ಹೆಚ್ಚುವರಿ ರೂ. 50 ಸಾವಿರ ಕೋಟಿ ಸಾಲ ಸಂಗ್ರಹಕ್ಕೆ ಕೇಂದ್ರ ನಿರ್ಧಾರ

ಪ್ರಸ್ತುತ ಹಣಕಾಸು ವರ್ಷದಲ್ಲಿ ಧೀರ್ಘಾವಧಿ ಸಾಲಪತ್ರಗಳ ಮೂಲಕ ಹೆಚ್ಚುವರಿ ರೂ. 50 ಸಾವಿರ ಕೋಟಿ ಸಂಗ್ರಹಿಸಲು ಸರ್ಕಾರ ನಿರ್ಧರಿಸಿದೆ.

ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಆದಾಯದ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಇದಕ್ಕಾಗಿ ಪ್ರಸ್ತುತ ಹಣಕಾಸು ವರ್ಷದಲ್ಲಿ ಧೀರ್ಘಾವಧಿ ಸಾಲಪತ್ರಗಳ ಮೂಲಕ ಹೆಚ್ಚುವರಿ ರೂ. 50 ಸಾವಿರ ಕೋಟಿ ಸಂಗ್ರಹಿಸಲು ಸರ್ಕಾರ ನಿರ್ಧರಿಸಿದೆ.

ಹೆಚ್ಚುವರಿ ರೂ. 50 ಸಾವಿರ ಕೋಟಿ ಸಾಲ ಸಂಗ್ರಹಕ್ಕೆ ಕೇಂದ್ರ ನಿರ್ಧಾರ

ಸರ್ಕಾರದ ಈ ನಿರ್ಧಾರ ಹಣಕಾಸು ಕೊರತೆಯನ್ನು ಜಿಡಿಪಿ ಶೇ. 3.2ಕ್ಕೆ ಇಳಿಸುವ ಗುರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
2017-18ನೇ ಹಣಕಾಸು ವರ್ಷಕ್ಕೆ ಹೆಚ್ಚುವರಿ ಸಾಲ ಸಂಗ್ರಹಿಸಲು 'ಸಾಲ ಪರಿಸ್ಥಿತಿ ಬಗೆಗೆ ಆರ್ಬಿಐ ಜತೆಗಿನ ಪರಾಮರ್ಶೆ' ನಂತರ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಪ್ರಸ್ತುತ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಸಾಲಪತ್ರಗಳ ಪ್ರಮಾಣವನ್ನು ರೂ. 86,203 ಕೋಟಿಗಳಿಂದ ರೂ. 25,006 ಕೋಟಿಗಳಿಗೆ ಇಳಿಸಲು ಸರ್ಕಾರ ಮುಂದಾಗಿದ್ದು, ದೀರ್ಘಾವಧಿ ಸಾಲಪತ್ರಗಳ ಅವಧಿ ಐದು ವರ್ಷಗಳಾಗಿರುತ್ತದೆ.

2017-18ರ ಹಣಕಾಸು ಸಾಲಿನಲ್ಲಿ ಒಟ್ಟು ಸಾಲ ರೂ. 5.80 ಲಕ್ಷ ಕೋಟಿ ಮತ್ತು ನಿವ್ವಳ ಸಾಲ ರೂ. 3.28 ಲಕ್ಷ ಕೋಟಿ ಮೊತ್ತವನ್ನು ದೀರ್ಘಾವಧಿ ಸಾಲಪತ್ರಗಳ ಮೂಲಕ ಸಂಗ್ರಹಿಸಲು ಗುರಿ ನಿಗದಿಪಡಿಸಲಾಗಿದೆ.

ಹಣಕಾಸು ಕೊರತೆಯನ್ನು ಜಿಡಿಪಿಯ ಶೇ. 3.2ಕ್ಕೆ ಇಳಿಸುವುದಕ್ಕಾಗಿ ಸರ್ಕಾರ ಗುರಿ ನಿಗದಿಪಡಿಸಿದೆ. ಹೆಚ್ಚುವರಿ ಸಾಲ ಸಂಗ್ರಹ ಹಣಕಾಸು ಲೆಕ್ಕಾಚಾರ ಬುಡಮೇಲು ಮಾಡಲಿದೆ. ಪಿಪಿಎಫ್, ಸುಕನ್ಯಾ ಸಮೃದ್ಧಿ ಖಾತೆ, ಎನ್ಎಸ್ಸಿ, ಕೆವಿಪಿ ಬಡ್ಡಿದರ ಕಡಿತ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+