ತಂತ್ರಜ್ಞಾನ ದಿಗ್ಗಜ ಮೈಕ್ರೋಸಾಫ್ಟ್ ನ ಸಿಇಒ ಸತ್ಯ ನಾದೆಲ್ಲಾ ಈಗಾಗಲೇ 50 ವಸಂತಗಳನ್ನು ಪೂರೈಸಿದ್ದಾರೆ. ಆಗಸ್ಟ್ 19, 1967ರಲ್ಲಿ ಜನಿಸಿದ ನಾದೆಲ್ಲಾ ಸಾಫ್ಟ್ವೇರ್ ದಿಗ್ಗಜ ಮೈಕ್ರೋಸಾಫ್ಟ್ ನ ಮೊದಲ ಭಾರತೀಯ ಮೂಲದ ಸಿಇಒ.
ತಂತ್ರಜ್ಞಾನ ದಿಗ್ಗಜ ಮೈಕ್ರೋಸಾಫ್ಟ್ ನ ಸಿಇಒ ಸತ್ಯ ನಾದೆಲ್ಲಾ ಈಗಾಗಲೇ 50 ವಸಂತಗಳನ್ನು ಪೂರೈಸಿದ್ದಾರೆ. ಆಗಸ್ಟ್ 19, 1967ರಲ್ಲಿ ಜನಿಸಿದ ನಾದೆಲ್ಲಾ ಸಾಫ್ಟ್ವೇರ್ ದಿಗ್ಗಜ ಮೈಕ್ರೋಸಾಫ್ಟ್ ನ ಮೊದಲ ಭಾರತೀಯ ಮೂಲದ ಸಿಇಒ. ಸ್ಟೀವ್ ಬಾಲ್ಮರ್ ನ ನಂತರ ಸತ್ಯ ನಾದೆಲ್ಲಾ 2014 ಫೆಬ್ರವರಿಯಲ್ಲಿ ಈ ಉನ್ನತ ಸ್ಥಾನಕ್ಕೇರಿದರು. ಅಂಬಾನಿ ಧಮಾಕಾ! ರಿಲಯನ್ಸ್ ಬಿಗ್ ಟಿವಿ ಮೂಲಕ 500 ಚಾನೆಲ್ 5 ವರ್ಷ ಸಂಪೂರ್ಣ ಉಚಿತ!!
1. ಮಣಿಪಾಲ್ ಯುನಿವರ್ಸಿಟಿಯಲ್ಲಿ ಶಿಕ್ಷಣ
ಸತ್ಯ ನಾದೆಲ್ಲಾರವರು ಹೈದರಾಬಾದ್ ಪಬ್ಲಿಕ್ ಸ್ಕೂಲ್ ನಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಂಜಿನಿಯರಿಂಗ್ ಅಧ್ಯಯನಕ್ಕಾಗಿ ಮಣಿಪಾಲ್ ಯುನಿವರ್ಸಿಟಿಗೆ ತೆರಳಿದರು. 1988ರಲ್ಲಿ ಪದವೀಧರರಾದ ನಂತರ, ಮಿಲ್ವಾಕಿಯ ಯುನಿವರ್ಸಿಟಿ ಆಫ್ ವಿಸ್ಕನ್ಸಿನ್ ಅಲ್ಲಿ ಕಂಪ್ಯೂಟರ್ ಸೈನ್ಸ್ ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕಕ್ಕೆ ತೆರಳಿದರು. ಚಿಕಾಗೋ ಯುನಿವರ್ಸಿಟಿಯ 'ಬೂತ್ ಸ್ಕೂಲ್ ಅಫ್ ಬ್ಯುಸಿನೆಸ್' ಇಂದ ಎಂಬಿಎ ಪದವಿಯನ್ನು ಸಹ ಪಡೆದಿದ್ದಾರೆ.
2. 1992ರಲ್ಲಿ ಮೈಕ್ರೋಸಾಫ್ಟ್ ಗೆ ಸೇರ್ಪಡೆ
ನಾದೆಲ್ಲಾರವರು 1992ರಲ್ಲಿ ಮೈಕ್ರೋಸಾಫ್ಟ್ ಸೇರುವ ಮುನ್ನ 'ಸನ್ ಮೈಕ್ರೋಸಿಸ್ಟಮ್ಸ್' (ಈಗ ಒರಾಕಲ್ ಕಾರ್ಪೋರೇಷನ್ ಒಡೆತನದಲ್ಲಿದೆ) ಕಂಪೆನಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಕಂಪೆನಿಯೊಂದಿಗಿನ ಅವರ ಧೀರ್ಘಾವಧಿಯಲ್ಲಿ, ಕಂಪೆನಿಯ ಬಿಂಗ್ ವಿಭಾಗದಲ್ಲಿ ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡರು. ಬಿಂಗ್ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದಿದ್ದರೂ, ನಾದೆಲ್ಲಾ ಅದನ್ನು ಅಭಿವೃದ್ಧಿಪಡಿಸಲು ನೆರವಾದರು. ಮೈಕ್ರೋಸಾಫ್ಟ್ ನ ಜನಪ್ರಿಯ ಟೆಕ್ನೋಲಜಿಗಳಾದ ಡೇಟಾಬೇಸ್, ವಿಂಡೋ ಸರ್ವರ್ ಮತ್ತು ಡೆವಲಪರ್ ಟೂಲ್ಸ್ ಗಳನ್ನು ಅಜ಼ೂರ್ ರೂಪದಲ್ಲಿ ಕ್ಲೌಡ್ ಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೈಕ್ರೋಸಾಫ್ಟ್ ನ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಉತ್ಪನ್ನಗಳಲ್ಲಿ ಒಂದಾದ ಆಫೀಸ್ ೩೬೫ ಎಂದು ಕರೆಯಲಾಗುವ ಮೈಕ್ರೋಸಾಫ್ಟ್ ಆಫೀಸ್ ನ ಎಂಟರ್ಪ್ರೈಸ್ ಕೇಂದ್ರಿತ ಕ್ಲೌಡ್ ಆವೃತ್ತಿಯನ್ನು ಪ್ರಕಟಿಸುವಲ್ಲಿ ನೆರವಾದರು.
3. ಬಾಲ್ಯದ ಗೆಳತಿಯೊಂದಿಗೆ ಮದುವೆ
ಸತ್ಯ ನಾದೆಲ್ಲಾರವರು ತಮ್ಮ ಶಾಲಾ ಸಹಪಾಠಿ ಅನುಪಮಾರನ್ನು, ಅವರು ಮೈಕ್ರೋಸಾಫ್ಟ್ ಸೇರಿದ ವರ್ಷದಲ್ಲೇ (೧೯೯೨) ಮದುವೆಯಾದರು. ವಾಷಿಂಗ್ಟನ್ ನ ಬೆಲ್ಲಿವ್ಯೂನಲ್ಲಿ ನೆಲೆಸಿರುವ ಸತ್ಯ ನಾದೆಲ್ಲಾರವರಿಗೆ ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
4. ಕ್ರಿಕೆಟ್ ಅಭಿಮಾನಿ ನಾದೆಲ್ಲಾ
ಬಹುತೇಕ ಭಾರತೀಯರಂತೆ ನಾದೆಲ್ಲಾ ಕೂಡ ಕ್ರಿಕೆಟ್ ಅಭಿಮಾನಿ. ಅವರು ತಮ್ಮ ಶಾಲೆಯ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು. ಹೈದರಾಬಾದ್ ನ ಡೆಕ್ಕನ್ ಕ್ರೋನಿಕಲ್ ಗೆ ನೀಡಿದ ಸಂದರ್ಶನದಲ್ಲಿ ಅವರು ಕ್ರಿಕೆಟ್ ಆಟ ತಮಗೆ ಟೀಮ್ ವರ್ಕ್ ಮತ್ತು ನಾಯಕತ್ವ ಗುಣಗಳನ್ನು ಕಲಿಸಿಕೊಟ್ಟಿದೆ ಎಂದು ಹೇಳಿದ್ದಾರೆ. ಟೆಸ್ಟ್ ಕ್ರಿಕೆಟ್ ಅನ್ನು ಹೆಚ್ಚು ಇಷ್ಟಪಡುವ ನಾದೆಲ್ಲಾ ಅದನ್ನು ಹಲವಾರು ಉಪ ಕಥಾವಸ್ತುಗಳುಳ್ಳ ರಷ್ಯನ್ ಕಾದಂಬರಿಗೆ ಹೋಲಿಸುತ್ತಾರೆ.
5. ಕವಿತಾ ಪ್ರೇಮಿ ನಾದೆಲ್ಲಾ
ಸತ್ಯ ನಾದೆಲ್ಲಾರವರಿಗೆ ಕವನಗಳೆಂದರೆ ಅಚ್ಚುಮೆಚ್ಚು. ಮೈಕ್ರೋಸಾಫ್ಟ್ ನ ಅಧಿಕೃತ ವೆಬ್ಸೈಟ್ ನಲ್ಲಿರುವ ಅವರ ಕಿರುಪರಿಚಯದಲ್ಲಿ ಕವನ ಓದುವುದು ಅವರ ಹವ್ಯಾಸಗಳಲ್ಲೊಂದು ಎಂದು ಪಟ್ಟಿ ಮಾಡಲಾಗಿದೆ. ಭಾರತ ಮತ್ತು ಅಮೆರಿಕನ್ ಕಾವ್ಯಗಳ ಮೇಲೆ ನಾದೆಲ್ಲಾಗಿರುವ ಒಲವನ್ನು ವಿವರಿಸಲು ಅವರದೇ ಹೇಳಿಕೆಯನ್ನು ಇಲ್ಲಿ ಉಲ್ಲೇಖಿಸುತ್ತೇವೆ,"ಇದು ಕೋಡ್ ಇದ್ದಂತೆ. ನೀವು ಅನೇಕ ವಾಕ್ಯ ಮತ್ತು ಗದ್ಯದ ಪುಟಗಳಲ್ಲಿ ವಿವರಿಸಬಹುದಾದಂತಹುದನ್ನು ತೆಗೆದುಕೊಂಡು ವರ್ಣಿಸಲು ಪ್ರಯತ್ನಿಸುತ್ತೀರಿ. ನೀವದನ್ನು ಕವಿತೆಯ ಸಾಲುಗಳಾಗಿ ಪರಿವರ್ತಿಸಬಹುದು. ಆದರೂ ನೀವದರ ಸಾರಾಂಶವನ್ನು ಪಡೆಯುತ್ತೀರಿ. ಆದ್ದರಿಂದ ಕವನ ಕೋಡಿಂಗ್ ನಂತೆ ಸಂಕುಚಿಸುವ ಕ್ರಿಯೆ.
6. ಬಿಲ್ ಗೇಟ್ಸ್ ನಾದೆಲ್ಲಾರ ಆಪ್ತ ಸಲಹೆಗಾರರಾಗಿ
ಸಿಇಒ ಆಗಿ ನೇಮಕಗೊಂಡ ನಂತರ, ಸತ್ಯ ನಾದೆಲ್ಲಾರವರಿಗೆ ಮೈಕ್ರೋಸಾಫ್ಟ್ ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ರವರು ತಾಂತ್ರಿಕ ವಿಭಾಗದಲ್ಲಿ ಆಪ್ತ ಸಲಹೆಗಾರರಾಗಿದ್ದರು. ಸತ್ಯ ನಾದೆಲ್ಲಾ ಅವರನ್ನು ಸಿಇಒ ಆಗಿ ನೇಮಿಸುವುದರ ಹೊರತಾಗಿ, ಮೈಕ್ರೋಸಾಫ್ಟ್ ಮಾಡಿದ ಇತರ ಮಹತ್ವದ ಪ್ರಕಟಣೆಯೆಂದರೆ, ಮೈಕ್ರೋಸಾಫ್ಟ್ ಅಧ್ಯಕ್ಷರಾಗಿ ಬಿಲ್ ಗೇಟ್ಸ್ ರಾಜೀನಾಮೆಯ ಕುರಿತದ್ದು.
7. ಸಿಯಾಟಲ್ ಸೀಹಾಕ್ಸ್ ಅಭಿಮಾನಿ
ಹಲವು ವರದಿಗಳ ಪ್ರಕಾರ, ನಾದೆಲ್ಲಾರವರು ಸಿಯಾಟಲ್ ಸೀಹಾಕ್ಸ್ ಅಭಿಮಾನಿಯಾಗಿದ್ದಾರೆ.
8. ಸತ್ಯ ನಾದೆಲ್ಲಾರ ಪುಸ್ತಕ
ಸದ್ಯಕ್ಕೆ ನಾದೆಲ್ಲಾ ತಮ್ಮ ಪುಸ್ತಕ 'ಹಿಟ್ ರಿಫ್ರೆಶ್' ಮೇಲೆ ಕೆಲಸ ಮಾಡುತ್ತಿದ್ದಾರೆ. ಈ ಪುಸ್ತಕವು 3 ಕಥಾಹಂದರಗಳನ್ನು ಹೊಂದಿದೆ. ನಾದೆಲ್ಲಾ ವೈಯುಕ್ತಿಕ ಬದುಕಿನ ಪಯಣದ ರೂಪಾಂತರ, ಅವರ ಪ್ರಸಿದ್ದ ಟೆಕ್ನೋಲಜಿ ಕಂಪೆನಿಯಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಬುದ್ಧಿವಂತ ಯಂತ್ರಗಳು ಸಮಾಜವನ್ನು ಹೆಚ್ಚು ಆವರಿಸಿ ,ಹೆಚ್ಚು ಸರ್ವವ್ಯಾಪಿಯಾದಂತೆ ಪ್ರತಿಯೊಬ್ಬರ ಜೀವನದಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ಈ ಪುಸ್ತಕದಲ್ಲಿ ನೋಡಬಹುದಾಗಿದೆ. ಇದನ್ನು ಹಾರ್ಪರ್ ಕಾಲಿನ್ಸ್ ಪ್ರಕಾಶಕರು ಪ್ರಕಟಿಸಲಿದ್ದಾರೆ. ಪುಸ್ತಕದಿಂದ ಬರುವ ಆದಾಯವನ್ನು ಮೈಕ್ರೋಸಾಫ್ಟ್ ನ ಲೋಕೋಪಕಾರಿಗಳಿಗೆ ವಿಶೇಷವಾಗಿ ಸಾರ್ವಜನಿಕ ಉತ್ತಮ ಯೋಜನೆಗಳಿಗಾಗಿ ಪಬ್ಲಿಕ್ ಕ್ಲೌಡ್ ನ ಮೇಲೆ ಕೆಲಸ ಮಾಡುತ್ತಿರುವವರಿಗೆ ನೀಡಲಾಗುತ್ತದೆ.


Click it and Unblock the Notifications