ಬ್ಯಾಂಕಿಂಗ್ ವಲಯದಲ್ಲಿ ವಂಚನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕುಗಳಿಗೆ ಪದೇ ಪದೇ ಎಚ್ಚರಿಕೆಗಳನ್ನು ಕೊಡುತ್ತಿದ್ದರೂ ಎಟಿಎಂಗಳನ್ನೂ ಪೂರ್ಣವಾಗಿ ಸುರಕ್ಷಿತಗೊಳಿಸಿಲ್ಲ.
ಬ್ಯಾಂಕಿಂಗ್ ವಲಯದಲ್ಲಿ ವಂಚನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕುಗಳಿಗೆ ಪದೇ ಪದೇ ಎಚ್ಚರಿಕೆಗಳನ್ನು ಕೊಡುತ್ತಿದ್ದರೂ ಎಟಿಎಂಗಳನ್ನೂ ಪೂರ್ಣವಾಗಿ ಸುರಕ್ಷಿತಗೊಳಿಸಿಲ್ಲ ಹಾಗು ಸ್ಕಿಮ್ಮಿಂಗ್ ಪ್ರೂಫ್ ಅಳವಡಿಸಿಲ್ಲ.
ಇದೀಗ ಬ್ಯಾಂಕುಗಳಿಗೆ ಖಡಕ್ ಸೂಚನೆ ನೀಡಿರುವ ಆರ್ಬಿಐ, ಎಟಿಎಂಗಳಲ್ಲಿ ನಡೆಯುವ ವಂಚನಾ ಪ್ರಕರಣಗಳನ್ನು ತಡೆಗಟ್ಟಲು ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಬೇಕು ಎಂದು ಸೂಚನೆ ನೀಡಿದೆ.
ಆಗಸ್ಟ್ ಒಳಗಾಗಿ ಕ್ರಮ
ಎಟಿಎಂಗಳಲ್ಲಿನ ವಂಚನೆಗಳನ್ನುತಡೆಯಲು ಆಗಸ್ಟ್ ತಿಂಗಳ ಒಳಗೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಮುಖ್ಯವಾಗಿ ಎಟಿಎಂ ಕಾರ್ಯನಿರ್ವಹಣೆಗೆ ಸಂಬಂಧಿಸಿದ ತಂತ್ರಾಂಶವನ್ನು ಮುಂದಿನ ಜೂನ್ ತಿಂಗಳ ಅಂತ್ಯದೊಳಗೆ ಹಂತ ಹಂತವಾಗಿ ಮೇಲ್ದರ್ಜೆಗೆರಿಸಬೇಕು. ಈ ಕ್ರಮಗಳನ್ನು ಅಳವಡಿಸದಿದ್ದರೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರ್ಬಿಐ ಎಚ್ಚರಿಕೆ ನೀಡಿದೆ.
ಕಾರ್ಡ್ ಗಳ ವಂಚನೆ ತಡೆಗೆ ಕ್ರಮ
ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ವಂಚನೆ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬ್ಯಾಂಕುಗಳು ವಿಫಲಗೊಳ್ಳುತ್ತಿದ್ದು, ತುಂಬಾ ನಿಧಾನಗತಿಯ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದು ಬ್ಯಾಂಕುಗಳಿಗೆ ಆರ್‌ಬಿಐ ಸುತ್ತೋಲೆಯಲ್ಲಿ ಗಂಭೀರವಾಗಿ ತಿಳಿಸಿದೆ. ಪ್ರಸ್ತುತ ದಿನಗಳಲ್ಲಿ ವಂಚನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಎಟಿಎಂಗಳಲ್ಲಿನ ಕಳಪೆ ತಂತ್ರಾಂಶ ಮತ್ತು ಇತರ ಸುರಕ್ಷತಾ ಕ್ರಮಗಳನ್ನು ವೈಫಲ್ಯವಾಗಿದೆ.
ಬ್ಯಾಂಕ್ ಗಳಿಗೆ ಗಡುವು
ಎಟಿಎಂಗಳ ವಂಚನೆ ಪ್ರಕರಣಗಳನ್ನು ತಡೆಗಟ್ಟುವ ಕ್ರಮಗಳನ್ನು 2019ರ ಮಾರ್ಚ್ ಒಳಗಾಗಿ ಪೂರ್ಣಗೊಳಿಸಬೇಕು. ತಂತ್ರಾಂಶ ಮೇಲ್ದರ್ಜೆಗೆ ಏರಿಸಲು ಶೇ. 25ರಷ್ಟು ಎಟಿಎಂಗಳಿಗೆ ಸೆಪ್ಟೆಂಬರ್, ಶೇ. 50ರಷ್ಟು ಎಟಿಎಂಗಳಿಗೆ ಡಿಸೆಂಬರ್ ವರೆಗೆ ಗಡುವು ನೀಡಲಾಗಿದೆ. 2019ರ ಜೂನ್ ಅಂತ್ಯದೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.


Click it and Unblock the Notifications