ಚಂದಾ ಕೊಚ್ಚರ್ ವಿರುದ್ಧ ಆರೋಪ, ಸ್ವತಂತ್ರ ತನಿಖೆಗೆ ಆದೇಶ

ಐಸಿಐಸಿಐ ಸಿಇಒ ಚಂದಾ ಕೊಚ್ಚರ್ ಬ್ಯಾಂಕಿನ ನೀತಿ ಸಂಹಿತಿ ಉಲ್ಲಂಘಿಸಿದ್ದಾರೆ ಎಂಬ ಆರೋಪಗಳ ಕುರಿತು ಸ್ವತಂತ್ರ ತನಿಖೆ ನಡೆಸಲು ಐಸಿಐಸಿಐ ಬ್ಯಾಂಕ್‌ ಆದೇಶಿಸಿದೆ.

ಐಸಿಐಸಿಐ ಸಿಇಒ ಚಂದಾ ಕೊಚ್ಚರ್ ಬ್ಯಾಂಕಿನ ನೀತಿ ಸಂಹಿತಿ ಉಲ್ಲಂಘಿಸಿದ್ದಾರೆ ಎಂಬ ಆರೋಪಗಳ ಕುರಿತು ಸ್ವತಂತ್ರ ತನಿಖೆ ನಡೆಸಲು ಐಸಿಐಸಿಐ ಬ್ಯಾಂಕ್‌ ಆದೇಶಿಸಿದೆ.

ಚಂದಾ ಕೊಚ್ಚರ್ ವಿರುದ್ಧ ಆರೋಪ, ಸ್ವತಂತ್ರ ತನಿಖೆಗೆ ಆದೇಶ

ಚಂದಾ ಕೊಚ್ಚರ್ ತಮ್ಮ ಅಧಿಕಾರಾವಧಿಯಲ್ಲಿ ಸಾಲಗಳಿಗೆ ಸಂಬಂಧಿಸಿದಂತೆ ಹಿತಾಸಕ್ತಿಗಳ ಸಂಘರ್ಷ, ಕೊಡು - ಕೊಳ್ಳುವಿಕೆ ವ್ಯವಹಾರದಲ್ಲಿ ಬ್ಯಾಂಕಿನ ನೀತಿ ಸಂಹಿತಿ ಉಲ್ಲಂಘಿಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.
ಅವರು ವಾರ್ಷಿಕ ರಜೆಯಲ್ಲಿದ್ದಾಗ ತನಿಖೆ ಪೂರ್ಣಗೊಳಿಸಲು ಬ್ಯಾಂಕಿನ ಮಂಡಳಿ ಯೋಜಿಸುತ್ತಿದ್ದು, ಆರೋಪಗಳ ಬಗ್ಗೆ ವಿಶ್ವಾಸಾರ್ಹ ವ್ಯಕ್ತಿಯಿಂದ ಸ್ವತಂತ್ರ ತನಿಖೆ ನಡೆಸುವುದಾಗಿ ಬ್ಯಾಂಕ್‌ ಮಾಹಿತಿ ನೀಡಿದೆ.
ಅಗತ್ಯವಿದ್ದಲ್ಲಿ ಇ-ಮೇಲ್‌ಗಳ ಪರಿಶೀಲನೆ, ಸಂಬಂಧಿತ ಸಿಬ್ಬಂದಿಯ ಹೇಳಿಕೆಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ.

ವಿಡಿಯೊಕಾನ್‌ ಸಂಸ್ಥೆಗೆ ಸಾಲ ಮಂಜೂರು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಬಿ ಚಂದಾ ಕೊಚ್ಚರ್ ಅವರಿಗೆ ಕಳೆದ ವಾರ ನೋಟಿಸ್ ಜಾರಿ ಮಾಡಿತ್ತು.

ಎಂ.ಕೆ ಶರ್ಮ, ಐಸಿಐಸಿಐ ಬ್ಯಾಂಕ್ ಅಧ್ಯಕ್ಷ ಮತ್ತು ಆಡಿಟ್ ಸಮಿತಿ ಮುಖ್ಯಸ್ಥ ಮತ್ತು ಸ್ವತಂತ್ರ ನಿರ್ದೇಶಕ ಉದಯ್ ಚಿತಲೆ ಚರ್ಚೆ ನಡೆಸಿದರು. ನಿವೃತ್ತ ನ್ಯಾಯಾಧೀಶರು ತನಿಖೆಗೆ ಮುಖ್ಯಸ್ಥರಾಗಿರುತ್ತಾರೆ.2012ರಲ್ಲಿ ವಿಡಿಯೊಕಾನ್ ಕಂಪನಿಗೆ ನೀಡಿರುವ ರೂ. 3,250 ಕೋಟಿ ಸಾಲ ಮಂಜೂರಾತಿ ಬಗ್ಗೆ ಚಂದಾ ಕೊಚ್ಚರ್ ಹಾಗು ಅವರ ಪತಿ ದೀಪಕ್‌ ಕೊಚ್ಚರ್ ಈ ಪ್ರಕರಣದಲ್ಲಿ ವಹಿಸಿರುವ ಪಾತ್ರದ ಬಗ್ಗೆ ತನಿಖೆ ಆರಂಭಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+