For Quick Alerts
ALLOW NOTIFICATIONS  
For Daily Alerts

ಜಿಯೋ ಡಬಲ್ ಧಮಾಕಾ! ಜಿಯೋ ಫೋನ್ 2, ಜಿಯೋ ಗೀಗಾ ಫೈಬರ್ ಆಫರ್ ಪಡೆಯೋದು ಹೇಗೆ?

೪೧ನೇ ವಾರ್ಷಿಕ ಸಭೆಯಲ್ಲಿ ಜಿಯೋ ಫೋನ್ 2 ಬಿಡುಗಡೆ ಮಾಡಿದೆ. ಭಾರತೀಯ ದೂರಸಂಪರ್ಕ ವಲಯದಲ್ಲಿ ಕ್ರಾಂತಿಕಾರಕ ವಿಕಸನಕ್ಕೆ ಪೂರಕವಾಗಿರಲಿದೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.

By Siddu
|

ರಿಲಯನ್ಸ್ ಇಂಡಸ್ಟ್ರಿಸ್ ತನ್ನ ವಾರ್ಷಿಕ ಸಭೆಗಳಲ್ಲಿ ಹೊಸ ಕೊಡುಗೆಗಳನ್ನು ಘೋಷಿಸುವುದು ವಾಡಿಕೆ! ಇದೀಗ ತನ್ನ ೪೧ನೇ ವಾರ್ಷಿಕ ಸಭೆಯಲ್ಲಿ ಜಿಯೋ ಫೋನ್ ೨ ಬಿಡುಗಡೆ ಮಾಡಿದೆ.
ಭಾರತೀಯ ದೂರಸಂಪರ್ಕ ವಲಯದಲ್ಲಿ ಕ್ರಾಂತಿಕಾರಕ ವಿಕಸನಕ್ಕೆ ಪೂರಕವಾಗಿರಲಿದೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.
ಇವರು ಫೈಬರ್ ಆಧಾರಿತ ಜಿಯೋ ಗೀಗಾ ಫೈಬರ್ ಬ್ರಾಡ್ಬ್ಯಾಂಡ್ ಸೇವೆಯನ್ನು ಘೋಷಿಸಿದ್ದಾರೆ. ಜಿಯೋ ಗೀಗಾ ಫೈಬರ್ ಬ್ರಾಡ್ಬ್ಯಾಂಡ್ ಸೇವೆ ಟಿವಿ ಸೆಟ್ ಟಾಪ್ ಬಾಕ್ಸ್ ಜತೆ ದೊರೆಯಲಿದೆ. ಪ್ರಧಾನ ಮಂತ್ರಿ ಅವಾಸ ಯೋಜನೆ ಅವಧಿ ವಿಸ್ತರಣೆ, ಈಗಲೇ ಅರ್ಜಿ ಸಲ್ಲಿಸಿ ಸ್ವಂತ ಮನೆ ಪಡೆಯಿರಿ

ಫೋನ್ ಬೆಲೆ

ಫೋನ್ ಬೆಲೆ

ಜಿಯೋ ಫೋನ್ 2 ಇದರ ದರವನ್ನು ರೂ. 2,999 ನಿಗದಿಪಡಿಸಲಾಗಿದೆ. ಜಿಯೋ ಫೋನ್ ೨ ಖರೀದಿ ಮಾಡಲು ಇಚ್ಚಿಸುವ ಗ್ರಾಹಕರು ಈ ಫೋನ್ ಎಲ್ಲಿ ಹಾಗೂ ಹೇಗೆ ಖರೀದಿ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.

ಜಿಯೋ ಫೋನ್ 2 ಫೀಚರ್

ಜಿಯೋ ಫೋನ್ 2 ಫೀಚರ್

ರಿಲಾಯನ್ಸ್ ಜಿಯೋ ಫೋನ್ 2ಇದು ವಾಟ್ಸಾಪ್, ಫೇಸ್ಬುಕ್ ಮತ್ತು ಯುಟ್ಯೂಬ್ ಒಳಗೊಂಡಿರಲಿದೆ. ಈ ಫೋನ್ 2.4 ಇಂಚು ಡಿಸ್ಪ್ಲೇ ಹೊಂದ್ದು, 512 ಎಂಬಿ ರ್ಯಾಮ್ ಹಾಗೂ 4 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿರಲಿದೆ. 128 ಜಿಬಿ ವರೆಗೆ ಸ್ಟೋರೇಜ್ ವಿಸ್ತರಿಸಬಹುದಾಗಿದೆ.
2 ಮೆಗಾಪಿಕ್ಸಲ್ ರಿಯಲ್ ಕ್ಯಾಮರಾ ಹಾಗೂ ಸೆಲ್ಫಿಗಾಗಿ VGA ಕ್ಯಾಮರಾ ಅಳವಡಿಸಲಾಗಿದೆ.

24 ಭಾಷೆಗಳಿಗಲ್ಲಿ ಲಭ್ಯ

24 ಭಾಷೆಗಳಿಗಲ್ಲಿ ಲಭ್ಯ

ಜಿಯೋ ಫೋನ್ ೨ ವೈ-ಫೈ, ಜಿಪಿಎಸ್ ಹಾಗೂ ಬ್ಲ್ಯೂ ಟೂತ್ ಗೆ ಸ್ಪಂದಿಸಲಿದೆ. ಈ ಫೋನ್ ಭಾರತೀಯ 24 ಭಾಷೆಗಳಲ್ಲಿ ಸೇವೆ ಹೊಂದಿರಲಿದೆ. ಮೊಬೈಲ್ ಧ್ವನಿ ಆಜ್ಞೆಯನ್ನು ಬೆಂಬಲಿಸಲಿದೆ.

ಫೋನ ಬುಕಿಂಗ್ ಹೇಗೆ?

ಫೋನ ಬುಕಿಂಗ್ ಹೇಗೆ?

ಗ್ರಾಹಕರು My Jio app ಹಾಗೂ ಅಧಿಕೃತ ವೆಬ್ಸೈಟ್ www.jio.com ಮೂಲಕ ಜಿಯೋ ಫೋನ್ ೨ ಕಾಯ್ದಿರಿಸಬಹುದು. ಈ ಸೇವೆ ಇಡೀ ದೇಶದ ಜನರಿಗೆ ಲಭ್ಯವಾಗಲಿದೆ. 1,100 ನಗರಗಳಲ್ಲಿ ಈ ಸೇವೆ ಪ್ರಾರಂಭವಾಗಲಿದೆ.

ನೋಂದಣಿ ಯಾವಾಗ?

ನೋಂದಣಿ ಯಾವಾಗ?

ಜಿಯೋಫೋನ್ ೨ ಜುಲೈ 15 ರಿಂದ ಬುಕ್ಕಿಂಗ್ ಲಭ್ಯವಾಗಲಿದ್ದು, ಆಗಸ್ಟ್ 15ರಿಂದ Jio GigaFibe ಬ್ರಾಡ್ಬ್ಯಾಂಡ್ ಸೇವೆಗೆ ನೋಂದಣಿ ಪಡೆಯಬಹುದು.

ಜಿಯೋ ಗೀಗಾ ರೂಟರ್, ಜಿಯೋ ಗೀಗಾ ಟಿವಿ

ಜಿಯೋ ಗೀಗಾ ರೂಟರ್, ಜಿಯೋ ಗೀಗಾ ಟಿವಿ

ಜಿಯೋ ಗೀಗಾ ರೂಟರ್ ಅತ್ಯಂತ ಗರಿಷ್ಠ ವೇಗದ ನೆಟ್ ಸಂಪರ್ಕ ಹಾಗು ಗರಿಷ್ಠ ವೇಗದ ವೈಫೈ ಸೇವೆ ಒದಗಿಸಲಿದೆ.
ಜಿಯೋ ಗೀಗಾ ಟಿವಿ, ಜಿಯೋ ಸಿನಿಮಾ ಸೌಲಭ್ಯ ದೊರೆಯಲಿದ್ದು, ೬೦೦ ಟಿವಿ ಚಾನೆಲ್ ಗಳ ವಿಕ್ಷಣೆ ಸಾಧ್ಯವಾಗಲಿದೆ.

English summary

Jio Double Dhamaka! How to get Jio Phone 2, JioGigaFiber Offer?

Mukesh Ambani, Chairman and Managing Director of Reliance Industries, today unveiled what could revolutionise Indian telecom sector.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X