ಬೆಂಗಳೂರಿನಲ್ಲಿರುವ ಟಾಪ್ 10 ಕಟ್ಟಡ ನಿರ್ಮಾಣ (CONSTRUCTION) ಕಂಪನಿಗಳು

ಬೆಂಗಳೂರಿನಲ್ಲಿರುವ ಪ್ರಮುಖ ಕಟ್ಟಡ ನಿರ್ಮಾಣ ಕಂಪನಿಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದ್ದು, ಇವು ದೇಶದಾದ್ಯಂತ ತಮ್ಮ ಜಾಲವನ್ನು ಹೊಂದಿರುವ ಪ್ರಮುಖ ಸಂಸ್ಥೆಗಳಾಗಿವೆ.

ಬೆಂಗಳೂರಿನಲ್ಲಿರುವ ಪ್ರಮುಖ ಕಟ್ಟಡ ನಿರ್ಮಾಣ ಕಂಪನಿಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದ್ದು, ಇವು ದೇಶದಾದ್ಯಂತ ತಮ್ಮ ಜಾಲವನ್ನು ಹೊಂದಿರುವ ಪ್ರಮುಖ ಸಂಸ್ಥೆಗಳಾಗಿವೆ.

ಅಲಿಯನ್ಸ್ ಗ್ರೂಪ್

ಅಲಿಯನ್ಸ್ ಗ್ರೂಪ್

ಇದು ರಿಯಲ್ ಎಸ್ಟೇಟ್ ನಲ್ಲಿ ಅಭಿವೃದ್ಧಿ ಕಂಡಿರುವ ಅತ್ಯಂತ ಪ್ರಮುಖ ಸಂಸ್ಥೆಯಾಗಿದೆ. ಬೆಂಗಳೂರಿನಲ್ಲಿ ಇದರ ಪ್ರಧಾನ ಕಛೇರಿ ಇದ್ದು, ಚೆನೈ, ಮೈಸೂರು ಮತ್ತು ಹೈದ್ರಾಬಾದ್ ನಲ್ಲಿ ಇದರ ಕಾರ್ಯಗಳು ನಡೆಯುತ್ತದೆ. ದಕ್ಷಿಣ ಭಾರತದಾದ್ಯಂತ ಉತ್ತಮ ಗುಣಮಟ್ಟದ ರೆಸಿಡೆನ್ಶಿಯಲ್ ಕಮ್ಯುನಿಟಿಯನ್ನು ನಿರ್ಮಾಣ ಮಾಡುವುದರಲ್ಲಿ ಇದು ಪ್ರಸಿದ್ಧಿಯಾಗಿದೆ.

ಬ್ರಿಗೇಡ್ ಎಂಟರ್ಪ್ರೈಸಸ್ ಲಿಮಿಟೆಡ್

ಬ್ರಿಗೇಡ್ ಎಂಟರ್ಪ್ರೈಸಸ್ ಲಿಮಿಟೆಡ್

1986 ರಲ್ಲಿ ಜೈಶಂಕರ್ ಅವರು ಈ ಕಂಪೆನಿಯನ್ನು ನಿರ್ಮಿಸಿದರು. ಇದರ ಪ್ರಧಾನ ಕಛೇರಿ ಬೆಂಗಳೂರಿನಲ್ಲಿದೆ. ವಾಣಿಜ್ಯ ಕಟ್ಟಡಗಳ ನಿರ್ಮಾಣ, ವಿಲ್ಲಾಗಳು, ಶಾಪಿಂಗ್ ಮಾಲ್ ಗಳು, ಅಪಾರ್ಟ್ ಮೆಂಟ್ ಗಳು, ಚಿಲ್ಲರೆ ವ್ಯಾಪಾರ ಮಳಿಗೆಗಳು ಇತ್ಯಾದಿಗಳ ನಿರ್ಮಾಣಕ್ಕೆ ಇದು ಹೇಳಿ ಮಾಡಿಸಿದ ಸಂಸ್ಥೆ. ಈ ಕಂಪೆನಿಯು ಆಸ್ತಿ ನಿರ್ವಹಣೆ ಮತ್ತು ಆಸ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಲಿದೆ.

ಬಿವಿಎಲ್ ಗ್ರೂಪ್ ಆಪ್ ಕಂಪೆನೀಸ್

ಬಿವಿಎಲ್ ಗ್ರೂಪ್ ಆಪ್ ಕಂಪೆನೀಸ್

1976 ರಲ್ಲಿ ಈ ಸಂಸ್ಥೆ ನಿರ್ಮಾಣಗೊಂಡಿದ್ದು ಟೊಬ್ಯಾಕೋ ಟ್ರೇಡಿಂಗ್ ಕಂಪೆನಿಯಾಗಿದೆ. ಬಿವಿಎಲ್ ಗ್ರೂಪ್ ಸದ್ಯ ಆಂದ್ರಪ್ರದೇಶಲ್ಲಿ ದೊಡ್ಡ ಮಟ್ಟದ ಬ್ಯೂಸಿನೆಸ್ ಹೌಸ್ ಗಳನ್ನು ಹೊಂದಿದೆ. ಅಷ್ಟೇ ಅಲ್ಲದೆ ರಿಯಲ್ ಎಸ್ಟೇಟ್ ಅಭಿವೃದ್ಧಿಯಲ್ಲೂ ಕೂಡ ಕಂಪೆನಿ ಗುರುತಿಸಿಕೊಂಡಿದೆ.

ಕಾನ್ ಕೋರ್ಡ್ ಗ್ರೂಪ್

ಕಾನ್ ಕೋರ್ಡ್ ಗ್ರೂಪ್

1998 ರಲ್ಲಿ ಕಾನ್ ಕೋರ್ಡ್ ಗ್ರೂಪ್ ನಿರ್ಮಾಣವಾಯಿತು. ಮಧ್ಯಸ್ಥಗಾರರಿಗೆ ಉತ್ತಮ ಮೌಲ್ಯವನ್ನು ತಂದುಕೊಡುವ ಉದ್ದೇಶದಿಂದ ನಿರ್ಮಾಣವಾದ ಸಂಸ್ಥೆ ಇದು. ವ್ಯಾಪಾರಿ ಮತ್ತು ವಸತಿ ಸಮುಚ್ಛಯಗಳ ನಿರ್ಮಾಣದಲ್ಲಿ ಕಂಪೆನಿ ತೊಡಗಿಸಿಕೊಂಡಿದ್ದು ಉತ್ತಮ ಗುಣಮಟ್ಟದ ಉತ್ಪನ್ನಗಳ ತಯಾರಿಕೆಯಲ್ಲಿ ಹೆಸರುವಾಸಿಯಾಗಿದೆ.

ಜಿಎಮ್ಆರ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್

ಜಿಎಮ್ಆರ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್

1978 ರಲ್ಲಿ ಮಿಸ್ಟರ್ ಜಿ.ಎಮ್ ರಾಮ್ ಅವರು ಈ ಕಂಪೆನಿಯನ್ನು ಸಣ್ಣ ಮಟ್ಟದ ಜೂಟ್ ಮಿಲ್ ತಯಾರಿಕೆಯ ಸಂಸ್ಥೆಯನ್ನಾಗಿ ಆರಂಭಿಸಿದರು. ಈಗ ಈ ಕಂಪೆನಿ ಜಿಎಮ್ ಆರ್ ಗ್ರೂಪ್ ಆಗಿ ಗುರುತಿಸಿಕೊಂಡಿದೆ. ಮೂಲಸೌಕರ್ಯದ ವಿಭಾಗದಲ್ಲಿ ಈ ಕಂಪೆನಿ ಹೆಚ್ಚು ತೊಡಗಿಸಿಕೊಂಡಿದೆ. ಕಂಪೆನಿಯ ಪ್ರಧಾನ ಕಛೇರಿ ನವದೆಹಲಿಯಲ್ಲಿದೆ.ಶಕ್ತಿ, ಏರ್ ಪೋರ್ಟ್, ಹಳ್ಳಿಗಳ ಮೂಲಸೌಕರ್ಯ ಮತ್ತು ಸಾರಿಗೆ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಕಂಪೆನಿಯು ಹೆಚ್ಚು ತೊಡಗಿಸಿಕೊಂಡಿದೆ.ಇದೂ ಕೂಡ ಟಾಪ್ 10 ಬೆಂಗಳೂರಿನಲ್ಲಿರುವ ನಿರ್ಮಾಣ ಸಂಸ್ಥೆಗಳಲ್ಲಿ ಸ್ಥಾನ ಪಡೆಯುತ್ತೆ.

ಮಚಣಿ ಗ್ರೂಪ್

ಮಚಣಿ ಗ್ರೂಪ್

ಇದೂ ಕೂಡ ಒಂದು ಭಾರತದಲ್ಲಿರುವ ಪ್ರಮುಖ ನಿರ್ಮಾಣ ಸಂಸ್ಥೆಯಾಗಿದೆ.. ಹಲವು ವಿವಿಧ ರೀತಿಯ ನಿರ್ಮಾಣಗಳಲ್ಲಿ ಕಂಪೆನಿ ತೊಡಗಿಸಿಕೊಂಡಿದ್ದು, ಅಡುಗೆ ತಂತಿಗಲು ಮತ್ತು ವಾಹನಗಳ ಸ್ಪ್ರಿಂಗ್ ತಯಾರಿಕೆ, ಜವಳಿ,ವಿದ್ಯುತ್, ಮುದ್ರಣ,ಸರಕುಗಳ ಉದ್ಯಮದಲ್ಲೂ ಕಂಪೆನಿಯ ಕೊಡುಗೆ ಇದೆ.

ಮಂತ್ರಿ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್

ಮಂತ್ರಿ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್

1999 ರಲ್ಲಿ ಸುಶೀಲ್ ಮಂತ್ರಿ ಅವರು ಈ ಸಂಸ್ಥೆಯನ್ನು ಕಟ್ಟಿದರು. ಇದರ ಪ್ರಧಾನ ಕಛೇರಿ ಬೆಂಗಳೂರಿನಲ್ಲಿದೆ. ಈ ರಿಯಲ್ ಎಸ್ಟೇಟ್ ಸಂಸ್ಥೆಯು ಹಲವಾರು ಆಸ್ತಿಗಳನ್ನು ಅಭಿವೃದ್ಧಿಗೊಳಿಸಿದ್ದು ಬೆಂಗಳೂರು, ಚೆನೈ, ಹೈದ್ರಾಬಾದ್, ಪುಣೆಯಲ್ಲೂ ಕೆಲಸ ಮಾಡಿದೆ. ವಾಣಿಜ್ಯ, ಹಾಸ್ಪಿಟಲ್, ಶಿಕ್ಷಣ ಸಂಸ್ಥೆಗಳು, ಆಫೀಸ್ ಗಳು ಇತ್ಯಾದಿಗಳ ನಿರ್ಮಾಣವನ್ನು ಈ ಸಂಸ್ಥೆ ಮಾಡಿದೆ.

ಪ್ರೆಸ್ಟೀಜ್ ಎಸ್ಟೇಟ್ ಪ್ರೊಜೆಕ್ಟ್ ಲಿಮಿಟೆಡ್

ಪ್ರೆಸ್ಟೀಜ್ ಎಸ್ಟೇಟ್ ಪ್ರೊಜೆಕ್ಟ್ ಲಿಮಿಟೆಡ್

1986 ರಲ್ಲಿ ರಝಾಕ್ ಸತ್ತರ್ ಎಂಬುವವರು ಪ್ರೆಸ್ಟೀಜ್ ಗ್ರೂಪ್ ಸಂಸ್ಥೆಯನ್ನು ನಿರ್ಮಿಸಿದರು. ಇದರ ಪ್ರಧಾನ ಕಛೇರಿ ಬೆಂಗಳೂರಿನಲ್ಲಿದೆ. ವಾಣಿಜ್ಯ ಆಫೀಸ್ ಗಳು, ಶಾಪಿಂಗ್ ಮಾಲ್ ಗಳು, ಹೋಟೆಲ್, ಗಾಲ್ಫ್ ಕೋರ್ಸ್ ಗಳು, ವಿಲ್ಲಾಗಳು, ಹಾಸ್ಪಿಟಲ್ ಗಳು ಇತ್ಯಾದಿ ಹಲವು ವಿಚಾರಗಳಲ್ಲಿ ಕಂಪೆನಿ ತೊಡಗಿಸಿಕೊಂಡಿದೆ. ಕೊಚ್ಚಿ,ಮಂಗಳೂರು, ಹೈದ್ರಾಬಾದ್ ಚೆನೈ, ಮೈಸೂರು ಇತರೆಡೆಗಳಲ್ಲಿ ಇದರ ವಾಣಿಜ್ಯ ಜಾಗಗಳಿವೆ.

ಶೋಭಾ ಲಿಮಿಟೆಡ್

ಶೋಭಾ ಲಿಮಿಟೆಡ್

ಇದು ಭಾರತದ ಅಂತರಾಷ್ಟ್ರೀಯ ರಿಯಲ್ ಎಸ್ಟೇಟ್ ಡೆವಲಪರ್ ಸಂಸ್ಥೆಯಾಗಿದೆ. ಇದರ ಪ್ರಧಾನ ಕಛೇರಿ ಬೆಂಗಳೂರಿನಲ್ಲಿದೆ. ಈ ಕಂಪೆನಿಯು ಅಭಿವೃದ್ದಿ, ನಿರ್ವಹಣೆ, ವ್ಯಾಪಾರ, ಆಪರೇಷನ್, ಹೌಸಿಂಗ್ ಪ್ರೊಜೆಕ್ಟ್, ವಾಣಿಜ್ಯ ಜಾಗಗಳು, ಮತ್ತು ಇತರೆ ಹಲವಾರು ಇದರ ಕೆಲಸಗಳಿಗಾಗಿ ಗುರುತಿಸಿಕೊಂಡಿದೆ. ಇದು ದೊಡ್ಡ ಮಟ್ಟದಲ್ಲಿ ಮನೆ ಮತ್ತು ಕಟ್ಟಡ ನಿರ್ಮಾಣದ ಪ್ರೊಜೆಕ್ಟ್ ಗಳನ್ನು ಹೊಂದಿದೆ. ಕಂಪೆನಿಯಲ್ಲಿ ಹಲವಾರು ತಯಾರಿಕಾ ವಿಭಾಗಗಳಿವೆ. ಕಾಂಕ್ರೀಟ್ ಉತ್ಪನ್ನಗಳು, ಇಂಟೀರಿಯರ್, ಗಾಜು ಮತ್ತು ಲೋಹದ ಉತ್ಪನ್ನಗಳ ಇತ್ಯಾದಿಗಳ ತಯಾರಿಕೆಯಲ್ಲೂ ಇದೆ. ಬೆಂಗಳೂರಿನಲ್ಲಿರುವ ಟಾಪ್ 10 ನಿರ್ಮಾಣ ಸಂಸ್ಥೆಗಳ ಪಟ್ಟಿಯಲ್ಲಿ ಇದಕ್ಕೂ ಪ್ರಮುಖ ಸ್ಥಾನವಿದೆ.

ದಿ ಎಂಬೆಸಿ ಗ್ರೂಪ್

ದಿ ಎಂಬೆಸಿ ಗ್ರೂಪ್

1993 ರಲ್ಲಿ ದಿ ಎಂಬೆಸಿ ಗ್ರೂಪ್ ಆರಂಭವಾಯು. ಇದರ ಪ್ರಧಾನ ಕಛೇರಿ ಬೆಂಗಳೂರಿನಲ್ಲಿದೆ. ವಸತಿ ಸಮುಚ್ಛಯ, ವ್ಯಾಪಾರಿ ಮಳಿಗೆಗಳ ನಿರ್ಮಾಣ, ವಾಣಿಜ್ಯ, ಆಥಿತ್ಯ, ಶಾಲಾ ಕಟ್ಟಡ ಇತ್ಯಾದಿ ನಿರ್ಮಾಣಗಳ ಕಾರ್ಯದಲ್ಲಿ ಇದು ತೊಡಗಿಸಿಕೊಂಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+