2018ರಲ್ಲಿ ಪ್ಯಾನ್ ಕಾರ್ಡ್ ಇಲ್ಲದೆ ಈ 10 ಕೆಲಸಗಳು ಮಾಡಲು ಸಾಧ್ಯವಿಲ್ಲ

Posted By: Siddu
Subscribe to GoodReturns Kannada

2017ರಲ್ಲಿ ಕೇಂದ್ರ ಸರ್ಕಾರ ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ಜೋಡಿಸುವುದನ್ನು ಕಡ್ಡಾಯ ಮಾಡಿದೆ. ಇದರ ಜತೆಗೆ ಹಲವು ಸರ್ಕಾರಿ ಹಾಗು ಖಾಸಗಿ ವ್ಯವಹಾರಗಳಿಗಾಗಿ ಪ್ಯಾನ್ ಕಾರ್ಡ್ ನಂಬರ್ ಕಡ್ಡಾಯವಾಗಿದೆ.
2018ರಲ್ಲಿ ನಿಮ್ಮ ಬಳಿ ಪ್ಯಾನ್ ಕಾರ್ಡ್ ಇಲ್ಲದಿದ್ದರೆ ಅಥವಾ ಆಧಾರ್ ನೊಂದಿಗೆ ಪ್ಯಾನ್ ಜೋಡಣೆ ಮಾಡದಿದ್ದರೆ ಹಲವು ಯೋಜನೆಗಳ ಪ್ರಯೋಜನ ಪಡೆಯುವುದು ಸಾಧ್ಯವಾಗುವುದಿಲ್ಲ.  ಕೆಲವೆ ನಿಮಿಷಗಳಲ್ಲಿ ಪ್ಯಾನ್ ಕಾರ್ಡ್ ಲಭ್ಯ!

2018ರಲ್ಲಿ ಪ್ಯಾನ್ ಕಾರ್ಡ್ ಇಲ್ಲದೆ ಈ 10 ಕೆಲಸಗಳು ಮಾಡಲು ಸಾಧ್ಯವಿಲ್ಲ

2018ರಲ್ಲಿ ಯಾವ ಯಾವ ವ್ಯವಹಾರ/ಯೋಜನೆಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ ನೋಡೋಣ ಬನ್ನಿ..
ಈ 10 ಕೆಲಸಗಳಿಗೆ ಪ್ಯಾನ್ ಕಾರ್ಡ್ ಅಗತ್ಯವಿದೆ:
1. ಬ್ಯಾಂಕ್ ಖಾತೆಯನ್ನು ತೆರೆಯಲು ಅಥವಾ ಸ್ಥಿರ ಠೇವಣಿ ಇಡಲು
2. ಬ್ಯಾಂಕ್ ನಲ್ಲಿ ಒಂದು ದಿನದಲ್ಲಿ 50 ಸಾವಿರ ಅಥವಾ ಹೆಚ್ಚಿನ ಹಣವನ್ನು ಠೇವಣಿ ಮಾಡಲು
3. ವಿದೇಶಿ ಪ್ರಯಾಣಕ್ಕಾಗಿ ಏರ್ ಟಿಕೆಟ್ ಗಳನ್ನು ಬುಕಿಂಗ್ ಮಾಡಲು
4. ಆಸ್ತಿ ಖರೀದಿ
5. ವಾಹನ/ಕಾರು ಖರೀದಿ
6. ಹೋಟೆಲ್ ಬಿಲ್ ಗಳ ಪಾವತಿ.
7. ಷೇರುಗಳು, ಬಾಂಡುಗಳು, ಮ್ಯೂಚುಯಲ್ ಫಂಡ್ಗಳು ಅಥವಾ ಡಿಬೆಂಚರ್ಗಳನ್ನು ಖರೀದಿ
8. ಕ್ರೆಡಿಟ್, ಡೆಬಿಟ್ ಕಾರ್ಡ್ ಅಥವಾ ಡಿಮ್ಯಾಟ್ ಖಾತೆಗಾಗಿ ಅರ್ಜಿ ಸಲ್ಲಿಸಲು
9. ನೀವು ಯಾವುದಾದರೂ ಮೂಲದಿಂದ ಶುಲ್ಕವನ್ನು ತೆಗೆದುಕೊಂಡಿದ್ದರೆ ಅಥವಾ ಹಣವನ್ನು ಗಳಿಸಿದರೆ, ನೀವು ಪಾನ್ ಅನ್ನು ಒದಗಿಸಬೇಕಾಗುತ್ತದೆ ಅಥವಾ 20% ಟಿಡಿಎಸ್ ಅನ್ನು ಕಡಿತಗೊಳಿಸಲಾಗುತ್ತದೆ.
10. ನೀವು ಪೂರ್ವಪಾವತಿ ಹಣ, ವಾಲೆಟ್ ಅಥವಾ ನೀವು 50 ಸಾವಿರ ಅಥವಾ ಅದಕ್ಕಿಂತ ಹೆಚ್ಚು ವ್ಯವಹಾರ ನಡೆಸಿದರೆ ಪ್ಯಾನ್ ವಿವರಗಳನ್ನು ನೀಡಬೇಕು. (Read More: ಪ್ಯಾನ್ ಕಾರ್ಡ್)

Read more about: pan card aadhar finance news money
English summary

Pan Number is Compulsory For These 10 Transactions

Now Pan number has been compulsory for these 10 transactions.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

ಕರ್ನಾಟಕ ವಿಧಾನಸಭೆ ಚುನಾವಣೆ 2018

Get Latest News alerts from Kannada Goodreturns