For Quick Alerts
ALLOW NOTIFICATIONS  
For Daily Alerts

ಸನ್ನಿ ಬರ್ತಡೇ! ಸನ್ನಿ ಲಿಯೋನ್ ಈ ಮಟ್ಟಕ್ಕೆ ಬೆಳೆದದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ..

ಬಾಲಿವುಡ್ ನಲ್ಲಿ ಮಿಂಚುತ್ತಿರುವ ಮೋಹಕ ನಟಿ ಹಾಗೂ ಮಾಜಿ ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ 84 ಕೋಟಿ ಆಸ್ತಿಯ ಒಡತಿ!!ಸನ್ನಿ ಲಿಯೋನ್ ಮೊನ್ನೆ 36 ವಸಂತಗಳನ್ನು ದಾಟಿ 37ಕ್ಕೆ ಕಾಲಿಟ್ಟಿದ್ದಾಳೆ.

|

ಬಾಲಿವುಡ್ ನಲ್ಲಿ ಮಿಂಚುತ್ತಿರುವ ಮೋಹಕ ನಟಿ ಹಾಗೂ ಮಾಜಿ ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ 84 ಕೋಟಿ ಆಸ್ತಿಯ ಒಡತಿ!! ಸನ್ನಿ ಲಿಯೋನ್ ಮೊನ್ನೆ 36 ವಸಂತಗಳನ್ನು ದಾಟಿ 37ಕ್ಕೆ ಕಾಲಿಟ್ಟಿದ್ದಾಳೆ. ತನ್ನ ಆಕರ್ಷಕ ದೇಹ ಸಿರಿ, ಮೈಮಾಟದ ಸೊಬಗಿನ ಮೂಲಕ ಹುಡುಗರ ಹಾಟ್ ಫೇವರಿಟ್ ಎನಿಸಿದ್ದಾಳೆ.

ಜಾಗತಿಕವಾಗಿ ನೀಲಿ ಚಿತ್ರಗಳ ಮೂಲಕ ಪ್ರಚಲಿತಕ್ಕೆ ಬಂದಿರುವ ಸನ್ನಿ, ಮಧ್ಯಮ ವರ್ಗದ ಹಿನ್ನೆಲೆಯ ಹುಡುಗಿ. ಇಂದು 84ಕ್ಕಿಂತ ಅಧಿಕ ಕೋಟಿ ಆಸ್ತಿಯ ಮಾಲಕಿ ಆಗಿರುವುದು ಹೇಗೆ? ಅವಳ ಯಶಸ್ಸಿನ ಫಾರ್ಮುಲಾ ಏನು? ಹೂಡಿಕೆದಾರರು, ಬಿಸಿನೆಸ್ ಮಾಡಲಿಚ್ಚಿಸುವರು ಸನ್ನಿಯಿಂದ ಕಲಿಯಬೇಕಾದದ್ದು ಏನು ಇತ್ಯಾದಿ ಕೂತುಹಲ ಹಲವರಲ್ಲಿ ಇದ್ದೇ ಇರುತ್ತದೆ. ಸ್ವಂತ ಉದ್ಯಮ(ಕಂಪನಿ) ಪ್ರಾರಂಭಿಸುವುದು ಹೇಗೆ?

ಬಾಲಿವುಡ್ ಸೇರಿದಂತೆ ಹಲವು ರಂಗದಲ್ಲಿ ಯಶಸ್ವಿ ಉದ್ಯಮಿಯಾಗಿ, ಹೂಡಿಕೆದಾರಳಾಗಿ ಹಣಕಾಸು ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಸನ್ನಿ ಲಿಯೋನ್ ಯಶಸ್ಸಿನ ಸೂತ್ರಗಳೇನು ಎಂಬುದನ್ನು ನೋಡೋಣ...

ಬೇಕರಿಯಲ್ಲಿ ಕೆಲಸ ಮಾಡಿದ್ದ ಸನ್ನಿ

ಬೇಕರಿಯಲ್ಲಿ ಕೆಲಸ ಮಾಡಿದ್ದ ಸನ್ನಿ

ಸನ್ನಿ ಲಿಯೋನ್ ತನ್ನ ಪ್ರಾರಂಭದ ಕಷ್ಟದ ದಿನಗಳಲ್ಲಿ ಜರ್ಮನಿ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದಳು. 2003ರಲ್ಲಿ ಡ್ಯಾನ್ಸರ್ ಸ್ನೀಹಿತರೊಬ್ಬರು ಪ್ರಸಿದ್ಧ ಅಡಲ್ಟ್ ಮ್ಯಾಗಜೀನ್ ಫೋಟೋಗ್ರಾಫರ್ ಗೆ ಪರಿಚಯ ಮಾಡಿಸಿಕೊಟ್ಟರು. ನಂತರದ ದಿನಗಳಲ್ಲಿ ಸನ್ನಿ ಹಿಂದಿರುಗಿ ನೋಡಿಲ್ಲ. ಇದು ಸನ್ನಿ ಜೀವನದ ದಿಕ್ಕನ್ನೇ ಬದಲಿಸಿತು.

ಬಂಡವಾಳ ಚರ್ಚೆ

ಬಂಡವಾಳ ಚರ್ಚೆ

ಸನ್ನಿ ಲಿಯೋನ್ ಮತ್ತು ಗಂಡ ಡೆನಿಯಲ್ ವೆಬರ್ ಇಬ್ಬರೂ ಹೂಡಿಕೆ ಬಗ್ಗೆ ಚರ್ಚೆ ಮಾಡುತ್ತಾರೆ. ಅಮೆರಿಕಾದ ಸ್ಥಿರ ಷೇರು ಮತ್ತು ಕೆಲ ಮ್ಯೂಚುವಲ್ ಫಂಡ್ ಗಳಲ್ಲಿ ಸನ್ನಿ ಹೂಡಿಕೆ ಮಾಡಿದ್ದಾಳೆ. ಜತೆಗೆ ವೈಯಕ್ತಿಕ ನಿವೃತ್ತಿ ಖಾತೆ(IRAs) ಗಳಲ್ಲಿ ಮಾಡಿದ್ದಾರೆ. ಯುಎಸ್ ನಲ್ಲಿ ಮನೆ ಕೂಡ ಖರೀದಿ ಮಾಡಿದ್ದು, ಗೃಹಗಳ ಮೇಲೂ ಹೂಡಿಕೆ ಮಾಡುತ್ತಾರೆ. ಈ ನಟಿಗೆ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವುದೆಂದರೆ ತುಂಬಾ ಇಷ್ಟವಾಗಿದ್ದು, ಹಲವು ಕಡೆ ಹಣ ಹೂಡಿದ್ದಾರೆ.

ವಾಸ್ತವಿಕ ಹೂಡಿಕೆಗೆ ಪ್ರಾಧಾನ್ಯ
 

ವಾಸ್ತವಿಕ ಹೂಡಿಕೆಗೆ ಪ್ರಾಧಾನ್ಯ

ಸನ್ನಿ ಸಿಕ್ಕಾಪಟ್ಟೆ ಲೆಕ್ಕಚಾರದ ಮಹಿಳೆ. ಶೇಕಡಾ ನೂರುರಷ್ಟು ವಿಶ್ವಾಸ ಇದ್ದರೆ ಮಾತ್ರ ಹೂಡಿಕೆಗೆ ಮುಂದಾಗುತ್ತಾರೆ. ಅನ್ಯತಹ ಅಪಾಯ ತೆಗೆದುಕೊಳ್ಳಲು ಬಯಸುವುದಿಲ್ಲ. ಇದು ಅಪಾಯ ಎಂದು ತಿಳಿದಿದ್ದರೆ ಅಥವಾ ನಷ್ಟ ಅನುಭವಿಸಿದ್ದರೆ ಆಗಿದ್ದರ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುವುದಿಲ್ಲ. ಬದಲಾಗಿ ವಾಸ್ತವಿಕ ಹೂಡಿಕೆಗಳತ್ತ ಗಮನ ಹರಿಸುವುದು ಸೂಕ್ತ ಎನ್ನುವುದು ಸನ್ನಿ ನಂಬಿಕೆ.
ಬಿಸಿನೆಸ್ ಲಾಭದಾಯಕವಾಗಲುಕನಿಷ್ಟ 2-3 ವರ್ಷಗಳು ಬೇಕಾಗುತ್ತದೆ. ತುಂಬಾ ವೇಗವಾಗಿ ಹೋಗಬೇಕು ಎಂದು ನಾನು ನಂಬುವುದಿಲ್ಲ. ಬದಲಾಗಿ ನಿಧಾನವಾಗಿ ಮತ್ತು ಸ್ಥಿರವಾಗಿ ನಷ್ಟವಾಗದಂತೆ ಎಚ್ಚರವಹಿಸಿ ಮುನ್ನಡೆಯುತ್ತೇನೆ ಎನ್ನುತ್ತಾರೆ.

ಬೇಗ ಪ್ರಾರಂಭಿಸಿ

ಬೇಗ ಪ್ರಾರಂಭಿಸಿ

ಹೌದು... ಇದು ಮುಖ್ಯವಾದ ಸಂಗತಿಯಾಗಿದ್ದು, ಸನ್ನಿ ತನ್ನ 8-10 ವಯಸ್ಸಿನಲ್ಲೇ ಕೆನಡಾದ ಗಲ್ಲಿಗಳಲ್ಲಿ ವಸ್ತುಗಳನ್ನು ಮಾರಾಟ ಮಾಡಿ ಉಳಿತಾಯ ಮಾಡಲು ಪ್ರಾರಂಭಿಸಿದರು. ತನ್ನ ಬಾಸ್ಕೆಟ್ ಬಾಲ್ ಮತ್ತು ಸಾಕರ್ ತಂಡಗಳಿಗೆ ವಸ್ತುಗಳನ್ನು ಮಾರಾಟ ಮಾಡಿದ್ದಳು. ಅಲ್ಲಿಂದಲೇ ಇವರ ಹಣ ಉಳಿತಾಯದ ಪಾಠ ಶುರುವಾಯಿತು.

ಕಲಿಕೆ ಮೂಲಗಳು ಮುಖ್ಯ

ಕಲಿಕೆ ಮೂಲಗಳು ಮುಖ್ಯ

ತನ್ನ ಹೈಸ್ಕೂಲ್ ದಿನಗಳಲ್ಲಿ ಕ್ಯಾಲಿಫೊರ್ನಿಯದ ಪ್ಯೂಚರ್ ಬಿಸಿನೆಸ್ ಲೀಡರ್ಸ್ ಆಫ್ ಅಮೆರಿಕಾದ ಕ್ಲಬ್ ಗೆ ಸೇರಿದರು. ಇದರಿಂದಾಗಿ ಪೂರೈಕೆ, ಬೇಡಿಕೆ, ಮಾರ್ಕೆಟಿಂಗ್ ಇತ್ಯಾದಿಗಳನ್ನು ತಿಳಿಯಲು ಸಹಕಾರಿಯಾಯಿತು. ಬಿಸಿನೆಸ್ ಮತ್ತು ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ಉದ್ಯಮಶೀಲತಾ ಸಮಾವೇಶಗಳಿಗೆ ಹೋಗುತ್ತಿದ್ದರು. ಇದು ಕಲಿಕೆಯ ಮೂಲಗಳಾಗಿ ಯಶಸ್ಸಿಗೆ ಕಾರಣವಾಯಿತು.

ಅಡಲ್ಟ್ ಕಂಟೆಂಟ್

ಅಡಲ್ಟ್ ಕಂಟೆಂಟ್

ಸನ್ನಿ ವಯಸ್ಕರಾದಾಗ ಅಡಲ್ಟ್ ಕಂಟೆಂಟ್(ವಯಸ್ಕರ ವಿಷಯ) ಒಂದು ಬಿಸಿನೆಸ್ ಎನ್ನುವುದು ತಿಳಿಯಿತು. ಆದರೆ ಅದಕ್ಕಿಂತಲೂ ಸ್ವಂತ ವೆಬ್ಸೈಟ್, ಕಂಪನಿ ಪ್ರಾರಂಭಿಸುವ ತವಕ ಹೊಂದಿದ್ದರು. ನಾನು ಈ ಇಂಡಸ್ಟ್ರಿಯಲ್ಲಿ ಉಳಿದರೆ ಎಲ್ಲ ಹಣವನ್ನು ಪ್ರತಿ ಡಾಲರರವಮಾಡಲು ಬಯಸುತ್ತೇನೆ. ನನ್ನ ದೇಹ, ನನ್ನ ಚಿತ್ರ ಮತ್ತು ನನ್ನ ಬ್ರಾಂಡ್ ಹೀಗೆ ಮೂಲಗಳಿಂದ ಹಣ ಗಳಿಸುತ್ತೇನೆ ಎಂದು ನಿರ್ಧರಿಸಿದಳು.

ವ್ಯವಹಾರ ತಿಳಿವಳಿಕೆ

ವ್ಯವಹಾರ ತಿಳಿವಳಿಕೆ

ಏನೇ ಕೆಲಸ ಮಾಡಿದರೂ ಪ್ರಾರಂಭದಿಂದ ಅಂತ್ಯದವರೆಗೆ ಮಾಡಲು ಬಯಸುತ್ತೇನೆ. ಅದನ್ನು ವೆಬ್ಸೈಟ್ ಟ್ರಾಫಿಕ್ ನಿಂದ ಕಲಿತೆ. ಡಿಜಿಟಲ್ ಜಗತ್ತಿನಲ್ಲಿ ವೆಬ್ಸೈಟ್ ಟ್ರಾಫಿಕ್ ಬಹುಮುಖ್ಯ ವಿಚಾರವಾಗಿದ್ದು, ತಿಳಿದಿರಬೇಕಾಗುತ್ತದೆ. ಈ ಟ್ರಾಫಿಕ್ ಎಲ್ಲಿ ಕಳುಹಿಸಬೇಕು ಮತ್ತು ಅದನ್ನು ಹೇಗೆ ಕಬಳಿಸಬೇಕು ಎನ್ನುವುದು ನಾನು ಕಲಿತಿದ್ದೇನೆ ಎಂದು ಸನ್ನಿ ಹೇಳುತ್ತಾರೆ.

ಸಂದರ್ಭಕ್ಕನುಗುಣವಾಗಿ ಆಯ್ಕೆಗಳು ಮುಕ್ತವಾಗಿರಲಿ

ಸಂದರ್ಭಕ್ಕನುಗುಣವಾಗಿ ಆಯ್ಕೆಗಳು ಮುಕ್ತವಾಗಿರಲಿ

ಇದು ನಾಳೆ ಹಾಗೆ ಕೊನೆಗೊಳ್ಳಬಹುದು... ಭಾರತದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಜಗತ್ತಿನಾದ್ಯಂತ 25 ಮಿಲಿಯನ್ ಜನರು ವಿಕ್ಷೀಸಿದ್ದರು. ಭಾರತದಲ್ಲಿ ಇದು ಹೇಗೆ ಕಾರ್ಯನಿರ್ವಹಿಸುತ್ತದೆ. ಇದು ಹೇಗೆ ಅಷ್ಟೊಂದು ಮಟ್ಟದ ಯಶಸ್ಸು ಕಂಡಿತ್ತು ಎಂಬುದನ್ನು ತಿಳಿದುಕೊಂಡು ಭಾರತದಲ್ಲಿ ಹಲವಾರು ಸಿನಿಮಾಗಳಿಗೆ ಸಹಿ ಮಾಡಿದರು. ವಿವಿಧ ಬ್ರಾಂಡ್ ಗಳಿಗೆ ಜಾಹೀರಾತು ನೀಡಿದರು.

ಸಾಮಾಜಿಕ ಮಾದ್ಯಮ ತಿಳಿದುಕೊಳ್ಳಿ

ಸಾಮಾಜಿಕ ಮಾದ್ಯಮ ತಿಳಿದುಕೊಳ್ಳಿ

ಪ್ರತಿನಿತ್ಯ ನಾವು ಸೋಷಿಯಲ್ ಮಿಡಿಯಾ ಬಳಕೆ ಮಾಡುತ್ತೇವೆ. ನಮ್ಮ ವಿಚಾರಗಳನ್ನು ಹಂಚಿಕೊಳ್ಳುತ್ತೇವೆ. ಮೂವಿ ಪ್ರಮೋಷನ್, ಬ್ರಾಂಡ್ ಬಗ್ಗೆ ಟ್ವೀಟ್ ಹೀಗೆ ಹಲವಾರು.... ಕೆಲ ನಿರ್ದೇಶಕರು ಪ್ರತಿ 20 ನಿಮಿಷಕ್ಕೆ ಟ್ವೀಟ್ ಮಾಡುವಂತೆ ಹೇಳಿದರು. ಆದರೆ ಸನ್ನಿ ಹಾಗೆ ಮಾಡಲಿಲ್ಲ. ಇದರಿಂದಾಗಿ ನನ್ನ ಫಾಲೋವರ್ಸ್ ಕಳೆಉಕೊಳ್ಳಬೇಕಾಗುತ್ತದೆ. ಅವರನ್ನು ಬ್ಲಾಕ್ ಅಥವಾ ಅನ್ ಫಾಲೋವ್ ಮಾಡಲು ನನಗೆ ಇಷ್ಟವಿಲ್ಲ ಎಂದರು. ಹೀಗಾಗಿ ಸೋಷಿಯಲ್ ಮಿಡಿಯಾ ಬಗ್ಗೆ ಜ್ಞಾನವಿರಬೇಕಾಗುತ್ತದೆ.

ಒಂದು ಸಿನಿಮಾ ಸಂಭಾವನೆ ಎಷ್ಟು?

ಒಂದು ಸಿನಿಮಾ ಸಂಭಾವನೆ ಎಷ್ಟು?

ಸನ್ನಿ ಲಿಯೋನ್ ಒಂದು ಸಿನಿಮಾಕ್ಕೆ 4.5 ಕೋಟಿ ರೂ ಡಿಮ್ಯಾಂಡ್ ಮಾಡುತ್ತಾರಂತೆ. ಬಾಲಿವುಡ್ ನಲ್ಲಿ ಕೂಡ ಮುಂಚೂಣಿ ನಟಿಯರ ಸಾಲಿನಲ್ಲಿ ನಿಂತಿದ್ದಾರೆ. ಶಾರುಕ್ ಖಾನ್, ಪ್ರಿಯಾಂಕ ಛೋಪ್ರಾ, ದೀಪಿಕಾ, ಐಶ್ವರ್ಯ ರೈನಂತೆ ಪ್ರಸಿದ್ದಿ ಮತ್ತು ಹಿಂಬಾಲಕರನ್ನು ಹೊಂದಿದ್ದಾರೆ. ಈಗ ಸನ್ನಿ ಬಳಿ 1.5 ಕೋಟಿಯ ಮೇಸರೇಟಿ ಹಾಗೂ ಬಿಎಂಡಬ್ಲ್ಯು ಕಾರುಗಳಿವೆ.

ಹೆಚ್ಚುತ್ತಿರುವ ಸನ್ನಿ ಸಂಪತ್ತು!

ಹೆಚ್ಚುತ್ತಿರುವ ಸನ್ನಿ ಸಂಪತ್ತು!

ಸನ್ನಿ ಲಿಯೋನ್ ಪತಿ ಡೇನಿಯಲ್‌ ವೆಬರ್‌ ಜೊತೆ ಸೇರಿ 2009ರಲ್ಲಿ ಸ್ಟೂಡಿಯೋ ಸನ್‌ಲಸ್ಟ್‌ ಪಿಕ್ಚರ್ಸ್ ತೆರೆದರು. ಅಲ್ಲಿಂದ ಇವರ ಸಂಪತ್ತು ಹೆಚ್ಚುತ್ತಾ ಹೋಯಿತು. ಇವರಿಬ್ಬರೂ ಸುಮಾರು 56 ವಯಸ್ಕರ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಅಲ್ಲದೆ ತಮ್ಮ ಬ್ಯಾನರ್‌ನಡಿ ಸುಮಾರು 59 ಸಿನಿಮಾ ಡೈರೆಕ್ಟ್‌ ಕೂಡಾ ಮಾಡಿದ್ದಾರೆ. ಸನ್ನಿ ಪೋರ್ನ್ ಇಂಡಸ್ಟ್ರಿ ಬಿಟ್ಟಿದ್ದರೂ ವಯಸ್ಕರ ವೆಬ್‌ಸೈಟ್‌ ಮೂಲಕ ಸಂಪಾದನೆ ಬರುತ್ತಿದೆ ಎನ್ನಲಾಗುತ್ತದೆ. ಇನ್ನು ಹಾಲಿವುಡ್‌ ಸಿನಿಮಾಗಳಾದ ದಿ ಗರ್ಲ್‌ ನೆಕ್ಸ್ಟ್ ಡೋರ್, ದಿ ವರ್ಜಿನಿಟಿ ಹಿಟ್‌ ನಂತಹ ಸಿನಿಮಾಗಳಿಂದಲೂ ಆದಾಯ ಬರುತ್ತಿದೆ. ಅಲ್ಲದೇ ಸನ್ನಿ ಭಾರತಕ್ಕೆ ಹಿಂದಿರುಗಿದ ಮೇಲಂತೂ ಬಾಲಿವುಡ್, ಮಾಡಲಿಂಗ್ ಅಸೈನ್‌ಮೆಂಟ್‌, ರಿಯಾಲಿಟಿ ಶೋ, ಸ್ಟೇಜ್‌ ಶೋಗಳಿಂದಲೂ ಕೋಟಿ ಕೋಟಿ ಸಂಪಾದಿಸುತ್ತಿದ್ದಾಳೆ.

English summary

Sunny Leone Business & Investment tips you can learn from Sunny Leone

For 35-year-old Sunny Leone, Bollywood is not the end destination that she wanted to reach. Instead, she realizes that this journey could come to an end any day, and is always prepared to do something next.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X