For Quick Alerts
ALLOW NOTIFICATIONS  
For Daily Alerts

ಪುಣೆಯ ಈ ಚಾಯ್ ವಾಲಾನ ತಿಂಗಳ ಗಳಿಕೆ ಬರೋಬ್ಬರಿ 12 ಲಕ್ಷ!

ಸಂರ್ಘರ್ಷದ ಹಾದಿಯಲ್ಲಿ ಸಾಗಿದ ಚಾಯ್ ವಾಲಾ ಮೋದಿಯವರು ಈಗ ಭಾರತದ ಪ್ರಧಾನಿ ಹುದ್ದೆಗೇರಿದ್ದಾರೆ. ಅದೇ ಮಾದರಿಯಲ್ಲಿ ಇಲ್ಲೊಬ್ಬ ಚಾಯ್ ವಾಲಾ ಚಹಾ ಮಾರಿಕೊಂಡು ಕೋಟ್ಯಾಧಿಪತಿಯಾದ ಕಥೆ ತುಂಬಾ ಸ್ಪೂರ್ತಿದಾಯಕವಾಗಿದೆ.

By Siddu
|

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಬಾಲ್ಯದಲ್ಲಿ ರೇಲ್ವೆ ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ಕಥೆ ಜಗತ್ತಿಗೆ ಗೊತ್ತಿದೆ. ಸಂರ್ಘರ್ಷದ ಹಾದಿಯಲ್ಲಿ ಸಾಗಿದ ಚಾಯ್ ವಾಲಾ ಮೋದಿಯವರು ಈಗ ಭಾರತದ ಪ್ರಧಾನಿ ಹುದ್ದೆಗೇರಿದ್ದಾರೆ. ಅದೇ ಮಾದರಿಯಲ್ಲಿ ಇಲ್ಲೊಬ್ಬ ಚಾಯ್ ವಾಲಾ ಚಹಾ ಮಾರಿಕೊಂಡು ಕೋಟ್ಯಾಧಿಪತಿಯಾದ ಕಥೆ ತುಂಬಾ ಸ್ಪೂರ್ತಿದಾಯಕವಾಗಿದೆ. ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 20 ಮ್ಯಾನುಫ್ಯಾಕ್ಚರಿಂಗ್ ಉದ್ಯಮ

ಕರೋಡಪತಿ ಚಾಯ್ ವಾಲಾ ಯಾರು?

ಕರೋಡಪತಿ ಚಾಯ್ ವಾಲಾ ಯಾರು?

ಕರೋಡಪತಿ ಚಾಯ್ ವಾಲಾ ಎನಿಸಿರುವ ಪುನಾದ ನಿವಾಸಿಯಾಗಿರುವ ನವನಾಥ್ ಯೆವಳೆ. ಈ ನವನಾಥ್ ಯೆವಳೆಒಂದು ಯೆವಳೆ ಟೀ ಹೌಸ್ ಕೇಂದ್ರವನ್ನು ಪ್ರಾರಂಭಿಸಿದ್ದಾರೆ. "ಚಾಯ್ ಬ್ರಾಂಡ್" ಅನ್ನು ಆರಂಭಿಸುವ ಕಲ್ಪನೆ ಮೂಡಿದ ಸಂದರ್ಭದಲ್ಲಿ ಪುಣೆಯಲ್ಲಿ ಯೆವಳೆ ಟೀ ಹೌಸ್ ಅನ್ನು ನವನಾಥ್ ಪ್ರಾರಂಭಿಸಿದರು.

ಚಹಾ ಬ್ರಾಂಡ್ ಗುರಿ

ಚಹಾ ಬ್ರಾಂಡ್ ಗುರಿ

2011 ರಲ್ಲಿ, ವಿಶೇಷ ರುಚಿಕರವಾದ ಚಹಾವನ್ನು ತಯಾರಿಸುವ ಮೂಲಕ ದೊಡ್ಡ ವ್ಯಾಪಾರ ಮಾಡಬಹುದು ಎಂದು ಯೋಚಿಸಿದರು. ಪುಣೆಯಲ್ಲಿ ಜೋಷಿ ವಡೆವಾಲಾ, ರೋಹಿತ್ ವಾಡೆವಾಲಾ ಇರುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಯಾವುದೇ ಪ್ರಸಿದ್ಧ ಚಹಾ ಬ್ರ್ಯಾಂಡ್ ಇರಲಿಲ್ಲ. ಇಲ್ಲಿ ಚಹಾ ಇಷ್ಟಪಡುವವರು ಹಾಗು ಹೊಸ ಬಗೆಯ ಅಭಿರುಚಿಯ ಚಹಾ ಬಯಸುವವರಿದ್ದಾರೆ ಎಂಬುದನ್ನು ನಾಲ್ಕು ವರ್ಷಗಳ ಅಧ್ಯಯನದಿಂದ ತಿಳಿದುಕೊಂಡರು. ಚಹಾದ ಗುಣಮಟ್ಟವನ್ನು ಅಂತಿಮಗೊಳಿಸಿ, ಚಹಾವನ್ನು ದೊಡ್ಡ ಬ್ರ್ಯಾಂಡ ನಲ್ಲಿ ಮಾಡಲು ನಿರ್ಧರಿಸಿದರು ಎಂದು ನವನಾಥ್ ಹೇಳುತ್ತಾರೆ.

ತಿಂಗಳ ಗಳಿಕೆ ರೂ. 12 ಲಕ್ಷ
 

ತಿಂಗಳ ಗಳಿಕೆ ರೂ. 12 ಲಕ್ಷ

ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವವರು ಕೂಡ ಇಷ್ಟೊಂದು ಸಂಬಳ ಪಡೆಯುವುದು ಅಸಾಧ್ಯ. ಆದರೆ ನವನಾಥ್ ಯೆವಳೆ ತಿಂಗಳಿಗೆ ರೂ. 10-12 ಲಕ್ಷದವರೆಗೆ ಗಳಿಸುತ್ತಾರೆ. ಯಾವುದೇ ಸಾಮಾನ್ಯ ಕೆಲಸಗಾರನು ಅವನ ಬಗ್ಗೆ ಅಸೂಯೆ ತೋರಿಸಬಹುದು.

ಪುಣೆಯಲ್ಲಿ 3 ಕೇಂದ್ರಗಳು

ಪುಣೆಯಲ್ಲಿ 3 ಕೇಂದ್ರಗಳು

ಯೆವಳೆ ಟೀ ಹೌಸ್(Yewle Tea House) ಪುಣೆ ನಲ್ಲಿ ಮೂರು ಕೇಂದ್ರಗಳನ್ನು ಹೊಂದಿದೆ. ಇವುಗಳಲ್ಲಿ ಪ್ರತಿ ದಿನಕ್ಕೆ 3,000 ರಿಂದ 4,000 ಕಪ್ ಗಳಷ್ಟು ಚಹಾವನ್ನು ಮಾರುತ್ತಾರೆ. ಈ ಕೇಂದ್ರಗಳು ಕನಿಷ್ಟ 12 ನೌಕರರನ್ನು ಹೊಂದಿದೆ. ಇದು ಈಗ ನಗರದ ಪ್ರಸಿದ್ಧ ಮಳಿಗೆಗಳಲ್ಲಿ ಒಂದಾಗಿದೆ.

ಅಂತರರಾಷ್ಟ್ರೀಯ ಬ್ರಾಂಡ್

ಅಂತರರಾಷ್ಟ್ರೀಯ ಬ್ರಾಂಡ್

ನವನಾಥ್ ಅವರು ಯೆವಳೆ ಟೀಯನ್ನು ಶೀಘ್ರದಲ್ಲೇ ಅಂತರರಾಷ್ಟ್ರೀಯ ಬ್ರಾಂಡ್ ಮಾಡಲು ಉದ್ದೇಶಿಸಿದ್ದಾರೆ. ಈ ಚಹಾ ಮಾರಾಟದ ವ್ಯವಹಾರವು ಭಾರತೀಯರಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸುತ್ತಿದೆ. ಈ ವ್ಯವಹಾರ ವೇಗವಾಗಿ ಬೆಳೆಯುತ್ತಿದ್ದು ನನಗೆ ಸಂತೋಷವಾಗಿದೆ ಎಂದು ನವನಾಥ್ ಹೇಳಿದ್ದಾರೆ.

English summary

This Pune Chaiwala Makes Rs 12 Lakhs Per Month

Navnath Yewle, started Yewle Tea House in Pune, Maharashtra when the idea of starting a "chai brand" struck him.
Story first published: Monday, March 5, 2018, 14:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X