ಭಾರತದ ಅತಿದೊಡ್ಡ ಆನ್ಲೈನ್ ರಿಟೇಲರ್ ಫ್ಲಿಪ್‌ಕಾರ್ಟ್ ಸಂಸ್ಥೆಯ ಶೇ. 70ಕ್ಕಿಂತ ಹೆಚ್ಚಿನ ಪಾಲನ್ನು ವಾಲ್‌ಮಾರ್ಟ್ ಹಾಗು ಗೂಗಲ್ ನ ಅಲ್ಫಾಬೆಟ್ ಸಂಸ್ಥೆಗಳು ಖರಿದಿಸಲಿವೆ.
ಭಾರತದ ಅತಿದೊಡ್ಡ ಆನ್ಲೈನ್ ರಿಟೇಲರ್ ಫ್ಲಿಪ್‌ಕಾರ್ಟ್ ಸಂಸ್ಥೆಯ ಶೇ. 70ಕ್ಕಿಂತ ಹೆಚ್ಚಿನ ಪಾಲನ್ನು ವಾಲ್‌ಮಾರ್ಟ್ ಹಾಗು ಗೂಗಲ್ ನ ಅಲ್ಫಾಬೆಟ್ ಸಂಸ್ಥೆಗಳು ಖರಿದಿಸಲಿವೆ.

ಅಮೆರಿಕದ ರಿಟೇಲ್ ದೈತ್ಯ ಸಂಸ್ಥೆ ವಾಲ್‌ಮಾರ್ಟ್ ಅಂತಿಮ ಮಾತುಕತೆಯ ಸುತ್ತಿಗೆ ತಲುಪಿದ್ದು, ಶೀಘ್ರದಲ್ಲೇ ಸ್ವಾಧೀನ ಪ್ರಕ್ರಿಯೆ ಮಾಹಿತಿ ಬಹಿರಂಗವಾಗಲಿದೆ ಎಂದು ಹೇಳಲಾಗಿದೆ.
ಫ್ಲಿಪ್‌ಕಾರ್ಟ್ ವಾಲ್‌ಮಾರ್ಟ್ ಒಪ್ಪಂದದ ಮಾತುಕತೆ ಕೊನೆಯ ಹಂತಕ್ಕೆ ತಲುಪಿದೆ. ಫ್ಲಿಪ್‌ಕಾರ್ಟ್ ಖರೀದಿ ಒಪ್ಪಂದದ ಅನ್ವಯ ವಾಲ್‌ಮಾರ್ಟ್ ಸಂಸ್ಥೆ ಫ್ಲಿಪ್ಕಾರ್ಟ್‌ನ ವಿವಿಧ ಹೂಡಿಕೆದಾರ ಕಂಪನಿಗಳ ಪಾಲನ್ನು ಖರೀದಿಸಲಿದೆ.
ಫ್ಲಿಪ್‌ಕಾರ್ಟ್ ನಲ್ಲಿ ವಾಲ್ಮಾರ್ಟ್ ಶೇ. 55-61 ಪಾಲನ್ನು ಪಡೆದುಕೊಳ್ಳುವ ನಿರೀಕ್ಷೆಯಿದ್ದರೆ, ಆಲ್ಫಾಬೆಟ್ ಸುಮಾರು ಶೇ. 10ರಷ್ಟು ಪಾಲು ಸ್ವಾಧೀನಪಡೆದುಕೊಳ್ಳುವ ಸಾಧ್ಯತೆ ಇದೆ. ಜೆಫ್ ಬೆಜೊಸ್ ನೇತೃತ್ವದ ಟೆಕ್ ದೈತ್ಯ ಅಮೆಜಾನ್ ಸಂಸ್ಥೆ ಕೂಡ ಫ್ಲಿಪ್‌ಕಾರ್ಟ್ ನಲ್ಲಿ ಗಣನೀಯ ಪ್ರಮಾಣದ ಪಾಲನ್ನು ಪಡೆಯುವ ಸ್ಪರ್ಧೆಯಲ್ಲಿದೆ.
ವಾಲ್‌ಮಾರ್ಟ್ ನೊಂದಿಗಿನ ವಿಲೀನದ ನಂತರ ಫ್ಲಿಪ್‌ಕಾರ್ಟ್ ಸಹ ಸ್ಥಾಪಕ ಸಚಿನ್ ಬನ್ಸಲ್ ಸಂಸ್ಥೆ ತೊರೆಯಲಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಫ್ಲಿಪ್‌ಕಾರ್ಟ್ ಮೌಲ್ಯ ರೂ. 1.30 ಲಕ್ಷ ಕೋಟಿಗಳಷ್ಟಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications