ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಯನ್ನು ಒತ್ತಾಯಿಸಿ ಸರ್ಕಾರಿ ಬ್ಯಾಂಕ್ ನೌಕರರು ಮೇ. 30 ಹಾಗೂ ಮೇ. 31ರಂದು ದೇಶದಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ. ಹೀಗಾಗಿ ದೈನಂದಿನ ಬ್ಯಾಂಕ್ ವ್ಯವಹಾರಗಳು ನಡೆಸಲು ಸಾದ್ಯವಾಗುವುದಿಲ್ಲ.
ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಯನ್ನು ಒತ್ತಾಯಿಸಿ ಸರ್ಕಾರಿ ಬ್ಯಾಂಕ್ ನೌಕರರು ಮೇ. 30 ಹಾಗೂ ಮೇ. 31ರಂದು ದೇಶದಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ. ಹೀಗಾಗಿ ದೈನಂದಿನ ಬ್ಯಾಂಕ್ ವ್ಯವಹಾರಗಳು ನಡೆಸಲು ಸಾದ್ಯವಾಗುವುದಿಲ್ಲ.

ಕಳೆದ ಒಂದು ವರ್ಷದದಿಂದ ಭಾರತೀಯ ಬ್ಯಾಂಕ್‌ಗಳ ಸಂಘದೊಂದಿಗೆ (ಐಬಿಎ) ಹಲವು ಬಾರಿ ಮಾತುಕತೆಗಳು ನಡೆದಿದ್ದರೂ ವೇತನ ಪರಿಷ್ಕರಣೆ ಫಲಪ್ರದವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆ ತಿಳಿಸಿದೆ.
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ, ಯುಎಫ್‌ಬಿಯು, ರಾಷ್ಟ್ರೀಯ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ ಒಳಗೊಂಡಂತೆ ದೇಶದ ಹೆಚ್ಚಿನ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. 1ರ ವೇತನ ಶ್ರೇಣಿಯಿಂದ 7ರವರೆಗೆ ಬರುವ ಅಧಿಕಾರಿಗಳಿಗೆ ವೇತನ ಪರಿಷ್ಕರಣೆ ಮಾಡಬೇಕು ಎಂಬುದು ಬ್ಯಾಂಕ್ ಉದ್ಯೋಗಿಗಳ ಬೇಡಿಕೆಯಾಗಿದೆ.
ಸಂಬಳವನ್ನು ಕೇವಲ ಶೇ. 2ರಷ್ಟು ಏರಿಕೆ ಪ್ರಸ್ತಾವವನ್ನು ವಿರೋಧಿಸಿ ಬ್ಯಾಂಕ್ ಸಿಬ್ಬಂದಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಎನ್ ಪಿ ಎ ಯಿಂದಾಗಿ ಬ್ಯಾಂಕ್ ಗಳಿಗೆ ನಷ್ಟವಾಗಿದೆ. ಇದರಲ್ಲಿ ಬ್ಯಾಂಕ್ ಸಿಬ್ಬಂದಿಗಳ ತಪ್ಪಿಲ್ಲ. ಕಳೆದ ವರ್ಷ ಬ್ಯಾಂಕ್ ಸಿಬ್ಬಂದಿ ನೋಟು ನಿಷೇಧ, ಅಟಲ್ ಪಿಂಚಣಿ ಯೋಜನೆ, ಮುದ್ರಾ ಯೋಜನೆ ಸೇರಿದಂತೆ ಅನೇಕ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಸಿಬ್ಬಂದಿ ಮೇಲೆ ಸಾಕಷ್ಟು ಕೆಲಸದ ಹೊಣೆ ಬಿದ್ದಿದೆ. ಇಷ್ಟು ಕೆಲಸ ಮಾಡಿದ ಸಿಬ್ಬಂದಿಗೆ ಕೇವಲ ಶೇ. 2ರಷ್ಟು ಸಂಬಳ ಹೆಚ್ಚಳ ಮಾಡುವುದು ಎಷ್ಟು ಸರಿ ಎಂದು ಬ್ಯಾಂಕ್ ನೌಕರರು ಪ್ರಶ್ನೆ ಮಾಡಿದ್ದಾರೆ.


Click it and Unblock the Notifications