ಭಾರತವು ಜಗತ್ತಿನಾದ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ತಂತ್ರಜ್ಞಾನದಲ್ಲಿ ಹೆಚ್ಚು ನುರಿತ ಜನರು ನೆಲೆಯಾಗಿರುವುದರಿಂದ, ಅಮೆರಿಕಾದಂತಹ ಪ್ರಮುಖ ಟೆಕ್ ಕಂಪನಿಗಳು ಭಾರತದಲ್ಲಿ ಇವೆ.
ಭಾರತವು ಜಗತ್ತಿನಾದ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ತಂತ್ರಜ್ಞಾನದಲ್ಲಿ ಹೆಚ್ಚು ನುರಿತ ಜನರು ನೆಲೆಯಾಗಿರುವುದರಿಂದ, ಅಮೆರಿಕಾದಂತಹ ಪ್ರಮುಖ ಟೆಕ್ ಕಂಪನಿಗಳು ಭಾರತದಲ್ಲಿ ಇವೆ. ಇಲ್ಲಿ ಹಿಂದಿನ ಹಾಗು ಪ್ರಸಕ್ತ ಕಂಪೆನಿ ಉದ್ಯೋಗಿಗಳ ಒಳಹರಿವಿನ ಆಧಾರದ ಮೇಲೆ ಈ ಪಟ್ಟಿಯನ್ನು ಪಡೆಯಲಾಗಿದೆ.
ಇವು ತಮ್ಮ ಉದ್ಯೋಗಿಗಳಿಗೆ ಪ್ರಾಮುಖ್ಯತೆ ನೀಡುವ ಮತ್ತು ವೃತ್ತಿಯ ಪ್ರಗತಿಗಾಗಿ ಅವರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುವ ಸಂಸ್ಥೆಗಳಾಗಿವೆ. ಉದ್ಯೋಗಿಗಳು ಭಾರತದಲ್ಲಿ ಕೆಲಸ ಮಾಡಲು ಇಷ್ಟಪಡುವ ಟಾಪ್ 5 ಟೆಕ್ ಕಂಪನಿಗಳ ಪಟ್ಟಿಯನ್ನು ನೀಡಲಾಗಿದೆ. ಬೆಂಗಳೂರಿನಲ್ಲಿ ಅತಿಹೆಚ್ಚು ಸಂಬಳ ಪಾವತಿಸುವ ಕಂಪನಿಗಳು
ಗೂಗಲ್
ಜಗತ್ತಿನ ಪ್ರಮುಖ ಟೆಕ್ನಾಲಜಿ ಕಂಪೆನಿಯಾಗಿರುವ ಗೂಗಲ್ ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂನಲ್ಲಿ (ಯುಎಸ್) ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ. ಇದು 10,000 ಕ್ಕಿಂತಲೂ ಹೆಚ್ಚಿನ ನೌಕರರನ್ನು ಹೊಂದಿದೆ. ಇಂಟರ್ನೆಟ್ ಸಂಬಂಧಿತ ಉತ್ಪನ್ನಗಳು ಮತ್ತು ಸೇವೆಗಳ ಮೇಲೆ ಗಮನಹರಿಸುತ್ತಾ, ಜಾಗತಿಕ ಮಾಹಿತಿಯನ್ನು ಎಲ್ಲರಿಗೂ ಒದಗಿಸುತ್ತಿದೆ. ವೆಬ್-ಆಧಾರಿತ ಹುಡುಕಾಟ, ಜಾಹೀರಾತುಗಳು, ನಕ್ಷೆಗಳು, ಸಾಫ್ಟ್ವೇರ್ ಅಪ್ಲಿಕೇಶನ್ ಗಳು, ಮೊಬೈಲ್ ಕಾರ್ಯಾಚರಣಾ ವ್ಯವಸ್ಥೆಗಳು, ಗ್ರಾಹಕ ವಿಷಯ, ಉದ್ಯಮ ಪರಿಹಾರಗಳು, ವಾಣಿಜ್ಯ ಮತ್ತು ಹಾರ್ಡ್ವೇರ್ ಉತ್ಪನ್ನ ಮುಂತಾದ ಸೇವೆಗಳನ್ನು ಕಂಪನಿ ಒದಗಿಸುತ್ತದೆ.
ಕಛೇರಿಗಳು: ಬೆಂಗಳೂರು, ಗುರಗಾಂವ್, ಹೈದರಾಬಾದ್ ಮತ್ತು ಮುಂಬೈ
ಅಮೆಜಾನ್
ಆನ್ಲೈನ್ ಚಿಲ್ಲರೆ ವ್ಯಾಪಾರ ವಲಯದ ದೈತ್ಯ ಸಂಸ್ಥೆ ಅಮೆಜಾನ್, ಅಮೇರಿಕಾದ ಸಿಯಾಟಲ್ WA ನಲ್ಲಿ ಪ್ರಧಾನ ಕಛೇರಿ ಹೊಂದಿದೆ. ಕ್ಲೌಡ್ ಕಂಪ್ಯೂಟಿಂಗ್ ವ್ಯವಹಾರ, ಸ್ಟ್ರೀಮಿಂಗ್ ಸೇವೆಗಳನ್ನು ಒದಗಿಸುತ್ತದೆ.
ಕಛೇರಿಗಳು: ಬೆಂಗಳೂರು, ಚೆನ್ನೈ, ನವದೆಹಲಿ, ಹೈದರಾಬಾದ್ ಮತ್ತು ಮುಂಬೈ
ಇಂಟೆಲ್
ಇಂಟೆಲ್ ಯುಎಸ್ ನ ಕ್ಯಾಲಿಫೋರ್ನಿಯಾದ ಸಾಂಟಾ ಕ್ಲಾರಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಈ ಟೆಕ್ ಕಂಪನಿ ಕಂಪ್ಯೂಟರ್ ಘಟಕಗಳು ಮತ್ತು ಅದಕ್ಕೆ ಸಂಬಂಧಿತ ಬಿಡಿಭಾಗಗಳನ್ನು ವಿನ್ಯಾಸಗೊಳಿಸುವುದು, ತಯಾರಿಸುವುದು ಮತ್ತು ಮಾರಾಟ ಮಾಡುತ್ತದೆ. ಮೈಕ್ರೊಪ್ರೊಸೆಸರ್ಸ್ ಮತ್ತು ಅರೆವಾಹಕ ಚಿಪ್ನಂತಹ ಪ್ರಮುಖ ಉತ್ಪನ್ನಗಳನ್ನು ಒಳಗೊಂಡಿದೆ.
ಕಚೇರಿಗಳು: ಅಹಮದಾಬಾದ್, ಬೆಂಗಳೂರು, ಚೆನ್ನೈ, ಗುರಗಾಂವ್, ಹೈದರಾಬಾದ್, ಕೊಲ್ಕತ್ತಾ, ಮುಂಬೈ, ನವದೆಹಲಿ, ನೋಯ್ಡಾ, ಪುಣೆ ಮತ್ತು ಸಿಕಂದರಾಬಾದ್
ಐಬಿಎಂ
ಅಮೇರಿಕಾದ ನ್ಯೂಯಾರ್ಕ್ ನಲ್ಲಿ ಪ್ರಧಾನ ಕಚೇರಿ ಇದ್ದು, 100,000 ಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿದೆ. ಕಂಪನಿ ಯಂತ್ರಾಂಶ, ಮಿಡಲ್ವೇರ್ ಮತ್ತು ಸಾಫ್ಟ್ವೇರ್ ಗಳನ್ನು ಅಭಿವೃದ್ಧಿಪಡಿಸುತ್ತದೆ.
ಕಛೇರಿಗಳು: ಅಹಮದಾಬಾದ್, ಬೆಂಗಳೂರು, ಭುವನೇಶ್ವರ್, ಚಂಡೀಗಢ, ಚೆನ್ನೈ, ಕೊಯಮತ್ತೂರು, ಗುರ್ಗಾಂವ್, ಹೈದರಾಬಾದ್, ಕೊಲ್ಕತ್ತಾ, ಮುಂಬೈ, ನವದೆಹಲಿ, ನೋಯ್ಡಾ, ಪುಣೆ ಮತ್ತು ವಿಶಾಖಪಟ್ಟಣಂ
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್)
ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ಟಿಸಿಎಸ್ ಸಲಹೆ (ಕನ್ಸಲ್ಟೆನ್ಸಿ) ಮತ್ತು ತಂತ್ರಜ್ಞಾನ ಸೇವೆಗಳನ್ನು ಒದಗಿಸುತ್ತದೆ.
ಕಛೇರಿಗಳು: ಅಹಮದಾಬಾದ್, ಬೆಂಗಳೂರು, ಭೋಪಾಲ್, ಭುವನೇಶ್ವರ, ಚೆನ್ನೈ, ಕೊಯಮತ್ತೂರು, ಗಾಂಧಿನಗರ, ಗುರಗ್ರಾಮ್, ಹೈದರಾಬಾದ್, ಜಮ್ಶೆಡ್ಪುರ, ಕೊಚ್ಚಿ, ಕೊಲ್ಕತ್ತಾ, ಲಕ್ನೌ, ಮಾಪುಸಾ, ಮುಂಬೈ, ನಾಗ್ಪುರ್, ನವದೆಹಲಿ, ನೋಯ್ಡಾ, ಪಾಟ್ನಾ, ಪುಣೆ, ರಾಯಪುರ್, ತಿರುವನಂತಪುರ ಮತ್ತು ವಡೋದರಾ


Click it and Unblock the Notifications