For Quick Alerts
ALLOW NOTIFICATIONS  
For Daily Alerts

ಪ್ರಧಾನಿ ನರೇಂದ್ರ ಮೋದಿಯವರ 10 ವೈಫಲ್ಯಗಳು ಯಾವುವು ಗೊತ್ತೆ?

ಇಲ್ಲಿಯವರೆಗೆ ನೀಡಿದ ಭರವಸೆಗಳ ವೈಫಲ್ಯಗಳು ಕೂಡ ಎದ್ದು ಕಾಣುತ್ತವೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಕೂಡಾ ಇದೇ ರೀತಿಯಲ್ಲಿ ವಿಫಲರಾಗಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಚುನಾವಣೆಗಳಲ್ಲಿ ಭಾರೀ ಬೆಲೆಯನ್ನೇ ತೆರಬೇಕಾಯಿತು.

By Siddu
|

ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರದಲ್ಲಿ ಹಲವು ಅಭಿವೃದ್ಧಿಪರ ಯೋಜನೆ ಹಾಗು ಅಂತರಾಷ್ಟ್ರೀಯ ಸಂಬಂಧಗಳ ಮೂಲಕ ಯಶಸ್ಸಿನ ಶಿಖರಕ್ಕೆ ಏರಿದ್ದು, ಜನಮಾನಸದಲ್ಲಿ ಮನೆಮಾಡಿದ್ದಾರೆ. ಜತೆಗೆ ಇದೇ ಅವಧಿಯಲ್ಲಿ ಮೋದಿಯವರು ಅನೇಕ ವೈಫಲ್ಯಗಳನ್ನು ಕೂಡ ಕಂಡಿದ್ದು, ಇನ್ನೇನು ಮೇ26ಕ್ಕೆ ನಾಲ್ಕು ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಿದ್ದಾರೆ.

ಕೆಲ ದಿನಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಮುಖ ಉದ್ಯಮಿಗಳಾದ ಮುಖೇಶ್ ಅಂಬಾನಿ, ಸೈರಸ್ ಮಿಸ್ತ್ರಿ, ಕುಮಾರ್ ಮಂಗಲಂ ಬಿರ್ಲಾ, ಸುನಿಲ್ ಮಿತ್ತಲ್,ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ರಘುರಾಮ್ ರಾಜನ್, ಬ್ಯಾಂಕರ್ಸ್, ಅರ್ಥಶಾಸ್ತ್ರಜ್ಞರು ಮತ್ತು ಇನ್ನಿತರರನ್ನು ಭೇಟಿಯಾಗಿ ಸಾಧಕ-ಬಾಧಕಗಳ ಕುರಿತು ಚರ್ಚೆ ಮಾಡಿದ್ದರು. ಈ ಕುರಿತು www.financialexpress.com ವರದಿ ಮಾಡಿರುವ ಅಂಶಗಳನ್ನು ಇಲ್ಲಿ ನೀಡಲಾಗಿದೆ. ಮೋದಿ ಸರ್ಕಾರಕ್ಕೆ ನಾಲ್ಕು! ಕಳೆದ 4 ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳೇನು?

ದೇಶದ ಭವಿಷ್ಯದ ಬಗ್ಗೆ ನರೇಂದ್ರ ಮೋದಿ ಚೆನ್ನಾಗಿ ವಿಚಾರ ಮಾಡಿ ಮುನ್ನಡೆಯುತ್ತಾರೆ. ಆದರೆ ಇಲ್ಲಿಯವರೆಗೆ ನೀಡಿದ ಭರವಸೆಗಳ ವೈಫಲ್ಯಗಳು ಕೂಡ ಎದ್ದು ಕಾಣುತ್ತವೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಕೂಡಾ ಇದೇ ರೀತಿಯಲ್ಲಿ ವಿಫಲರಾಗಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಚುನಾವಣೆಗಳಲ್ಲಿ ಭಾರೀ ಬೆಲೆಯನ್ನೇ ತೆರಬೇಕಾಯಿತು.

ನಿಮ್ಮಲ್ಲಿ ಕುತೂಹಲ ಉಂಟು ಮಾಡಿರುವ ನರೇಂದ್ರ ಮೋದಿ ಸರ್ಕಾರದ ಅಗ್ರ 10 ನಿತಿ ವೈಫಲ್ಯತೆಗಳನ್ನು ಪರಿಶೀಲಿಸಿ ನೋಡೋಣ ಬನ್ನಿ..

ಜಿಎಸ್ಟಿ ಮತ್ತು ಲ್ಯಾಂಡ್ ಬಿಲ್

ಜಿಎಸ್ಟಿ ಮತ್ತು ಲ್ಯಾಂಡ್ ಬಿಲ್

1. ಜಿಎಸ್ಟಿ ಮತ್ತು ಲ್ಯಾಂಡ್ ಬಿಲ್ ನಂತಹ ಸುಧಾರಣಾ ಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಲು ನರೇಂದ್ರ ಮೋದಿ ಸರಕಾರ ವಿಫಲವಾಗಿದೆ. (ಪಿಟಿಐ)
ಪ್ರಾರಂಭದಲ್ಲಿದ್ದ ನಂಬಿಕೆ, ಆಗಬಹುದಾದ ಸುಧಾರಣೆಯಿಂದಾಗಿ ಸಾರ್ವಜನಿಕರು ಧನಾತ್ಮಕವಾಗಿ ಚಿಂತಿಸುತ್ತಿದ್ದರು. ಆದರೆ ಇದೀಗ ಹುಸಿಯಾಗತೊಡಗಿದೆ.

ತೆರಿಗೆ ಮತ್ತು ಪಂಚಾಯಿತಿ ಅವ್ಯವಸ್ಥೆ

ತೆರಿಗೆ ಮತ್ತು ಪಂಚಾಯಿತಿ ಅವ್ಯವಸ್ಥೆ

2. ತೆರಿಗೆ ಮತ್ತು ಪಂಚಾಯಿತಿ ಅವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ನರೇಂದ್ರ ಮೋದಿ ಸರಕಾರ ವಿಫಲವಾಗಿದೆ. (ಪಿಟಿಐ)

ಗ್ಯಾಸ್ ಬೆಲೆ ಅಥವಾ ಸಬ್ಸಿಡಿ

ಗ್ಯಾಸ್ ಬೆಲೆ ಅಥವಾ ಸಬ್ಸಿಡಿ

3. ನರೇಂದ್ರ ಮೋದಿ ಸರಕಾರವು ಗ್ಯಾಸ್ ಬೆಲೆ ಅಥವಾ ಸಬ್ಸಿಡಿಗಳನ್ನು ಕಡಿತಗೊಳಿಸುವ ನಿರ್ಧಾರ ನಿಭಾಯಿಸಲು ಸಾಧ್ಯವಾಗಿಲ್ಲ.(ಪಿಟಿಐ)

 ವ್ಯವಹಾರಿಕ ವಾತಾವರಣ

ವ್ಯವಹಾರಿಕ ವಾತಾವರಣ

4. ಭಾರತದಲ್ಲಿ ವ್ಯವಹಾರಿಕ ವಾತಾವರಣವನ್ನು ಸುಧಾರಿಸುವಲ್ಲಿ ನರೇಂದ್ರ ಮೋದಿ ಸರ್ಕಾರ ಯಶಸ್ವಿಯಾಗಲಿಲ್ಲ.(ಪಿಟಿಐ)

ಜಾಗತಿಕ ಪ್ರಕ್ಷುಬ್ಧತೆಯ ಬೆಳವಣಿಗೆ

ಜಾಗತಿಕ ಪ್ರಕ್ಷುಬ್ಧತೆಯ ಬೆಳವಣಿಗೆ

5. ಜಾಗತಿಕ ಪ್ರಕ್ಷುಬ್ಧತೆಯ ಬೆಳವಣಿಗೆಯನ್ನು ಹೆಚ್ಚಿಸಲು ನರೇಂದ್ರ ಮೋದಿ ಸರಕಾರವು ಒಂದು ಯೋಜನೆಯನ್ನು ಮಂಡಿಸಿಲ್ಲ.

ಕಾರ್ಯ ನಿರ್ವಹಣೆ

ಕಾರ್ಯ ನಿರ್ವಹಣೆ

6. ನರೇಂದ್ರ ಮೋದಿ ಸರ್ಕಾರವು ಸರ್ಕಾರದ ಕಾರ್ಯ ನಿರ್ವಹಣೆ ಮತ್ತು ನಿರ್ಣಯ ತೆಗೆದುಕೊಳ್ಳುವ(ಪಿಟಿಐ) ಪ್ರಕ್ರಿಯೆಯಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯವಾಗಲಿಲ್ಲ.

ಭರವಸೆ

ಭರವಸೆ

7. ನರೇಂದ್ರ ಮೋದಿ ಸರಕಾರವು ಭರವಸೆ ನೀಡುವುದರಲ್ಲಿ ಮುಂದಿದೆ. ಆದರೆ ನಿರ್ವಹಿಸುವುದರಲ್ಲಿ ಹಿಂದುಳಿದಿದೆ. ಮೇಕ್ ಇನ್-ಇಂಡಿಯ, ಡಿಜಿಟಲ್ ಇಂಡಿಯಾ ಮತ್ತು ಸ್ಮಾರ್ಟ್ ಸಿಟೀಸ್ ಮುಂತಾದ ಬಹುದೊಡ್ಡ ಯೋಜನೆಗಳು ಘೋಷಿಸಲ್ಪಟ್ಟಿವೆ. ಆದರೆ ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಬೇಕಿದೆ.(ಪಿಟಿಐ)

ಉನ್ನತ ಮಾರ್ಗ

ಉನ್ನತ ಮಾರ್ಗ

8. ವಿದ್ಯುತ್ ಸರಬರಾಜು, ತೆರಿಗೆ ಆಡಳಿತ (ಪಿಟಿಐ) ಸುಧಾರಣೆಗೆ ನರೇಂದ್ರ ಮೋದಿ ಸರಕಾರ ಇನ್ನೂ ಉನ್ನತ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ.

ಸುಧಾರಣಾ ಕ್ರಮ

ಸುಧಾರಣಾ ಕ್ರಮ

9. ಕೇಂದ್ರ ಮತ್ತು ರಾಜ್ಯದ ಮಟ್ಟದಲ್ಲಿ ಹೆಚ್ಚಿನ ಸುಧಾರಣಾ ಕ್ರಮಗಳು, ಜಿಪಿವಿಟಿ ತೆರವುಗೊಳಿಸುವ ಪ್ರಕ್ರಿಯೆಗಳು ಇನ್ನೂ ಸುಧಾರಣೆ ಆಗಬೇಕಿದೆ.(ಪಿಟಿಐ)

ಇನ್ನೂ ಪ್ರಾರಂಭಿಸಿಲ್ಲ

ಇನ್ನೂ ಪ್ರಾರಂಭಿಸಿಲ್ಲ

10. ನರೇಂದ್ರ ಮೋದಿ ಸರಕಾರವು ಪರಿಣಾಮಕಾರಿ ಬದಲಾವಣೆಗಳ ಬಗ್ಗೆ ಎಷ್ಟು ಗಂಭೀರವಾಗಿದೆ ಎನ್ನುವುದು, ವಿವಿಧ ನೀತಿ ಕ್ರಮಗಳಿಗೆ ಸಂಬಂಧಿಸಿದಂತೆ ಸಮಯವನ್ನು ನಿಗದಿಪಡಿಸಲು ಇನ್ನೂ ಪ್ರಾರಂಭಿಸಿಲ್ಲ ಎಂಬ ಅಂಶದಿಂದ ಸ್ಪಷ್ಟವಾಗಿದೆ.
ಸಭೆಗಳು ಕೇವಲ ಸಾಂಪ್ರದಾಯಿಕವೇ ಅಥವಾ ಪರಿಹಾರಗಳನ್ನು ಕಂಡುಹಿಡಿಯಲಾಗುವುದೆ?(ಪಿಟಿಐ)

Courtesy: Financialexpress.com

English summary

PM Narendra Modi performance: Top 10 Failures

Prime Minister Narendra Modi met top industrialists Mukesh Ambani, Cyrus Mistry, Kumar Mangalam Birla, Sunil Mittal, others along with the Reserve Bank of India (RBI) Governor Raghuram Rajan, bankers, economists and more few days back.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X