ಟೆಲಿಕಾಂ ರಂಗದಲ್ಲಿ ಆಗಾಗ್ಗೆ ಹೊಸ ಆಫರ್ ಗಳ ಸುದ್ದಿ ಬರುತ್ತಲೇ ಇರುತ್ತದೆ. ಕೆಲ ದಿನಗಳ ಹಿಂದೆ ಜಿಯೋ ಮತ್ತು ಏರ್ಟೆಲ್ ಹೊಸ ಪ್ಲಾನ್ ಗಳನ್ನು ಪರಿಚಯಿಸಿದ್ದವು. ಇದೀಗ ವೊಡಾಫೋನ್ ಸರದಿಯಾಗಿದ್ದು, ತನ್ನ ಗ್ರಾಹಕರಿಗೆ ನೂತನ ಕೊಡುಗೆ ಘೋಷಿಸಿದೆ.
ಟೆಲಿಕಾಂ ರಂಗದಲ್ಲಿ ಆಗಾಗ್ಗೆ ಹೊಸ ಆಫರ್ ಗಳ ಸುದ್ದಿ ಬರುತ್ತಲೇ ಇರುತ್ತದೆ. ಕೆಲ ದಿನಗಳ ಹಿಂದೆ ಜಿಯೋ ಮತ್ತು ಏರ್ಟೆಲ್ ಹೊಸ ಪ್ಲಾನ್ ಗಳನ್ನು ಪರಿಚಯಿಸಿದ್ದವು. ಇದೀಗ ವೊಡಾಫೋನ್ ಸರದಿಯಾಗಿದ್ದು, ತನ್ನ ಗ್ರಾಹಕರಿಗೆ ನೂತನ ಕೊಡುಗೆ ಘೋಷಿಸಿದೆ.
ರೂ. 198 ಪ್ಲಾನ್
ವೊಡಾಫೋನ್ ತನ್ನ ಗ್ರಾಹಕರಿಗೆ ರೂ. 198ರ ಯೋಜನೆಯನ್ನು ನವೀಕರಿಸಿದೆ. ಈ ಯೋಜನೆಯಡಿ ಗ್ರಾಹಕರಿಗೆ ಪ್ರತಿ ದಿನ 1.4GB ಡೇಟಾ ಸಿಗಲಿದೆ. ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆ ಹಾಗೂ ರೋಮಿಂಗ್ ಕರೆಗಳ ಇರಲಿದ್ದು, ಪ್ರತಿದಿನ 100 ಎಸ್ಎಂಎಸ್ ಉಚಿತವಾಗಿ ಸಿಗಲಿವೆ. ಆರಾಮ್ ಸೇ ಹಣಗಳಿಕೆಯ ಮಾರ್ಗಗಳು ಇಲ್ಲಿವೆ ನೋಡಿ..
ಏರ್ಟೆಲ್, ಜಿಯೋಗೆ ಟಕ್ಕರ್
ರೂ. 198 ಯೋಜನೆಯ ವ್ಯಾಲಿಡಿಟಿ 24 ದಿನಗಳಿರಲಿದ್ದು, ಏರ್ಟೆಲ್ ನ ರೂ. 199 ಯೋಜನೆ ಹಾಗೂ ಜಿಯೋ ರೂ. 149 ಪ್ಲಾನ್ ಗಳಿಗೆ ಪೈಪೋಟಿ ನೀಡಲಿದೆ.
ಈ ಹಿಂದೆ ರೂ. 198 ರಿಚಾರ್ಜ್ ಯೋಜನೆಯಡಿ ಗ್ರಾಹಕರಿಗೆ ಪ್ರತಿದಿನ 1GB ಡೇಟಾ ಸಿಗುತಿತ್ತು. ಅನಿಯಮಿತ ಕರೆ ಮತ್ತು 100 ಎಸ್ಎಂಎಸ್ ಲಭ್ಯವಿತ್ತು.
ರೂ. 458 ಮತ್ತು ರೂ. 509 ಪ್ಲಾನ್
ವೊಡಾಫೋನ್ ಇತ್ತೀಚೆಗೆ ರೂ. 458 ಮತ್ತು ರೂ. 509 ಹೆಚ್ಚಿನ ಡೇಟಾವನ್ನು ನೀಡಲು ಪ್ರಿಪೇಯ್ಡ್ ಪ್ಯಾಕ್ ಗಳನ್ನು ಘೋಷಿಸಿದೆ. ರೂ. 458 ಪ್ಲಾನ್ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಒಟ್ಟು 84 ಜಿಬಿ ಸಿಗಲಿದೆ. ರೂ. 509 ಯೋಜನೆ 91 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, 91GB ಡೇಟಾ ಮಿತಿಯನ್ನು ಒಳಗೊಂಡಿದೆ.
ಎರಡೂ ಪ್ಯಾಕ್ ಗಳು ಅನಿಯಮಿತ ಧ್ವನಿ ಕರೆಗಳು ಮತ್ತು ಎಸ್ಎಂಎಸ್(ನಿಯಮಗಳು ಅನ್ವಯಿಸುತ್ತವೆ)ಹೊಂದಿವೆ.
ಡೇಟಾ ವಾರ್
ಸದ್ಯಕ್ಕೆ ಎಲ್ಲಾ ಟೆಲಿಕಾಂ ಕಂಪನಿಗಳು ಡೇಟಾ ಸೌಲಭ್ಯ ನೀಡಲು ಮುಂದಾಗಿದ್ದು, ಟೆಲಿಕಾಂ ಕ್ಷೇತ್ರದಲ್ಲಿ ಸದ್ಯ ಡೇಟಾ ವಾರ್ ಶುರುವಾಗಿದೆ. ಅತಿ ಕಡಿಮೆ ಬೆಲೆಗೆ ಹೆಚ್ಚು ಡೇಟಾ ನೀಡಿ ಗ್ರಾಹಕರನ್ನು ಸೆಳೆಯಲು ಎಲ್ಲ ಕಂಪನಿಗಳು ಪ್ರಯತ್ನಿಸುತ್ತಿವೆ.


Click it and Unblock the Notifications