2018ರ ವರ್ಷಾಂತ್ಯಕ್ಕೆ ಫ್ಲಿಪ್‌ಕಾರ್ಟ್ ಸ್ವಾಧೀನ ಪ್ರಕ್ರಿಯೆ ಅಂತಿಮ: ವಾಲ್‌ಮಾರ್ಟ್‌

ಜಾಗತಿಕ ದೈತ್ಯ ಸಂಸ್ಥೆ ವಾಲ್‌ಮಾರ್ಟ್‌ ದೇಶದ ಪ್ರಮುಖ ಇ-ಕಾಮರ್ಸ್ ಕಂಪನಿಯಾಗಿರುವ ಪ್ಲಿಪ್ಕಾರ್ಟ್ ನ ಶೇ. 77ರಷ್ಟು ಪಾಲನ್ನು ಖರೀದಿಸಿದ್ದು, ಈ ಒಪ್ಪಂದ 2018ರ ವರ್ಷಾಂತ್ಯದೊಳಗೆ ಅಂತಿಮಗೊಳಿಸುವ ನಿರೀಕ್ಷೆಯಿದೆ.

ಜಾಗತಿಕ ದೈತ್ಯ ಸಂಸ್ಥೆ ವಾಲ್‌ಮಾರ್ಟ್‌ ದೇಶದ ಪ್ರಮುಖ ಇ-ಕಾಮರ್ಸ್ ಕಂಪನಿಯಾಗಿರುವ ಪ್ಲಿಪ್ಕಾರ್ಟ್ ನ ಶೇ. 77ರಷ್ಟು ಪಾಲನ್ನು ಖರೀದಿಸಿದ್ದು, ಈ ಒಪ್ಪಂದ 2018ರ ವರ್ಷಾಂತ್ಯದೊಳಗೆ ಅಂತಿಮಗೊಳಿಸುವ ನಿರೀಕ್ಷೆಯಿದೆ ಎಂದು ವಾಲ್‌ಮಾರ್ಟ್‌ ಸಂಸ್ಥೆ ತಿಳಿಸಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ವಾಲ್‌ಮಾರ್ಟ್‌ ಆದಾಯದ ಮೇಲೆ ಪರಿಣಾಮ ಬೀರಲಿದೆ. ಇದಕ್ಕಾಗಿ ಈ ವರ್ಷದ ಅಂತ್ಯದೊಳಗಾಗಿಒಪ್ಪಂದ ಅಂತಿಮಗೊಳಿಸಲು ನಿರ್ಧರಿಸಲಾಗಿದೆ ಎಂದು ಸೆಕ್ಯುರಿಟೀಸ್ ಆಂಡ್ ಎಕ್ಸ್ಚೇಂಜ್ ಕಮಿಷನ್ (ಎಸ್ಇಸಿ)ತಿಳಿಸಿದೆ.

2018ರ ವರ್ಷಾಂತ್ಯಕ್ಕೆ ಫ್ಲಿಪ್‌ಕಾರ್ಟ್ ಸ್ವಾಧೀನ ಪ್ರಕ್ರಿಯೆ ಅಂತಿಮ

ಮೇ 2018ರಲ್ಲಿ, ಕಂಪನಿಯು ಫ್ಲಿಪ್ಕಾರ್ಟ್ ನ ಸುಮಾರು ಶೇ. 77ರಷ್ಟು ಷೇರುಗಳಿಗೆ 16 ಬಿಲಿಯನ್ ಡಾಲರ್ ಹಣವನ್ನು ಪಾವತಿಸುವುದಾಗಿ ಘೋಷಿಸಿತು. ಹೂಡಿಕೆ 2 ಶತಕೋಟಿ ಡಾಲರ್ ಹೊಸ ಷೇರು ಬಂಡವಾಳವನ್ನು ಒಳಗೊಂಡಿದೆ.

ವಾಲ್‌ಮಾರ್ಟ್‌ ಇಂಕ್ ಅಧ್ಯಕ್ಷ, ಸಿಇಒ ಮತ್ತು ನಿರ್ದೇಶಕ ಡಗ್ಲಸ್‌ ಮ್ಯಾಕ್‌ಮಿಲನ್‌ ಹೂಡಿಕೆದಾರರ ಸಭೆಯಲ್ಲಿ ಮಾತನಾಡುತ್ತಾ, ಭಾರತದಲ್ಲಿನ ಚಿಲ್ಲರೆ ವಹಿವಾಟಿನ ಸ್ವರೂಪದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಹಾಗು ಚಿಲ್ಲರೆ ವ್ಯಾಪಾರ ಪ್ರಪಂಚದಾದ್ಯಂತ ಹೇಗೆ ಕೆಲಸ ಮಾಡುತ್ತಿದೆ ಎಮಬುದರ ಬಗ್ಗೆ ತಿಳಿದುಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಜಗತ್ತಿನಲ್ಲಿ ಚೀನಾ ಮತ್ತು ಭಾರತ ಮುಂಚೂಣಿಯಲ್ಲಿದ್ದು, ಈ ದೇಶಗಳಿಂದ ಕಲಿಯುವುದು ತುಂಬಾ ಇದೆ. ಈದಕ್ಕಾಗಿಯೇ ಪ್ಲಿಪ್ಕಾರ್ಟ್ ಮೂಲಕ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದ್ದೇವೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+