ಅಂಬಾನಿ ಧಮಾಕಾ! ರಿಲಯನ್ಸ್ ಬಿಗ್ ಟಿವಿ ಮೂಲಕ 500 ಚಾನೆಲ್ 5 ವರ್ಷ ಸಂಪೂರ್ಣ ಉಚಿತ!!

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ರಿಲಯನ್ಸ್ ಗ್ರಾಹಕರಿಗೆ ಇಲ್ಲೊಂದು ಸಿಹಿಸುದ್ದಿ ಇದೆ! ಅನಿಲ್ ಅಂಬಾನಿ ರಿಲಯನ್ಸ್ ಬಿಗ್ ಟಿವಿ ಮೂಲಕ ಒಂದು ವರ್ಷದವರೆಗೆ ಉಚಿತ ಸೇವೆಯನ್ನು ಘೋಷಿಸಿದ್ದಾರೆ. ಇದು ಡಿಟಿಎಚ್ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಯನ್ನು ಮಾಡಲಿದೆ. ಉನ್ನತ ಗುಣಮಟ್ಟದ (HD) ಮನರಂಜನಾ ಚಾನೆಲ್ ಗಳನ್ನು ಉಚಿತವಾಗಿ ನೀಡುವ ಭರವಸೆ ನೀಡಿದೆ! 

  ಹಾಗಾದರೆ, ರಿಲಯನ್ಸ್ ಬಿಗ್ ಟಿವಿ ಘೋಷಿಸಿರುವ ಉಚಿತ ಆಫರ್, ಫೀಚರ್ ಹಾಗು ಗ್ರಾಹಕರಿಗೆ ಸಿಗಲಿರುವ ಲಾಭಗಳೇನು ಎಂಬುದನ್ನು ನೋಡೋಣ ಬನ್ನಿ..

  1 ವರ್ಷ ಉಚಿತ ಸೇವೆ!

  ದೂರದರ್ಶನ (ಟಿವಿ) ವಲಯವನ್ನು ಗುರಿಯಾಗಿಸಿಕೊಂಡಿರುವ ಅಂಬಾನಿ ಮನೋರಂಜನಾ ರಂಗದಲ್ಲಿ ಕ್ರಾಂತಿಯ ಕಿಡಿ ಹಚ್ಚಿದ್ದಾರೆ! ದೇಶದಾದ್ಯಂತ ಗ್ರಾಹಕರಿಗೆ ರಿಲಯನ್ಸ್ ಬಿಗ್ ಟಿವಿ ಶುಲ್ಕ ರಹಿತವಾದ 500 ಚಾನೆಲ್ ಗಳನ್ನು ಐದು ವರ್ಷಗಳವರೆಗೆ ಹಾಗು ಶುಲ್ಕ ಸಹಿತ ಚಾನೆಲ್ ಗಳನ್ನು ಒಂದು ವರ್ಷದವರೆಗೆ ಉಚಿತವಾಗಿ ಉಚಿತವಾಗಿ ನೀಡುವುದಾಗಿ ಘೋಷಿಸಿದೆ. ಜಿಯೋ ಧಮಾಕಾ! ಈಗ ರೀಚಾರ್ಜ್ ಮೇಲೆ ರೂ. 799 ಕ್ಯಾಶ್ ಬ್ಯಾಕ್ ಪಡೆಯಿರಿ..

  HD HEVC ಸೆಟ್‌ಟಾಪ್‌ ಬಾಕ್ಸ್ ಜತೆ ಅನೇಕ ಫೀಚರ್ ಉಚಿತ

  ಇತ್ತೀಚಿನ HD HEVC ಸೆಟ್-ಟಾಪ್ ಬಾಕ್ಸ್ ನೊಂದಿಗೆ ಹಲವು ಫೀಚರ್ ಗಳನ್ನು ಒದಗಿಸುತ್ತಿದೆ. ಇದು ಶೆಡ್ಯೂಲ್ ರೆಕಾರ್ಡಿಂಗ್, ಯುಎಸ್ಬಿ ಪೋರ್ಟ್ಗ, ಯುಟ್ಯೂಬ್ ಸೌಲಭ್ಯ ಮತ್ತು ಟಿವಿ ಪ್ರದರ್ಶನಗಳ ಏಕಕಾಲಿಕ ವೀಕ್ಷಣೆ ಮತ್ತು ರೆಕಾರ್ಡಿಂಗ್ ಮುಂತಾದ ವೈಶಿಷ್ಟ್ಯಗಳನ್ನು ನೀಡುತ್ತದೆ.

  ಮುಂಗಡ ಬುಕಿಂಗ್

  ಮುಂಗಡ ಬುಕಿಂಗ್ ನ್ನು ಅಧಿಕೃತ ವೆಬ್ಸೈಟ್ ಮೂಲಕ ಮಾಡಬಹುದು. ರೂ. 499 ಪಾವತಿಸಿ ಸೆಟ್ ಟಾಪ್ ಬಾಕ್ಸ್ ಬುಕ್ ಮಾಡಬೇಕು. ಉಳಿದ ರೂ. 1,500 ಸೆಟ್-ಟಾಪ್ ಬಾಕ್ಸ್ ಮತ್ತು ಹೊರಾಂಗಣ ಘಟಕಗಳ ಸ್ವೀಕರಿಸಿದ ನಂತರ ಪಾವತಿಸಬೇಕು. ಬಿಎಸ್ಎನ್ಎಲ್ ಭರ್ಜರಿ ಆಫರ್! 1 ವರ್ಷಕ್ಕೆ ಪ್ರತಿದಿನ 1GB ಡೇಟಾ, 6 ತಿಂಗಳಿಗೆ ಅನಿಯಮಿತ ಕರೆ

  ಮಾಸಿಕ ರೂ. 300

  ಮೊದಲ ಒಂದು ವರ್ಷದ ಉಚಿತ ಸೇವೆಗಳನ್ನು ಪಡೆದ ನಂತರ ಮಾಸಿಕವಾಗಿ ರೂ. 300 ಪಾವತಿಸಿ ಶುಲ್ಕ ಸಹಿತ ಚಾನೆಲ್ ಗಳನ್ನು ವಿಕ್ಷಿಸಬಹುದು.

  ರೂ. 2000 ಮರುಪಾವತಿ ಸೌಲಭ್ಯ!

  ಒಂದು ವರ್ಷ ಕಳೆದು ಎರಡನೇ ವರ್ಷದಿಂದ ನಂತರದ ಎರಡು ವರ್ಷಗಳ ಕಾಲ ತಿಂಗಳ ಮಾಸಿಕ ಕಂತುಗಳ ಪಾವತಿ ಪೂರ್ಣಗೊಂಡ ನಂತರ ರೂ. 2000 ಮರುಪಾವತಿಸಲಾಗುವುದು. ಅಂದರೆ ಖಾತೆಯನ್ನು ಪುನರ್ ಭರ್ತಿ (ರೀಚಾರ್ಜ್) ರೂಪದಲ್ಲಿ ಮರುಪಾವತಿಸಲಾಗುವುದು.

  ಬಿಗ್ ಟಿವಿ ಮಾರುಕಟ್ಟೆಗೆ ಲಗ್ಗೆ ಯಾವಾಗ?

  ರಿಲಯನ್ಸ್ ಬಿಗ್ ಟಿವಿ ಘೋಷಿಸಿರುವ ವಿಶೇಷ ಮನೋರಂಜನಾ ಕೊಡುಗೆಗಳು ಇದೇ ಮಾರ್ಚ್ 1ರಿಂದ ದೂರದರ್ಶನ ಕ್ಷೇತ್ರಕ್ಕೆ ಲಗ್ಗೆ ಇಡಲಿವೆ ಎಂದು ಬಿಗ್ ಟಿವಿಯ ನಿರ್ದೇಶಕರಾದ ಮಿ. ವಿಜೇಯೆಂದ್ರ ಸಿಂಗ್‌ ತಿಳಿಸಿದ್ದಾರೆ.
  ಮನರಂಜನೆ, ಚಲನಚಿತ್ರಗಳು, ಕ್ರೀಡೆಗಳು, ಕಾರ್ಟೂನ್, ಸುದ್ದಿ, ಶಿಕ್ಷಣ ಹೀಗೆ ನಾನಾ ಚಾನೆಲ್‌ಗಳು ಉಚಿತವಾಗಿ ಇರಲಿವೆ ಎಂದಿದ್ದಾರೆ.

  ಬಿಗ್ ಟಿವಿ ಬುಕಿಂಗ್ ಹೇಗೆ?

  ರಿಲಯನ್ಸ್ ಸಂಸ್ಥೆಯ ಅಧಿಕೃತ ವೆಬ್ಸೈಟ್ www.reliancedigitaltv.com ಭೇಟಿ ಕೊಟ್ಟು ಸೆಟ್ ಟಾಪ್ ಬಾಕ್ಸ್ ಬುಕಿಂಗ್ ಪ್ರಕಿಯೆ ಮಾಡಬಹುದು. ಮುಂಗಡ ಬುಕಿಂಗ್ ಮೊತ್ತ ರೂ. 499 ಪಾವತಿಸಿ ಉಳಿಕೆ ಮೊತ್ತವನ್ನು ಡೆಲಿವರಿ ಸಂದರ್ಭದಲ್ಲಿ ಪಾವತಿಸಬೇಕಾಗುತ್ತದೆ.

  English summary

  Reliance Big TV Offers HD Channels Effectively Free for 1 Year

  Reliance Big TV on Wednesday announced the launch of a new plan in its Direct To Home (DTH) services in India as part of the Indian government's Digital India initiative.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more