ಬೆಂಗಳೂರಿನಲ್ಲಿ ಅತಿಹೆಚ್ಚು ಸಂಬಳ ಪಾವತಿಸುವ ಕಂಪನಿಗಳು

Posted By: Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಯಾವ ಕಂಪನಿಯಲ್ಲಿ ಕೆಲಸ ಮಾಡ್ತಾ ಇದಿರಿ, ಎಷ್ಟು ಸಂಬಳ ಕೊಡ್ತಾರೆ, ಅದಕ್ಕಿಂತಲೂ ಈ ಕಂಪನಿನೇ ಚೆನ್ನಾಗಿತ್ತು, ಸ್ಯಾಲರಿ ಕೂಡ ಜಾಸ್ತಿ ಕೊಡ್ತಿದ್ರು, ಯಾಕೆ ಟ್ರೈ ಮಾಡಿಲ್ವಾ? ಹೀಗಂತಾ ನಮ್ಮ ಸುತ್ತಮುತ್ತಲಿನವರು ಪ್ರಶ್ನಿಸುವುದನ್ನು ನೋಡಿರುತ್ತಿರಿ.
  ಅತಿಹೆಚ್ಚು ಸಂಬಳ ಕೊಡುವ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಗಿಟ್ಟಿಸುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಉನ್ನತ ಕಂಪನಿ, ಹೆಚ್ಚು ಸ್ಯಾಲರಿ ಸಮಾಜದಲ್ಲಿ ನಮ್ಮ ಸ್ಥಾನಮಾನ, ಗೌರವ, ಪ್ರೇಸ್ಟಿಜ್ ಹೆಚ್ಚಿಸುತ್ತವೆ ಎನ್ನುವುದು ಹೆಚ್ಚಿನವರ ನಂಬಿಕೆ.

  ಸಿಲಿಕಾನ್ ಸಿಟಿ ಖ್ಯಾತಿಯ ಐಟಿ ತವರೂರಾದ ಬೆಂಗಳೂರಿನಲ್ಲಿ ಹಲವಾರು ರಾಷ್ಟ್ರೀಯ, ಅಂತರಾಷ್ಟ್ರೀಯ ಕಂಪನಿಗಳಿದ್ದು, ಅವುಗಳಲ್ಲಿ ಕೆಲಸ ಪಡೆಯಲು ಎಲ್ಲರೂ ಇಷ್ಟ ಪಡುತ್ತಾರೆ. [ಅತಿ ಹೆಚ್ಚು ವೇತನ ಪಾವತಿಸುವ ಟಾಪ್ 10 ಉದ್ಯೋಗಗಳು]

  ಅದೇನೆ ಇರಲಿ ಬೆಂಗಳೂರಿನಲ್ಲಿ ಅತಿಹೆಚ್ಚು ಸಂಬಳ ನೀಡುವ ಕಂಪನಿಗಳು ಯಾವುವು? ಯಾವ ಕಂಪನಿಯಲ್ಲಿ ಕೆಲಸ ಗಿಟ್ಟಿಸಬೇಕು? ಎಂಬುದನ್ನು ತಿಳಿಯುವ ಕುತೂಹಲ ನಿಮ್ಮಲ್ಲಿ ಇದ್ದೇ ಇರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ...

  1. ಮೈಕ್ರೊಸಾಫ್ಟ್

  ಪೇ ಪ್ಯಾಕೆಜ್: ಸಾಪ್ಟ್ ವೇರ್ ಡೆವಲಪ್ಮೆಂಟ್ ಇಂಜಿನಿಯರ್(SDE) ಆಗಿ ಸೇರುವ ಹೊಸಬರಿಗೆ(freshers) ವಾರ್ಷಿಕವಾಗಿ 11-21 ಲಕ್ಷ ಸಂಬಳ ನೀಡುತ್ತಿದ್ದು, ಸರಾಸರಿ 12.77 ಲಕ್ಷ ಪಾವತಿಸುತ್ತದೆ.
  ಸಾಪ್ಟ್ವೇರ್ ಕ್ಷೇತ್ರದ ದಿಗ್ಗಜ ಕಂಪನಿಯಾದ ಮೈಕ್ರೊಸಾಫ್ಟ್ ಹೆಚ್ಚು ಸಂಬಳ ನೀಡುವಲ್ಲಿ ಮುಂಚೂಣಿಯಲ್ಲಿದೆ. ಬಿಲ್ ಗೇಟ್ಸ್ ಮೈಕ್ರೊಸಾಫ್ಟ್ ಕಂಪನಿಯ ಸ್ಥಾಪಕರು. ಮೈಕ್ರೊಸಾಪ್ಟ್ ಕಂಪನಿಯು ಲೈಸೆನ್ಸ್, ಕಂಪ್ಯೂಟರ್ ಸಾಪ್ಟ್ವೇರ್, ಎಲೆಕ್ಟ್ರಾನಿಕ್ಸ್, ಪರ್ಸನಲ್ ಕಂಪ್ಯೂಟರ್ಸ್ ಮತ್ತು ಸೇವೆಗಳನ್ನು ಒದಗಿಸುತ್ತದೆ. ಮೈಕ್ರೊಸಾಪ್ಟ್ ಕಂಪ್ಯೂಟರ್ ಕ್ಷೇತ್ರದಲ್ಲಿ ಜಾಗತಿಕವಾಗಿ ಮೊದಲ ಸ್ಥಾನದಲ್ಲಿದೆ.

  2. ಅಮೆಜಾನ್

  ಪೇ ಪ್ಯಾಕೆಜ್: ಅಮೆಜಾನ್ ಸಂಸ್ಥೆ ಸಾಪ್ಟ್ ವೇರ್ ಡೆವಲಪ್ಮೆಂಟ್ ಇಂಜಿನಿಯರ್(SDE) ಆಗಿ ಸೇರುವ ಹೊಸಬರಿಗೆ ವಾರ್ಷಿಕವಾಗಿ 7-18 ಲಕ್ಷ ಸಂಬಳ ನೀಡುತ್ತಿದ್ದು, ಸರಾಸರಿ 13.39 ಲಕ್ಷ ಪಾವತಿಸುತ್ತದೆ.
  ಜೆಫ್ ಬೆಜೊಸ್ ಅಮೆಜಾನ್.ಕಾಮ್ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ. ಅಮೆಜಾನ್.ಕಾಮ್ ಜಗತ್ತಿನ ಪ್ರತಿಷ್ಠಿತ ಇ-ಕಾಮರ್ಸ್, ಆನ್ಲೈನ್ ಮಾರುಕಟ್ಟೆಯ ಬೃಹತ್ ಕಂಪನಿಯಾಗಿದೆ.

  3. ಫ್ಲಿಪ್ ಕಾರ್ಟ್

  ಪೇ ಪ್ಯಾಕೆಜ್: ಸಾಪ್ಟ್ ವೇರ್ ಡೆವಲಪ್ಮೆಂಟ್ ಇಂಜಿನಿಯರ್(SDE) ಆಗಿ ಸೇರುವ ಹೊಸಬರಿಗೆ ವಾರ್ಷಿಕವಾಗಿ 12-22 ಲಕ್ಷ ಸಂಬಳ ನೀಡುತ್ತಿದ್ದು, ಸರಾಸರಿ 16.2 ಲಕ್ಷ ಪಾವತಿಸುತ್ತದೆ.

  4. ಇಂಟ್ಯೂಟ್(Intuit)

  ಪೇ ಪ್ಯಾಕೆಜ್: ಸಾಪ್ಟ್ ವೇರ್ ಇಂಜಿನಿಯರ್ ಆಗಿ ಸೇರುವ ಉದ್ಯೋಗಿಗಳಿಗೆ ವಾರ್ಷಿಕವಾಗಿ 8-20 ಲಕ್ಷ ವ್ಯಾಪ್ತಿಯಲ್ಲಿ ಸಂಬಳ ನೀಡುತ್ತಿದ್ದು, ವಾರ್ಷಿಕ ಸರಾಸರಿ 12.5 ಲಕ್ಷ ಪಾವತಿಸುತ್ತದೆ.
  ತುಂಬಾ ವೇಗವಾಗಿ ಬೆಳೆಯುತ್ತಿರುವ ಇಂಟ್ಯೂಟ್ ಸಂಸ್ಥೆ ಉತ್ತಮ ಆಕರ್ಷಕ ಸಂಬಳ ನೀಡುತ್ತಿದೆ.

  5. ಸ್ನ್ಯಾಪ್ ಡೀಲ್

  ಪೇ ಪ್ಯಾಕೆಜ್: ಸಾಪ್ಟ್ ವೇರ್ ಇಂಜಿನಿಯರ್ ಹುದ್ದೆಗೆ ಸೇರುವ ಉದ್ಯೋಗಿಗಳಿಗೆ ವಾರ್ಷಿಕವಾಗಿ 7-16 ಲಕ್ಷ ವ್ಯಾಪ್ತಿಯಲ್ಲಿ ಸಂಬಳ ಪಾವತಿಸುತ್ತಿದ್ದು,, ವಾರ್ಷಿಕ ಸರಾಸರಿ 10 ಲಕ್ಷ ನೀಡುತ್ತದೆ.

  6. ಲಿಂಕ್ಡ್ಇನ್

  ಪೇ ಪ್ಯಾಕೆಜ್: ಸಾಪ್ಟ್ ವೇರ್ ಇಂಜಿನಿಯರ್ ಆಗಿ ಸೇರುವ ಉದ್ಯೋಗಿಗಳಿಗೆ ವಾರ್ಷಿಕವಾಗಿ 12.5-15 ಲಕ್ಷ ವ್ಯಾಪ್ತಿಯಲ್ಲಿ ಸಂಬಳ ನೀಡುತ್ತಿದ್ದು, ವಾರ್ಷಿಕ ಸರಾಸರಿ 14.25 ಲಕ್ಷ ಪಾವತಿಸುತ್ತದೆ.

  7. ವಿಸಾ ಇಂಕ್(visa inc)

  ಪೇ ಪ್ಯಾಕೆಜ್: ವಿಸಾ ಇಂಕ್ ಕಂಪನಿಯಲ್ಲಿ ಕೆಲಸ ಗಿಟ್ಟಿಸುವವರು ವಾರ್ಷಿಕವಾಗಿ 8-23 ಲಕ್ಷ ವ್ಯಾಪ್ತಿಯಲ್ಲಿ ಉತ್ತಮ ಸಂಬಳ ಪಡೆಯಬಹುದು. ವಾರ್ಷಿಕ ಸರಾಸರಿ 16 ಲಕ್ಷ ಪಾವತಿಸುತ್ತದೆ.

  8. ವಾಲ್ ಮಾರ್ಟ್

  ಪೇ ಪ್ಯಾಕೆಜ್: ವಾಲ್ ಮಾರ್ಟ್ ಸಂಸ್ಥೆ ಉದ್ಯೋಗಿಗಳಿಗೆ ವಾರ್ಷಿಕವಾಗಿ 16-19 ಲಕ್ಷ ವ್ಯಾಪ್ತಿಯಲ್ಲಿ ಸಂಬಳ ಪಾವತಿಸುತ್ತದೆ.
  ವಾಲ್ ಮಾರ್ಟ್ ಅಮೆರಿಕಾ ಮೂಲದ ಕಂಪನಿಯಾಗಿದ್ದು, ಇದೊಂದು ಹೈಪರ್ ಮಾರ್ಕೆಟ್, ರಿಯಾಯಿತಿ ಮಳಿಗೆ ಮತ್ತು ದಿನಸಿ ಸ್ಟೋರ್ ಆಗಿದೆ.

  9. ಸಿಸ್ಕೊ(Cisco)

  ಪೇ ಪ್ಯಾಕೆಜ್: ಅಂತರಾಷ್ಟ್ರೀಯ ಖ್ಯಾತಿಯ ಸಿಸ್ಕೊ ಹೊಸ ಉದ್ಯೋಗಿಗಳಿಗೆ ಸರಾಸರಿ 10.3 ಲಕ್ಷ ಸಂಬಳ ನೀಡುತ್ತಿದ್ದು, ವಾರ್ಷಿಕವಾಗಿ 8-25 ಲಕ್ಷ ಸಂಬಳ ಪಾವತಿಸುತ್ತದೆ.

  10. ಗೂಗಲ್

  ಪೇ ಪ್ಯಾಕೆಜ್: ಗೂಗಲ್ ಕೂಡ ಉತ್ತಮ ಸಂಬಳ ಒದಗಿಸುತ್ತಿದ್ದು, ವಾರ್ಷಿಕವಾಗಿ 6-10 ಲಕ್ಷ ಸಂಬಳ ಪಾವತಿಸುತ್ತದೆ. ವಾರ್ಷಿಕವಾಗಿ ಸರಾಸರಿ 18 ಲಕ್ಷ ಸಂಬಳ ನೀಡುತ್ತಿದೆ. ದೇಶದ ಈ 10 ಕಂಪನಿಗಳು ಉದ್ಯೋಗ ಕಡಿತ(Job Cut) ಮಾಡುತ್ತಿವೆ...?

  English summary

  Top highest paying Companies in Bangalore

  Bangalore is considered as the IT hub of the nation because majority of the IT companies have their offices in the city. Both local, national and international IT companies are present in Bangalore. The city has a lot to offer to the aspiring software engineers.
  Company Search
  Enter the first few characters of the company's name or the NSE symbol or BSE code and click 'Go'
  Thousands of Goodreturn readers receive our evening newsletter.
  Have you subscribed?

  Find IFSC

  ಕರ್ನಾಟಕ ವಿಧಾನಸಭೆ ಚುನಾವಣೆ 2018

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more