ಇನ್ಫೋಸಿಸ್ ನೂತನ ಸಿಇಒ ಸಲೀಲ್ ಫರೇಖ್ ವೇತನ ಎಷ್ಟು?

ಸಲೀಲ್ ಫರೇಖ್ ಅವರಿಗೆ ಮೊದಲ ವರ್ಷದಲ್ಲಿ ರೂ. 17.3 ಕೋಟಿ ವೇತನವನ್ನು ಇನ್ಪೋಸಿಸ್ ಪಾವತಿಸಲಿದೆ. 2021ರ ವೇಳೆಗೆ ಸುಮಾರು ರೂ. 35.25 ಕೋಟಿ ವೇತನ ಪಡೆಯಲಿದ್ದಾರೆ. ಇದು ಮಾಜಿ ಸಿಇಒ ವಿಶಾಲ್ ಸಿಕ್ಕಾ ಪಡೆಯುತ್ತಿದ್ದ ವೇತನಕ್ಕಿಂತ ಕಡಿಮೆಯಿದೆ.

ದೇಶದ ಪ್ರಮುಖ ಸಾಪ್ಟ್‌ವೇರ್ ಸಂಸ್ಥೆ ಇನ್ಫೋಸಿಸ್ ನೂತನ ಸಿಇಒ ಆಗಿ ಸಲೀಲ್ ಫರೇಖ್ ನೇಮಕಗೊಂಡಿದ್ದು, ಮಂಗಳವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ಇನ್ಫೋಸಿಸ್ ನೂತನ ಸಿಇಒ ಸಲೀಲ್ ಫರೇಖ್  ವೇತನ ಎಷ್ಟು?

ಸಲೀಲ್ ಫರೇಖ್ ಅವರಿಗೆ ಮೊದಲ ವರ್ಷದಲ್ಲಿ ರೂ. 17.3 ಕೋಟಿ ವೇತನವನ್ನು ಇನ್ಪೋಸಿಸ್ ಪಾವತಿಸಲಿದೆ. 2021ರ ವೇಳೆಗೆ ಸುಮಾರು ರೂ. 35.25 ಕೋಟಿ ವೇತನ ಪಡೆಯಲಿದ್ದಾರೆ. ಇದು ಮಾಜಿ ಸಿಇಒ ವಿಶಾಲ್ ಸಿಕ್ಕಾ ಪಡೆಯುತ್ತಿದ್ದ ವೇತನಕ್ಕಿಂತ ಕಡಿಮೆಯಿದೆ.

ಸಿಕ್ಕಾ ಅಮೆರಿಕಾದಲ್ಲಿ ನೆಲೆಸಿದ್ದು, ಫರೇಖ್ ಬೆಂಗಳೂರಿನಲ್ಲಿ ನೆಲೆಸಿರುವುದು ಇದರ ವ್ಯತ್ಯಾಸಕ್ಕೆ ಕಾರಣವಾಗಿರಬಹುದು. ಹಿಂದಿನ ಇನ್ಫೋಸಿಸ್ ಸಿಇಒ ಆಗಿದ್ದ ವಿಶಾಲ್ ಸಿಕ್ಕಾ ರೂ. 43 ಕೋಟಿ ವೇತನ ತೆಗೆದುಕೊಂಡಿದ್ದು, ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಸೇರಿದಂತೆ ಹಲವು ನಿರ್ದೇಶಕರ ಅಸಮಾಧಾನಕ್ಕೆ ಕಾರಣವಾಗಿತ್ತು.

ಇಂತಹ ಹಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಶಾಲ್ ಸಿಕ್ಕಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಲೀಲ್‌ ಪರೇಖ್‌ ಅವರು 5 ವರ್ಷಗಳ ಅವಧಿಗೆ ಇನ್ಫೋಸಿಸ್‌ ಸಿಇಒ ಆಗಿ ನೇಮಕಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+