For Quick Alerts
ALLOW NOTIFICATIONS  
For Daily Alerts

ಉಚಿತ ಪ್ಯಾನ್ ಕಾರ್ಡ್! ಕೆಲವೆ ಕ್ಷಣಗಳಲ್ಲಿ ಪಡೆಯೋದು ಹೇಗೆ?

ಪ್ಯಾನ್ ಕಾರ್ಡ್ ಪಡೆದುಕೊಳ್ಳಲು ಬಯಸುತ್ತಿರುವ ವ್ಯಕ್ತಿಗಳಿಗೆ ಆದಾಯ ತೆರಿಗೆ ಇಲಾಖೆ ಆಧಾರ್ ಆಧಾರಿತ ಪ್ಯಾನ್ ಅಲೋಟ್ಮೆಂಟ್ ಸೇವೆಯನ್ನು ಪ್ರಾರಂಭಿಸಿದೆ.

By Siddu
|

ಪ್ಯಾನ್ ಕಾರ್ಡ್ ಪಡೆಯಲು ಬಯಸುವ ಗ್ರಾಹಕರಿಗೆ ಆದಾಯ ತೆರಿಗೆ ಇಲಾಖೆ ಸಿಹಿಸುದ್ದಿ ನೀಡಿದೆ. ಪ್ಯಾನ್ ಕಾರ್ಡ್ ಪಡೆದುಕೊಳ್ಳಲು ಬಯಸುತ್ತಿರುವ ವ್ಯಕ್ತಿಗಳಿಗೆ ಆದಾಯ ತೆರಿಗೆ ಇಲಾಖೆ ಆಧಾರ್ ಆಧಾರಿತ ಪ್ಯಾನ್ ಅಲೋಟ್ಮೆಂಟ್ ಸೇವೆಯನ್ನು ಪ್ರಾರಂಭಿಸಿದೆ.
ಈ ಸೌಕರ್ಯವು ವೆಚ್ಚರಹಿತವಾಗಿದ್ದು, ಮೊದಲು ಬಂದವರಿಗೆ ಮೊದಲ ಆಧ್ಯತೆ ಆಧಾರದ ಮೇಲೆ ಸೀಮಿತ ಅವಧಿಗೆ ಲಭ್ಯವಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಗ್ರಾಹಕರಿಗೆ ಶಾಕ್! ಎಲ್ಪಿಜಿ ಸಿಲಿಂಡರ್ ದರ ಹೆಚ್ಚಳ

ಪ್ಯಾನ್ ಕಾರ್ಡ್ ಪಡೆಯೋದು ಸುಲಭ

ಪ್ಯಾನ್ ಕಾರ್ಡ್ ಪಡೆಯೋದು ಸುಲಭ

ತಮ್ಮ ಹಣಕಾಸು ಮತ್ತು ತೆರಿಗೆ ವಿಷಯಗಳಿಗಾಗಿ ಹೆಚ್ಚಿನ ಜನರು ಪ್ಯಾನ್ ಕಾರ್ಡ್ ಬಳಸುವಂತಾಗಬೇಕು ಎಂಬ ಉದ್ದೇಶದಿಂದ ಈ ಹೊಸ ಸೌಲಭ್ಯ ಪರಿಚಯಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಥಿರ ಖಾತೆ ಸಂಖ್ಯೆ (ಪ್ಯಾನ್ ಕಾರ್ಡ್) ತಯಾರಿಸುವುದು ಒಂದು ದೊಡ್ಡ ಪ್ರಕ್ರಿಯೆ. ಇನ್ಮುಂದೆ ಪಾನ್ ಕಾರ್ಡ್ ತಯಾರಿಸಲು ಕಷ್ಟ ಪಡಬೇಕಾಗಿಲ್ಲ.

ಇ-ಇನ್ಸ್ಟಂಟ್ ಪ್ಯಾನ್ ಸೌಲಭ್ಯ

ಇ-ಇನ್ಸ್ಟಂಟ್ ಪ್ಯಾನ್ ಸೌಲಭ್ಯ

ಮನೆಯಲ್ಲಿಯೇ ಕುಳಿತು ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಆದಾಯ ತೆರಿಗೆ ಇಲಾಖೆ ಆನ್ಲೈನ್ ಇನ್ಸ್ಟಂಟ್ ಪ್ಯಾನ್ ಕಾರ್ಡ್ (ಇಪಿಎಎನ್) ವ್ಯವಸ್ಥೆ ಶುರು ಮಾಡಿದೆ.
ಬಳಕೆದಾರರು ಆದಾಯ ತೆರಿಗೆ ಇಲಾಖೆ ಪೋರ್ಟಲ್ ಗೆ ಹೋಗಿ ಲಾಗಿನ್ ಆಗಬೇಕು. ಮೊಬೈಲ್ ನಂಬರ್ ಹಾಗೂ ಆಧಾರ್ ನಂಬರ್ ಹಾಕಬೇಕು. ಇದಕ್ಕೆ ಪ್ರತ್ಯೇಕವಾಗಿ ದಾಖಲೆಗಳು ಬೇಕಾಗುವುದಿಲ್ಲ. ಮೊದಲು ಬಂದವರಿಗೆ ಮೊದಲ ಆಧಾರದ ಮೇಲೆ ಪ್ಯಾನ್ ಪಡೆಯಬಹುದಾಗಿದೆ.

ಉಚಿತ ಸೇವೆ
 

ಉಚಿತ ಸೇವೆ

ತೆರಿಗೆ ಇಲಾಖೆ ಇನ್ಸ್ಟ್ಂಟ್ ಇ-ಪ್ಯಾನ್ ವ್ಯವಸ್ಥೆಯನ್ನು ನಿಗದಿತ ಸಮಯಕ್ಕೆ ಮಾತ್ರ ನಿಗದಿಪಡಿಸಿದೆ. ಇ-ಪ್ಯಾನ್ ಕಾರ್ಡ್ ಪಡೆಯಲು ಬಳಕೆದಾರರು ತಮ್ಮ ಸಹಿಯ ನಕಲನ್ನು JPEG ಮಾದರಿಯಲ್ಲಿ ಒದಗಿಸಬೇಕು. ಈ ಸೇವೆ ಉಚಿತವಾಗಿದ್ದು, ವೈಯಕ್ತಿಯ ತೆರಿಗೆ ಪಾವತಿದಾರರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ನೋಂದಣಿಯಾದ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸುವುದರ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು.

ಪ್ಯಾನ್ ಆಧಾರ್ ಲಿಂಕ್ ಅವಧಿ ವಿಸ್ತಾರ

ಪ್ಯಾನ್ ಆಧಾರ್ ಲಿಂಕ್ ಅವಧಿ ವಿಸ್ತಾರ

ಇಲಾಖೆಯ ಈ ಅಧಿಕೃತ ಪೋರ್ಟಲ್ ನಲ್ಲಿ ಪ್ರಕ್ರಿಯೆಯನ್ನು ಮಾಡಬಹುದಾಗಿದೆ. (https: //www.incometaxindiaefiling.gov.in. ನೇರ ತೆರಿಗೆಗಳ ಕೇಂದ್ರೀಯ ಮಂಡಳಿ(ಸಿಬಿಡಿಟಿ) ಆಧಾರ್ ಪ್ಯಾನ್ ಜೋಡಣೆ ಅವಧಿಯನ್ನು ಮುಂದಿನ ವರ್ಷ ಮಾರ್ಚ್ 31ರವರೆಗೆ ವಿಸ್ತರಿಸಿದೆ.

 

English summary

Free PAN CARD! Here’s how to get instant Permanent Account Number from IT department

The Income Tax department has launched an 'instant' Aadhaar-based PAN allotment service for individuals seeking to obtain the unique identity for the first time.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X