For Quick Alerts
ALLOW NOTIFICATIONS  
For Daily Alerts

ಜಿಯೋಗೆ ಟಕ್ಕರ್! ಬಿಎಸ್ಎನ್ಎಲ್ ನೀಡುತ್ತಿದೆ ಭರ್ಜರಿ ಆಫರ್

ದೂರಸಂಪರ್ಕ ರಂಗದಲ್ಲಿ ಪ್ರಮುಖ ಟೆಲಿಕಾಂ ಕಂಪನಿಗಳ ನಡುವೆ ಪೈಪೋಟಿ ಜೋರಾಗಿದ್ದು, ಪರಸ್ಪರ ಜಿದ್ದಾಜಿದ್ದಿನ ಆಫರ್ ಗಳನ್ನು ಘೋಷಿಸುತ್ತಿವೆ.

|

ದೂರಸಂಪರ್ಕ ರಂಗದಲ್ಲಿ ಪ್ರಮುಖ ಟೆಲಿಕಾಂ ಕಂಪನಿಗಳ ನಡುವೆ ಪೈಪೋಟಿ ಜೋರಾಗಿದ್ದು, ಪರಸ್ಪರ ಜಿದ್ದಾಜಿದ್ದಿನ ಆಫರ್ ಗಳನ್ನು ಘೋಷಿಸುತ್ತಿವೆ. ಇದೀಗ ರಿಲಯನ್ಸ್ ಜಿಯೋಗೆ ಟಕ್ಕರ್ ನೀಡಲು ಬಿಎಸ್ಎನ್ಎಲ್ ಮುಂದಾಗಿದ್ದು, ಕಡಿಮೆ ದರದ ಬ್ರಾಡ್ಬ್ಯಾಂಡ್ ಯೋಜನೆಯನ್ನು ಪ್ರಾರಂಭಿಸಿದೆ.

 

ಬಿಎಸ್ಎನ್ಎಲ್ ಯೋಜನೆಯಲ್ಲಿ ಗ್ರಾಹಕರಿಗೆ 20 ಎಂಬಿಪಿಎಸ್ ವೇಗದ ಇಂಟರ್ನೆಟ್ ಸೌಲಭ್ಯ ಸಿಗಲಿದೆ. ಜಿಯೋಗೆ ಟಕ್ಕರ್ ನೀಡಲು ಬಿಎಸ್ಎನ್ಎಲ್ ನಾಲ್ಕು ಹೊಸ ಯೋಜನೆಗಳನ್ನು ಶುರು ಮಾಡಿದೆ. ಜಿಯೋ ಮುಂದಿನ ಆಫರ್! 100Mbps ಬ್ರಾಡ್ಬ್ಯಾಂಡ್, ವಿಡಿಯೋ, ಅನಿಯಮಿತ ಕರೆ

ರೂ. 99 ಪ್ಲಾನ್

ರೂ. 99 ಪ್ಲಾನ್

ಬಿಎಸ್ಎನ್ಎಲ್ ಘೋಷಿಸಿರುವ ಈ ಪ್ಲಾನ್ ರೂ. 99 ರಿಂದ 399 ರೂಪಾಯಿಯವರೆಗಿದೆ. ಅತಿ ಕಡಿಮೆ ವೆಚ್ಚದ 99 ರೂಪಾಯಿ ಪ್ಲಾನ್ ನಲ್ಲಿ ಪ್ರತಿ ದಿನ 1.5 ಜಿಬಿ ಡೇಟಾ ಜೊತೆ ಅನಿಯಮಿತ ಕರೆ ಸೌಲಭ್ಯ ಸಿಗಲಿದೆ.

ರೂ. 199 ಪ್ಲಾನ್

ರೂ. 199 ಪ್ಲಾನ್

ರೂ. 199 ಪ್ಲಾನ್ ಕೂಡ ಬಿಎಸ್ಎನ್ಎಲ್ ಶುರು ಮಾಡಿದ್ದು, BSNL BBG Combo ULD 150GB ಯೋಜನೆ ಇದಾಗಿದೆ. ಈ ಪ್ಲಾನ್ ನಲ್ಲಿ ಗ್ರಾಹಕರು ಪ್ರತಿ ದಿನ 5 ಜಿಬಿ ಡೇಟಾ ಸೌಲಭ್ಯ ಪಡೆಯಲಿದ್ದಾರೆ.

ರೂ. 299 ಪ್ಲಾನ್
 

ರೂ. 299 ಪ್ಲಾನ್

ರೂ. 299 ಪ್ಲಾನ್ ಅಡಿಯಲ್ಲಿ, ಪ್ರತಿ ದಿನ 10 ಜಿಬಿ ಡೇಟಾವನ್ನು ಬಿಎಸ್ಎನ್ಎಲ್ ನೀಡಲಿದೆ. ಅಂದರೆ ಒಟ್ಟು 300GB ಡೇಟಾ ಸಿಗಲಿದೆ.

ರೂ. 399 ಪ್ಲಾನ್

ರೂ. 399 ಪ್ಲಾನ್

ಗ್ರಾಹಕರು ರೂ. 399 ಪ್ಲಾನ್ ನಲ್ಲಿ ಪ್ರತಿ ತಿಂಗಳು 600 ಜಿಬಿ ಡೇಟಾ ಪಡೆಯಲಿದ್ದು, ಪ್ರತಿದಿನ 20GB ಡೇಟಾ ಸಿಗಲಿದೆ.

ಜಿಯೋ ಫೈಬರ್ ಬ್ರಾಡ್ಬ್ಯಾಂಡ್ ಗೆ ಟಕ್ಕರ್

ಜಿಯೋ ಫೈಬರ್ ಬ್ರಾಡ್ಬ್ಯಾಂಡ್ ಗೆ ಟಕ್ಕರ್

ಈಗಾಗಲೇ ಜಿಯೋ ಫೈಬರ್ ಬ್ರಾಡ್ಬ್ಯಾಂಡ್ ಶುರು ಮಾಡುವುದರ ಬಗ್ಗೆ ಹೇಳಿ, ತನ್ನ ಯೋಜನೆ ಘೋಷಿಸಿತ್ತು. ಇದರ ವೇಗ 100 ಎಂಪಿಬಿಎಸ್ ಇರಲಿದೆ. ತಿಂಗಳಿಗೆ ರೂ. 1000ಕ್ಕಿಂತ ಕಡಿಮೆ ಮೊತ್ತದಲ್ಲಿ ಜಿಯೋ ತನ್ನ ಗ್ರಾಹಕರಿಗೆ 100 ಎಂಬಿಪಿಎಸ್ ಇಂಟರ್ನೆಟ್, ವಿಡಿಯೋ ಹಾಗೂ ಅನಿಯಮಿತ ಧ್ವನಿ ಕರೆಗಳನ್ನು ನೀಡಲಿದೆ ಎನ್ನಲಾಗಿದೆ.

Read more about: bsnl telecom jio money finance news
English summary

BSNL Monthly Broadband Plans With 20Mbps Speeds Now Start at Rs. 99

BSNL is said to have introduced four new broadband plans that offer daily data limit, and a speed of up to 20Mbps.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X