ಎಸ್ಬಿಐ ಗ್ರಾಹಕರಿಗೆ ಕಹಿಸುದ್ದಿ! ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ
ಉಳಿತಾಯ ಖಾತೆಗಳಲ್ಲಿನ ಕನಿಷ್ಟ ಬಾಕಿ (ಮಿನಿಮಮ್ ಬ್ಯಾಲೆನ್ಸ್) ನಿಯಮದಿಂದ ಮುಕ್ತಿ ಸಿಗಬಹುದು ಎಂದುಕೊಂಡಿದ್ದ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ನಿರಾಶೆಯುಂಟಾಗಿದೆ.
News
oi-Siddu
By Siddu
ಉಳಿತಾಯ ಖಾತೆಗಳಲ್ಲಿನ ಕನಿಷ್ಟ ಬಾಕಿ (ಮಿನಿಮಮ್ ಬ್ಯಾಲೆನ್ಸ್) ನಿಯಮದಿಂದ ಮುಕ್ತಿ ಸಿಗಬಹುದು ಎಂದುಕೊಂಡಿದ್ದ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ನಿರಾಶೆಯುಂಟಾಗಿದೆ.
ಎಸ್ಬಿಐ ಗ್ರಾಹಕರು ತಮ್ಮ ಖಾತೆಗಳಲ್ಲಿ ಪ್ರತಿತಿಂಗಳು ಅಗತ್ಯ ಮಿನಿಮಮ್ ಬ್ಯಾಲೆನ್ ಹೊಂದಿರಬೇಕಾಗುತ್ತದೆ. ಇಲ್ಲದಿದ್ದರೆ ದಂಡ ತುಂಬುವ ನಿಯಮ ಮುಂದುವರೆಯಲಿದೆ.
ಗ್ರಾಮೀಣ, ಮೆಟ್ರೋ, ಉಪನಗರ ಮತ್ತು ನಗರ ಭಾಗಗಳಾಗಿ ವಿಂಗಡನೆ ಮಾಡಿರುವ ಬೇರೆ ಬೇರೆ ಶಾಖೆಗಳಲ್ಲಿ ಶುಲ್ಕದ ಪ್ರಮಾಣಾ ಬೇರೆ ಬೇರೆಯಿರಲಿದೆ. ಕನಿಷ್ಠ ಬಾಕಿ ವಿಚಾರದಲ್ಲಿ ಯಾವ ಗ್ರಾಹಕರಿಗೆ ಎಷ್ಟು ದಂಡ ಬೀಳಲಿದೆ ಎಂಬುದು ಶೇಕಡಾವಾರು ಬ್ಯಾಲೆನ್ಸ್ ಅನ್ನು ಅವಲಂಬಿಸಿದೆ.
ನಗರ ಮತ್ತು ಮೆಟ್ರೋ ಶಾಖೆಗಳಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ತಿಂಗಳಿಗೆ ಕನಿಷ್ಠ ಬಾಕಿ 3 ಸಾವಿರ ಹೊಂದಿರಬೇಕು. ಉಪನಗರಗಳಲ್ಲಿ ರೂ. 2000 ಹಾಗು ಗ್ರಾಮೀಣ ಭಾಗದ ಶಾಖೆಗಳಲ್ಲಿ ರೂ. 1000 ಕನಿಷ್ಟ್ ಬಾಕಿ ಇರಬೇಕಿದೆ.