For Quick Alerts
ALLOW NOTIFICATIONS  
For Daily Alerts

ವಿಶ್ವದ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಏಕೈಕ ಭಾರತೀಯ

ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ಫೋರ್ಬ್ಸ್ ವಾರ್ಷಿಕ ಪಟ್ಟಿಯಲ್ಲಿ ವಿಶ್ವದ 100 ಅತಿ ಹೆಚ್ಚು ಸಂಭಾವನೆ ಪಡೆಯುವ ಅಥ್ಲೀಟ್ ಗಳ ಪಟ್ಟಿಯಲ್ಲಿದ್ದಾರೆ.

|

ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ವಿಶ್ವದ 100 ಜನ ಅತ್ಯಂತ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಸ್ಥಾನ ಗಿಟ್ಟಿಸಿದ್ದಾರೆ.

 

ಹೌದು. ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ಫೋರ್ಬ್ಸ್ ವಾರ್ಷಿಕ ಪಟ್ಟಿಯಲ್ಲಿ ವಿಶ್ವದ 100 ಅತಿ ಹೆಚ್ಚು ಸಂಭಾವನೆ ಪಡೆಯುವ ಅಥ್ಲೀಟ್ ಗಳ ಪಟ್ಟಿಯಲ್ಲಿದ್ದಾರೆ. 83 ನೇ ಸ್ಥಾನದಲ್ಲಿರುವ ಕೊಹ್ಲಿ, ಪಟ್ಟಿಯಲ್ಲಿರುವ ಏಕೈಕ ಕ್ರೀಡಾಪಟು ಆಗಿದ್ದಾರೆ. ಈ ಬಾರಿ ಪಟ್ಟಿಯಲ್ಲಿ ಮಹಿಳಾ ಕ್ರೀಡಾಪಟುಗಳು ಸ್ಥಾನ ಪಡೆದುಕೊಂಡಿಲ್ಲ.

ವಿರಾಟ್ ಗಳಿಕೆ

ವಿರಾಟ್ ಗಳಿಕೆ

ಕಳೆದ 12 ತಿಂಗಳುಗಳಲ್ಲಿ 29 ವರ್ಷ ವಯಸ್ಸಿನ ಕೋಹ್ಲಿ ಬ್ಯಾಟಿಂಗ್ ಸೆನ್ಸೆಷನ್ ಮೂಲಕ 24 ಮಿಲಿಯನ್ ಡಾಲರ್, ಸಂಬಳ ಮತ್ತು ಗೆಲುವಿನ ಮೂಲಕ 4 ಮಿಲಿಯನ್ ಡಾಲರ್ ಮತ್ತು ಬ್ರ್ಯಾಂಡ್ ಜಾಹೀರಾತು ಮೂಲಕ 20 ಮಿಲಿಯನ್ ಡಾಲರ್ ಗಳಿಸಿದ್ದಾರೆ. ವಾರ್ಷಿಕವಾಗಿ ಒಟ್ಟು ಅಂದಾಜು ರೂ. 185 ಕೋಟಿ ಆದಾಯ ಗಳಿಕೆಯಾಗಿದೆ.

ಫ್ಲಾಯ್ಡ್ ಮೇವೆದರ್ ನಂಬರ್ ಒನ್

ಫ್ಲಾಯ್ಡ್ ಮೇವೆದರ್ ನಂಬರ್ ಒನ್

ವೃತ್ತಿಪರ ಬಾಕ್ಸರ್ ಆಗಿರುವ ಫ್ಲಾಯ್ಡ್ ಮೇವೆದರ್ ಅವರು ಫೋರ್ಬ್ಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮೇವೆದರ್ ಏಳು ವರ್ಷಗಳಲ್ಲಿ ನಾಲ್ಕನೇ ಬಾರಿಗೆ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟು ಎಂದು ಸ್ಥಾನ ಪಡೆದಿದ್ದಾರೆ. ಮೇವೆದರ್ ಗಳಿಕೆ ರೂ. 1909 ಕೋಟಿಯಾಗಿದೆ.

ಲಯೊನೆಲ್ ಮೆಸ್ಸಿ
 

ಲಯೊನೆಲ್ ಮೆಸ್ಸಿ

ಈ ಪಟ್ಟಿಯಲ್ಲಿ ಲಯೊನೆಲ್ ಮೆಸ್ಸಿ ಎರಡನೇ ಸ್ಥಾನದಲ್ಲಿದ್ದು, ಇವರ ಗಳಿಕೆ ರೂ. 743 ಕೋಟಿಯಾಗಿದೆ.

ಕ್ರಿಸ್ಟಿಯಾನೋ ರೊನಾಲ್ಡೊ

ಕ್ರಿಸ್ಟಿಯಾನೋ ರೊನಾಲ್ಡೊ

ಕಳೆದ ಎರಡು ವರ್ಷಗಳಿಂದ ವಿಶ್ವದ ಅತ್ಯಧಿಕ ಸಂಭಾವನೆ ಪಡೆಯುವ ಕ್ರೀಡಾಪಟುವಾಗಿದ್ದ ಫುಟ್ಬಾಲ್ ಐಕಾನ್ ಕ್ರಿಸ್ಟಿಯಾನೋ ರೊನಾಲ್ಡೊ ಎರಡು ಸ್ಥಾನಗಳನ್ನು ಕುಸಿದು ಮೂರನೇ ಸ್ಥಾನದಲ್ಲಿದ್ದಾರೆ. ರೊನಾಲ್ಡೊ ಗಳಿಕೆ ರೂ. 723 ಕೋಟಿ.

Read more about: india money finance news forbes
English summary

Forbes's 2018 list: Virat Kohli sole Indian in world's highest-paid athletes

Indian cricket captain, Virat Kohli has yet again, made it to the Forbes’s annual list of the world’s 100 highest-paid athletes.
Story first published: Thursday, June 7, 2018, 13:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X