ಪಿಪಿಎಫ್ ಖಾತೆ ಬಗ್ಗೆ ನಿಮಗೆ ಗೊತ್ತಿರದ ಹೊಸ ನಿಯಮಗಳು

ಬಡ್ಡಿ ದರಗಳು ಕಡಿಮೆಯಾಗುತ್ತಿದ್ದರೂ ಸಾರ್ವಜನಿಕ ಭವಿಷ್ಯ ನಿಧಿ(Public Provident Fund) ಜನಪ್ರಿಯತೆ ಮಾತ್ರ ಇಂದಿಗೂ ಕಡಿಮೆಯಾಗಿಲ್ಲ.

ಬಡ್ಡಿ ದರಗಳು ಕಡಿಮೆಯಾಗುತ್ತಿದ್ದರೂ ಸಾರ್ವಜನಿಕ ಭವಿಷ್ಯ ನಿಧಿ(Public Provident Fund) ಜನಪ್ರಿಯತೆ ಮಾತ್ರ ಇಂದಿಗೂ ಕಡಿಮೆಯಾಗಿಲ್ಲ. ನಿವೃತ್ತ ಜೀವನದ ಸುಭದ್ರತೆಗೆ ಫಿಕ್ಸೆಡ್ ಡಿಪಾಸಿಟ್ ಗಳಿಗಿಂತಲೂ ಪಿಪಿಎಫ್ ಬಗ್ಗೆ ಉದ್ಯೋಗಿಗಳ ಒಲವು ಹೆಚ್ಚಾಗಿದೆ. ಪಿಪಿಎಫ್ ಬಡ್ಡಿದರಗಳು ಕಡಿಮೆ ಆಗುತ್ತಿವೆಯಾದರೂ, ಇಂದಿಗೂ ಪಿಪಿಎಫ್ ಬಡ್ಡಿದರ ಫಿಕ್ಸೆಡ್ ಡಿಪಾಸಿಟ್ ಗಿಂತ ಜಾಸ್ತಿಯೇ ಇದೆ.

2017ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಪಿಪಿಎಫ್ ಖಾತೆದಾರರು ತಮ್ಮ ಹಣಕ್ಕೆ ಶೇ. 6.6ರಷ್ಟು ಬಡ್ಡಿಯನ್ನು ಪಡೆಯಲಿದ್ದಾರೆ. ಇದು ಪ್ರಸ್ತುತ ಫಿಕ್ಸೆಡ್ ಡಿಪಾಸಿಟ್ ಮೇಲಿನ ಬಡ್ಡಿ ದರಕ್ಕಿಂತ ಹೆಚ್ಚಾಗಿದೆ. ಇದರ ಜೊತೆಗೆ ಪಿಪಿಎಫ್ ನಲ್ಲಿನ ಹೂಡಿಕೆಗೆ ಆದಾಯ ತೆರಿಗೆ ಕಾಯ್ದೆ 80ಸಿ ಅನ್ವಯ ತೆರಿಗೆ ವಿನಾಯಿತಿ ಲಭಿಸುತ್ತದೆ. ಪಿಪಿಎಫ್ ನಲ್ಲಿನ ಹೂಡಿಕೆಗಳು ವಿನಾಯಿತಿ, ವಿನಾಯಿತಿ, ವಿನಾಯಿತಿ (EEE - Exempt, Exempt, Exempt) ನೀತಿಗೆ ಒಳಪಟ್ಟಿವೆ. ಅಂದರೆ ಪಿಪಿಎಫ್ ನಲ್ಲಿ ಹೂಡಿಕೆಯಾದ ಮೊತ್ತ, ಅದು ಗಳಿಸುವ ಬಡ್ಡಿ ಹಾಗೂ ಕೊನೆಯಲ್ಲಿ ಸಿಗುವ ಪರಿಪಕ್ವ ಮೊತ್ತ ಹೀಗೆ ಎಲ್ಲವೂ ತೆರಿಗೆಯಿಂದ ಮುಕ್ತವಾಗಿವೆ.

ಇವಿಷ್ಟೇ ಅಲ್ಲದೆ ಪಿಪಿಎಫ್ ಹೂಡಿಕೆಯ ಮೇಲಿನ ಇನ್ನೂ ಹಲವಾರು ಲಾಭಗಳ ಕಾರಣದಿಂದ ಈ ಯೋಜನೆ ಜನಪ್ರಿಯತೆ ಗಳಿಸಿಕೊಂಡಿದೆ. ಪಿಪಿಎಫ್ ನ ಪ್ರಮುಖ 10 ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..

1. ಖಾತೆ ಅವಧಿ ವಿಸ್ತರಣೆ

1. ಖಾತೆ ಅವಧಿ ವಿಸ್ತರಣೆ

ಆರಂಭದಲ್ಲಿ ಪಿಪಿಎಫ್ ಹೂಡಿಕೆ ಅವಧಿ 15 ವರ್ಷಗಳದ್ದಾಗಿರುತ್ತದೆ. ಆದರೂ 15 ವರ್ಷದ ಪಕ್ವತಾ (Maturity) ಅವಧಿಯ ನಂತರ ಮತ್ತೆ ಪ್ರತಿ ಬಾರಿ 5 ವರ್ಷಗಳಂತೆ ಖಾತೆಯ ಅವಧಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವಿದೆ.

2. ಆಂಶಿಕ ಮೊತ್ತ ಹಿಂಪಡೆಯುವಿಕೆ

2. ಆಂಶಿಕ ಮೊತ್ತ ಹಿಂಪಡೆಯುವಿಕೆ

ಪಿಪಿಎಫ್ ಖಾತೆ ಆರಂಭಿಸಿದ 7ನೇ ಹಣಕಾಸು ವರ್ಷದಿಂದ ಪ್ರತಿವರ್ಷ ಆಂಶಿಕ ಮೊತ್ತವನ್ನು ಹಿಂಪಡೆಯಬಹುದು. ಅಲ್ಲದೆ ನಾಲ್ಕನೇ ವರ್ಷದ ಅಂತ್ಯದಲ್ಲಿ ಒಟ್ಟು ಮೊತ್ತದ ಗರಿಷ್ಠ ಶೇ. 50ರಷ್ಟನ್ನು ಹಿಂಪಡೆಯಬಹುದಾಗಿದೆ. ಹಣ ಹಿಂಪಡೆಯುವ ಹಿಂದಿನ ವರ್ಷ ಅಥವಾ ಆ ವರ್ಷದ ಕೊನೆಯಲ್ಲಿ ಇರುವ ಒಟ್ಟು ಮೊತ್ತ ಇವುಗಳಲ್ಲಿ ಯಾವುದು ಕಡಿಮೆಯೋ ಅದು ಎಂಬ ಷರತ್ತಿಗೊಳಪಟ್ಟು ಹಣ ತೆಗೆಯಬಹುದು.

3. ಹೂಡಿಕೆ

3. ಹೂಡಿಕೆ

ಪಿಪಿಎಫ್ ಖಾತೆಯಲ್ಲಿ ವರ್ಷಕ್ಕೆ ಕನಿಷ್ಠ 500 ರೂಪಾಯಿ ಅಥವಾ ಗರಿಷ್ಠ 1 ಲಕ್ಷ 50 ಸಾವಿರ ರೂಪಾಯಿ ಹೂಡಿಕೆ ಮಾಡಬಹುದು. 15 ವರ್ಷಗಳ ನಂತರವೂ ಖಾತೆಯನ್ನು ಮುಂದುವರಿಸಲು ಬಯಸಿದರೆ, ಆ ಅವಧಿಯಲ್ಲಿ ಯಾವುದೇ ಹೂಡಿಕೆ ಮಾಡದೆಯೂ ಖಾತೆಯನ್ನು ಮುಂದುವರಿಸಬಹುದು.

4. ಹಣ ಹಿಂಪಡೆಯುವ ಸೌಲಭ್ಯ

4. ಹಣ ಹಿಂಪಡೆಯುವ ಸೌಲಭ್ಯ

ಖಾತೆಯ ಅವಧಿಯನ್ನು ವಿಸ್ತರಣೆಗೊಳಿಸಿದ ಅವಧಿಯಲ್ಲಿ ಸಹ ಹಣ ಹಿಂಪಡೆಯುವ ಸೌಲಭ್ಯವಿದೆ.
ಖಾತೆ ಅವಧಿ ವಿಸ್ತರಣೆಗೊಳಿಸಿದ ಸಂದರ್ಭದಲ್ಲಿ, ಆ ಅವಧಿಯ ಮೊದಲ ವರ್ಷದ ಆರಂಭದಲ್ಲಿ ಖಾತೆಯಲ್ಲಿ ಜಮೆ ಆಗಿರುವ ಶೇ. 60 ರಷ್ಟು ಹಣವನ್ನು ಮರಳಿ ಪಡೆಯಬಹುದು. ಆದರೆ ಹೀಗೆ ಮಾಡಬೇಕಾದರೆ ಖಾತೆಗೆ ನಿಮ್ಮ ವಂತಿಗೆಯನ್ನು ಚಾಲ್ತಿಯಲ್ಲಿಡಬೇಕಾಗುತ್ತದೆ.

5. ಆಂಶಿಕ ಮೊತ್ತ

5. ಆಂಶಿಕ ಮೊತ್ತ

ಯಾವುದೇ ವಂತಿಗೆ ಇಲ್ಲದೆ ಖಾತೆಯ ಅವಧಿಯನ್ನು ವಿಸ್ತರಣೆಗೊಳಿಸಿದ ಸಂದರ್ಭದಲ್ಲಿ, ಜಮೆಯಾದ ಮೊತ್ತದಲ್ಲಿ ಎಷ್ಟು ಬೇಕಾದರೂ ಹಣವನ್ನು ಹಿಂಡೆಯಬಹುದು. ಆದರೆ ಎರಡೂ ಸಂದರ್ಭಗಳಲ್ಲಿ ವರ್ಷಕ್ಕೆ ಒಂದು ಬಾರಿ ಮಾತ್ರ ಆಂಶಿಕವಾಗಿ ಮೊತ್ತ ಹಿಂಪಡೆಯಲು ಅವಕಾಶವಿದೆ.

6. ತೆರಿಗೆ ವಿನಾಯಿತಿ

6. ತೆರಿಗೆ ವಿನಾಯಿತಿ

ಆಂಶಿಕ ಹಣ ಹಿಂಪಡೆಯುವಿಕೆಗೆ ಸಹ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10 (11) ರ ಪ್ರಕಾರ ತೆರಿಗೆ ವಿನಾಯಿತಿ ಲಭ್ಯವಿದೆ.

7. ಬಡ್ಡಿ ಜಮೆ

7. ಬಡ್ಡಿ ಜಮೆ

ಪ್ರತಿ ತಿಂಗಳು 5ನೇ ತಾರೀಕಿನ ಒಳಗೆ ನಿಮ್ಮ ವಂತಿಗೆಯನ್ನು ಖಾತೆಗೆ ಜಮಾ ಮಾಡಿದರೆ ಹೆಚ್ಚಿನ ಆದಾಯ ಗಳಿಸಲು ಸಾಧ್ಯ. ಪ್ರತಿ ತಿಂಗಳು 5ನೇ ತಾರೀಕಿನಂದು ಪಿಪಿಎಫ್ ಖಾತೆಗಳಿಗೆ ಬಡ್ಡಿ ಜಮೆ ಮಾಡಲಾಗುತ್ತದೆ. 5ನೇ ತಾರೀಕಿನಿಂದ ತಿಂಗಳ ಕೊನೆಯ ದಿನದ ಅವಧಿಯಲ್ಲಿ ಖಾತೆಯಲ್ಲಿ ಇರುವ ಕನಿಷ್ಠ ಮೊತ್ತಕ್ಕೆ ಬಡ್ಡಿ ಆಕರಿಸಲಾಗುತ್ತದೆ. ಹೀಗಾಗಿ 5ನೇ ತಾರೀಕಿನೊಳಗೆ ವಂತಿಗೆ ಕಟ್ಟಿದರೆ ಹೆಚ್ಚಿನ ಬಡ್ಡಿ ಸಿಗಲು ಸಾಧ್ಯವಾಗುತ್ತದೆ.

8. ಸಾಲ ಸೌಲಭ್ಯ

8. ಸಾಲ ಸೌಲಭ್ಯ

ಪಿಪಿಎಫ್ ನಲ್ಲಿನ ಮೊತ್ತದ ಮೇಲೆ ನೀವು ಸಾಲವನ್ನು ಸಹ ಪಡೆಯಬಹುದು. ಖಾತೆ ಆರಂಭಿಸಿದ ಮೂರನೇ ವರ್ಷದಿಂದ ಈ ಸೌಲಭ್ಯ ಸಿಗುತ್ತದೆ.

9. ಅವಧಿ ಪೂರ್ವ ಖಾತೆ

9. ಅವಧಿ ಪೂರ್ವ ಖಾತೆ

ಖಾತೆಗೆ ಐದು ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಅವಧಿ ಪೂರ್ವ ಖಾತೆ ನಿಲ್ಲಿಸಲು ಅವಕಾಶವಿದೆ. ಮಕ್ಕಳ ಉನ್ನತ ವಿದ್ಯಾಭ್ಯಾಸ ಅಥವಾ ಗಂಭೀರ ಸ್ವರೂಪದ ಕಾಯಿಲೆಗಳ ಸಂದರ್ಭದಲ್ಲಿ ಮಾತ್ರ ಅವಧಿ ಪೂರ್ವ ಖಾತೆ ನಿಲ್ಲಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+