For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್, ಡೀಸೆಲ್ ಬೆಲೆಗಳು ದಾಖಲೆ ಮಟ್ಟದಲ್ಲಿ ಏರಲಿವೆ!

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗುರುವಾರ ಮತ್ತೊಮ್ಮೆ ಹೆಚ್ಚಿದ್ದು, ಶೀಘ್ರದಲ್ಲೇ ದಾಖಲೆಯ ಗರಿಷ್ಠ ಮಟ್ಟ ತಲುಪಲಿದೆ ಎನ್ನಲಾಗಿದೆ! ಮುಂಬೈನಲ್ಲಿ ಪೆಟ್ರೋಲ್ ಗೆ 26 ಪೈಸೆ ಏರಿಕೆಯಾಗಿ 85.29 ರೂಪಾಯಿಗಳಿಗೆ ಏರಿಕೆಯಾಗಿದೆ.

|

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗುರುವಾರ ಮತ್ತೊಮ್ಮೆ ಹೆಚ್ಚಿದ್ದು, ಶೀಘ್ರದಲ್ಲೇ ದಾಖಲೆಯ ಗರಿಷ್ಠ ಮಟ್ಟ ತಲುಪಲಿದೆ ಎನ್ನಲಾಗಿದೆ! ಮುಂಬೈನಲ್ಲಿ ಪೆಟ್ರೋಲ್ ಗೆ 26 ಪೈಸೆ ಏರಿಕೆಯಾಗಿ 85.29 ರೂಪಾಯಿಗಳಿಗೆ ಏರಿಕೆಯಾಗಿದೆ. ಇದು ಸತತ 11 ನೇ ನೇರ ಹೆಚ್ಚಳವಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ತೈಲ ದರ ಪರಿಷ್ಕರಣೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು.

ಮತ್ತೊಂದೆಡೆ ಡೀಸೆಲ್ ಬೆಲೆ ಮುಂಬೈನಲ್ಲಿ ಲೀಟರ್ ಗೆ 16 ಪೈಸೆ ಏರಿಕೆಯಾಗಿ 72.96 ರೂ.ಗಳಿಗೆ ಏರಿಕೆ ಕಂಡಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 26 ಪೈಸೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಗೆ ರೂ. 77.47 ಮತ್ತು ಡೀಸೆಲ್ 15 ಪೈಸೆಯೊಂದಿಗೆ ರೂ. 68.53 ಕ್ಕೆ ಏರಿಕೆಯಾಗಿದೆ.

ಬೆಲೆಗಳನ್ನು ಕಡಿತಗೊಳಿಸಲು ಸರ್ಕಾರ ಮಧ್ಯಪ್ರವೇಶಿಸುತ್ತದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಏರಿಕೆಗೆ ಕಾರಣ

ಏರಿಕೆಗೆ ಕಾರಣ

ವಿವಾದಿತ ಅಧ್ಯಕ್ಷೀಯ ಚುನಾವಣೆಯ ನಂತರ ವೆನೆಜುವೆಲಾದ ಕಚ್ಚಾ ಉತ್ಪಾದನೆಯಲ್ಲಿ ಸಂಭಾವ್ಯ ಕುಸಿತ, ಯುಎಸ್ ನಿರ್ಬಂಧಗಳು ಮತ್ತು ಇರಾನ್ ಮೇಲಿನ ಯುಎಸ್ ನಿಲುವುಚಗಳ ಪ್ರಮುಖ ಪ್ರಭಾವ ಬೀರಿವೆ.

ಸಚಿವಾಲಯ ಚಿಂತನೆ

ಸಚಿವಾಲಯ ಚಿಂತನೆ

ಒಎನ್ಜಿಸಿ ತನ್ನ ಕಚ್ಚಾ ತೈಲವನ್ನು ಅಂತಾರಾಷ್ಟ್ರೀಯ ಹಣಕಾಸು ಬೆಲೆಯಲ್ಲಿ ಕೆಳಗಿಳಿಸುವಂತೆ ನಿರ್ದೇಶಿಸಲು ಸಚಿವಾಲಯವು ಚಿಂತಿಸಿದೆ. ಇಡೀ ಹಣಕಾಸಿನ ವರ್ಷಕ್ಕೆ 70 ಡಾಲರ್ಗಳಷ್ಟು ಬೆಲೆ ನಿಗದಿಪಡಿಸಲಾಗಿದೆ. ಆಯಿಲ್ ಇಂಡಿಯಾ ಲಿಮಿಟೆಡ್ (ಇತರ ರಾಷ್ಟ್ರೀಯ ತೈಲ ಉತ್ಪಾದಕ) ಈ ಯೋಜನೆಯ ಭಾಗವಾಗಿರುವುದಿಲ್ಲ ಸರ್ಕಾರಿ ಮೂಲಗಳು ತಿಳಿಸಿವೆ.

ಪ್ರಮುಖ ನಗರಗಳಲ್ಲಿನ ಬೆಲೆ

ಪ್ರಮುಖ ನಗರಗಳಲ್ಲಿನ ಬೆಲೆ

ಬೆಂಗಳೂರು:
ಪೆಟ್ರೋಲ್: 78.73/ಲೀಟರ್
ಡೀಸೆಲ್: 69.71/ಲೀಟರ್

ಮುಂಬೈ
ಪೆಟ್ರೋಲ್: 85.29/ಲೀಟರ್
ಡೀಸೆಲ್: 72.96/ಲೀಟರ್

ಚೆನ್ನೈ
ಪೆಟ್ರೋಲ್: 80.42/ಲೀಟರ್
ಡೀಸೆಲ್: 72.35/ಲೀಟರ್

ಹೈದರಾಬಾದ್‌
ಪೆಟ್ರೋಲ್: 82.07/ಲೀಟರ್
ಡೀಸೆಲ್: 74.49/ಲೀಟರ್

ದೆಹಲಿ
ಪೆಟ್ರೋಲ್: 77.47/ಲೀಟರ್
ಡೀಸೆಲ್: 68.53/ಲೀಟರ್

Read more about: petrol money finance news
English summary

Petrol, diesel prices hit fresh high

A possible drop in Venezuela's crude output after a disputed presidential election, potential US sanctions on the country and US' stance on Iran.
Story first published: Thursday, May 24, 2018, 11:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X