ಪಿಪಿಎಫ್, ಸುಕನ್ಯಾ ಸಮೃದ್ಧಿ ಖಾತೆ, ಎನ್ಎಸ್ಸಿ, ಕೆವಿಪಿ ಬಡ್ಡಿದರ ಕಡಿತ

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಸರ್ಕಾರ ಕಡಿತ ಮಾಡಿದೆ. ಜನಪ್ರಿಯ ಯೋಜನೆಗಳಾದ ಸಾರ್ವಜನಿಕ ಪಿಂಚಣಿ ಯೋಜನೆ(ಪಿಪಿಎಫ್), ಸುಕನ್ಯಾ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಯೋಜನೆ (ಎನ್ಎಸ್ಸಿ) ಮೇಲಿನ ಬಡ್ಡಿದರವನ್ನು ಕಡಿತಗೊಳಿಸಲಾಗಿದೆ.

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಸರ್ಕಾರ ಕಡಿತ ಮಾಡಿದೆ. ಜನಪ್ರಿಯ ಯೋಜನೆಗಳಾದ ಸಾರ್ವಜನಿಕ ಪಿಂಚಣಿ ಯೋಜನೆ(ಪಿಪಿಎಫ್), ಸುಕನ್ಯಾ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಯೋಜನೆ (ಎನ್ಎಸ್ಸಿ), ಕಿಸಾನ್ ವಿಕಾಸ್ ಪತ್ರಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಲಾಗಿದೆ.

ಇದು ಮುಂಬರಲಿರುವ 2018ರ ಜನೆವರಿ-ಮಾರ್ಚ್ ತ್ರೈಮಾಸಿಕಕ್ಕೆ ಜಾರಿ ಬರಲಿದೆ. ಬಡ್ಡಿದರ ಕಡಿತ ಮಾಡಿರುವ ಪ್ರಮುಖ ಬ್ಯಾಂಕುಗಳು

ಪಿಪಿಎಫ್, ಎನ್ಎಸ್ಸಿ, ಕೆವಿಪಿ ಬಡ್ಡಿದರ

ಪಿಪಿಎಫ್, ಎನ್ಎಸ್ಸಿ, ಕೆವಿಪಿ ಬಡ್ಡಿದರ

ಒಂದು ವರ್ಷದವರೆಗಿನ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ. 6.8 ರಿಂದ 6.6ಕ್ಕೆ ಇಳಿಕೆ ಮಾಡಲಾಗಿದೆ.
ಪಿಪಿಎಫ್, ಎನ್ಎಸ್ಸಿ ಗಳ ಮೇಲಿನ ಬಡ್ಡಿದರ ಶೇ. ಶೇ. 7.6 ಇರಲಿದೆ. ಕೆವಿಪಿ ಶೇ. 7.3 ಬಡ್ಡಿದರ ನೀಡಲಿದೆ.

ಸುಕನ್ಯಾ ಸಮೃದ್ಧಿ ಬಡ್ಡಿದರ

ಸುಕನ್ಯಾ ಸಮೃದ್ಧಿ ಬಡ್ಡಿದರ

ಹೆಣ್ಣುಮಗುವಿಗಾಗಿ ಇರುವ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯ ವಾರ್ಷಿಕ ಬಡ್ಡಿದರವನ್ನು ಶೇ. 8.3 ರಿಂದ 8.1ಕ್ಕೆ ಕಡಿತ ಮಾಡಲಾಗಿದೆ. ಜತೆಗೆ ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿ ದರ ಕೂಡ ಕಡಿತವಾಗುವ ಸಾಧ್ಯತೆ ಇದೆ.  ಸುಕನ್ಯಾ ಸಮೃದ್ಧಿ ಖಾತೆ ತೆರೆಯುವುದು ಹೇಗೆ?

ಟರ್ಮ್, ಆರ್ಡಿ ಠೇವಣಿಗಳು

ಟರ್ಮ್, ಆರ್ಡಿ ಠೇವಣಿಗಳು

1-5 ವರ್ಷಗಳ ಅವಧಿಯ ಠೇವಣಿಗಳು (term deposits) 6.6 ರಿಂದ 7.4 ರಷ್ಟು ಕಡಿಮೆ ಬಡ್ಡಿದರವನ್ನು ಒದಗಿಸಲಿವೆ. ಐದು ವರ್ಷಗಳ ರಿಕರಿಂಗ್ ಠೇವಣಿ (RD) ಮೇಲೆ ಶೇ. 6.9 ಬಡ್ಡಿದರ ನಿಗದಿಪಡಿಸಲಾಗಿದೆ. ಹಿರಿಯ ಉಳಿತಾಯ ಯೋಜನೆಯ ಮೇಲೆ ಶೇ. 8.30ರಷ್ಟು ಉತ್ತಮ ಬಡ್ಡಿದರ ಸಿಗಲಿದೆ.

ತ್ರೈಮಾಸಿಕ ಆಧಾರದಲ್ಲಿ ಬಡ್ಡಿದರ ನಿಗದಿ

ತ್ರೈಮಾಸಿಕ ಆಧಾರದಲ್ಲಿ ಬಡ್ಡಿದರ ನಿಗದಿ

2016ರ ಏಪ್ರಿಲ್ ನಿಂದ ಎಲ್ಲಾ ಸಣ್ಣ ಉಳಿತಾಯ ಯೋಜನೆಗಳನ್ನು ಸರ್ಕಾರದ ಬಾಂಡ್ ಗಳಿಗೆ ಜೋಡಣೆ ಮಾಡಲಾಗಿದ್ದು, ತ್ರೈ ಮಾಸಿಕ ಆಧಾರದಲ್ಲಿ ಬಡ್ಡಿ ದರವನ್ನು ಪರಿಷ್ಕರಣೆ ಮಾಡಲಾಗುವುದು.

ವಿಶ್ಲೇಷಕರ ಅಭಿಪ್ರಾಯ

ವಿಶ್ಲೇಷಕರ ಅಭಿಪ್ರಾಯ

ಆದಾಗ್ಯೂ, ಮುಂದಿನ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳಲ್ಲಿ ಮತ್ತಷ್ಟು ಏರಿಕೆ ಕಂಡು ಬರುವ ನಿರೀಕ್ಷೆಯಿದೆ ಎಂದು ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ. ಆ ಮೂಲಕ ಬಾಂಡ್ ಇಳುವರಿ ಮೇಲ್ಮುಖವಾಗಿ ಸಾಗುತ್ತಿದೆ. ರೂ. 50,000 ಕೋಟಿ ಹೆಚ್ಚುವರಿ ಸಾಲವನ್ನು ಸಂಗ್ರಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ಬಾಂಡ್ ಗಳ ಮೇಲೆ ಹೆಚ್ಚು ಪ್ರತಿಫಲ ನೀಡುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+