜ್ ಪ್ಲಾನ್ ಗಳ ವಿವರ ಇಲ್ಲಿದೆ ನೋಡಿ..

ಡಿಟೇಲ್ ಡಿ-1 ವೈಶಿಷ್ಟ್ಯ

ಡಿಟೇಲ್ ಡಿ-1 ವೈಶಿಷ್ಟ್ಯ

1.44 ಇಂಚು ಕಲರ್ ಡಿಸ್ ಪ್ಲೇ
650 mAh ಬ್ಯಾಟರಿ
ಟಾರ್ಚ್ ಲೈಟ್
ಫೋನ್ ಬುಕ್
ಎಫ್ಎಂ ರೇಡಿಯೋ
ಸ್ಪೀಕರ್ ಇತ್ಯಾದಿ ಸೌಲಭ್ಯಗಳನ್ನು ಇದು ಒಳಗೊಂಡಿದೆ.

ಈಗಾಗಲೇ ಜಿಯೋ, ಏರ್ಟೆಲ್ ಫೋನ್ ಬಿಡುಗಡೆ

ಈಗಾಗಲೇ ಜಿಯೋ, ಏರ್ಟೆಲ್ ಫೋನ್ ಬಿಡುಗಡೆ

ಈಗಾಗಲೇ ಜಿಯೋ, ಐಡಿಯಾ, ಏರ್ಟೆಲ್ ಸ್ಮಾರ್ಟ್ಫೋನ್ ಗಳನ್ನು ಬಿಡುಗಡೆ ಮಾಡಿವೆ. ಹಿಂದೆ ಬಿಎಸ್ಎನ್ಎಲ್ ಕೂಡ ರೂ. 2000ರ ಬೆಲೆಯಲ್ಲಿ ಮೈಕ್ರೋಮ್ಯಾಕ್ಸ್ ಮತ್ತು ಲಾವಾ ಕಂಪನಿಗಳ ಸಹಭಾಗಿತ್ವದಲ್ಲಿ ಒಪ್ಪಂದ ಮಾಡಿಕೊಂಡು ಹೊಸ ಬಿಎಸ್ಎನ್ಎಲ್ ಫೋನ್ ಬರಲಿದೆ ಎಂದು ಹೇಳಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+