ಜಿಯೋ ಧಮಾಕಾ! 112 GB ಉಚಿತ ಡೇಟಾ ಆಫರ್.. ಪಡೆಯುವುದು ಹೇಗೆ?

ಜಿಯೋಫೋನ್ ಮ್ಯಾಚ್ ಪಾಸ್ ಅಡಿಯಲ್ಲಿ ರಿಲಯನ್ಸ್ ಜಿಯೋ 56 ದಿನಗಳವರೆಗೆ ವ್ಯಾಲಿಡಿಟಿಯನ್ನು ಹೊಂದಿದ್ದು, 112GB ಡೇಟಾ ಒದಗಿಸಲಿದೆ.

ಭಾರತದ ಟೆಲಿಕಾಂ ಮಾರುಕಟ್ಟೆಯನ್ನು ಜಿಯೋ ಪ್ರವೇಶ ಮಾಡಿದಂದಿನಿಂದ ದರ ಸಮರವನ್ನು ಸಾರಿದ್ದು, ಇತರೆ ಟೆಲಿಕಾಂ ಕಂಪನಿಗಳು ತಮ್ಮ ಯೋಜನೆಗಳ ಬೆಲೆಯನ್ನು ತಗ್ಗಿಸುವಂತೆ ಮಾಡಿದೆ. ನೂತನ ಪರಿಕಲ್ಪನೆಯ ಆಕರ್ಷಕ ಆಫರ್ ಗಳನ್ನು ಘೋಷಿಸುವುದರ ಮುಖಾಂತರ ಜಿಯೋ ಯಾವಾಗಲೂ ಸುದ್ದಿಯಲ್ಲಿರುತ್ತದೆ.

ಇದೀಗ ಜಿಯೋ ತನ್ನ ಗ್ರಾಹಕರಿಗೆ ಉಚಿತವಾಗಿ 112GB ಡೇಟಾ ಒದಗಿಸುವ ಮೂಲಕ ದರ ಸಮರವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡಿದೆ. ಜಿಯೋಫೋನ್ ಗ್ರಾಹಕರು IPL ಪಂದ್ಯಗಳನ್ನು ಉಚಿತವಾಗಿ ನೋಡಲಿ ಎನ್ನುವ ಕಾರಣಕ್ಕಾಗಿಯೇ ಜಿಯೋ 112 GB ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ!!

ಉಚಿತ 112GB ಡೇಟಾ!

ಉಚಿತ 112GB ಡೇಟಾ!

ಜಿಯೋಫೋನ್ ಮ್ಯಾಚ್ ಪಾಸ್ ಅಡಿಯಲ್ಲಿ ಜಿಯೋ ಬಳಕೆದಾರರು ಈಗ 112GB ಉಚಿತ ಡೇಟಾವನ್ನು ಪಡೆದುಕೊಳ್ಳಬಹುದು. ವಿಶೇಷವಾಗಿ ತಮ್ಮ ಮೊಬೈಲ್ ಗಳಲ್ಲಿ ಎಲ್ಲಾ ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಲು ವಿನ್ಯಾಸಗೊಳಿಸಿದ ಒಂದು ವಿಶೇಷ ಕೊಡುಗೆ ಇದಾಗಿದೆ.  ಸನ್ನಿ ಲಿಯೋನ್ ನಿಂದ ಕಲಿಯಬೇಕಾದ ಬಿಸಿನೆಸ್ ಮತ್ತು ಹೂಡಿಕೆ ಸಕ್ಸಸ್ ಫಾರ್ಮುಲಾಗಳೇನು?

ಆಫರ್ ವ್ಯಾಲಿಡಿಟಿ

ಆಫರ್ ವ್ಯಾಲಿಡಿಟಿ

ಜಿಯೋಫೋನ್ ಮ್ಯಾಚ್ ಪಾಸ್ ಅಡಿಯಲ್ಲಿ ರಿಲಯನ್ಸ್ ಜಿಯೋ 56 ದಿನಗಳವರೆಗೆ ವ್ಯಾಲಿಡಿಟಿಯನ್ನು ಹೊಂದಿದ್ದು, 112GB ಡೇಟಾ ಒದಗಿಸಲಿದೆ.

ಏನಿದು ಜಿಯೋಫೋನ್ ಮ್ಯಾಚ್ ಪಾಸ್?

ಏನಿದು ಜಿಯೋಫೋನ್ ಮ್ಯಾಚ್ ಪಾಸ್?

ಜಿಯೋಫೋನ್ ಮ್ಯಾಚ್ ಪಾಸ್ ಎನ್ನುವುದು ಜಿಯೋನ ಹೊಸ ಪ್ರಸ್ತಾಪವಾಗಿದ್ದು, 112GB ಸಂಪೂರ್ಣವಾಗಿ ಉಚಿತವಾಗಿದೆ. ಇದಕ್ಕಾಗಿ ಗ್ರಾಹಕರು ತಮ್ಮ 10 ಸ್ನೇಹಿತರನ್ನು ಜಿಯೋಫೋನ್ ಪಡೆಯುವಂತೆ ಮಾಡಬೇಕಾಗಿದೆ. ಪ್ರತಿಯೊಬ್ಬ ಸ್ನೇಹಿತರಿಗೆ ಜಿಯೋಫೋನ್ ಪಡೆದಾಗ ಆಪರೇಟರ್ ಡೇಟಾ ಪ್ಯಾಕ್ ಗಳನ್ನು ನೀಡುತ್ತದೆ.

ಜಿಯೋಫೋನ್ ಮ್ಯಾಚ್ ಪಾಸ್ ಪಡೆಯುವುದು ಹೇಗೆ?

ಜಿಯೋಫೋನ್ ಮ್ಯಾಚ್ ಪಾಸ್ ಪಡೆಯುವುದು ಹೇಗೆ?

ಹಂತ 1
ಆಸಕ್ತಿ ಹೊಂದಿರುವ ನಿಮ್ಮ ಸ್ನೇಹಿತರಿಗೆ ಟೋಲ್ ಫ್ರೀ ಸಂಖ್ಯೆ 1800-890-8900 ನೀಡಿ.
ಹಂತ 2
ನಿಮ್ಮ ಸ್ನೇಹಿತರು ಟೋಲ್ ಫ್ರೀ ಸಂಖ್ಯೆ 1800-890-8900 ಗೆ ಕರೆ ಮಾಡಬೇಕಾಗುತ್ತದೆ. ಮತ್ತು ನಿಮ್ಮ ಜಿಯೋ ಸಂಖ್ಯೆ ಮತ್ತು ವಾಸವಾಗಿರುವ ಸ್ಥಳದ ಪಿನ್ ಕೋಡ್ ಗಳನ್ನು ನಮೂದಿಸಬೇಕು.
ಹಂತ 3
ನಿಮ್ಮ ಸ್ನೇಹಿತರು JioPhone ಅನ್ನು ಪಡೆಯಲು ಜಿಯೋ ರಿಟೆಲರ್ ಗೆ ಭೇಟಿ ನೀಡಬಹುದು.
ಹಂತ 4
ನಿಮ್ಮ ಮತ್ತು ನಿಮ್ಮ ಸ್ನೇಹಿತನ ಜಿಯೋ ಖಾತೆಗೆ ಕೊಡುಗೆ ನೀಡಲಾಗುವುದು.

ಜಿಯೋಫೋನ್ ಮ್ಯಾಚ್ ಪಾಸ್ ಹೇಗೆ ಕೆಲಸ ಮಾಡುತ್ತದೆ?

ಜಿಯೋಫೋನ್ ಮ್ಯಾಚ್ ಪಾಸ್ ಹೇಗೆ ಕೆಲಸ ಮಾಡುತ್ತದೆ?

1. ನಿಮ್ಮ ಸ್ನೇಹಿತರಲ್ಲಿ 4 ಜನರು ಜಿಯೋಫೋನ್ ಖರೀದಿಸಿದರೆ 4 ದಿನಗಳ ವ್ಯಾಲಿಡಿಟಿಯೊಂದಿಗೆ 8GB ಡೇಟಾ ಪ್ಯಾಕ್ ಪಡೆಯುವಿರಿ. ಇದಲ್ಲದೆ, ನೀವು ದಿನಕ್ಕೆ 2 ಜಿಬಿ ಡೇಟಾವನ್ನು ಮಾತ್ರ ಬಳಸಬಹುದು.

2. ನಿಮ್ಮ 5ನೇಯ ಸ್ನೇಹಿತ ಜಿಯೋಫೋನ್ ಖರೀದಿಸಿದರೆ ಬೋನಸ್ 24 ಜಿಬಿ ಡೇಟಾ ಪ್ಯಾಕ್ ನ್ನು 12 ದಿನಗಳ ವ್ಯಾಲಿಡಿಟಿಯೊಂದಿಗೆ ಪಡೆಯುವಿರಿ. ದೈನಂದಿನ ಮಿತಿ 2 ಜಿಬಿ ಆಗಿರುತ್ತದೆ.
3. ಜಿಯೋಫೋನ್ ಪಡೆಯುವ 6 ನೇ ಮತ್ತು 9 ನೇ ಸ್ನೇಹಿತನ ನಡುವೆ, ನೀವು 8GB ಡೇಟಾ ಪ್ಯಾಕ್ ಅನ್ನು 4 ದಿನಗಳ ವ್ಯಾಲಿಡಿಟಿಯೊಂದಿಗೆ ಪಡೆಯುವಿರಿ. ದೈನಂದಿನ ಡೇಟಾ ಮಿತಿ 2 ಜಿಬಿ ಆಗಿರುತ್ತದೆ.

10ನೇ ಜಿಯೋಫೋನ್ ಖರೀದಿ

10ನೇ ಜಿಯೋಫೋನ್ ಖರೀದಿ

ನಿಮ್ಮ 10ನೇ ಸ್ನೇಹಿತ 10ನೇ ಜಿಯೋಫೋನ್ ಖರೀದಿಸಿದರೆ, ನೀವು ಬೋನಸ್ 24 ಜಿಬಿ ಡೇಟಾ ಪ್ಯಾಕ್ ಅನ್ನು 12 ದಿನಗಳ ಮಾನ್ಯತೆಯೊಂದಿಗೆ ಪಡೆಯುವಿರಿ. ದೈನಂದಿನ ಡೇಟಾ ಮಿತಿ 2 ಜಿಬಿ ಆಗಿರುತ್ತದೆ.

ನಿಮ್ಮ ಸ್ನೇಹಿತನಿಗೆ ಏನು ಲಾಭ?

ನಿಮ್ಮ ಸ್ನೇಹಿತನಿಗೆ ಏನು ಲಾಭ?

ನಿಮ್ಮ ಸ್ನೇಹಿತರಲ್ಲಿ ಪ್ರತಿಯೊಬ್ಬರಿಗೂ ನಾಲ್ಕು ದಿನಗಳ ವ್ಯಾಲಿಡೀಟಿಯೊಂದಿಗೆ 8GB ಡೇಟಾ ಪ್ಯಾಕ್ ಲಭ್ಯವಾಗುತ್ತದೆ. ದೈನಂದಿನ ಡೇಟಾ ಮಿತಿ 2 ಜಿಬಿ ಆಗಿರುತ್ತದೆ.

ಉಚಿತ IPL ಅನುಭವ

ಉಚಿತ IPL ಅನುಭವ

ಜಿಯೋಫೋನ್ ಬಳಕೆದಾರರು ಉಚಿತವಾಗಿ IPL ನೋಡಲಿ ಎನ್ನುವ ಕಾರಣಕ್ಕಾಗಿಯೇ 112 GB ಡೇಟಾ ಆಫರ್ ಘೋಷಿಸಿದೆ. ಇದು 56 ದಿನಗಳ ವ್ಯಾಲಿಡಿಯನ್ನು ಹೊಂದಿರಲಿದ್ದು, ಜಿಯೋ ಪೋನ್ ಬಳಕೆದಾರರನ್ನು ಬಿಟ್ಟು ಉಳಿದವರಿಗೆ ಈ ಆಫರ್ ಲಭ್ಯವಿಲ್ಲ. ತನ್ನ ಬಳಕೆದಾರರಿಗೆ IPL ಅನುಭವದ ಆನಂದವನ್ನು ಹೆಚ್ಚು ಮಾಡುವ ಸಲುವಾಗಿ ಹೆಚ್ಚಿನ ಡೇಟಾವನ್ನು ಉಚಿತವಾಗಿ ನೀಡಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+