For Quick Alerts
ALLOW NOTIFICATIONS  
For Daily Alerts

  ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 20 ಮ್ಯಾನುಫ್ಯಾಕ್ಚರಿಂಗ್ ಉದ್ಯಮ

  By Siddu
  |

  ಇಂದು ಅನೇಕ ಜನರು ಸ್ವಂತ ತಯಾರಿಕಾ ಉದ್ಯಮವನ್ನು ಪ್ರಾರಂಭಿಸಲು ಉತ್ಸುಕರಾಗಿದ್ದಾರೆ. ನೀವು ಅವರಲ್ಲಿ ಒಬ್ಬರಾಗಿದ್ದರೆ ನೀವು ಸರಿಯಾದ ಸ್ಥಳದಲ್ಲಿದ್ದೀರಿ. ಇಂದು ಕಡಿಮೆ ಬಂಡವಾಳದಲ್ಲಿ ಉತ್ಪಾದಿಸಬಹುದಾದ 20 ಉದ್ಯಮಗಳ ಬಗ್ಗೆ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಒಂದು ಸಣ್ಣ ತಯಾರಿಕಾ ಉದ್ಯಮವನ್ನು ಮನೆ ಅಥವಾ ಪುಟ್ಟ ಬಾಡಿಗೆ ಸ್ಥಳದಲ್ಲಿ ಪ್ರಾರಂಭಿಸಬಹುದು. ಒಂದು ಉದ್ಯಮವನ್ನು ಪ್ರಾರಂಭಿಸಲು ಅಗತ್ಯವಿರುವ ಉಪಕರಣ ಅಥವಾ ಉತ್ಪಾದನಾ ಯಂತ್ರಗಳ ವೆಚ್ಚ ತುಂಬಾ ಕಡಿಮೆ. ಈ ತರಹದ ಉದ್ಯಮಗಳು ಬಂಡವಾಳ ಹೂಡಿಕೆಯ ಮೇಲೆ ಉತ್ತಮ ಆದಾಯವನ್ನು ನೀಡುತ್ತದೆಂದು ಹೇಳಲಾಗುತ್ತದೆ.

  ಕಡಿಮೆ ಬಂಡವಾಳದಲ್ಲಿ ಮ್ಯಾನುಫ್ಯಾಕ್ಚರಿಂಗ್ ಮಾಡಬಹುದಾದ 30 ಉದ್ಯಮಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..

  1. ಜವಳಿ ಉತ್ಪಾದಕ

  ಜವಳಿ ಉತ್ಪಾದನೆ ಮೊದಲ ಉತ್ಪಾದನಾ ವ್ಯಾಪಾರ. ನೀವು ಕಚ್ಚಾ ಬಟ್ಟೆ ಅಥವಾ ಇತರೆ ಜವಳಿ ಉತ್ಪನ್ನಗಳನ್ನು ವ್ಯಕ್ತಿ ಅಥವಾ ಉದ್ಯಮಕ್ಕೆ ಮಾರಾಟ ಮಾಡಲು ಉತ್ಪಾದಿಸಬಹುದು. ಇದು ಹೆಚ್ಚು ಬಂಡವಾಳ ಬೇಡುವ ವ್ಯಾಪಾರ. ಈ ಉದ್ಯಮಕ್ಕೆ ಸಾಕಷ್ಟು ಸ್ಥಳಾವಕಾಶ ಮತ್ತು ಯಂತ್ರಗಳು ಬೇಕಾಗುತ್ತದೆ. ಇದರೊಂದಿಗೆ, ಈ ವ್ಯಾಪಾರವನ್ನು ಆರಂಭಿಸುವ ಮುನ್ನ ನೀವು ಮಾರುಕಟ್ಟೆಯನ್ನು ಸರಿಯಾಗಿ ಅಂದಾಜಿಸಿ ಮುನ್ನಡೆಯಬೇಕು. ಅತಿ ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 10 ಉದ್ಯಮ

  2. ಪೀಠೋಪಕರಣಗಳ ತಯಾರಕ

  ಪೀಠೋಪಕರಣಗಳು ನಮ್ಮ ಜೀವನದ ಅತ್ಯಗತ್ಯ ಭಾಗವಾಗಿವೆ. ಕಚೇರಿ, ಮನೆ, ಶಾಲೆ ಅಥವಾ ಯಾವುದೇ ಉದ್ಯಮಕ್ಕೆ ಕುರ್ಚಿ, ಮೇಜು, ಕಬೋರ್ಡ್, ಹಾಸಿಗೆ, ವಾರ್ಡ್ ರೋಬ್ ಮುಂತಾದ ಪೀಠೋಪಕರಣಗಳ ಅಗತ್ಯವಿರುತ್ತದೆ. ನೀವು ದೊಡ್ಡ ಪ್ರಮಾಣದಲ್ಲಿ ಉತ್ಪನ್ನಗಳನ್ನು ತಯಾರಿಸಲು ಬಯಸುವವರಾದರೆ, ಪೀಠೋಪಕರಣಗಳ ತಯಾರಿಕಾ ವ್ಯಾಪಾರವು ನಿಮಗೆ ಹೇಳಿ ಮಾಡಿಸಿದ್ದು. ಈ ವ್ಯಾಪಾರವನ್ನು ಆರಂಭಿಸಲು ಕುಶಲ ಕೆಲಸಗಾರರು ಬೇಕಾಗುತ್ತಾರೆ. ಕೇವಲ 10 ಸಾವಿರ ಇದ್ರೆ ಈ ಬಿಸಿನೆಸ್ ಶುರು ಮಾಡಬಹುದು..

  3. ಮೋಂಬತ್ತಿ ತಯಾರಕ

  ಮೋಂಬತ್ತಿ ತಯಾರಿಕಾ ಉದ್ಯಮವನ್ನು ಸಣ್ಣ ಪ್ರಮಾಣದ ಅರೆಕಾಲಿಕ ವ್ಯಾಪಾರವಾಗಿ ಪ್ರಾರಂಭಿಸಬಹುದು. ಮೋಂಬತ್ತಿಗಳನ್ನು ಧಾರ್ಮಿಕ ಉದ್ದೇಶ ಮತ್ತು ಅಲಂಕಾರಿಕ ವಸ್ತುಗಳಾಗಿ ಉಪಯೋಗಿಸುತ್ತಾರೆ. ಇದಲ್ಲದೆ ಪರಿಮಳ ಭರಿತ ಮೋಂಬತ್ತಿ ಹೆಚ್ಚು ಮಾರಾಟವಾಗುತ್ತಿರುವುದಲ್ಲದೆ ಅತ್ಯಂತ ಜನಪ್ರಿಯವಾಗಿದೆ. ನನ್ನ ಪ್ರಕಾರ ಮೋಂಬತ್ತಿ ತಯಾರಿಕೆಯು ಲಾಭದಾಯಕ ಸಣ್ಣ ಪ್ರಮಾಣದ ಉದ್ಯಮವಾಗಿದೆ.

  4. ಬೆಲ್ಟ್ ತಯಾರಿಕೆ

  ಇದು ಮನೆಯಿಂದ ಪ್ರಾರಂಭ ಮಾಡಬಹುದಾದ ಮತ್ತೊಂದು ಸಣ್ಣ ಪ್ರಮಾಣದ ಉತ್ಪಾದನಾ ಉದ್ಯಮವಾಗಿದೆ. ನೀವು ಚರ್ಮ ಸಂಬಂಧಿತ ಉತ್ಪಾದನೆಗಳ ಸಮೂಹ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಬಹುದು ಮತ್ತು ಅದನ್ನು ಗ್ರಾಹಕ ಅಥವಾ ಸಗಟು ವ್ಯಾಪಾರಿಗಳಿಗೆ ಮಾರಬಹುದು. ಈ ಉದ್ಯಮವನ್ನು ಪ್ರಾರಂಭಿಸುವ ಮೊದಲು ಸರಿಯಾದ ಮಾರುಕಟ್ಟೆ ಸಮೀಕ್ಷೆ ಮತ್ತು ಕಾರ್ಯ ಸಾಧ್ಯತಾ ಅಧ್ಯಯನವನ್ನು ಮಾಡಿ.

  5. ಬ್ರೆಡ್ ತಯಾರಕ

  ಇದು ಆಹಾರಕ್ಕೆ ಸಂಬಂಧಿಸಿರುವ ತಯಾರಿಕಾ ಉದ್ಯಮ. ನೀವು ಬೇಕರ್ ಆಗಿ ನಿಮ್ಮ ಸ್ವಂತ ಬ್ರೆಡ್ ತಯಾರಿಕಾ ಉದ್ಯಮವನ್ನು ಪ್ರಾರಂಭಿಸಬಹುದು.

  6. ಬಿಸ್ಕತ್ತು ತಯಾರಿಕೆ

  ಬಿಸ್ಕತ್ತು ಇನ್ನೊಂದು ಲಾಭದಾಯಕ ಉದ್ಯಮವಾಗಿದೆ. ನೀವು ನಿಮ್ಮ ಸ್ವಂತ ಸಣ್ಣ ಗೃಹಾಧಾರಿತ ಬಿಸ್ಕತ್ತು ತಯಾರಿಕಾ ಉದ್ಯಮ ಅಥವಾ ಸ್ವಯಂಚಾಲಿತ ಬಿಸ್ಕತ್ತು ತಯಾರಿಕಾ ಕಾರ್ಖಾನೆಯನ್ನೂ ಕೂಡ ಸ್ಥಾಪಿಸಬಹುದು.

  7. ಕ್ಯಾಂಡಿ ತಯಾರಿಕೆ

  ನಿಮಗೆ ಕ್ಯಾಂಡಿ ಅಥವಾ ಚಾಕೋಲೇಟ್ ತಯಾರಿಸುವ ಆಸಕ್ತಿ ಇದ್ದರೆ ನೀವು ನಿಮ್ಮ ಸ್ವಂತ ಕ್ಯಾಂಡಿ ಅಥವಾ ಚಾಕೋಲೇಟ್ ಮಾಡಬಹುದು ಮತ್ತು ಅದನ್ನು ಮಾರಾಟ ಮಾಡಲು ಪ್ಯಾಕ್ ಮಾಡಬಹುದು.

  8. ಐಸ್ ಕ್ರೀಂ ತಯಾರಿಕೆ

  ಐಸ್ ಕ್ರೀಂ ವಿವಿಧ ರುಚಿ,ಬಣ್ಣ ಮತ್ತು ರೂಪಗಳಲ್ಲಿ ದೊರೆಯುತ್ತದೆ. ಈ ವ್ಯಾಪಾರವನ್ನು ಸಣ್ಣ ಅಥವಾ ದೊಡ್ಡ ಪ್ರಮಾಣದಲ್ಲಿ ಪ್ರಾರಂಭಿಸಬಹುದು. ದೊಡ್ಡ ಪ್ರಮಾಣದ ವ್ಯಾಪಾರಕ್ಕಾಗಿ, ನೀವು ಕಾರ್ಖಾನೆ ಮತ್ತು ಯಂತ್ರೋಪಕರಣಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.

  9. ಜೇನು ಸಂಸ್ಕರಣೆ

  ಜೇನು ಸಂಸ್ಕರಣೆ ಮತ್ತೊಂದು ಉತ್ಪಾದನಾ ಉದ್ಯಮವಾಗಿದೆ. ಎರಡು ವಿಧಗಳಲ್ಲಿ ಜೇನು ಸಂಸ್ಕರಣೆಯನ್ನು ಮಾಡಬಹುದು. ಒಂದು ಸ್ವಯಂಚಾಲಿತ ಪಧ್ಧತಿ ಇನ್ನೊಂದು ಕೈಯಿಂದ ಸಂಸ್ಕರಿಸುವುದು. ಈ ಪ್ರಕ್ರಿಯೆಯು ತುಂಬಾ ಸರಳವಾಗಿದ್ದು,ಮನೆಯಲ್ಲೂ ಮಾಡಬಹುದು.

  10. ಜಾಮ್ ಜೆಲ್ಲಿ ತಯಾರಿಕೆ

  ಜಾಮ್ ಜೆಲ್ಲಿ ತಯಾರಿಕೆಗೆ ಕಚ್ಚಾ ಪದಾರ್ಥಗಳಾದ ಮಾಗಿದ ಹಣ್ಣುಗಳು ಮತ್ತು ಇತರ ಪದಾರ್ಥಗಳು ಲಭ್ಯವಿರಬೇಕಾಗುತ್ತದೆ. ಇದನ್ನು ಕಡಿಮೆ ಬಂಡವಾಳದೊಂದಿಗೆ ಆರಂಭಿಸಬಹುದು.

  11. ಕೇಶೋತ್ಪನ್ನಗಳ ತಯಾರಿಕೆ

  ನೀವು ವೇಗವಾಗಿ ಮಾರಾಟವಾಗುವ ಗ್ರಾಹಕ ಉತ್ಪನ್ನಗಳಾದ ಕೇಶ ತೈಲ, ಕ್ರೀಮ್ ಮುಂತಾದವುಗಳನ್ನೂ ತಯಾರಿಸಬಹುದು. ಈ ಉದ್ಯಮವು ಹೆಚ್ಚು ಬಂಡವಾಳವನ್ನು ಬೇಡುವುದಿಲ್ಲ. ಆದರೂ,ನೀವು ಉತ್ಪನ್ನಗಳ ಪ್ರಚಾರಕ್ಕಾಗಿ ಹಣ ವ್ಯಯಿಸಬೇಕಾಗುತ್ತದೆ.

  12. ಡಿಟರ್ಜೆಂಟ್ ತಯಾರಿಕೆ

  ಡಿಟರ್ಜೆಂಟ್ ಅಥವಾ ಸೋಪ್ ತಯಾರಿಕೆ ಮತ್ತೊಂದು ಗೃಹಾಧಾರಿತ ಉತ್ಪಾದನಾ ಉದ್ಯಮವಾಗಿದೆ. ಡಿಟರ್ಜೆಂಟ್ ಮಾಡುವ ಪ್ರಕ್ರಿಯೆಯು ಸುಲಭವಾಗಿದ್ದು, ಕಡಿಮೆ ಬಂಡವಾಳದ್ದಾಗಿದೆ.

  13. ಮೇಕಪ್ ಉತ್ಪನ್ನಗಳ ಉತ್ಪಾದನೆ

  ಮಹಿಳೆಯರು ಮೇಕಪ್ ಪ್ರಿಯರು. ಅವರು ಪ್ರತಿ ಸಂದರ್ಭದಲ್ಲೂ ಮೇಕಪ್ ಗಾಗಿ ಬಹಳ ಹಣ ಖರ್ಚು ಮಾಡುತ್ತಾರೆ. ಇದರಿಂದ ಸ್ಪೂರ್ತಿ ಪಡೆದು ಮೇಕಪ್ ಉತ್ಪನ್ನಗಳ ಉತ್ಪಾದನೆಯ ಉದ್ಯಮವನ್ನು ಆರಂಭಿಸುವ ಬಗ್ಗೆ ನೀವು ಯೋಚಿಸಬಹುದು.

  14. ಎಲೆಕ್ಟ್ರಿಕ್ ಫಿಟ್ಟಿಂಗ್ ಪ್ರೊಡಕ್ಷನ್

  ವಿದ್ಯುತ್ ಮತ್ತು ವಿದ್ಯುತ್ ಉಪಕರಣಗಳಿಲ್ಲದೆ ಏನೂ ಕೆಲಸ ನಡೆಯುವುದಿಲ್ಲ. ಆದ್ದರಿಂದ ಎಲೆಕ್ಟ್ರಿಕ್ ಫಿಟ್ಟಿಂಗ್ ಉದ್ಯಮವನ್ನು ಪ್ರಾರಂಭಿಸುವುದು ಉತ್ತಮ ಉದ್ಯಮವಾಗಿದೆ.

  15. ಏರ್ ಫ್ರೆಶನರ್ ನಿರ್ವಾಹಕ

  ಏರ್ ಫ್ರೆಶನರ್ ಸಮೂಹ ಉತ್ಪಾದನೆಯ ಇನ್ನೊಂದು ಉತ್ಪನ್ನವಾಗಿದೆ. ಏರ್ ಫ್ರೆಶನರ್ ಗೆ ದೊಡ್ಡ ಮಾರುಕಟ್ಟೆಯಿದ್ದು,ಅದನ್ನು ದ್ರವ,ಅನಿಲ ಮತ್ತು ಘನ ಸ್ವರೂಪಗಳಲ್ಲಿ ಉತ್ಪಾದಿಸಬಹುದು. ಏರ್ ಫ್ರೆಶನರ್ ಗೆ ವಿಶಿಷ್ಟ ಮತ್ತು ಹಿತಕರವಾದ ಸುವಾಸನೆ ಇರುವುದು ಮುಖ್ಯ.

  16. ಕಸೂತಿ ಹಾಕುವವ

  ಕಸೂತಿ ಮಾಡುವುದು ಮುಂದಿನ ವ್ಯಾಪಾರವಾಗಿದೆ. ಈ ವ್ಯಾಪಾರದಲ್ಲಿ ನೀವು ಹೊಸಬಗೆಯ ಕಸೂತಿ ವಿನ್ಯಾಸವನ್ನು ವಿನ್ಯಾಸಗೊಳಿಸುವ ಕೌಶಲವನ್ನು ಬೆಳೆಸಿಕೊಳ್ಳಬೇಕು. ನೀವು ಕಡಿಮೆ ದರ್ಜೆಯ ಯಂತ್ರ ಅಥವಾ ಸುಸಜ್ಜಿತ ಉಪಕರಣಗಳನ್ನು ಉಪಯೋಗಿಸಿಕೊಂಡು ಕಸೂತಿ ಕೆಲಸ ಮಾಡಬಹುದು.

  17. ಕಾಗದ ತಯಾರಿಕೆ

  ಕಾಗದ ತಯಾರಿಕೆ ಇನ್ನೊಂದು ಉದ್ಯಮವಾಗಿದೆ. ಕಾಗದಗಳು ಮತ್ತು ಸ್ಟೇಷನರಿ ವಸ್ತುಗಳು ಶಿಕ್ಷಣ ಅಥವಾ ವ್ಯಾಪಾರ ಕ್ಷೇತ್ರಗಳಲ್ಲಿ ಯಾವಾಗಲೂ ಬೇಡಿಕೆಯಲ್ಲಿರುತ್ತದೆ.ಕಾಗದ ತಯಾರಿಕಾ ಉದ್ಯಮವು ಸುಲಭ ಮತ್ತು ಕಡಿಮೆ ವೆಚ್ಚದ್ದಾಗಿದೆ.

  18. ಆಭರಣ ತಯಾರಿಕೆ

  ಆಭರಣ ತಯಾರಿಕೆಯು ಅಧಿಕ ಬಂಡವಾಳದ ಉದ್ಯಮವಾಗಿದೆ.ಈ ವ್ಯಾಪಾರಕ್ಕೆ ಆಭರಣಗಳ ನಮೂನೆಯ ಆಧಾರದ ಮೇಲೆ ಬಂಡವಾಳ ಹೂಡಿಕೆಯ ಅಗತ್ಯವಿರುತ್ತದೆ. ನೀವು ಚಿನ್ನ ಅಥವಾ ವಜ್ರದ ಆಭರಣಗಳನ್ನು ತಯಾರಿಸಲು ಹೊರಟಿದ್ದರೆ,ಹೆಚ್ಚಿನ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ.

  19. ಪೆನ್ಸಿಲ್ ರಬ್ಬರ್ ತಯಾರಿಕೆ

  ಪೆನ್ಸಿಲ್ ಮತ್ತು ರಬ್ಬರ್ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬಳಸುವ ಅತ್ಯಗತ್ಯ ವಸ್ತುಗಳಾಗಿವೆ. ಪೆನ್ಸಿಲ್ ಮತ್ತು ರಬ್ಬರ್ ಗೆ ದೊಡ್ಡ ಮಾರುಕಟ್ಟೆ ಇದೆ. ನೀವು ಈ ವಸ್ತುಗಳಿಗೆ ಸಂಬಂಧಿಸಿದ ವ್ಯಾಪಾರವನ್ನು ಆರಂಭಿಸಬಹುದು.

  20. ಕಾರ್ಪೆಟ್ ತಯಾರಿಕೆ

  ರಬ್ಬರ್ ಕಾರ್ಪೆಟ್ ಗಳಿಗೆ ನಿಜಕ್ಕೂ ದೊಡ್ಡ ಮಾರುಕಟ್ಟೆಯಿದೆ.ಈ ರೀತಿಯ ವ್ಯಾಪಾರಕ್ಕಾಗಿ ನೀವು ಉತ್ಪಾದನಾ ಕಾರ್ಖಾನೆಯನ್ನು ತೆರೆದರೆ,ಖಂಡಿತವಾಗಿಯೂ ಅಲ್ಪಾವಧಿಯಲ್ಲಿಯೇ ಯಶಸ್ವಿಯಾಗಬಹುದು.ಈ ವ್ಯಾಪಾರವನ್ನು ಪ್ರಾರಂಭಿಸುವ ಮುನ್ನ ನೀವು ಸೂಕ್ತ ಕೌಶಲವನ್ನು ಕಲಿತುಕೊಳ್ಳಬೇಕು.

  English summary

  20 Manufacturing Business Ideas with Low Investment

  Today many people are keen to start own manufacturing business. If you are one of them you are the right place. Today, I will share 30 Manufacturing business ideas with low investment. A small manufacturing business can be started at home or small rented location.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more