For Quick Alerts
ALLOW NOTIFICATIONS  
For Daily Alerts

ಆರಾಮ್ ಸೇ ಹಣಗಳಿಕೆಯ ಮಾರ್ಗಗಳು ಇಲ್ಲಿವೆ ನೋಡಿ..

ನಾವು ನೀವು, ನಿದ್ದೆ ಮಾಡುತ್ತಿರುವಾಗಲೂ ನಮ್ಮಲ್ಲಿರುವ ಹಣ ಮತ್ತಷ್ಟು ಹಣವನ್ನು ಸಂಪಾದಿಸುತ್ತದಾ? ಒಂದು ವೇಳೆ ಆ ರೀತಿಯಾದರೆ ನಮ್ಮ ಸಂತೋಷಕ್ಕೆ ಪಾರವೇ ಇರುವುದಿಲ್ಲ ಅಲ್ಲವೇ?

By Siddu
|

ನಮ್ಮ ಈ ಹಿಂದಿನ ಹಲವು ಲೇಖನಗಳಲ್ಲಿ ಸಾಲ ಮಾಡುವುದರಿಂದಾಗುವ ತೊಂದರೆಯ ವಿಚಾರದಲ್ಲಿ ಜಾಗರೂಕರಾಗಿರಿ ಎಂದು ಎಚ್ಚರಿಸಿದ್ದೆವು. ಏಕೆಂದರೆ ಇದಕ್ಕೆ ಸಾಲಕ್ಕೆ ಬಡ್ಡಿ ಕಟ್ಟುತ್ತಲೇ ಇರಬೇಕಾಗುತ್ತದೆ. ಅದು ನಿಲ್ಲುವುದೇ ಇಲ್ಲ. ಬಡ್ದಿಗೆ ನಿದ್ದೆಯಾಗಲಿ, ಒಂದು ದಿನ ರಜಾದಿನವಾಗಲಿ ಇರುವುದಿಲ್ಲ.

 

ನಾವು ನೀವು, ನಿದ್ದೆ ಮಾಡುತ್ತಿರುವಾಗಲೂ ನಮ್ಮಲ್ಲಿರುವ ಹಣ ಮತ್ತಷ್ಟು ಹಣವನ್ನು ಸಂಪಾದಿಸುತ್ತದಾ? ಒಂದು ವೇಳೆ ಆ ರೀತಿಯಾದರೆ ನಮ್ಮ ಸಂತೋಷಕ್ಕೆ ಪಾರವೇ ಇರುವುದಿಲ್ಲ ಅಲ್ಲವೇ? ಅಂತರ್ಜಾಲದ ಯುಗದಲ್ಲಿ ಅಂದರೆ ಇಂಟರ್ನೆಟ್ ಯುಗದಲ್ಲಿ ಬದುಕುತ್ತಿರುವ ನಮಗೆ ಒಂದು ಬದಿಯಲ್ಲಿ ಹೆಚ್ಚುವರಿಯ ಹಣವನ್ನು ಗಳಿಸುವುದು ಕಷ್ಟಕರವೇನಲ್ಲ. ಕೋಟ್ಯಾಧಿಪತಿ ಆಗುವುದು ಹೇಗೆ ಗೊತ್ತೆ?

ಇದನ್ನು ಗಮನದಲ್ಲಿಟ್ಟುಕೊಂಡು ಆರಾಮದಾಯಕವಾಗಿ ನಿದ್ರೆ ಮಾಡುವ ವೇಳೆ ಹಣ ಸಂಪಾದಿಸುವ 11 ಮಾರ್ಗಗಳಿವೆ ಇಲ್ಲಿ ನೋಡಿ...

1. ಒಂದು ಬ್ಲಾಗ್ ಪ್ರಾರಂಭ ಮಾಡಿ

1. ಒಂದು ಬ್ಲಾಗ್ ಪ್ರಾರಂಭ ಮಾಡಿ

ಉತ್ತಮವಾಗಿ ಹಣ ಸಂಪಾದಿಸುವುದಕ್ಕೆ ಇರುವ ಅತ್ಯಂತ ಸರಳ ವಿಧಾನಗಳಲ್ಲೊಂದು ಬ್ಲಾಗ್ ಪ್ರಾರಂಭ ಮಾಡುವುದು. ಇದೊಂದು ಆದಾಯಗಳಿಸಲು ಉತ್ತಮ ಜನಪ್ರಿಯ ಮಾರ್ಗವೆನ್ನಬಹುದು. ಬ್ಲಾಗ್ ಆರಂಭಿಸಲು ಕೆಲವೇ ಕೆಲವು ನಿಮಿಷಗಳು ತಗಲುತ್ತವೆ. ಇದಕ್ಕೆ ತಗಲುವು ವೆಚ್ಚ ತೀರಾ ಕಡಿಮೆಯದ್ದಾಗಿರುತ್ತದೆ. ಇದಕ್ಕೆ ಮಾಡಬೇಕಾಗಿರುವುದಿಷ್ಟೆ - ಡೊಮೇನ್ ಹೆಸರನ್ನು ಖರೀದಿಸುವುದು ಮತ್ತು ಹೋಸ್ಟಿಂಗ್ ಗಾಗಿ ಪಾವತಿಸುವುದು.

ನಮ್ಮದೇ ಬ್ಲಾಗ್ ಆರಂಭಿಸಿದ ನಂತರ ಅದರಲ್ಲಿ ಅತ್ಯುತ್ತಮವಾದ ಲೇಖನವನ್ನು ಪ್ರಕಟಿಸಿದರೆ, ಜನ ಕುತೂಹಲಗೊಂಡು ಮತ್ತಷ್ಟು ಬ್ಲಾಗಿಗೆ ಭೇಟಿಕೊಡುತ್ತಾರೆ, ಜೊತೆಗೆ ಉತ್ತಮ ಲೇಖನಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ಒಂದು ವೇಳೆ, ನೀವು ಅಕೌಂಟೆಂಟ್ ಆಗಿದ್ದಲ್ಲಿ, ಸಣ್ಣ ವ್ಯವಹಾರ ಮಾಡುವವರಿಗೆ ಅವರ ತೆರಿಗೆ ವಿಧಿ ವಿಧಾನಗಳಿಗೆ ಸಹಾಯ ಮಾಡುವುದಾಗಿ ಬ್ಲಾಗ್ ನಲ್ಲಿ ಹಾಕಬಹುದು. ನನ್ನದೊಂದು ಬೆಲೆಪಟ್ಟಿ (invoicing) ಬ್ಲಾಗ್ ಇದೆ, ಅದರಲ್ಲಿ ಬೆಲೆಪಟ್ಟಿಯ ಬಗ್ಗೆ ಗ್ರಾಹಕರಿಗೆ ಸಹಾಯ ಮಾಡುತ್ತೇನೆ. ಇದು ಪ್ರತೀ ತಿಂಗಳು ಅತಿಹೆಚ್ಚು ಸಂಖ್ಯೆಯಲ್ಲಿ ಜನರನ್ನು ನನ್ನ ಬ್ಲಾಗ್ ನತ್ತ ಆಕರ್ಷಿಸಲು ಶಕ್ತವಾಗುತ್ತದೆ.

ನೀವು ಬರೆಯುವ ವಿಷಯಗಳು ಜನಪ್ರಿಯವಾಗಿವೆ ಎಂದು ಮೊದಲು ಖಚಿತಪಡಿಸಿಕೊಳ್ಳಿ. ನೀವು ಇನ್ನೂ ಉತ್ತಮವಾದ ಬರವಣಿಗೆ ಶೈಲಿಯಲ್ಲಿ ಬರೆಯುವವರಾಗಿದ್ದಲ್ಲಿ, ನಿಮ್ಮ ಬ್ಲಾಗಿಗೆ ಹಣ ಗಳಿಕೆ ಮಾಡಲು ಸಾಕಷ್ಟು ಜನ ಭೇಟಿಕೊಡುತ್ತಾರೆ ಎನ್ನುವುದು ನಿಮಗೆ ಗೊತ್ತಿರುವುದಿಲ್ಲ.
ಒಮ್ಮೆ ನೀವು ಈ ಕೆಳಗಿನವುಗಳನ್ನು ಗಳಿಸಿಕೊಂಡ ಬಳಿಕ, ನಿಮ್ಮ ಬ್ಲಾಗ್ ನಿಂದ ಹಣವನ್ನು ಸಂಪಾದಿಸುವುದನ್ನು ಪ್ರಾರಂಭಿಸಬಹುದಾಗಿದೆ.
ಕಮಿಷನ್ ಗಳನ್ನು ಅಂಗಸಂಸ್ಥೆಯ ರೂಪದಲ್ಲಿ ಸಂಪಾದಿಸಬಹುದು. ನಿಮ್ಮ ಬ್ಲಾಗ್ ನಲ್ಲಿ ಇತರರ ಉತ್ಪನ್ನಗಳು ಅಥವಾ ಅವರ ಸೇವೆಗಳನ್ನು ಪ್ರಸ್ತುತ ಪಡಿಸಲು ಅವಕಾಶ ನೀಡಬಹುದು. ಈ ಉತ್ಪನ್ನಗಳು ಅಥವಾ ಸೇವೆಗಳು ನಿಮ್ಮ ಬ್ಲಾಗ್ ಗೆ ಬೇಕಾದ ಹಾಗೇ ಇದೆಯೇ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು. ಉದಾಹರಣೆಗೆ, ಲೆಕ್ಕಪರಿಶೋಧಕ ಬ್ಲಾಗ್ ಒಂದು ಅಕೌಂಟಿಂಗ್ ಅಥವಾ ಇನ್ವಾಯ್ಸಿಂಗ್ ಸಾಫ್ಟ್ ವೇರ್ ನಿರ್ದಿಷ್ಟ ಸಂಸ್ಥೆಗೆ ಸೇರಿದ್ದಾಗಿರುತ್ತದೆ. ಒಮ್ಮೆ ನೀವು ಸಂಬಂಧ ಪಟ್ಟ ಸಂಸ್ಥೆಗೆ ಪಾಲುದಾರರನ್ನು ಕಂಡುಕೊಂಡ ನಂತರ ನಿಮಗೆ ಒಂದು ವಿಭಿನ್ನ ರೀತಿಯ ಕೋಡ್ ಅನ್ನು ಕೊಡಲಾಗುತ್ತದೆ. ಇದರಿಂದ ನಿಮ್ಮ ಬ್ಲಾಗಿಗೆ ಭೇಟಿ ಕೊಡುವವರು ಲಿಂಕನ್ನು ಒತ್ತಿದ (ಕ್ಲಿಕ್) ಕೂಡಲೇ ನಿಮಗೆ ಕಮಿಷನ್ ರೂಪದಲ್ಲಿ ಹಣ ನೀಡಲಾಗುತ್ತದೆ. ಆರಂಕಿಯ (ಕನಿಷ್ಟ ಲಕ್ಷ) ವೇತನ ಪಡೆಯಬೇಕೆ? ಇಲ್ಲಿ ನೋಡಿ...

ಜಾಹಿರಾತುಗಳನ್ನು ಮಾರಾಟ ಮಾಡಿ
 

ಜಾಹಿರಾತುಗಳನ್ನು ಮಾರಾಟ ಮಾಡಿ

ನಿಮ್ಮ ಬ್ಲಾಗ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಜನರು ಕ್ಲಿಕ್ಕಿಸುತ್ತಿದ್ದರೆ, ನಿಮ್ಮ ಬ್ಲಾಗ್ ನಲ್ಲಿ ಜಾಹೀರಾತುಗಳನ್ನು ಖರೀದಿಸಲು ಇದರಿಂದ ಅನುಕೂಲವಾಗುತ್ತದೆ. ಮೊದಲಿಗೆ ಪ್ರತೀ ಜಾಹೀರಾತಿಗೆ $ 20 ರಂತೆ ಚಿಕ್ಕದರಲ್ಲಿ ಪ್ರಾರಂಭಿಸಬಹುದು. ಮುಂದೆ ಹೋದಂತೆ ನೀವು ಮೂರು ಅಂಕೆಯಷ್ಟು ಚಾರ್ಜ್ ಮಾಡುವಷ್ಟು ಬೆಳೆಯಬಹುದು. ಇಲ್ಲೂ ಮತ್ತೊಮ್ಮೆ ನಿಮ್ಮ ಸೈಟ್ ನ ಗುಣಮಟ್ಟ ತುಂಬಾ ಮಹತ್ವದ್ದಾಗಿರುತ್ತದೆ ಎನ್ನುವುದನ್ನು ಗಮನಿಸಬೇಕು.

ಪ್ರಾಯೋಜಕರನ್ನು ಹುಡುಕಿ

ಪ್ರಾಯೋಜಕರನ್ನು ಹುಡುಕಿ

ಜಾಹಿರಾತುಗಳನ್ನು ನಿಮ್ಮ ಸೈಟ್ ನಲ್ಲಿ ಮಾರುವುದಕ್ಕಿಂತ ಇದು ಸ್ವಲ್ಪ ವಿಭಿನ್ನವಾದುದು. ಪ್ರಾಯೋಜಕತ್ವಗಳು ಪ್ರಾಯೋಜಿತ ವಿಷಯದ ಒಂದು ತುಣುಕು ಅಥವಾ ನಿಮ್ಮ ಅಡಿಟಿಪ್ಪಣಿನಲ್ಲಿ ನೀಡಲಾದ ಶಾಶ್ವತ ಲೋಗೋ ಆಗಿರಬಹುದು.

ನಿಮ್ಮ ಸ್ವಂತ ಮಾಹಿತಿ ಉತ್ಪನ್ನವನ್ನು ಮಾರಾಟ ಮಾಡಿ
ನೀವು ಕೆಲವು ಕ್ಷೇತ್ರಗಳಲ್ಲಿ ಅನುಭವಿಗಳಾಗಿದ್ದಲ್ಲಿ ಕೆಲವು ಉತ್ಪನ್ನಗಳನ್ನು ಇ ಬುಕ್, ಅಥವಾ ವಿಡಿಯೋಗಳ ರೂಪದಲ್ಲಿ ನಿಮ್ಮ ಉತ್ಪನ್ನಗಳನ್ನು ರಚಿಸಬಹುದು ಮತ್ತು ಇವುಗಳನ್ನು ಈ ಮೂಲಕ ನಿಮ್ಮ ಬ್ಲಾಗ್ ನಲ್ಲಿ ಮಾರಾಟ ಮಾಡಬಹುದು. ಇದನ್ನು ತಯಾರಿಸಲು ಮತ್ತು ನಿಮ್ಮ ಉತ್ಪನ್ನಗಳನ್ನು ಮಾರಾಟಮಾಡಲು ಬಹಳ ಸಮಯ ಬೇಕಾಗಬಹುದು ಮತ್ತು ಕೆಲಸ ಹೆಚ್ಚು ಇರಬಹುದು ಆದರೆ ಒಮ್ಮೆ ನಿಮ್ಮ ಕೆಲಸ ಮುಗಿದ ನಂತರ ನೀವು ಹಿಂತಿರುಗಿ ನೋಡದಂತೆ ಉತ್ತಮ ಆದಾಯವನ್ನು ಗಳಿಸಬಹುದು.

ರಾಯಲ್ಟಿ ಧನವನ್ನು ಸಂಪಾದಿಸಿ

ರಾಯಲ್ಟಿ ಧನವನ್ನು ಸಂಪಾದಿಸಿ

ನೀವು ಪ್ರತಿಭಾವಂತ ಸಂಗೀತಗಾರ, ನಟ ಅಥವಾ ಲೇಖಕರಾಗಿದ್ದರೆ, ಇದರಿಂದ ಕೂಡಾ ನೀವು ನಿಮ್ಮ ಕೆಲಸದಿಂದ ರಾಯಧನವನ್ನು ಗಳಿಸಬಹುದು.ಬೇರೆ ರೀತಿಯಲ್ಲಿ ಹೇಳುವುದಾದರೆ, ನಿಮ್ಮ ಕೆಲಸ ಅಥವಾ ಸೃಜನಶೀಲ ಸ್ವತ್ತುಗಳನ್ನು ಉಪಯೋಗಿಸಲು ಜನರು ನಿಮಗೆ ಪಾವತಿಸುತ್ತಾರೆ ಎನ್ನಬಹುದಾಗಿದೆ.
ನೀವು ತುಂಬಾ ಪ್ರತಿಭಾವಂತರಲ್ಲವಾಗಿದ್ದರೂ, ರಾಯಧನವನ್ನು ಗಳಿಸುವ ಆಸಕ್ತಿ ಹೊಂದಿದ್ದಲ್ಲಿ, ನೀವು ರಾಯಲ್ಟಿ ಎಕ್ಸ್ಚೇಂಜ್ ನಲ್ಲಿ ಒಮ್ಮೆ ಪರಿಶೀಲಿಸಿ. ಇದೊಂದು ಮಾರಾಟ ಸ್ಥಳವಾಗಿದ್ದು ಇಲ್ಲಿ ನೀವು ರಾಯಧನಗಳನ್ನು ಖರೀದಿಸುವ ಮತ್ತು ಮಾರುವ ಅವಕಾಶವಿದೆ.

ಸದಸ್ಯತ್ವದ ಸಮುದಾಯವನ್ನು ರಚಿಸಿ

ಸದಸ್ಯತ್ವದ ಸಮುದಾಯವನ್ನು ರಚಿಸಿ

ನಿಮ್ಮನ್ನು ನೀವು ಅಧಿಕಾರವಿರುವ ವ್ಯಕ್ತಿ ಎಂದು ಪರಿಗಣಿಸಿದ್ದರೆ ನಂತರ ಸದಸ್ಯತ್ವನ್ನು ಹೊಂದಿರುವ ಸಮುದಾಯವನ್ನು ನೀವು ರಚಿಸಬಹುದು. ಅಲ್ಲಿ ನೀವು ಸದಸ್ಯರಲ್ಲದವರಿಗೆ ಹೆಚ್ಚಿನ ಗುಣಮಟ್ಟದ ವಿಷಯ ಮತ್ತು ಮಾಹಿತಿಯನ್ನು ಪಡೆಯುವ ಮೂಲಕ ಮಾಸಿಕ ಶುಲ್ಕವನ್ನು ಪಾವತಿಸಬಹುದು.
ಇವುಗಳಲ್ಲಿ ಒಂದು ಉತ್ತಮ ಉದಾಹರಣೆಯೆಂದರೆ ತಿಮೋಥೀ ಸೈಕ್ಸ್ ಇವರು ತಿಂಗಳಿಗೆ $100,000 ಗಿಂತಲೂ ಅಧಿಕವಾಗಿ ಆದಾಯವನ್ನು ತಮ್ಮ ಸದಸ್ಯತ್ವದ ಸಮುದಾಯದ ಮೂಲಕ ಗಳಿಸುತ್ತಿದ್ದಾರೆ ಇದು ಸಣ್ಣ ಮೊತ್ತದ ಸ್ಟಾಕ್ ಗಳಲ್ಲಿ ಹೆಚ್ಚಿನ ಹಣ ಗಳಿಸುವುದು ಹೇಗೆ ಎಂಬುದರ ಬಗ್ಗೆ ಚರ್ಚಿಸುತ್ತದೆ.

ಆಟೋ ರೆಸ್ಪೊಂಡರ್ ಸ್ಥಾಪಿಸಿ (ಸ್ವತಂತ್ರ ಸ್ಪಂದಕ)

ಆಟೋ ರೆಸ್ಪೊಂಡರ್ ಸ್ಥಾಪಿಸಿ (ಸ್ವತಂತ್ರ ಸ್ಪಂದಕ)

ಇದು ಸೇವೆಗಳು, ಉತ್ಪನ್ನಗಳು ಅಥವಾ ಸದಸ್ಯತ್ವಗಳನ್ನು ಮಾರಾಟ ಮಾಡಲು ಸ್ವತಂತ್ರ ಸ್ಪಂದಕಗಳನ್ನು (ಅಟೋರೆಸ್ಪಾಂಡರ್) ಬಳಸುತ್ತಿರುವುದು ಮತ್ತೊಂದು ಸಾಮಾನ್ಯ ಆನ್ಲೈನ್ ​​ವ್ಯವಹಾರ ಮಾದರಿಯಾಗಿದೆ. ಇಲ್ಲಿ ಜನರು ತಮ್ಮ ಈಮೇಲ್ ವಿಳಾಸವನ್ನು ನಿಮ್ಮ ಬ್ಲಾಗಿಗೆ ನೀಡುತ್ತಾರೆ. ಮತ್ತೆ ಅವರಿಗೆ ನೀವು ಕೊಡುವಂತಹ ಉತ್ಪನ್ನಗಳ ಅಥವಾ ಗುಣಮಟ್ಟದ ಮಾಹಿತಿಯನ್ನು ಲಿಂಕ್ ಹೊಂದಿರುವ ಸ್ವಯಂಚಾಲಿತ ಈಮೇಲ್ ಮೂಲಕ ಅವರು ಡೌನ್ ಲೋಡ್ ಮಾಡಿಕೊಳ್ಳುತ್ತಾರೆ ಮತ್ತು ಈಮೇಲ್ ಸರಣಿಯ ಪ್ರಕಾರ ಅನುಸರಿಸಿಕೊಂಡು ಹೋಗಬಹುದು.
ಇದನ್ನು ಸಾಧ್ಯವಾಗುವಂತೆ ಮಾಡಲು ನಿಮಗೆ ಒಪ್ಟಿನ್ ಮೊನ್ಸ್ಟರ್ ನಂತಹ ಸೇವೆಯ ಅಗತ್ಯವಿರುತ್ತದೆ. ಅಲ್ಲದೆ ಸ್ವಯಂಸ್ಪಂದಕಗಳೊಂದಿಗೆ ಈ ತ್ವರಿತ ಸ್ಪ್ರೌಟ್ ಮಾರ್ಗಸೂಚಿಯನ್ನು ನೀವು ಓದುವುದನ್ನು ಶಿಫಾರಸು ಮಾಡುತ್ತೇವೆ.

ವೆಬ್ಸೈಟ್ ಗಳನ್ನು ಫ್ಲಿಪ್ ಮಾಡಿ

ವೆಬ್ಸೈಟ್ ಗಳನ್ನು ಫ್ಲಿಪ್ ಮಾಡಿ

ನೀವು ವೆಬ್ಸೈಟ್ ನಿರ್ಮಿಸಲು ಸಮಯ ಮತ್ತು ಪ್ರಯತ್ನದಲ್ಲಿ ಇದ್ದಲ್ಲಿ ನಿಮಗೆ ಅನೇಕ ಮಾರ್ಗಗಳು ಕಂಡುಬರುತ್ತವೆ. ನಂತರ ನೀವು ಫ್ಲಿಪ್ಪ ನಂತಹ ಮಾರುಕಟ್ಟೆ ಸ್ಥಳಗಳಲ್ಲಿ ಇವುಗಳ ಪಟ್ಟಿ ಮಾಡುವ ಮೂಲಕ ಆಸಕ್ತರಿಗೆ ಅದನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ. ನಾನು ಇಲ್ಲಿ ಬಹಳಷ್ಟು ಸೈಟುಗಳನ್ನು ಖರೀದಿಸಿ ಮಾರಾಟ ಮಾಡಿದ್ದೇನೆ ಮತ್ತು ಬಹಳಷ್ಟು ಹಣವನ್ನು ಮಾಡಿದ್ದೇನೆ ಎಂದು ಹೇಳಬಹುದು.

ನಿಮ್ಮಲ್ಲಿರುವ ಬಾಹ್ಯ ಉತ್ಪನ್ನಗಳನ್ನು ಮಾರಾಟ ಮಾಡಿ

ನಿಮ್ಮಲ್ಲಿರುವ ಬಾಹ್ಯ ಉತ್ಪನ್ನಗಳನ್ನು ಮಾರಾಟ ಮಾಡಿ

ಸೈಟ್ ಗಳಲ್ಲಿ ಬ್ಲಾಗ್ ಮಾಡುವ ಹಾಗೆಯೇ ಇಲ್ಲಿ ಹಣ ಗಳಿಸುವಂತಹ ಇನ್ನೂ ಅನೇಕ ಮಾರ್ಗಗಳಿವೆ ನಿಮ್ಮಲ್ಲಿರುವ ಉತ್ಪನ್ನಗಳನ್ನೂ ಕೂಡಾ ಮಾರಾಟ ಮಾಡಬಹುದು. ನಿಮ್ಮಲ್ಲಿರುವ ಹಳೆಯ ಬೇಡದೇ ಇರುವ ವಸ್ತುಗಳನ್ನು ಇಬೇ ಮೂಲಕ ಮಾರಾಟ ಮಾಡಬಹುದು ಇದೊಂದು ಉತ್ತಮ ವಿಧಾನ . ಆದರೆ ನಿಮ್ಮಲ್ಲಿ ಮಾರಾಟ ಮಾಡಲು ಏನೂ ಇಲ್ಲದಿದ್ದಲಿ ನೀವು ಶಾಪಿಂಗ್ ಅನ್ನು ಕೂಡಾ ಪ್ರಾರಂಭಿಸಬಹುದು. ನಿಮ್ಮ ಉತ್ಪನ್ನಗಳನ್ನು ಇ ಬೇ ಅಥವಾ ಅಮೆಜಾನ್ ನಂತಹ ಕಂಪನಿಗಳಿಗೆ ಮಾರಾಟ ಮಾಡಬಹುದು ಮತ್ತು ಅವರು ಸಾಗಣೆಯಿಂದ ಹಿಡಿದು ಉಳಿದ ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಾರೆ
ಶಾಪಿಫೈ ಉಪಯೋಗಿಸಿಕೊಂಡು ನಿಮ್ಮ ಸ್ವಂತ ಇ ಕಾಮರ್ಸ್ ಅನ್ನು ಪ್ರಾರಂಭಿಸಬಹುದಾಗಿದೆ ನಿಮ್ಮ ಸಾಮಾಜಿಕ ಮಾಧ್ಯಮ ಖರೀದಿ ಬಟನ್ ಗಳನ್ನ ಜೊತೆಗೆ ಸಂಪೂರ್ಣ ಆನ್ಲೈನ್ ​​ಶಾಪ್ ನಿಂದ ನೀವು ಆನ್ಲೈನ್ನಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಎಲ್ಲ ಮಾಹಿತಿಯನ್ನು ಅಕ್ಷರಶಃ ನಿಮಗೆ ನೀಡುತ್ತದೆ.

ಸ್ಟಾಕ್ ​​ಅಥವಾ ಷೇರುಗಳಲ್ಲಿ ಬಂಡವಾಳ ಹೂಡಿ

ಸ್ಟಾಕ್ ​​ಅಥವಾ ಷೇರುಗಳಲ್ಲಿ ಬಂಡವಾಳ ಹೂಡಿ

ನೀವು ಷೇರು ಗಳಲ್ಲಿ ಬಂಡವಾಳ ಹೂಡಿದರೆ ನೀವು ಷೇರುದಾರರಾಗುವಿರಿ. ಅದು ಅವರ ಲಾಭದ ಪಾಲನ್ನು ನಿಮಗೆ ನೀಡುತ್ತದೆ. ವರ್ಷಾನುಗಟ್ಟಲೆ ಆದಾಯವನ್ನು ಗಳಿಸಲು ಷೇರುಗಳಲ್ಲಿ ಬಂಡವಾಳ ಹೂಡುವಿಕೆಯು ಒಂದು ಜನಪ್ರಿಯ ಮಾರ್ಗವಾಗಿದೆ. ಅದಕ್ಕಾಗಿ ಅಂತರ್ಜಾಲಕ್ಕೆ ಧನ್ಯವಾದಗಳನ್ನು ಹೇಳಬೇಕು ನಿಮ್ಮ ಸ್ವಂತದ ಹೂಡಿಕೆಯನ್ನು ಸ್ಟಾಕ್ ಗಳಲ್ಲಿ ಹೂಡಲು ಮತ್ತು ಸಂಶೋಧನೆ ಮಾಡಲು ಅಂತರ್ಜಾಲದ ಮೂಲಕ ಹಿಂದೆಂದಿಗಿಂತಲೂ ಸುಲಭ ವಿಧಾನವಾಗಿದೆ.
ನೀವು ಸ್ಟಾಕ್ ನಲ್ಲಿ ಹೂಡುವ ಹಣವು ಹಂತ ಹಂತಕ್ಕೂ ವರ್ಷವಿಡೀ ಬದಲಾಗುತ್ತಾ ಇರುತ್ತದೆ ಎಂಬುದನ್ನು ನೀವು ಗಮನದಲ್ಲಿಟ್ಟುಕೊಳ್ಳ ಬೇಕಾದ ಸಂಗತಿ. ಉದಾಹರಣೆಗೆ ನಾನು ನನ್ನ ಮಗಳಿಗೆ ಉಪಯೋಗವಾಗುವಂತಹ ಬಂಡವಾಳದ ಬಗ್ಗೆ ಗಮನ ಹರಿಸಬೇಕು ಎಂದಾದಲ್ಲಿ ಸಿಎ-529 ಯೋಜನೆಯು ಅವಳ ಕಾಲೇಜಿನ ಭೋದನೆಗೆ ಹೋಗುವಲ್ಲಿ ಸಹಕಾರಿಯಾಗಿದೆ.

ಪೀರ್-ಟು-ಪೀರ್ ಸಾಲ

ಪೀರ್-ಟು-ಪೀರ್ ಸಾಲ

ಲೆಂಡಿಂಗ್ ಕ್ಲಬ್, ಪ್ರಾಸ್ಪರ್ ಮತ್ತು ಹಾರ್ಮೋನಿ ಮುಂತಾದ ಕಂಪೆನಿಗಳು ಹೊಸ ಉದ್ಯಮವನ್ನು ಸೃಷ್ಟಿಸಿವೆ. ಅಲ್ಲಿ ಯಾರಾದರೂ ಸಾಲದಾತರಾಗಬಹುದು. ನಂತರ ಇವರು ನಿಮ್ಮನ್ನು ಗ್ರಾಹಕರೊಂದಿಗೆ ಹೋಲಿಕೆ ಮಾಡುತ್ತಾರೆ ಅಥವಾ ಬ್ಯಾಂಕ್ ನಿಂದ ಸಾಲ ಪಡೆಯಲು ತೊಂದರೆ ಇದೆಯೇ ಎಂಬುದನ್ನು ನೋಡುತ್ತಾರೆ. ನೀವು ಸಾಲಗಾರರೊಂದಿಗೆ ನೇರವಾಗಿ ವ್ಯವಹರಿಸುವುದರಿಂದ ನೀವು ನೀಡಿರುವ ಸಾಲಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ನೀವು ಗಳಿಸಬಹುದು.

ಆಸ್ತಿಯನ್ನು ಬಾಡಿಗೆಗೆ ನೀಡಿ

ಆಸ್ತಿಯನ್ನು ಬಾಡಿಗೆಗೆ ನೀಡಿ

ಎರ್ಬಿನಾಬ್ ಗೆ ಧನ್ಯವಾದಗಳು ನೀವು ನಿಮ್ಮ ಮನೆಯನ್ನು ಬಳಕೆಯಲ್ಲಿಲ್ಲದಿದ್ದಾಗ ಅಥವಾ ರಜಾ ದಿನಗಳಲ್ಲಿ ಅಥವಾ ನೀವು ಮನೆಯನ್ನು ಉಪಯೋಗಿಸದೇ ಇದ್ದ ಸಂದರ್ಭದಲ್ಲಿ ಬಾಡಿಗೆ ನೀಡಬಹುದು. ನೀವು ನಿಮ್ಮ ಗ್ಯಾರೇಜನ್ನೂ , ಪಾರ್ಕಿಂಗ್ ಜಾಗವನ್ನೂ ಅಥವಾ ಉಪಯೋಗಿಸದೇ ಇರುವ ಆಫೀಸು ಜಾಗವನ್ನು ಬಾಡಿಗೆಗೆ ನೀಡಬಹುದು. ಒಂದು ಜಾಹೀರಾತನ್ನು ಹೊರತುಪಡಿಸಿ ನಿಜವಾಗಿಯೂ ಏನೂ ಮಾಡದೆಯೇ ಆದಾಯ ಬರುವ ಒಂದು ಉತ್ತಮ ವಿಧಾನವಾಗಿದೆ.

ಒಬ್ಬ ಮಧ್ಯವರ್ತಿಯನ್ನು ನೇಮಿಸಿ

ಒಬ್ಬ ಮಧ್ಯವರ್ತಿಯನ್ನು ನೇಮಿಸಿ

ಇದನ್ನು ಆರ್ಬಿಟ್ರೇಜ್ ಎಂದೂ ಕರೆಯಲಾಗುತ್ತದೆ. ಇಲ್ಲಿ ನಿಮ್ಮ ಕೆಲಸವನ್ನು ಬೇರೆಯವರು ಮಾಡುತ್ತಾರೆ. ಉದಾಹರಣೆಗೆ, ನೀವು ಡಾಗ್ ವಾಕಿಂಗ್ ಸೇವೆ ಅಥವಾ ವೆಬ್ ವಿನ್ಯಾಸ ಸಂಸ್ಥೆಯನ್ನು ಪ್ರಾರಂಭಿಸಬಹುದು ಆದರೆ ನಿಜವಾದ ಈ ಕೆಲಸವನ್ನು ಬೇರೊಬ್ಬರಿಗೆ ಕೋಡಿಂಗ್ ಮಾಡಬಹುದು ಅಥವಾ ಹೊರಗುತ್ತಿಗೆ ನೀಡಬಹುದು. ಇಲ್ಲಿ ನಿಮಗೆ ಈ ಸೇವೆಗಳನ್ನು ಮಾರಾಟಮಾಡುವ ಉಸ್ತುವಾರಿ ಹೊಂದಿರುವ ಮಧ್ಯವರ್ತಿ ಹೊರತುಪಡಿಸಿ ನೀವು ಏನನ್ನೂ ಮಾಡಬೇಕಾಗಿರುವುದಿಲ್ಲ.

English summary

Easy Ways to Make Money While You Sleep

Is your money making money while you sleep? Does it sound too good to be true? Since we still live in the age of the internet, it’s not that difficult to earn extra money on the side
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X