ಜಿಯೋ ಮೂಲಕ ಹೊಸ ಆಫರ್ ಗಳನ್ನು ನೀಡುವುದರಲ್ಲಿ ಮುಖೇಶ್ ಅಂಬಾನಿ ಎತ್ತಿದ ಕೈ! ಅನಿಯಮಿತ ಕರೆ ಮತ್ತು ಡೇಟಾ ಕೊಡುಗೆ ನೀಡುತ್ತಿದ್ದ ಜಿಯೋ ಇದೀಗ ಕ್ಯಾಶ್ ಬ್ಯಾಕ್ ಆಫರ್ ಘೋಷಣೆ ಮಾಡಿದೆ.
ಜಿಯೋ ಮೂಲಕ ಹೊಸ ಆಫರ್ ಗಳನ್ನು ನೀಡುವುದರಲ್ಲಿ ಮುಖೇಶ್ ಅಂಬಾನಿ ಎತ್ತಿದ ಕೈ! ಅನಿಯಮಿತ ಕರೆ ಮತ್ತು ಡೇಟಾ ಕೊಡುಗೆ ನೀಡುತ್ತಿದ್ದ ಜಿಯೋ ಇದೀಗ ಕ್ಯಾಶ್ ಬ್ಯಾಕ್ ಆಫರ್ ಘೋಷಣೆ ಮಾಡಿದೆ. ಇಲ್ಲಿ ಶೇಕಡಾ 200 ರಷ್ಟು ಕ್ಯಾಶ್ ಬ್ಯಾಕ್ ಆಫರ್ ನ್ನು ನಿಮ್ಮದಾಗಿಸಬಹುದು.
ಅದರ ವಿವರ ಇಲ್ಲಿದೆ ನೋಡಿ..
ಫೆ. 15ರವರೆಗೆ ಆಫರ್
ಕ್ಯಾಶ್ ಬ್ಯಾಕ್ ಆಫರ್ ಫೆಬ್ರವರಿ 15ರವರೆಗೆ ವ್ಯಾಲಿಡ್ ಆಗಿರಲಿವೆ. ರೂ. 398 ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ರೀಚಾರ್ಜ್ ಗಳ ಮೇಲೆ ಶೇಕಡಾ 200 ರವರೆಗೆ ಕ್ಯಾಶ್ ಬಾಕ್ ಆಫರ್ ಪಡೆಯಬಹುದು. ಜಿಯೋ vs ಏರ್ಟೆಲ್ ಭರ್ಜರಿ ಆಫರ್! ಯಾವ ರೀಚಾರ್ಜ್ ಪ್ಲಾನ್ ಬೆಸ್ಟ್? ಇಲ್ಲಿದೆ ಸಂಪೂರ್ಣ ಮಾಹಿತಿ..
8 ವೋಚರ್ ಲಭ್ಯ
ಜಿಯೋ ಡಿಜಿಟಲ್ ವೆಬ್ಸೈಟ್ ಪ್ರಕಾರ, ಮೊದಲ 100 ಪ್ರತಿಶತ ಕ್ಯಾಶ್ ಬ್ಯಾಕ್ ಕೊಡುಗೆ ರೂ. 50 ಮೌಲ್ಯದ ವೋಚರ್ ರೂಪದಲ್ಲಿದೆ. ಅಂದರೆ ನೀವು ರೂ. 398 ಯೋಜನೆಯನ್ನು ರೀಚಾರ್ಜ್ ಮಾಡಿದಲ್ಲಿ ಮೈಜಿಯೊ ಅಪ್ಲಿಕೇಶನ್ ನಲ್ಲಿ 8 ವೋಚರ್ ಗಳನ್ನು ಸ್ವೀಕರಿಸುತ್ತೀರಿ.
ವಾಲೆಟ್ ಮೂಲಕ ಶೇ. 100
ಕೆಲ ಆಯ್ಕೆ ಮಾಡಲಾದ ವಾಲೆಟ್ ಗಳ ಮೂಲಕ ರೀಚಾರ್ಜ್ ಮಾಡಿದರೆ ಉಳಿದ ಶೇ. 100 ಕ್ಯಾಶ್ ಬ್ಯಾಕ್ ಸಿಗಲಿದೆ.ಇದು ನೀವು ಆಯ್ಕೆ ಮಾಡುವ ವಾಲೆಟ್ ಗಳಿಗೆ ಅನುಗುಣವಾಗಿ ಕ್ಯಾಶ್ ಬ್ಯಾಕ್ ಪ್ರಮಾಣವು ಬದಲಾಗುತ್ತದೆ.
ವಾಲೆಟ್ ವಿವರ
ಮೊಬಿಕ್ವಿಕ್
ಪೇಟಿಎಂ
ಫೋನ್ಪೇ
ಅಮೆಜಾನ್ಪೇ
ಫ್ರೀಚಾರ್ಜ್
ಆಕ್ಸಿಸ್ ಪೇ ಇವು ಪ್ರಮುಖ ವಾಲೆಟ್ ಕಂಪನಿಗಳಾಗಿವೆ.
ಯಾವ ವಾಲೆಟ್ ಆಫರ್ ಎಷ್ಟು?
ನೀವು ಮೊಬಿಕ್ವಿಕ್ ವಾಲೆಟ್ ಮೂಲಕ JIOFULL ಕೋಡ್ ಬಳಸಿದರೆ ರೂ. 399 ಕ್ಯಾಶ್ ಬ್ಯಾಕ್ ನೀಡುತ್ತದೆ. ಅಮೆಜಾನ್ ಪೇ 50 ರೂಪಾಯಿಗಳನ್ನು ನೀಡುತ್ತದೆ. ಆಕ್ಸಿಸ್ ಪೇ ರೂ. 100 ನೀಡುತ್ತದೆ. ಫೋನ್ ಪೇ 75 ರೂಪಾಯಿ ನೀಡುತ್ತಿದೆ. ಪೇಟಿಎಂ NEWJIO ಕೋಡ್ ಬಳಸಿದರೆ ರೂ. 50 ದೊರೆಯುತ್ತದೆ. ಫ್ರೀಚಾರ್ಜ್ ನಲ್ಲಿ 50JIO ಕೋಡ್ ನೊಂದಿಗೆ 50 ರೂ. ಪಡೆಯುವಿರಿ.
ಆಫರ್ ಹೇಗೆ ಪಡೆಯುವಿರಿ
MyJio ಅಪ್ಲಿಕೇಶನ್, Jio.com, ಜಿಯೋ ಸ್ಟೋರ್ಸ್, ರಿಲಯನ್ಸ್ ಡಿಜಿಟಲ್, ಪಾಲುದಾರ ಅಂಗಡಿಗಳು ಮತ್ತು ಆಯ್ದ ವಾಲೆಟ್ ಮೂಲಕ ರೀಚಾರ್ಜ್ ಮಾಡಿದಾಗ ಈ ಕೊಡುಗೆಗಳು ಮಾನ್ಯವಾಗಿರುತ್ತವೆ.
ಹೋಟೆಲ್ ಬುಕಿಂಗ್ ವೋಚರ್!
ಇದಲ್ಲದೆ, ಮೊಬಿಕ್ವಿಕ್ ವಾಲೆಟ್ ಮೂಲಕ ರೀಚಾರ್ಜ್ ಮಾಡುವ ಗ್ರಾಹಕರು ಹೋಟೆಲ್ ಬುಕಿಂಗ್ ಗಾಗಿ ರೂ. 2,500 ಮೌಲ್ಯದ ವೋಚರ್ ಸ್ವೀಕರಿಸುತ್ತಾರೆ.
ಒಟ್ಟಿನಲ್ಲಿ ರಿಲಯನ್ಸ್ ಜಿಯೋ ಕ್ಯಾಶ್ ಬ್ಯಾಕ್ ಶೇ. 100 ಕೊಡುಗೆಗಳನ್ನು ರೂ. 398 ಮತ್ತು ಅದಕ್ಕಿಂತ ಹೆಚ್ಚಿನ ರೀಚಾರ್ಜ್ ಯೋಜನೆಗಳ ಮೇಲೆ ನೀಡಲಿದೆ.


Click it and Unblock the Notifications