ಕರ್ನಾಟಕ ವಿಧಾನಸಭಾ ಚುನಾವಣೆಯ ಮೇ ೧೨ ರಂದು ಇರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಚುನಾವಣೆಯ ಹಿನ್ನೆಲೆಯಲ್ಲಿ ನಾಳೆಯಿಂದ ಮೂರು ದಿನಗಳವರೆಗೆ ಬ್ಯಾಂಕ್ ರಜೆಗಳಿವೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಮೇ ೧೨ ರಂದು ಇರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಚುನಾವಣೆಯ ಹಿನ್ನೆಲೆಯಲ್ಲಿ ನಾಳೆಯಿಂದ ಮೂರು ದಿನಗಳವರೆಗೆ ಬ್ಯಾಂಕ್ ರಜೆಗಳಿವೆ.
ಬ್ಯಾಂಕ್ ಕೆಲಸಗಳು ಅದರಲ್ಲೂ ತುರ್ತು ಕೆಲಸಗಳೆನಿದ್ದರೂ ಇಂದೇ ಮುಗಿಸಿಕೊಳ್ಳಲು ಮರೆಯಬೇಡಿ. ಗ್ರಾಹಕರಿಗೆ ಸಿಹಿಸುದ್ದಿ! ಎಲ್ಪಿಜಿ ಬೆಲೆ 100 ರೂ. ಇಳಿಕೆ
ಮೇ 12 ಮತದಾನ
ಮೇ ೧೨ ಶನಿವಾರದಂದು ರಾಜ್ಯದಾದ್ಯಂತ ಮತದಾನ ಇರುವುದರಿಂದ, ಚುನಾವಣೆಯ ನಿಮಿತ್ತದಿಂದಾಗಿ ಬ್ಯಾಂಕ ಸಿಬ್ಬಂದಿಗಳನ್ನು ಬಳಕೆ ಮಾಡಿಕೊಳ್ಳಲಾಗುವುದು. ಹೀಗಾಗಿ ಮೇ 1೨ಕ್ಕೆ ಬ್ಯಾಂಕ್ ರಜೆ ಇರುತ್ತದೆ.
ಮೇ 11 ಶುಕ್ರವಾರ
ಮೇ ೧೧ ಶುಕ್ರವಾರ ಅಂದರೆ ನಾಳೆ ಕೂಡ ಬ್ಯಾಂಕ್ ಗಳು ತೆರೆದಿರುವುದಿಲ್ಲ. ಬ್ಯಾಂಕ್ ಸಿಬ್ಬಂದಿಗಳು ಚುನಾವಣೆಯ ಪೂರ್ವತಯಾರಿಯಾಗಿ ಶುಕ್ರವಾರ ಕಾರ್ಯನಿರತರಾಗುವುದರಿಂದ ನಾಳೆ ರಜೆ ಇದೆ.
ಮೇ 13 ಭಾನುವಾರ ರಜಾದಿನ ಆಗಿದ್ದರಿಂದ ಅಂದು ಸಹಜವಾಗಿಯೇ ರಜೆ ಇರಲಿದೆ. ಹೀಗಾಗಿ ಸೋಮವಾರದವರೆಗೆ ಕಾಯಬೇಕಾಗುತ್ತದೆ.
ಮದ್ಯದಂಗಡಿಗಳು ಬಂದ್
ಇಂದು ಸಂಜೆಯಿಂದಲೇ ಮದ್ಯದ ಅಂಗಡಿಗಳು ಬಂದ್ ಆಗಲಿವೆ. ಮೇ 12 ರ ಮಧ್ಯರಾತ್ರಿಯವರೆಗೆ ಮದ್ಯದಂಗಡಿಗಳು ಬಂದ್ ಮಾಡುವಂತೆ ಚುನಾವಣಾ ಆಯೋಗ ಸೂಚಿಸಿದೆ. ವಾರಾಂತ್ಯದ ಪಾರ್ಟಿ ಮೂಡ್ ನಲ್ಲಿರುವ ಮದ್ಯಪ್ರಿಯರು ಈ ವಾರ ಬೇಸರಿಸಿಕೊಳ್ಳಬಾರದು.
ಕೊನೆಮಾತು
ಮೇ 12 ರಂದು ಮತದಾನ ಇದ್ದು, ಮೇ 15 ಕ್ಕೆ ಫಲಿತಾಂಶ ಬರಲಿದೆ. ತಪ್ಪದೇ ವೋಟ್ ಮಾಡಿ, ಬೇರೆಯವರಿಂದ ವೋಟ್ ಮಾಡಿಸಿ. ಕರ್ನಾಟಕದ ಆರ್ಥಿಕ ಅಭಿವೃದ್ಧಿಗಾಗಿ ಸೂಕ್ತ, ಸಮರ್ಥ, ದಕ್ಷ, ಪ್ರಾಮಾಣಿಕ ಅಭ್ಯರ್ಥಿಗಳ ಆಯ್ಕೆ ನಮ್ಮದಾಗಲಿ. ರಾಜ್ಯದ ವಿಕಾಸ ಪ್ರಬುದ್ದ, ಪ್ರಜ್ಞಾವಂತ ಮತದಾರರ ಕೈಯಲ್ಲಿದೆ.


Click it and Unblock the Notifications